ಹಾವೇರಿ: ಮುಂಬೈನಿಂದ ಬಂದಿದ್ದ ಮೂವರಲ್ಲಿ ಓರ್ವನಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದರಿಂದ ಸೋಂಕಿತ ವಾಸವಾಗಿದ್ದ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಎಸ್.ಎಂ ಕೃಷ್ಣ ನಗರವನ್ನ ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ. ಏಪ್ರಿಲ್ 28 ರಂದು ಗೂಡ್ಸ್ ಲಾರಿಯಲ್ಲಿ ಮೂವರು ಮುಂಬೈನಿಂದ ಸವಣೂರು ಪಟ್ಟಣಕ್ಕೆ ಬಂದಿದ್ದರು. ಅವರನ್ನ ತಪಾಸಣೆಗೆ ಒಳಪಡಿಸಿ ಸ್ಯಾಂಪಲ್ಸ್ ಕಲೆಕ್ಟ್ ಮಾಡಿ ಲ್ಯಾಬ್ ಕಳಿಸಿದ ನಂತರ ಮೂವರಲ್ಲಿ 32 ವರ್ಷದ ಓರ್ವನಿಗೆ ಕೊರೊನಾ ಸೋಂಕು ಇರೋದು ಸೋಮವಾರ ದೃಢಪಟ್ಟಿತ್ತು. …
Read More »ಹಲವು ವಿನಾಯಿತಿಗಳ ನಡುವೆ ಮೇ 17ರವರೆಗೆ ನಿಷೇಧಾಜ್ಞೆ ಮುಂದುವರಿಕೆ ……..
ಹಾವೇರಿ: ಹಲವು ವಿನಾಯಿತಿಗಳ ನಡುವೆ ಕರೋನಾವೈರಸ್ (Coronavirus) ಕೋವಿಡ್ ನಿರ್ಭಂಧ ಜಿಲ್ಲೆಯಲ್ಲಿ ಮುಂದುವರೆದಿದೆ. ಜಿಲ್ಲೆಯಲ್ಲಿ ನಿಷೇಧಾಜ್ಞೆಯನ್ನು ಮೇ 17ರವರೆಗೆ ಮುಂದುವರಿಸಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಆದೇಶ ಹೊರಡಿಸಿದ್ದಾರೆ. ಲಾಕ್‌ಡೌನ್ (Lockdown)ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ಅದರಂತೆ ಈ ಕೆಳಕಂಡ ಚಟುವಟಿಕೆಗಳನ್ನು ನಿಯಂತ್ರಿಸಿ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು ಐದಕ್ಕಿಂತ ಹೆಚ್ಚು ಜನ ಗುಂಪಾಗಿ ಸೇರುವುದನ್ನು ನಿಷೇಧಿಸಿದೆ. ಅನುಮತಿ ಪಡೆದ ಬಸ್‍ಗಳನ್ನು ಹೊರತುಪಡಿಸಿ ಉಳಿದ ಯಾವುದೇ …
Read More »ಪೊಲೀಸ್ ವರಿಷ್ಠಾಧಿಕಾರಿ-ಅಪರ ಜಿಲ್ಲಾಧಿಕಾರಿ ನಗರ ಸಂಚಾರ
ಹಾವೇರಿ: ಹಸಿರು ವಲಯದಲ್ಲಿರುವ ಹಾವೇರಿ ಜಿಲ್ಲೆಯಲ್ಲಿ ಆಯ್ದ ಆರ್ಥಿಕ ಚಟುವಟಿಕೆಗೆ ಅನುಮತಿ ನೀಡಲಾಗಿದೆ. ಬಟ್ಟೆ-ಬಂಗಾರ ಮಾರಾಟದ ಅಂಗಡಿಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆಯೇ ಹಾಗೂ ನಿಯಮ ಪಾಲಿಸಲಾಗತ್ತಿದೆಯೇ ಎಂಬುದನ್ನು ಪರಿಶೀಲಿಸಲು ಇಂದು ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ನಗರ ಸಂಚಾರ ಕೈಗೊಂಡು ಜಾಗೃತಿ ಮೂಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, …
Read More »ಹಾವೇರಿ :ಬ್ಯಾಡಗಿ ಎಪಿಎಂಸಿ ಮಾರುಕಟ್ಟೆ ಸಂಪೂರ್ಣವಾಗಿ ಬಂದ್…….
ಹಾವೇರಿ(ಏ. 28): ಒಣ ಮೆಣಸಿನಕಾಯಿ ಕಣಜ ಎಂದೇ ವಿಶ್ವಪ್ರಸಿದ್ಧಿ ಪಡೆದಿರುವ ಬ್ಯಾಡಗಿ ಎಪಿಎಂಸಿ ಮಾರುಕಟ್ಟೆ ಸಂಪೂರ್ಣವಾಗಿ ಬಂದ್ ಆಗಿದೆ. ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ತನ್ನದೇ ಆದ ಇತಿಹಾಸ ಹೊಂದಿದ್ದು ಮುಂಬೈ ಸರ್ಕಾರದ ಕಂದಾಯ ಇಲಾಖೆಯ ಅಧಿಸೂಚನೆ ಅನ್ವಯ 1948ರಲ್ಲಿ ಈ ಮಾರುಕಟ್ಟೆ ಸ್ಥಾಪನೆಯಾಗಿದೆ. ಅಂದಿನಿಂದ ಇಂದಿನವರೆಗೂ ಇಷ್ಟು ದಿನಗಳ ಕಾಲ ಈ ಮಾರುಕಟ್ಟೆ ಬಂದ್ ಆಗಿರುವ ದಾಖಲೆ ಇರಲಿಲ್ಲ. ಆದರೆ ಕೊರೋನಾದಿಂದಾಗಿ ಮಾರ್ಚ್19 ರಿಂದ ಸಂಪೂರ್ಣ ಲಾಕ್ ಮಾಡಲಾಗಿದೆ. …
Read More »ಹಾವೇರಿ:ನಮ್ಮನ್ನ ನಮ್ಮ ನಮ್ಮ ಊರಿಗೆ ತಲುಪಿಸಿ……
ಹಾವೇರಿ: ಜಿಲ್ಲೆಯಿಂದ ಕೆಲಸ ಅರಸಿಕೊಂಡು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಗೆ ದುಡಿಯಲು ಹೋಗಿದ್ದ 40ಕ್ಕೂ ಅಧಿಕ ಕಾರ್ಮಿಕರು ಊರಿಗೆ ಬರಲಾಗದೆ ಪರದಾಡ್ತಿದ್ದಾರೆ. ಕಣ್ಣೂರು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ವಾಸವಾಗಿರೋ ಕಾರ್ಮಿಕರು ಲಾಕ್ ಡೌನ್ ನಂತರ ರಾಜ್ಯಗಳ ಗಡಿ ಬಂದ್ ಆಗಿದ್ದರಿಂದ ಊರಿಗೆ ಬರಲು ಪರದಾಡ್ತಿದ್ದಾರೆ. ಅಲ್ಲದೆ ಲಾಕ್ ಡೌನ್ ನಂತರ ಕೆಲಸವೂ ಇಲ್ಲದೆ ಇದ್ದ ಹಣವೂ ಖರ್ಚಾಗಿದೆ. ಊಟಕ್ಕೆ ಬೇಕಾದ ಪದಾರ್ಥಗಳು ಖಾಲಿ ಆಗಿವೆ. ಹೀಗಾಗಿ ನಮ್ಮನ್ನ ನಮ್ಮ ನಮ್ಮ …
Read More »ಹೊರ ಜಿಲ್ಲೆಯ ಉದ್ಯೋಗದಿಂದ ಹಿಂತಿರುಗಿದವರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಸೂಚನೆ
ಹಾವೇರಿ: ಎ.25 (ಕರ್ನಾಟಕ ವಾರ್ತೆ): ಉದ್ಯೋಗ ನಿಮಿತ್ಯ ಹೊರ ಜಿಲ್ಲೆಗಳಲ್ಲಿ ಉಳಿದುಕೊಂಡವರು ಇದೀಗ ಮರಳಿ ತಮ್ಮ ಸ್ವಂತ ಗ್ರಾಮಕ್ಕೆ ಆಗಮಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಜಿಲ್ಲೆಗೆ ಬರುವ ಜನರನ್ನು ಕಡ್ಡಾಯವಾಗಿ ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸಿ ಪ್ರಯೋಗಾಲಯದ ಮಾದರಿ ಬರುವತನಕ ಸರ್ಕಾರಿ ಕ್ವಾರಂಟೈನ್‍ನಲ್ಲಿ ಇರಿಸುವಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಎಲ್ಲ ತಹಶೀಲ್ದಾರಗಳಿಗೆ ಸೂಚನೆ ನೀಡಿದರು. ಶನಿವಾರ ಜಿಲ್ಲೆಯ ತಹಶೀಲ್ದಾರಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಸರ್ಕಾರದ ಸೂಚನೆಯಂತೆ ರಾಜ್ಯದ ವಲಸೆ ಕಾರ್ಮಿಕರನ್ನು …
Read More »ಯಮ, ಕಿಂಕರರು ಹಾಗೂ ಕೊರೊನಾ ವೈರಸ್ ವೇಷ ಹಾಕಿಕೊಂಡು ಸ್ಥಳೀಯರು ಕೊರೊನಾ ವೈರಸ್ ಕುರಿತು ಜಾಗೃತಿ
ಹಾವೇರಿ: ಯಮ, ಕಿಂಕರರು ಹಾಗೂ ಕೊರೊನಾ ವೈರಸ್ ವೇಷ ಹಾಕಿಕೊಂಡು ಸ್ಥಳೀಯರು ಕೊರೊನಾ ವೈರಸ್ ಕುರಿತು ಜನರಿಗೆ ಜಾಗೃತಿ ಮೂಡಿಸುತ್ತಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಹೊಸಪೇಟೆ ಓಣಿಯ ನಾಲ್ವರಲ್ಲಿ ಓರ್ವ ಯಮನ ವೇಷ, ಇಬ್ಬರು ಕಿಂಕರರ ವೇಷ ಹಾಗೂ ಮತ್ತೊಬ್ಬ ಕೊರೊನಾ ವೈರಸ್ ನ ವೇಷ ಹಾಕಿಕೊಂಡು ಪಟ್ಟಣದಲ್ಲಿ ಜನರಿಗೆ ಕೊರೊನಾ ವೈರಸ್ ಮತ್ತು ಲಾಕ್‍ಡೌನ್ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಯಮ …
Read More »ಹಾವೇರಿ, :ಅಧಿನಿಯಮ ಉಲ್ಲಂಘಿಸಿ ಬೀಜ ಮಾರಾಟ ಮಾಡುತ್ತಿದ್ದ ಕಂಪೆನಿಯ ಪರವಾನಿಗೆ ರದ್ದು
ಹಾವೇರಿ, ಏ.21:ಬೀಜ ಅಧಿನಿಯಮ ಉಲ್ಲಂಘನೆ ಮಾಡಿದ್ದ ಕಾರಣಕ್ಕಾಗಿ ಬೀಜ ಮಾರಾಟ ಮಾಡುತ್ತಿದ್ದ ಖಾಸಗಿ ಕಂಪೆನಿಯ ಪರವಾನಿಗೆಯನ್ನು ಅಮಾನತು ಮಾಡಿ ಆದೇಶಿಸಲಾಗಿದೆ.ರಾಣೆಬೆನ್ನೂರಿನ “ವೆಂಕಟೇಶ್ವರ ಆಗ್ರೋ ಟ್ರೇಡರ್ಸ್” ಖಾಸಗಿ ಕಂಪೆನಿಯಾಗಿದ್ದು ಈ ಖಾಸಗಿ ಟ್ರೇಡರ್ಸ್ ಸುಮಾರು 12 ವರ್ಷಗಳಿಂದ ರೈತರ ಬೀಜ ಮಾರಾಟ ಮಾಡಿಕೊಂಡು ಬಂದಿರುತ್ತದೆ. ಇತ್ತೀಚೆಗೆ ರಾಣೆಬೆನ್ನೂರಿನಲ್ಲಿ ಕಳಪೆ ಬೀಜ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಆಧಾರದ ಮೇಲೆ ಏಪ್ರಿಲ್ 20 ರಂದು ಈ ಟ್ರೆಡರ್ಸ್ ಮಳಿಗೆಗೆ ವಿಚಕ್ಷಣಾ ತಂಡ ಭೇಟಿ …
Read More »ಯಾದಗಿರಿ/ಹಾವೇರಿ:ರಾತ್ರಿ ಸುರಿದ ಮಳೆಗೆ ಭತ್ತದ ಬೆಳೆ ಮಣ್ಣುಪಾಲಾಗಿದೆ.
ಯಾದಗಿರಿ/ಹಾವೇರಿ: ಶನಿವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಯಾದಗಿರಿ ಹಾಗೂ ಹಾವೇರಿ ಜಿಲ್ಲೆಯ ರೈತರು ಅಕ್ಷರಶಃ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಯಾದಗಿರಿಯಲ್ಲಿ ರಾತ್ರಿ ಸುರಿದ ಮಳೆಗೆ ಭತ್ತದ ಬೆಳೆ ಮಣ್ಣುಪಾಲಾಗಿದೆ. ಜಿಲ್ಲೆಯ ಅಬ್ಬೆತುಮಕೂರ, ಹೆಡಗಿಮುದ್ರಾ, ಠಾಣಾಗುಂದಿ, ನಾಯ್ಕಲ್, ಮನಗನಾಳ, ಅನಕಸೂಗುರ, ಐಕೂರ ಮೊದಲಾದ ಕಡೆ ಭತ್ತದ ಬೆಳೆ ಹಾಗೂ ಸಜ್ಜೆ ಬೆಳೆ ನೆಲ ಕಚ್ಚಿದೆ. ಏಪ್ರಿಲ್ 7ರಂದು ಸುರಿದ ಬಿರುಗಾಳಿ ಸಹಿತ ಮಳೆಗೆ ಕೂಡ ಬೆಳೆ ಹಾನಿಯಾಗಿತ್ತು. ಈಗ ಮತ್ತೆ …
Read More »ಕರೋನಾ ಜಾಗೃತಿಗೆ ಜಿಲ್ಲೆಯಾದ್ಯಂತ ಪೊಲೀಸ್ ರೂಟ್ ಮಾರ್ಚ್- ಬೈಕ್ ರ್ಯಾಲಿ
ಕರೋನಾ ಜಾಗೃತಿಗೆ ಜಿಲ್ಲೆಯಾದ್ಯಂತ ಪೊಲೀಸ್ ರೂಟ್ ಮಾರ್ಚ್- ಬೈಕ್ ರ್ಯಾಲಿ ಸಾರ್ವಜನಿಕರಿಗೆ ಆತ್ಮವಿಶ್ವಾಸದ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಾಗೃತಿ -ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ್ ಹಾವೇರಿ: ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ಲಾಕ್‍ಡೌನ್ ಪಾಲನೆ, ಕರೋನಾ ಸೋಂಕು ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಅಗತ್ಯ ಸಂದರ್ಭದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಆತ್ಮವಿಶ್ವಾಸ ತುಂಬುವ ಸಂದೇಶವನ್ನು ಸಾರ್ವಜನಿಕರಿಗೆ ಸಾರಲು ಪೊಲೀಸ್ ಇಲಾಖೆ ಇಂದು ನಗರದಲ್ಲಿ ಪೊಲೀಸ್ ರೂಟ್ ಮಾರ್ಚ್ ಹಾಗೂ …
Read More »