Breaking News

ನವದೆಹಲಿ

48 ಸಾವಿರದ ಗಡಿಯತ್ತ ಚಿನ್ನ………ತೆರಿಗೆ ಶೇ.12.5 ಹಾಗೂ ಶೇ.3ರಷ್ಟು ಜಿಎಸ್‍ಟಿ ಸಹ ಸೇರಿದೆ.

ನವದೆಹಲಿ: ಕೊರೊನಾ ವೈರಸ್ ಹಿನ್ನೆಲೆ ಆರ್ಥಿಕತೆ ಬುಡಮೇಲಾಗಿದ್ದು, ಇದರ ಪರಿಣಾಮ ಚಿನ್ನದ ಮೇಲೂ ಬೀರಿದೆ. ಹೀಗಾಗಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 47,740 ರೂ. ತಲುಪಿದ್ದು, ಬೆಳ್ಳಿ ಪ್ರತಿ ಕೆಜಿಗೆ 48,190 ರೂ.ಗೆ ಏರಿಕೆಯಾಗಿದೆ. ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್(ಎಂಸಿಎಕ್ಸ್)ನಲ್ಲಿ ಸೋಮವಾರದ ಚಿನ್ನದ ಬೆಲೆ 47,740 ರೂ. ಗಡಿ ದಾಟಿದ್ದು, ಶುಕ್ರವಾರದಿಂದ ಈವರೆಗೆ ಕೇವಲ ಮೂರು ದಿನಗಳಲ್ಲಿ 10 ರೂ.ಹೆಚ್ಚಾಗಿದೆ. ಇಂದು ಪ್ರತಿ 10 ಗ್ರಾಂ. 22 ಕ್ಯಾರೆಟ್ ಚಿನ್ನದ …

Read More »

ಭಾರತದಲ್ಲಿ ಸೋಂಕಿತರ ಸಂಖ್ಯೆ 96,169ಕ್ಕೆ ಏರಿಕೆ – 24 ಗಂಟೆಯಲ್ಲಿ 5,242 ಹೊಸ ಪ್ರಕರಣ ಪತ್ತೆ

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಲೇ ಇದ್ದು, ಸೋಂಕಿತರ ಸಂಖ್ಯೆ 96,169ಕ್ಕೆ ಏರಿಕೆಯಾಗಿದೆ. 3,029 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ಅತೀ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. 24 ಗಂಟೆಯಲ್ಲಿ 5,242 ಹೊಸ ಪ್ರಕರಣಗಳು ಹಾಗೂ 157 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈವರೆಗೆ ಭಾರತದಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು 36,824 ಮಂದಿ ಗುಣಮುಖರಾಗಿದ್ದಾರೆ. 56,316 ಸೋಂಕಿತರು ಇನ್ನೂ ಕೊರೊನಾದಿಂದ ಬಳಲುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಅತೀ …

Read More »

ಮೇ 31ರವರೆಗೆ ಲಾಕ್‍ಡೌನ್ ವಿಸ್ತರಣೆ,, ಕೆಲವೇ ಕ್ಷಣಗಳಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ಮೇ 31ರವರೆಗೆ ಲಾಕ್‍ಡೌನ್ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಇಂದು ಮಧ್ಯರಾತ್ರಿಯಿಂದಲೇ ಹೊಸ ಲಾಕ್‍ಡೌನ್ ಆರಂಭವಾಗಲಿದೆ. ಮೂರನೇ ಹಂತದ ಲಾಕ್‍ಡೌನ್ ಇಂದು ಅಂತ್ಯವಾಗಲಿದೆ. ಇಡೀ ದೇಶದಾದ್ಯಂತ ಎರಡು ವಾರಗಳ ಕಾಲ ಲಾಕ್‍ಡೌನ್ ವಿಸ್ತರಣೆಯಾಗಲಿದ್ದು, ಕೆಲವೇ ಕ್ಷಣಗಳಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಲಿದೆ. ಹೊಸ ಲಾಕ್‍ಡೌನ್ ಹೊಸ ರೀತಿಯಲ್ಲಿ ಇರಲಿದೆ ಅಂತ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದು, ಕೇಂದ್ರ ಸರ್ಕಾರದ ಲೆಕ್ಕಾಚಾರ ಹೇಗಿರಲಿದೆ ಅನ್ನೋದು …

Read More »

ಭಾರತದಲ್ಲಿ ಕೊರೋನಾ ರೌದ್ರಾವತಾರ : 24 ಗಂಟೆಗಳಲ್ಲಿ 5,000 ಮಂದಿಗೆ ಪಾಸಿಟಿವ್..!

ನವದೆಹಲಿ/ಮುಂಬೈ, ಮೇ 17-ವಿನಾಶಕಾರಿ ಕೊರೊನಾ ಆಕ್ರಮಣದ ತೀವ್ರತೆ ದೇಶದಲ್ಲಿ ಆಘಾತಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಹೆಮ್ಮಾರಿ ನಿಗ್ರಹಕ್ಕಾಗಿ ಜಾರಿಯಲ್ಲಿರುವ ಮೂರನೇ ಹಂತದ ಲಾಕ್‍ಡೌನ್ ಅವಧಿ ಇಂದು ಮಧ್ಯರಾತ್ರಿ ಪೂರ್ಣಗೊಳ್ಳಲಿದ್ದು, ನಾಳೆಯಿಂದ ಹೊಸ ಸ್ವರೂಪದಲ್ಲಿ ವಿಸ್ತರಣೆಯಾಗಲಿದೆ. ದೀರ್ಘಾವಧಿ ಲಾಕ್‍ಡೌನ್ ಮತ್ತು ಕಠಿಣ ನಿರ್ಬಂಧಗಳ ಅವಧಿಯಲ್ಲಿ ನಿಯಂತ್ರಣಕ್ಕೆ ಬರದಿರುವ ವೈರಸ್ ಅನ್‍ಲಾಕ್ ವೇಳೆ ತನ್ನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವ ಆತಂಕವೂ ಇದೆ. ಕಿಲ್ಲರ್ ವೈರಸ್ ಆರ್ಭಟ ಲಾಕ್‍ಡೌನ್ ಸಡಿಲಿಕೆ ನಂತರ ದಿನೇ ದಿನೇ ವ್ಯಾಪಕವಾಗುತ್ತಿರುವುದು …

Read More »

20.97 ಲಕ್ಷ ಕೋಟಿ ರೂ. ಪ್ಯಾಕೇಜ್ ಲೆಕ್ಕ ಕೊಟ್ಟ ಸೀತಾರಾಮನ್

ನವದೆಹಲಿ: ಕೊರೊನಾ ಪರಿಹಾರ ಪ್ಯಾಕೇಜ್‍ನ ಐದನೇ ಮತ್ತು ಕೊನೆಯ ಹಂತದ ಘೋಷಣೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ವಿವರಿಸಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್‍ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಹಣ ನೀಡಲಾಗಿದೆ ಎಂದು ವಿವರಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಇಂದು ನರೇಗಾ, ಆರೋಗ್ಯ, ಶಿಕ್ಷಣ, ವ್ಯವಹಾರ, ಕಂಪನಿಗಳ ಕಾಯ್ದೆಗಳಿಗೆ ಸಂಬಂಧಿಸಿದ ಕೆಲವು ಮಾಹಿತಿ ಪ್ರಕಟಿಸಿದರು. ನರೇಗಾ ಯೋಜನೆಗೆ ಹೆಚ್ಚುವರಿಯಾಗಿ …

Read More »

ಹಮ್ ಮೋದಿ ಕೊ ಮಾರೆಂಗೇ’ – ಕೊರೊನಾ ಗೆದ್ದು ಬಂದ 6ರ ಪೋರ ಮಾತು……

ನವದೆಹಲಿ: ‘ಹಮ್ ಮೋದಿ ಕೊ ಮಾರೆಂಗೇ’ ಎಂದು ಆರು ವರ್ಷದ ಪುಟ್ಟ ಪೋರನೊಬ್ಬ ಕೂಗಿ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊರೊನಾದಿಂದ ಗುಣಮುಖರಾದ ಕುಟುಂಬವೊಂದು ಕೊರೊನಾ ಗೆದ್ದು ಬಂದಿದ್ದೇವೆ ಎಂದು ಕ್ಯಾಮೆರಾಗೆ ಪೋಸ್ ನೀಡುತ್ತಿತ್ತು. ಈ ವೇಳೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯರು ಕೊರೊನಾ ವಾರಿಯರ್ಸ್ ಎಲ್ಲ ನಿಂತುಕೊಂಡು ಸಂಭ್ರಮಾಚರಣೆ ಮಾಡುತ್ತಿರುತ್ತಾರೆ. ಈ ವೇಳೆ ಅಲ್ಲಿ ನಿಂತಿದ್ದ ಪುಟ್ಟಪೋರನೊಬ್ಬ ನಾವು ಮೋದಿಯನ್ನು ಕೊಲ್ಲುತ್ತೇವೆ ಎಂದು ಘೋಷಣೆ …

Read More »

ನಾಳೆಯಿಂದ ಹೊಸ ಲಾಕ್‍ಡೌನ್ – ಪ್ಲ್ಯಾನ್ ಹೇಗಿರಬಹುದು? …..

ನವದೆಹಲಿ: ಕೋವಿಡ್ 19 ಲಾಕ್‍ಡೌನ್ 3.0 ಇಂದು ಅಂತ್ಯವಾಗಲಿದ್ದು, ಸೋಮವಾರದಿಂದ ಹೊಸ ಲಾಕ್‍ಡೌನ್ 4.0 ಜಾರಿಯಾಗುತ್ತಿದೆ. ಎಲ್ಲ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿರುವ ಕೇಂದ್ರ ಇಂದು ಹೊಸ ಮಾರ್ಗಸೂಚಿ ಪ್ರಕಟ ಮಾಡಲಿದೆ. ಹೊಸ ಲಾಕ್‍ಡೌನ್ ಹೊಸ ರೀತಿಯಲ್ಲಿ ಇರಲಿದೆ ಅಂತ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದು, ಕೇಂದ್ರ ಸರ್ಕಾರದ ಲೆಕ್ಕಾಚಾರ ಹೇಗಿರಲಿದೆ ಎನ್ನುವುದೇ  ಕುತೂಹಲ. ಯಾಕಂದ್ರೆ, ಈಗಾಗಲೇ 3 ಲಾಕ್‍ಡೌನ್‍ಗಳಲ್ಲೂ ಬೇಕಾಬಿಟ್ಟಿ ಓಡಾಡ್ತಿದ್ದಾರೆ. ಜೊತೆಗೆ, ಲಾಕ್‍ಡೌನ್ 3ರಲ್ಲಿ ಮತ್ತಷ್ಟು …

Read More »

ರಕ್ಷಣಾ ವಲಯಕ್ಕೆ ಮೇಕ್ ಇನ್ ಇಂಡಿಯಾ ಬಲ- 6 ಏರ್ ಪೋರ್ಟ್‍ಗಳ ಹರಾಜು……..

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಘೋಷಣೆಯ 20 ಲಕ್ಷ ಕೋಟಿಯ ಪ್ಯಾಕೇಜ್ ನ ನಾಲ್ಕನೇ ಹಂತದ ಪ್ರಕಟನೆಯನ್ನ ಕೇಂದ್ರ ಹಣಕಾಸುವ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸುದ್ದಿಗೋಷ್ಟಿಯಲ್ಲಿ ಮಂಡಿಸಿದರು. ಪಿಎಂ ಮೋದಿ ಸುಧಾರಣೆಯ ಕುರಿತು ಒಳ್ಳೆಯ ರೆಕಾರ್ಡ್ ಹೊಂದಿದ್ದಾರೆ. ನೇರ ವರ್ಗಾವಣೆಯ ಅವಶ್ಯಕತೆ ಹೆಚ್ಚಿದ್ದು, ಈ ಕುರಿತು ಹಲವು ನಿಯಮಗಳನ್ನು ಸರಳೀಕರಣಕೊರಿಸುವ ಬಗ್ಗೆ ಕೇಂದ್ರ ಸಚಿವರು ಆರಂಭದಲ್ಲಿಯೇ ಮಾತನಾಡಿದರು. ಕೈಗಾರಿಕಾ ಮೂಲಭೂತ ಸುಧಾರಣೆಗೆ ಕ್ರಮ, ಉದ್ಯೋಗ ಸೃಷ್ಟಿ, ಉದ್ಯಮಗಳ ಮೇಲೆ …

Read More »

ಸೋಮವಾರದಿಂದ ಲಾಕ್‍ಡೌನ್ 4.0 ಫಿಕ್ಸ್- ಲಾಕ್‍ಡೌನ್‍ನಲ್ಲಿ ಏನಿರುತ್ತೆ?………..

ನವದೆಹಲಿ: ಮೂರನೇ ಹಂತದ ಲಾಕ್‍ಡೌನ್ ಅಂತ್ಯಕ್ಕೆ ಇನ್ನೂ ಎರಡು ದಿನ ಮಾತ್ರ ಬಾಕಿ ಇದೆ. ಈ ನಡುವೆ ನಾಲ್ಕನೇ ಹಂತದ ಲಾಕ್‍ಡೌನ್ ಹೇಗಿರಲಿದೆ ಅನ್ನೋ ಚರ್ಚೆ ನಡೆದಿದೆ. ಲಾಕ್‍ಡೌನ್ 4.0 ವಿಭಿನ್ನವಾಗಿ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕುತೂಹಲ ಹೆಚ್ಚಿಸಿದ್ದರು. ಹೀಗಾಗಿ ಲಾಕ್‍ಡೌನ್‍ನಿಂದ ಹೆಚ್ಚಿನ ನಿರೀಕ್ಷೆಯಲ್ಲಿ ದೇಶದ ಜನರಿದ್ದಾರೆ. ನಾಲ್ಕನೇ ಹಂತದ ಲಾಕ್‍ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಪರಿಷ್ಕೃತ ಮಾರ್ಗಸೂಚಿಗಳು ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಏನಿರಬಹುದು..? * …

Read More »

ಮತ್ಸ್ಯ ಸಂಪದ ಯೋಜನೆ ಪ್ರಕಟ – ಮೀನುಗಾರಿಕೆಗೆ 20 ಸಾವಿರ ಕೋಟಿ ಪ್ಯಾಕೇಜ್……..

ನವದೆಹಲಿ: ಮೊದಲ ದಿನ ಉದ್ಯಮಗಳಿಗೆ, ಎರಡನೇ ದಿನ ಕಾರ್ಮಿಕರಿಗೆ ಪ್ಯಾಕೇಜ್ ಪ್ರಕಟಿಸಿದ್ದ ಕೇಂದ್ರ ಸರ್ಕಾರ ಇಂದು ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಪೂರಕ ಚಟುವಟಿಕೆಗಳನ್ನು ಮೇಲಕ್ಕೆ ಎತ್ತಲು ವಿಶೇಷ ಪ್ಯಾಕೇಜ್ ಪ್ರಕಟಿಸಿದೆ. ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಒಟ್ಟು 18,700 ಕೋಟಿ ರೂ. ಹಣವನ್ನು ರೈತರಿಗೆ ನೀಡಲಾಗಿದೆ. ಫಸಲ್ ಭೀಮಾ ಯೋಜನೆಯ ಅಡಿ ಒಟ್ಟು 6,400 ರೂ. ಹಣವನ್ನು ಪಾವತಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ …

Read More »