ಪತ್ರಕರ್ತರು ಸಮಾಜದ ನಾಲ್ಕನೇ ಸ್ತಂಭವಾಗಿದ್ದು, ನೈಜ ಮತ್ತು ವಾಸ್ತವಿಕ ಸುದ್ಧಿಗಳನ್ನು ಭಿತ್ತರಿಸಿ ಸಮಾಜದ ಏಳ್ಗೆಗೆ ಪಾತ್ರರಾಗಬೇಕೆಂದು ಬೆಳಗಾವಿ ಉತ್ತರ ಶಾಸಕರಾದ ಆಸೀಫ್ ಸೇಠ್ ಅವರು ಕರೆ ನೀಡಿದರು.
ಬೆಳಗಾವಿಯ ವಾರ್ತಾಭವನದಲ್ಲಿ ಮುದ್ರಣ ಪತ್ರಕರ್ತರ ಸಂಘದ ವತಿಯಿಂದ ಪ್ರಶಸ್ತಿ ವಿಜೇತ ಗುರುರಾಜ್ ಜಮಖಂಡಿ, ಅಮೀತ ಉಪಾಧ್ಯೆ, ಸಂತೋಷ್ ಚಿನಗುಡಿ, ಸಂಜೀವ ಕಾಂಬಳೆ ಅವರನ್ನು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಗೌರವ ಅತಿಥಿಗಳಾಗಿ ಉತ್ತರ ಶಾಸಕ ಆಸೀಫ್ ಸೇಠ್, ಡಿಸಿಪಿ ಎನ್.ವಿ. ಬರಮನಿ ಇನ್ನುಳಿದವರು ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ಉತ್ತರ ಶಾಸಕ ಆಸೀಫ್ ಸೇಠ್ ಅವರು ಪತ್ರಕರ್ತರು ಅನೇಕ ಸವಾಲುಗಳನ್ನು ಎದುರಿಸಿ ತಮ್ಮ ವೃತ್ತಿಯನ್ನು ನಿರ್ವಹಿಸುತ್ತಾರೆ. ಅವರು ಕಾಲಕ್ಕೆ ತಕ್ಕಂತೆ ತಮ್ಮ ವೃತ್ತಿ ಕೌಶಲ್ಯಗಳನ್ನು
ಬದಲಾಯಿಸಿಕೊಳ್ಳಬೇಕು. ಆದರೇ, ಜನರ ಮಾಹಿತಿಗಾಗಿ ಭಿತ್ತರಿಸುವ ಸುದ್ಧಿಯೂ ಸಮಾಜದ ಏಳ್ಗೆಗೆ ಪೂರಕವಾದ ನೈಜತೆಯನ್ನು ಸಾರಬೇಕೆಂದು ಕರೆ ನೀಡಿದರು. ಬೈಟ್
ಡಿಸಿಪಿ ಎನ್.ವಿ.ಬರಮನಿ ಅವರು ಕೂಡ ಪತ್ರಕರ್ತರ ವೃತ್ತಿಯನ್ನು ಪ್ರಶಂಸಿಸಿ ತಮ್ಮ ಮಾರ್ಗದರ್ಶನವನ್ನು ನೀಡಿದರು.
ಅಧ್ಯಕ್ಷರಾದ ವಿಲಾಸ್ ಜೋಶಿ, ಗೌರವಾಧ್ಯಕ್ಷರಾದ ಹೃಷಿಕೇಶ್ ದೇಸಾಯಿ, ಉಪಾಧ್ಯಕ್ಷರಾದ ಶ್ರೀಶೈಲ್ ಮಠದ, ಸಂಜಯ ಸೂರ್ಯವಂಶಿ, ಪ್ರಧಾನ ಕಾರ್ಯದರ್ಶಿ ನೌಶಾದ್ ಬಿಜಾಪುರ, ಸಹ ಕಾರ್ಯದರ್ಶಿ ಸುರೇಶ್ ನೇರ್ಲಿ, ಖಜಾಂಚಿಗಳಾದ ರವಿ ಉಪ್ಪಾರ, ಕಾನೂನು ಸಲಹೆಗಾರರಾದ ರವೀಂದ್ರ ತೋಟಿಗೇರ ಇನ್ನುಳಿದವರು ಭಾಗಿಯಾಗಿದ್ಧರು.
Laxmi News 24×7