ನವದೆಹಲಿ: ಆಗಸ್ಟ್ 15 ಅಂದರೆ ನಾಳಿನ 74ನೇ ಸ್ವಾತಂತ್ರೋತ್ಸವಕ್ಕೆ ಇಡೀ ದೇಶವೇ ಸಜ್ಜಾಗುತ್ತಿದೆ. ದೇಶಾದ್ಯಂತ ಭಾರೀ ಬಿಗಿ ಭದ್ರತೆ ಕೈಕೊಳ್ಳಲಾಗಿದೆದೆಹಲಿಯ ಕೆಂಪು ಕೋಟೆ ಪ್ರದೇಶದಲ್ಲಿ 300 ಕ್ಯಾಮೆರಾಗಳು, 4 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಕ್ಕಿಂತ ಮುಖ್ಯವಾಗಿ ಕೊರೊನಾ ಹೆಮ್ಮಾರಿ ಇರುವ ಕಾರಣ ಮತ್ತಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಂಪುಕೋಟೆಯಲ್ಲಿ ಪ್ರತಿಬಾರಿ ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಿಲ್ಲ. ಭದ್ರತೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಯನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಗುರುವಾರವೂ ಕವಾಯತು ಪಡೆಗಳು …
Read More »ತೆರಿಗೆ ವಂಚಿಸಬೇಡಿ, ಅಡ್ಡದಾರಿ ಹಿಡಿಬೇಡಿ : ಪ್ರಧಾನಿ ಮೋದಿ ಕಿವಿ ಮಾತು
ನವದೆಹಲಿ, ಆ.13-ತೆರಿಗೆ ಪಾವತಿಯಿಂದ ದೇಶದ ಅಭಿವೃದ್ದಿಗೆ ಸಹಕಾರಿಯಾಗುತ್ತದೆ ಎಂದು ಹೇಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಜನರು ತೆರಿಗೆ ವಂಚಿಸಬಾರದು ಮತ್ತು ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಅಡ್ಡದಾರಿ ಹಿಡಿಯಬಾರದು ಎಂದು ಸಲಹೆ ಮಾಡಿದ್ದಾರೆ. ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗುತ್ತಿದ್ದು , ಇದರಲ್ಲಿ ಲಂಚ , ರುಷುವತ್ತುಗಳಿಗೆ ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ.ತೆರಿಗೆ ಪಾವತಿದಾರರನ್ನು ಸಮಸ್ಯೆಗಳಿಗೆ ಸಿಲುಕಿಸುವ ಪದ್ಧತಿಯನ್ನು ಹೋಗಲಾಡಿಸಿ ಇದರಲ್ಲಿರುವ ಎಲ್ಲಾ ತೊಡಕುಗಳನ್ನು ನಿವಾರಿಸಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ ಎಂದು …
Read More »ದೇಶದಲ್ಲಿ ಕೊರೊನಾ ಸ್ಫೋಟ- ಒಂದೇ ದಿನ 66,999 ಮಂದಿಗೆ ತಗುಲಿದ ಮಹಾಮಾರಿ
ನವದೆಹಲಿ: ದೇಶದಲ್ಲಿ ಕೊರೊನಾ ರುದ್ರ ನರ್ತನ ಮುಂದುವರಿದಿದ್ದು, ಒಂದೇ ದಿನ 66,999 ಮಂದಿಗೆ ಸೋಂಕು ತಗುಲಿದ್ದು, 942 ಜನರನ್ನು ಮಹಾಮಾರಿ ಬಲಿ ಪಡೆದುಕೊಂಡಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 23,96.638ಕ್ಕೆ ಏರಿಕೆಯಾಗಿದ್ದು, ಸದ್ಯ 6,53,622 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 16,95,982 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 47,033 ಸಾವುಗಳು ದಾಖಲಾಗಿವೆ. ಬುಧವಾರ ಒಂದೇ ದಿನ 8,30,391 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಆಗಸ್ಟ್ 12, 2020ರವೆರೆಗೆ 2,68,45,688 ಜನರು ಕೊರೊನಾ …
Read More »ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್‍ಗೂ ಕೊರೊನಾ..!
ನವದೆಹಲಿ, ಆ.13- ಕೇಂದ್ರ ಆಯುಷ್ (ಆಯುರ್ವೇದ, ಯೋಗ, ಯುನಾನಿ ಮತ್ತು ಸಿದ್ಧ) ಮತ್ತು ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ಯಸ್ಸೋ ನಾಯಕ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೇಂದ್ರ ಸಚಿವರು ಈಗ ಐಸೋಲೇಷನ್‍ನಲ್ಲಿ ಇದ್ದು, ವೈರಸ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಮಂತ್ರಿಮಂಡಲದ ಐದನೇ ಸಚಿವರಿಗೆ ಕೋವಿಡ್-19 ತಗುಲಿದಂತಾಗಿದೆ.ಈ ಕುರಿತು ಟ್ವೀಟ್ ಮಾಡಿರುವ ಸಚಿವರು ನನಗೆ ಕೊರೊನಾ ಸೋಂಕು ದೃಢಪಟಿದೆ. …
Read More »ಪ್ರಣಬ್ ಮುಖರ್ಜಿ ಅವರಿಗೆ ಮಾರಕ ಕೊರೊನಾ ವೈರಸ್ ಸೋಂಕು
ಹೊಸದಿಲ್ಲಿ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಭಾರತ ರತ್ನ ಪುರಸ್ಕೃತ ಪ್ರಣಬ್ ಮುಖರ್ಜಿ ಅವರಿಗೆ ಮಾರಕ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ಕುರಿತು ಖುದ್ದು ಮಾಹಿತಿ ನೀಡಿರುವ ಪ್ರಣಬ್ ಮುಖರ್ಜಿ, ನಿಯಮಿತ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಭೇಟಿ ನೀಡಿದಾಗ ತಮಗೆ ಕೊರೊನಾ ಸೋಂಕು ತಗುಲಿದೆ ಎಂಬುದು ದೃಢಪಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ. ತಮಗೆ ಕೊರೊನಾ ವೈರಸ್ ಸೋಂಕು ತಗುಲಿರುವುದನ್ನು ವೈದ್ಯರು ದೃಢಪಡಿಸಿದ್ದು, ನನ್ನ ಸಂಪರ್ಕಕ್ಕೆ ಬಂದ …
Read More »ಭಾರತದಲ್ಲಿ ಕೊರೊನಾಗೆ 196 ವೈದ್ಯರ ಸಾವು – ಪ್ರಧಾನಿ ಮೋದಿಗೆ ಐಎಂಎ ಪತ್ರ
ನವದೆಹಲಿ: ಕೊರೊನಾ ಸೋಂಕಿನಿಂದ ಈವರೆಗೂ ಭಾರತದಲ್ಲಿ 196 ವೈದ್ಯರು ಪ್ರಾಣ ಕಳೆದುಕೊಂಡಿದ್ದು, ಈ ವಿಚಾರದ ಬಗ್ಗೆ ಗಮನ ಹರಿಸುವಂತೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಐಎಂಎ ಬರೆದ ಪತ್ರದಲ್ಲಿ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ವೈದ್ಯರ ಸಾವುಗಳು ಹೆಚ್ಚುತ್ತಿರುವ ಬಗ್ಗೆ ಕಳವಳಗಳ ವ್ಯಕ್ತಪಡಿಸಲಾಗಿದೆ. ಕೊರೊನಾದಿಂದಾಗಿ ವೈದ್ಯರು ಸೋಂಕಿಗೆ ಒಳಗಾಗುವ ಮತ್ತು ಪ್ರಾಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಅವರಲ್ಲಿ ಅನೇಕ ಸಾಮಾನ್ಯ ವೈದ್ಯರಿದ್ದಾರೆ ಎಂದು …
Read More »ವಿಮಾನ ದುರಂತದಲ್ಲಿ ಮಡಿದ ಪೈಲಟ್‍ಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಿಬ್ಬಂದಿ ಅಂತಿಮ ನಮನ
ದೆಹಲಿ/ಲಕ್ನೋ: ಕೇರಳದ ಕೋಯಿಕ್ಕೋಡ್ ಕರಿಪುರ ವಿಮಾನ ದುರಂತದಲ್ಲಿ ಮಡಿದ ಪೈಲಟ್‍ಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿದರು.ಶುಕ್ರವಾರ ರಾತ್ರಿ ನಡೆದ ದುರಂತದಲ್ಲಿ ಪೈಲಟ್ ಅಖಿಲೇಶ್ ಕುಮಾರ್ ಮೃತಪಟ್ಟಿದ್ದರು. ಶನಿವಾರ ರಾತ್ರಿ ಏರ್ ಇಂಡಿಯಾ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿ, ಮೃತದೇಹ ಇಂದು ಬೆಳಗ್ಗೆ ಹುಟ್ಟೂರು ಉತ್ತರ ಪ್ರದೇಶದ ಮಥುರಾಗೆ ತಲುಪಿದೆ. ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ದುಬೈನಲ್ಲಿ ಸಿಲುಕಿದ್ದ ಭಾರತೀಯರನ್ನು ಶುಕ್ರವಾರ ಏರ್ ಇಂಡಿಯಾ ವಿಮಾನ …
Read More »ಪಾಕಿಸ್ತಾನದ ಟೀಕೆಗೆ ಭಾರತ ಖಡಕ್ ವಾರ್ನಿಂಗ್…………..
ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬುಧವಾರ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದು, ಈ ಕುರಿತು ಪಾಕಿಸ್ತಾನದ ಟೀಕೆಗೆ ಭಾರತ ಖಡಕ್ ವಾರ್ನಿಂಗ್ ನೀಡಿದೆ. ದೇಶದ ಆಂತರಿಕ ವಿಚಾರದಲ್ಲಿ ನೀವು ತಲೆ ಹಾಕಬೇಡಿ ಎಂದು ಭಾರತ ಎಚ್ಚರಿಸಿದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಪ್ರತಿಕ್ರಿಯಿಸಿ, ಭಾರತದ ಆಂತರಿಕ ವಿಷಯದ ಬಗ್ಗೆ ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ’ದ ಪತ್ರಿಕಾ ಹೇಳಿಕೆ ಗಮನಕ್ಕೆ ಬಂದಿದೆ. ಪಾಕಿಸ್ತಾನವು ಭಾರತದ …
Read More »ಚೀನಾ ಪ್ರಾಯೋಜಕತ್ವಕ್ಕೆ ಐಪಿಎಲ್‍ನಿಂದ ಗೇಟ್ ಪಾಸ್ ಸಾಧ್ಯತೆ
ನವದೆಹಲಿ: ಈ ಬಾರಿಯ ಐಪಿಎಲ್-13ರಿಂದ ಚೀನಾ ಪ್ರಾಯೋಜಕತ್ವಕ್ಕೆ ಗೇಟ್ ಪಾಸ್ ನೀಡಲು ಬಿಸಿಸಿಐ ನಿರ್ಧರಿಸಿದ್ದು, ಈ ಕುರಿತು ಆಗಸ್ಟ್ 6ರಂದು ಅಧಿಕೃತ ಪ್ರಕಟನೆ ಹೊರಡಿಸುವ ಸಾಧ್ಯತೆಗಳಿವೆ. ಐಪಿಎಲ್ ಲೀಗ್ 19ನೇ ಆವೃತ್ತಿಯ ಪಂದ್ಯಗಳು ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿವೆ. ಚೀನಾದ ವಿವೋ ಸ್ಮಾರ್ಟ್ ಕಂಪನಿ ಐಪಿಎಲ್-13ರ ಪ್ರಾಯೋಜಕತ್ವ ಹೊಂದಿರೋದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಎಚ್ಚೆತ್ತಿರುವ ಪ್ರಾಯೋಜಕತ್ವದ ಚೀನಾದ ವಿವೋ ಕಂಪನಿಯನ್ನು ಕೈ ಬಿಡಲು ತೀರ್ಮಾನಿಸಿದೆ ಎಂದು …
Read More »ಭೂಮಿ ಪೂಜೆ ಲೈವ್ – ಇಂದಿರಾ ಗಾಂಧಿ ಭಾಷಣದ ವಿಡಿಯೋ ಅಪ್ಲೋಡ್ ಮಾಡಿ ಪ್ರಶ್ನೆ ಕೇಳಿದ ಬಿಜೆಪಿ
ನವದೆಹಲಿ: ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆಯ ಕಾರ್ಯಕ್ರಮವನ್ನು ಡಿಡಿ ವಾಹಿನಿಯಲ್ಲಿ ಲೈವ್ ಪ್ರಸಾರ ಮಾಡವುದಕ್ಕೆ ಟೀಕೆ ವ್ಯಕ್ತವಾಗಿದ್ದಕ್ಕೆ ಬಿಜೆಪಿ ಇಂದಿರಾ ಗಾಂಧಿ ಭಾಷಣದ ವಿಡಿಯೋವನ್ನು ರಿಲೀಸ್ ಮಾಡಿ ತಿರುಗೇಟು ನೀಡಿದೆ. ಆಗಸ್ಟ್ 5 ರಂದು ಆಯೋಜನೆಗೊಂಡಿರುವ ರಾಮ ಮಂದಿರದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ದೂರದರ್ಶನ ಲೈವ್ ಪ್ರಸಾರ ಮಾಡಲು ಸಿದ್ಧತೆ ನಡೆಸುತ್ತಿತ್ತು.ಸರ್ಕಾರದ ವಾಹಿನಿಯಾಗಿರುವ ಡಿಡಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲು …
Read More »
Laxmi News 24×7