ನವದೆಹಲಿ: ಮೇ 31ರವರೆಗೆ ಲಾಕ್‍ಡೌನ್ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಇಂದು ಮಧ್ಯರಾತ್ರಿಯಿಂದಲೇ ಹೊಸ ಲಾಕ್‍ಡೌನ್ ಆರಂಭವಾಗಲಿದೆ.
ಮೂರನೇ ಹಂತದ ಲಾಕ್‍ಡೌನ್ ಇಂದು ಅಂತ್ಯವಾಗಲಿದೆ. ಇಡೀ ದೇಶದಾದ್ಯಂತ ಎರಡು ವಾರಗಳ ಕಾಲ ಲಾಕ್‍ಡೌನ್ ವಿಸ್ತರಣೆಯಾಗಲಿದ್ದು, ಕೆಲವೇ ಕ್ಷಣಗಳಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಲಿದೆ.
ಹೊಸ ಲಾಕ್‍ಡೌನ್ ಹೊಸ ರೀತಿಯಲ್ಲಿ ಇರಲಿದೆ ಅಂತ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದು, ಕೇಂದ್ರ ಸರ್ಕಾರದ ಲೆಕ್ಕಾಚಾರ ಹೇಗಿರಲಿದೆ ಅನ್ನೋದು ಕುತೂಹಲ. ಯಾಕಂದ್ರೆ, ಈಗಾಗಲೇ 3 ಲಾಕ್‍ಡೌನ್‍ಗಳಲ್ಲೂ ಬೇಕಾಬಿಟ್ಟಿ ಓಡಾಡ್ತಿದ್ದಾರೆ. ಜೊತೆಗೆ, ಲಾಕ್‍ಡೌನ್ 3ರಲ್ಲಿ ಮತ್ತಷ್ಟು ಸಡಿಲ ಮಾಡಿರೋ ಕಾರಣ ಕೊರೋನಾ ವೈರಸ್ ಸಂಖ್ಯೆಯೋ ಮೂರ್ನಾಲ್ಕು ಪಟ್ಟು ವೇಗವಾಗಿ ಏರಿಕೆ ಕಾಣುತ್ತಿದೆ.