ಶಿವಮೊಗ್ಗ: ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮನೆ ಗೋಡೆ ಕುಸಿತ ಉಂಟಾಗಿ ಮನೆಯಲ್ಲಿದ್ದ ತಾಯಿ ಸಾವನ್ನಪ್ಪಿ, ಮಗ ಗಾಯಗೊಂಡಿರುವ ಘಟನೆ ಭದ್ರಾವತಿ ತಾಲೂಕಿನ ಕಾವಗೊಂಡನಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಸುಜಾತ(60) ಮೃತಪಟ್ಟಿದ್ದು, ಇವರ ಮಗ ಕೃಷ್ಣಮೂರ್ತಿ(40) ಅವರ ಕಾಲಿಗೆ ಗಾಯವಾಗಿದ್ದು,ಇವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ 9:30 ರ ಹೊತ್ತಿಗೆ ಟಿವಿ ನೋಡುತ್ತಿರುವಾಗ ಏಕಾಏಕಿ ಮನೆಯ ಗೋಡೆ ಕುಸಿತವಾಗಿ ಇವರ ಮೇಲೆ ಬಿದ್ದಿದೆ. ಸ್ಥಳಕ್ಕೆ ಭದ್ರಾವತಿ ತಹಶೀಲ್ದಾರ್ ಪ್ರದೀಪ್ ನಿಕ್ಕಂ …
Read More »ಸಿದ್ದರಾಮೋತ್ಸವ’ಕ್ಕೆ ಹೊರಟಿದ್ದ ಬಸ್ ಅಪಘಾತ : ಓರ್ವ ಸಾವು
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದವರ ಪೈಕಿ ಶಾಬಾಜ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಆರು ಮಂದಿಗೆ ಗಂಭೀರ ಗಾಯಗಳಾಗಿವೆ. ಮಹಮ್ಮದ್ ಉಸ್ಮಾನ್, ಶಿಫಾ, ರಿಯನ್ , ಖಮರುನ್ನಿಸಾ, ಜಬ್ರನ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಜೋಗ್ ಜಲಪಾತ ವೀಕ್ಷಿಸಿ ವಾಪಸ್ ಆಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಬಸ್ ನಲ್ಲಿದ್ದವರು ದಾವಣಗೆರೆ ಮೂಲದವರು. ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ …
Read More »ಸಿಗಂದೂರು ಸೇತುವೆ ಕಾಮಗಾರಿ ಸರಾಗ: ದೇಶದ 2ನೇ ಅತಿದೊಡ್ಡ ಸೇತುವೆಯ ಪೈಲ್ ಕ್ಯಾಪ್ ಅಳವಡಿಕೆ
ಶಿವಮೊಗ್ಗ:ರಾಜ್ಯದ ಪ್ರಮುಖ ಶಕ್ತಿಪೀಠ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಹಾಗೂ ದೇಶದ ಎರಡನೇ ಅತಿ ದೊಡ್ಡ ಕೇಬಲ್ ಸೇತುವೆ ನಿರ್ಮಾಣಕ್ಕಿದ್ದ ತೊಡಕುಗಳನ್ನು ಮೀರಿ ಪ್ರಮುಖ ಕಾಮಗಾರಿಯು ಅವಧಿಗೆ ಮುನ್ನವೇ ಮುಗಿದಿದೆ. ಕಾಮಗಾರಿಗೆ ಲಿಂಗನ ಮಕ್ಕಿ ಜಲಾಶಯದ ನೀರು ತೊಡಕಾಗುತ್ತಿದೆ ಎನ್ನಲಾಗಿತ್ತು. ಕಾಮಗಾರಿಗೆ ಲಿಂಗನ ಮಕ್ಕಿ ಜಲಾಶಯದ ನೀರು ತೊಡಕಾಗುತ್ತಿದೆ ಎನ್ನಲಾಗಿತ್ತು. ನೀರೇ ಸಮಸ್ಯೆ ಕಾಮಗಾರಿಗೆ ಪ್ರಮುಖ ಹಂತವಾದ ಪೈಲ್ ಕ್ಯಾಪ್ ಅಳವಡಿಕೆಯೇ ಸವಾಲಾಗಿತ್ತು. ಎರಡು ವರ್ಷ ಕಳೆದರೂ 5 ಪೈಲ್ ಕ್ಯಾಪ್ …
Read More »ಯಾರನ್ನ ನಂಬಬೇಕೋ ಗೊತ್ತಾಗುತ್ತಿಲ್ಲ. ಡಾ.ವಿಶ್ವ ಸಂತೋಷ ಭಾರತಿ ಗುರೂಜಿ ಕಳವಳ
ಶಿವಮೊಗ್ಗ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರು ವಾಮ ಮಾರ್ಗದಿಂದ ಆಸ್ತಿ ಮಾಡಿದ್ದಲ್ಲ. ಯಾರನ್ನ ನಂಬಬೇಕೋ ಗೊತ್ತಾಗುತ್ತಿಲ್ಲ… ಎಂದು ಡಾ. ವಿಶ್ವ ಸಂತೋಷ ಭಾರತಿ ಗುರೂಜಿ ಕಳವಳ ವ್ಯಕ್ತಪಡಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ವಿಶ್ವ ಸಂತೋಷ ಭಾರತಿ ಗುರೂಜಿ, ಸರಳ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ್ ಗುರೂಜಿ ಅವರ ಹತ್ಯೆ ಖಂಡನೀಯ. ಕೆಲವೊಂದು ಕಾರ್ಯಕ್ರಮವನ್ನು ಅವರೊಂದಿಗೆ ಹಂಚಿಕೊಂಡಿದ್ದೇವೆ. ಗುರೂಜಿ ವಾಮ ಮಾರ್ಗದಿಂದ ಆಸ್ತಿ ಮಾಡಿದ್ದಲ್ಲ. ಅವರ ಜತೆಗೆ ಇದ್ದುಕೊಂಡು …
Read More »ಈ ಸರ್ಕಾರದಲ್ಲಿ ಕಮಿಷನ್ಗೆ ಲೆಕ್ಕ ಇಲ್ಲ ಆರ್ಎಸ್ಎಸ್ ಪ್ರಮುಖರಿಗೆ ಕಮಿಷನ್ ಹಣ ಕೊಡಲೇಬೇಕು.:HD.K.
ಶಿವಮೊಗ್ಗ: ಈ ಸರ್ಕಾರದಲ್ಲಿ ಕಮಿಷನ್ಗೆ ಲೆಕ್ಕ ಇಲ್ಲ. ಆರ್ಎಸ್ಎಸ್ ಪ್ರಮುಖರಿಗೆ ಶಾಸಕರು, ಸಚಿವರಿಂದ ಕಮಿಷನ್ ಹೋಗ್ತಾ ಇದೆ. ಆರ್ಎಸ್ಎಸ್ ನ 2-3 ಜನ ಪ್ರಮುಖರಿಗೆ ಕಮಿಷನ್ ಹಣ ಕೊಡಲೇಬೇಕು. ಶಾಸಕರು, ಸಚಿವರು ಎಲ್ಲರೂ ಪ್ರತಿ ತಿಂಗಳು ಪಕ್ಷದ ಹಿಂದಿರುವ ಮುಖಂಡರಿಗೆ ನೇರವಾಗಿ ಕಮಿಷನ್ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ನೇರವಾಗಿ ಆರ್ಎಸ್ಎಸ್ನಿಂದ ನಡೆಯುತ್ತಿದೆ. ಇದರ ಬಗ್ಗೆ …
Read More »ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದವರಿಗೆ ಬಿಗ್ ಶಾಕ್: 16 ಸಾವಿರ ಕಾರ್ಡ್ ರದ್ದು
ಶಿವಮೊಗ್ಗ: ಸರ್ಕಾರ ಮತ್ತು ಸರ್ಕಾರಿ ಅನುದಾನದ ಸಂಸ್ಥೆಗಳು ಸರ್ಕಾರಿ ಪ್ರಾಯೋಜಿತ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಿಗಮ -ಮಂಡಳಿಗಳನ್ನು ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಗಳನ್ನು ಪಡೆದುಕೊಳ್ಳುವಂತಿದಿಲ್ಲ. ಹೀಗಿದ್ದರೂ, ಸುಳ್ಳು ಮಾಹಿತಿ ನೀಡಿ ಹೆಚ್ಚಿನವರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಜೀವನೋಪಾಯಕ್ಕಾಗಿ ವಾಣಿಜ್ಯ ವಾಹನ ಓಡಿಸುವವರನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನ ಇರುವ ಕುಟುಂಬಗಳು ಮತ್ತು 1.20 …
Read More »ಶಿವಮೊಗ್ಗದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!
ಶಿವಮೊಗ್ಗ: ಇಲ್ಲೊಬ್ಬ ಮಹಿಳೆ ಒಂದಲ್ಲ, ಎರಡಲ್ಲ, ಬರೋಬ್ಬರಿ ನಾಲ್ಕು ಮಕ್ಕಳಿಗೆ ಏಕಕಾಲದಲ್ಲಿ ಜನ್ಮ ನೀಡಿದ್ದಾರೆ. ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಮಹಿಳೆಯು ಏಕಕಾಲದಲ್ಲಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ್ದು, ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಭದ್ರಾವತಿ ತಾಲೂಕಿನ ಕಡಸ ಗ್ರಾಮದ ಆರೀಫ್ ಅವರ ಪತ್ನಿ ಅಲ್ಮಾ ಬಾನು 4 ಮಕ್ಕಳಿಗೆ ಜನ್ಮ ನೀಡಿದ ತಾಯಿ. ಸೋಮವಾರ ಬೆಳಗ್ಗೆ ಅಲ್ಮಾಗೆ ಹೆರಿಗೆಯಾಗಿದ್ದು, 2 ಗಂಡು ಮತ್ತು 2 ಹೆಣ್ಣು ಮಗು ಜನಿಸಿವೆ.
Read More »ಕಾಗೋಡು ತಿಮ್ಮಪ್ಪ ಪುತ್ರಿಗೆ ಕೊಲೆ ಬೆದರಿಕೆ
ಶಿವಮೊಗ್ಗ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ. ರಾಜನಂದಿನಿ ಅವರಿಗೆ ವ್ಯಕ್ತಿಯೋರ್ವ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಕಾಗೋಡು ತಿಮ್ಮಪ್ಪ ಫೌಂಡೇಷನ್ ವತಿಯಿಂದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹಲವೆಡೆಗಳಲ್ಲಿ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ಈ ಆರೋಗ್ಯ ಶಿಬಿರವನ್ನು ಮಂಗಳವಾರ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ಆರೋಗ್ಯ ಶಿಬಿರ ಮುಗಿಸಿ ಸಾಗರಕ್ಕೆ ವಾಪಸ್ ಆಗುವಾಗ ರಾಜನಂದಿನಿ ಅವರ ಕಾರನ್ನು ಮಂಜು ಎಂಬಾತ ರಸ್ತೆ ಮಧ್ಯೆದಲ್ಲಿ ಅಡ್ಡ …
Read More »ಕಾಮಗಾರಿ ಹಿನ್ನಲೆ ‘ಆಗುಂಬೆ ಘಾಟ್’ ರಸ್ತೆ 10 ದಿನ ಬಂದ್
ಶಿವಮೊಗ್ಗ: ಈಗಾಗಲೇ ರಸ್ತೆ ಕಾಮಗಾರಿ ಹಿನ್ನಲೆಯಲ್ಲಿ ಹಲವು ಬಾರಿ ಬಂದ್ ಆಗಿದ್ದಂತ ಆಗುಂಬೆ ರಸ್ತೆ , ಈಗ ಮತ್ತೆ ಬಂದ್ 10 ದಿನ ಬಂದ್ ಆಗಲಿದೆ. ಈ ಕುರಿತಂತೆ ಶಿವಮೊಗ್ಗ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ-ಹೆಬ್ರಿವರೆಗೆ ರಸ್ತೆ ದುರಸ್ತಿ ಕಾಮಗಾರಿ ಹಿನ್ನಲೆಯಲ್ಲಿ ಮಾರ್ಚ್ 5 ರಿಂದ 15ರವರೆಗೆ ಹತ್ತು ದಿನ ಬೆಳಿಗ್ಗೆ 7 ರಿಂದ ಸಂಜೆ 7ರವೆರೆಗೆ ಆಗುಂಬೆ ಘಾಟ್ ಸಂಚಾರ ನಿಷೇಧಿಸಲಾಗಿದೆ …
Read More »ಶಿವಮೊಗ್ಗ: ವೇಗವಾಗಿ ಬಂದ ಟಿಪ್ಪರ್ ಕಾರಿಗೆ ಡಿಕ್ಕಿ! ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು
ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ ಬಳಿ ಭೀಕರ ಅಪಘಾತ (Accident) ನಡೆದಿದೆ. ವೇಗವಾಗಿ ಬಂದ ಟಿಪ್ಪರ್ ಡಿವೈಡರ್ಗೆ ಗುದ್ದಿ ಕಾರಿಗೆ (Car) ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಷಣ್ಣುಗ್ (39) ಮತ್ತು ರಾಮಚಂದ್ರ (40) ಎಂಬುವವರು ಭೀಕರ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ವೇಗವಾಗಿ ಬಂದ ಚಾಲಕನ ಎಡವಟ್ಟಿನಿಂದ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಘಟನೆ ಬಳಿಕ ಟಿಪ್ಪರ್ ಗಾಡಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ …
Read More »