ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ನಿಂತು ರಾಷ್ಟವ್ಯಾಪಿ ಲಸಿಕಾ ಉತ್ಸವ ನಡೆಯಬೇಕು ಎಂದು ಕರೆಕೊಟ್ಟರು. ಆದರೆ ಇದೀಗ ಅದೇ ದೆಹಲಿಯಲ್ಲಿ ಲಸಿಕೆಯ ಅಭಾವ ಉಂಟಾಗಿ 100 ಹೆಚ್ಚು ಲಸಿಕಾ ಕೇಂದ್ರಗಳು ಮುಚ್ಚಿಹೋಗಿವೆ. ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸಂಗ್ರಿಸಲಾಗಿದ್ದ ಎಲ್ಲ ಲಸಿಕೆಗಳು ಖಾಲಿಯಾದ್ದರಿಂದ ನಗರದ 100 ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳನ್ನು ಮುಚ್ಚುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ …
Read More »ರಾಜ್ಯಗಳಿಗೆ ಇನ್ನೂ ಮೂರು ದಿನಗಳಲ್ಲಿ ಏಳು ಲಕ್ಷ ಕೋವಿಡ್ ಲಸಿಕೆ ಸರಬರಾಜು:ಕೇಂದ್ರ
ನವದೆಹಲಿ:ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 90 ಲಕ್ಷಕ್ಕೂ ಹೆಚ್ಚು ಕೋವಿಡ್ -19 ಲಸಿಕೆ ಪ್ರಮಾಣಗಳು ಇನ್ನೂ ಲಭ್ಯವಿದ್ದು, ಮುಂದಿನ ಮೂರು ದಿನಗಳಲ್ಲಿ 7 ಲಕ್ಷಕ್ಕೂ ಹೆಚ್ಚಿನ ಹೆಚ್ಚುವರಿ ಪ್ರಮಾಣವನ್ನು ಪಡೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಕೇಂದ್ರವು ಈವರೆಗೆ 18 ಕೋಟಿಗೂ ಹೆಚ್ಚು ಲಸಿಕೆ ಪ್ರಮಾಣವನ್ನು (18,00,03,160) ರಾಜ್ಯಗಳು ಮತ್ತು ಯುಟಿಗಳಿಗೆ ಉಚಿತವಾಗಿ ನೀಡಿದೆ.ಇದರಲ್ಲಿ, ತ್ಯಾಜ್ಯಗಳು ಸೇರಿದಂತೆ ಒಟ್ಟು ಬಳಕೆ 17,09,71,429 ಪ್ರಮಾಣಗಳು. ’90 ಲಕ್ಷಕ್ಕೂ ಹೆಚ್ಚು …
Read More »18 ರಿಂದ 44 ವರ್ಷ ವಯಸ್ಸಿನವರಿಗೆ ನಾಳೆಯಿಂದ ಲಸಿಕೆ -ಡಾ.ಕೆ ಸುಧಾಕರ್
ಬೆಂಗಳೂರು: ರಾಜ್ಯ ಸರ್ಕಾರ ಖರೀದಿಸುತ್ತಿರುವ 2 ಕೋಟಿ ಡೋಸ್ ಕೋವಿಶೀಲ್ಡ್ ಪೈಕಿ ಶನಿವಾರ ರಾತ್ರಿ 3.5 ಲಕ್ಷ ಡೋಸ್ ರಾಜ್ಯಕ್ಕೆ ತಲುಪಿದ್ದು, ಈವರೆಗೂ ಒಟ್ಟು 6.5 ಲಕ್ಷ ಡೋಸ್ ಪೂರೈಕೆಯಾಗಿದೆ. ಹಾಗಾಗಿ ಮೇ 10 ರಿಂದ ರಾಜ್ಯಾದ್ಯಂತ 18 ರಿಂದ 44 ವರ್ಷ ವಯಸ್ಸಿನವರಿಗೆ ವ್ಯಾಕ್ಸಿನೇಷನ್ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಸುಧಾಕರ್, ಕೇಂದ್ರ ಸರ್ಕಾರ ಈವರೆಗೂ 99,58,190 …
Read More »ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಛೋಟಾ ರಾಜನ್ ಸಾವಿನ ಸುದ್ದಿ ಸುಳ್ಳು ಎಂದ ಏಮ್ಸ್ ಆಸ್ಪತ್ರೆ
ನವದೆಹಲಿ: ಭೂಗತ ಪಾತಕಿಯಾಗಿದ್ದ ಛೋಟಾ ರಾಜನ್ (62) ಕೋವಿಡ್ ಸೋಂಕಿನಿಂದ ಶುಕ್ರವಾರ ಮೃತಪಟ್ಟಿದ್ದಾನೆ ಎಂಬ ಸುದ್ದಿಗಳನ್ನು ನವದೆಹಲಿಯ ಏಮ್ಸ್ ಆಸ್ಪತ್ರೆ ಅಲ್ಲಗಳೆದಿದೆ. ರಾಜನ್ ಇನ್ನೂ ಬದುಕಿದ್ದಾನೆ. ಅವನಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಏಮ್ಸ್ ಮೂಲಗಳು ಖಚಿತಪಡಿಸಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ರಾಜನ್ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆ ನಡೆದು ಆತನ ಇನ್ನಿಲ್ಲ ಎಂಬ ಸಂದೇಶಗಳು ಹರಿದಾಡಿದ್ದವು. ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಛೋಟಾ ರಾಜನ್ನ್ನು ಮುಂಬೈ …
Read More »ಮಮತಾ ಬ್ಯಾನರ್ಜಿ ಬಗ್ಗೆ ಆಕ್ಷೇಪಾರ್ಹ ಟ್ವೀಟ್ : ಕಂಗನಾ ರಣಾವತ್ ಟ್ವಿಟ್ಟರ್ ಅಮಾನತು
ನವದೆಹಲಿ : ಮೈಕ್ರೊ ಬ್ಲಾಗಿಂಗ್ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ಟ್ವೀಟ್ ಮಾಡಿದ ಕಾರಣ ನಟಿ ಕಂಗನಾ ರಣಾವತ್ ಟ್ವಿಟ್ಟರ್ ಖಾತೆಯನ್ನು ಅಮಾನತು ಮಾಡಲಾಗಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಗ್ಗೆ ಆಕ್ಷೇಪಾರ್ಹ ಸರಣಿ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ನಟಿಯ ಟ್ವಿಟ್ಟರ್ ಖಾತೆಯನ್ನು ಅಮಾನತು ಮಾಡಲಾಗಿದೆ. 2021ರ ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ಟಿಎಂಸಿ ಗೆದ್ದಿದೆ. ಇದೇ ಹಿನ್ನೆಲೆಯಲ್ಲಿ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ತರಬೇಕು ಎಂದು ಕಂಗನಾ ಒತ್ತಾಯ …
Read More »ವೆಂಟಿಲೇಟರ್‌ನಲ್ಲಿರುವ ಕೊರೊನಾ ಸೋಂಕಿತರೊಬ್ಬರಿಗೆ ಗೋಮೂತ್ರ ಕುಡಿಸಿದ ರಾಜಕಾರಣಿ
ನವದೆಹಲಿ, : ವೆಂಟಿಲೇಟರ್‌ನಲ್ಲಿರುವ ಮಹಿಳಾ ಕೊರೊನಾ ಸೋಂಕಿತರೊಬ್ಬರಿಗೆ ರಾಜಕಾರಣಿಯೊಬ್ಬರು ಒತ್ತಾಯಪೂರ್ವಕವಾಗಿ ಗೋಮೂತ್ರ ಕುಡಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಮಹಿಳೆಯನ್ನು ವೆಂಟಿಲೇಟರ್‌ನಲ್ಲಿಡಲಾಗಿತ್ತು, ಆವರಿಗೆ ರಾಜಕಾರಣಿಯೊಬ್ಬರು ಗೋಮೂತ್ರ ಕುಡಿಸಿದ್ದರು. ಈ ಶಾಕಿಂಗ್ ವಿಡಿಯೋವನ್ನು ಸೂರತ್ ಬಿಜೆಪಿಯ ಜನರಲ್ ಸೆಕ್ರೆಟರಿ ಕಿಶೋರ್ ಬಿಂದಾಲ್ ಅವರು ಪೋಸ್ಟ್ ಮಾಡಿದ್ದರು. 80 ಸಾವಿರ ಮಂದಿ ಈ ವಿಡಿಯೋ ವೀಕ್ಷಿಸಿದ್ದರು, ಬಳಿಕ ಈ ವಿಡಿಯೋವನ್ನು ಡಿಲೀಟ್ ಮಾಡಲಾಗಿತ್ತು. ಮಾರಕ ಕೊರೋನಾ ವೈರಸ್ ಗುಣಪಡಿಸಲು ಇಡೀ …
Read More »ಆಜ್ ತಕ್ ಸುದ್ದಿ ವಾಹಿನಿಯ ನಿರೂಪಕ ರೋಹಿತ್ ಸರ್ದಾನ ಕೊರೊನಾ ಸೋಂಕಿಗೆ ಬಲಿ
ನವದೆಹಲಿ: ಹಿರಿಯ ಪತ್ರಕರ್ತ, ಆಜ್ ತಕ್ ಸುದ್ದಿ ವಾಹಿನಿಯ ನಿರೂಪಕ ರೋಹಿತ್ ಸರ್ದಾನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ರೋಹಿತ್ ಸರ್ದಾನ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಇಂದು ಬೆಳಿಗ್ಗೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆಜ್ ತಕ್ ನಲ್ಲಿ ದಂಗಲ್ ಎಂಬ ಚರ್ಚಾ ಕಾರ್ಯಕ್ರಮದ ಮೂಲಕ ರೋಹಿತ್ ಜನಪ್ರಿಯರಾಗಿದ್ದರು. ಕೊರೊನಾ ಸೋಂಕಿನಿಂದ ಹಿರಿಯ ಪತ್ರಕರ್ತ, ಸುದ್ದಿ ನಿರೂಪಕ ಸಾವನ್ನಪ್ಪಿರುವುದು ಸಹೋದ್ಯೋಗಿಗಳಿಗೆ ಆಘಾತವನ್ನುಂಟು ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಹಿತ್ …
Read More »ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆಯುವರಿಗೆ ಆನ್ ಲೈನ್ ನಲ್ಲಿ ನೋಂದಿಣಿಗೆ ಇಂದಿನಿಂದ ಅವಕಾಶ
ನವದೆಹಲಿ: ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆಯುವರಿಗೆ ಆನ್ ಲೈನ್ ನಲ್ಲಿ ನೋಂದಿಣಿಗೆ ಇಂದಿನಿಂದ ಅವಕಾಶ ನೀಡಲಾಗಿದೆ. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ವ್ಯಾಕ್ಸಿನ್ ಪಡೆಯಲು ಇಚ್ಛಿಸುವವರು ಕೋವಿನ್ ವೆಬ್ ಸೈಟ್ ಅಥವಾ ಆರೋಗ್ಯ ಸೇತು ಆಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. * www,cowin.gov.in ವೆಬ್ ಸೈಟ್ ಗೆ ಭೇಟಿ ನೀಡಿ …
Read More »ರಾಜ್ಯಗಳು ಲಾಕ್‌ಡೌನ್ ಘೋಷಿಸಿದ್ದರೂ ರೈಲುಗಳು ಮಾತ್ರ ಎಂದಿನಂತೆ ಸಂಚರಿಸಲಿವೆ.:ಭಾರತೀಯ ರೈಲ್ವೆ ಮಂಡಳಿ
ನವದೆಹಲಿ: ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ನಿಯಂತ್ರಿಸಲು ಹಲವು ರಾಜ್ಯಗಳು ಲಾಕ್‌ಡೌನ್ ಘೋಷಿಸಿದ್ದರೂ ರೈಲುಗಳು ಮಾತ್ರ ಎಂದಿನಂತೆ ಸಂಚರಿಸಲಿವೆ. ಅಗತ್ಯಬಿದ್ದರೆ ವಿಶೇಷ ರೈಲುಗಳನ್ನು ಓಡಿಸಲಾಗುವುದು ಎಂದು ಭಾರತೀಯ ರೈಲ್ವೆ ಮಂಡಳಿಯು ತಿಳಿಸಿದೆ. ಪ್ರಸ್ತುತ ಮೇಲ್ ಮತ್ತು ಎಕ್ಸ್‌ಪ್ರೆಸ್ ಸೇರಿದಂತೆ ಶೇ 70ರಷ್ಟು ರೈಲುಗಳು ಕೋವಿಡ್ ಪೂರ್ವದಿಂದಲೂ ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ, ಸುಮಾರು 330 ಬೇಸಿಗೆ ವಿಶೇಷ ರೈಲುಗಳು ಸಹ ಸಂಚರಿಸುತ್ತಿವೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಸುನೀತ್ ಶರ್ಮಾ ಹೇಳಿದ್ದಾರೆ. ‘ಮಹಾರಾಷ್ಟ್ರ, ದೆಹಲಿ, …
Read More »ಕೊರೊನಾ ಮೊದಲ ಅಲೆಗಿಂತ ಈಗ ಆಕ್ಸಿಜನ್ ಬೇಡಿಕೆ ಜಾಸ್ತಿ ಆಗಿದ್ದು ಏಕೆ? ಇಲ್ಲಿದೆ ಉತ್ತರ
ನಿಮಗೆ ನೆನಪಿದೆಯಾ? ಕಳೆದ ವರ್ಷ, ಕೊರೊನಾ ಮೊದಲ ಅಲೆ ಅಪ್ಪಳಿಸಿದಾಗ, ಎಲ್ಲೆಲ್ಲೂ ವೈದ್ಯಕೀಯ ವೆಂಟಿಲೇಟರ್ಗಾಗಿ ಹಾಹಾಕಾರ ಎದ್ದಿತ್ತು. ಹೌದು. ಅದೇ ರೀತಿ ಹೈಡ್ರೋಕ್ಸಿಕ್ಲೋರೊಕ್ವಿನ್ (ಎಚ್ಸಿಕ್ಯೂ) ಮಾತ್ರೆಗೂ ಬೇಡಿಕೆ ತುಂಬಾ ಇತ್ತು. ಭಾರತ ಅಮೇರಿಕಕ್ಕೆ (ಎಚ್ಸಿಕ್ಯೂ) ಮಾತ್ರೆಯನ್ನು ಕಳಿಸಿತ್ತು. ಭಾರತ ಸರ್ಕಾರ ಹೊಸ ಹೊಸ ವೆಂಟಿಲೇಟರ್ ತಯಾರಿಸಲು ಕರೆ ಕೊಟ್ಟಿತ್ತು. ಅದು ಹೇಗೋ, ಭಾರತದಲ್ಲಿ ಕೊರೊನಾ ವೈರಾಣು ಮಣ್ಣುಮುಕ್ಕಿತು. ನಾವು ಬೇರೆಲ್ಲಾ ದೇಶಗಳಿಗಿಂತಲೂ ಸುಲಭವಾಗಿ ಕೊವಿಡ್ 19 ಯುದ್ಧದಲ್ಲಿ ಗೆದ್ದುಬಿಟ್ಟೆವು ಎಂದು …
Read More »