ಮೈಸೂರು: ಬೆಳಗ್ಗೆಯಷ್ಟೇ ರಾಜ್ಯ ಸರ್ಕಾರ ಲಾಕ್‍ಡೌನ್ ಸಡಿಲಿಕೆ ಮಾಡಿರುವುದರಿಂದ ಜನ ನಿಟ್ಟುಸಿರು ಬಿಟ್ಟಿದ್ದರು. ಆದರೆ ಮೈಸೂರು ನಗರದ ಜನರಿಗೆ ಇದೀಗ ಮತ್ತೆ ಆತಂಕ ಎದುರಾಗಿದ್ದು, ಮೇ 17ರ ವರೆಗೆ ಲಾಕ್‍ಡೌನ್ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಮೇ 4ರಿಂದ 17 ರವರೆಗೆ ಲಾಕ್ ಡೌನ್ ಮುಂದುವರಿಯಲಿದ್ದು, ಬೆಳಗ್ಗೆ 7ರಿಂದ ಮಧ್ಯಾಹ್ನ 12 ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಮಧ್ಯಾಹ್ನ 12 ರಿಂದ ಸಂಜೆ 7ರ ವರೆಗೆ ಅಗತ್ಯ …
Read More »ಅನಧಿಕೃತ ವೈದ್ಯಕೀಯ ಪಾಸ್ ಬಳಸಿ ತಮಿಳುನಾಡಿಗೆ ಪ್ರಯಾಣಿಸಲು ಯತ್ನಿಸಿ ಚಾಲಕನೊಬ್ಬ ಮೈಸೂರು ಪೊಲೀಸರ ಕೈಗೆ
ಮೈಸೂರು: ಅನಧಿಕೃತ ವೈದ್ಯಕೀಯ ಪಾಸ್ ಬಳಸಿ ತಮಿಳುನಾಡಿಗೆ ಪ್ರಯಾಣಿಸಲು ಯತ್ನಿಸಿ ಚಾಲಕನೊಬ್ಬ ಮೈಸೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಿರ್ಮಲ್ ಕುಮಾರ್ ಪೊಲೀಸರ ಕೈಗೆ ಸಿಕ್ಕಿಬಿದ್ದ ಚಾಲಕ. ನಿರ್ಮಲ್ ಕುಮಾರ್ ಅನಧಿಕೃತ ಪಾಸ್ ಅಂಟಿಸಿಕೊಂಡು ತಮಿಳುನಾಡಿಗೆ ಪ್ರಯಾಣಿಸುತ್ತಿದ್ದ. ಈ ವೇಳೆ ನಗರದ ಎನ್.ಆರ್ ಠಾಣೆಯ ಪೊಲೀಸರು ಆತನನ್ನು ತಡೆದು ವಿಚಾರಣೆ ಮಾಡಿದ್ದಾರೆ. ನನ್ನ ಸ್ನೇಹಿತ ನನಗೆ ವ್ಯಾಟ್ಸಪ್‍ನಲ್ಲಿ ಕಳುಹಿಸಿದ್ದ ಪಾಸ್ ಅಂಟಿಸಿಕೊಂಡಿದ್ದೇನೆ ಎಂದು ಚಾಲಕ ಹೇಳಿದ್ದ. ಪಾಸ್ ಪರಿಶೀಲನೆ ಮಾಡಿದಾಗ ಅನಧಿಕೃತ …
Read More »ಕೊರೊನಾ ಸೋಂಕಿನಿಂದ ಗುಣಮುಖರಾದ ಮೈಸೂರಿನ ಎಂಟು ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮೈಸೂರು: ಕೊರೊನಾ ಸೋಂಕಿನಿಂದ ಗುಣಮುಖರಾದ ಮೈಸೂರಿನ ಎಂಟು ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಂಪೂರ್ಣ ಗುಣಮುಖವಾದ ಹಿನ್ನೆಲೆಯಲ್ಲಿ ರೋಗಿ ನಂಬರ್ 140, 195, 201, 213, 216 311, 312 ಮತ್ತು 273 ಎಂಟು ಜನರು ಇಂದು ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಮೈಸೂರಿನಲ್ಲಿ ಕೊರೊನಾದಿಂದ ಗುಣಮುಖವಾವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಸದ್ಯ 38 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ …
Read More »ಸೈಕಲ್ ಕಳ್ಳತನ ಮಾಡ್ಕೊಂಡು ಹೋಗೋ ಗಾಬರಿಯಲ್ಲಿ ಹಣ ಬೀಳಿಸಿದ್ದ ಕಳ್ಳ…
ಮೈಸೂರು: ವ್ಯಕ್ತಿಯೊಬ್ಬ ಜಿಲ್ಲೆಯಲ್ಲಿ ನಾಣ್ಯ, ನೋಟು ಎಸೆದು ಹೋಗಿದ್ದು, ಇದರಿಂದ ಜನರು ತುಂಬಾ ಗಾಬರಿಗೊಂಡಿದ್ದರು. ಆದರೆ ಇದೀಗ ಕಳ್ಳತನ ಮಾಡಿದ್ದ ಸೈಕಲನ್ನು ತೆಗೆದುಕೊಂಡು ಹೋಗುವಾಗ ಗಾಬರಿಯಲ್ಲಿ ಹಣ, ನಾಣ್ಯ ಕೆಳಗೆ ಬೀಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೈಸೂರಿನ ದೇವರಾಜ ಮೊಹಲ್ಲಾದ ಬೋಟಿ ಬಜಾರ್ ಬೀದಿಯಲ್ಲಿ ವ್ಯಕ್ತಿಯೊಬ್ಬ ಹಣ, ನ್ಯಾಣ ಎಸೆದು ಹೋಗಿದ್ದನು ಎಂದು ಹೇಳಲಾಗಿತ್ತು. ಬೀದಿಯಲ್ಲಿ ಬಿದ್ದಿದ್ದ ನಾಣ್ಯ, ನೋಟನ್ನು ಟೀ ಅಂಗಡಿ ಮಾಲೀಕ ಬಾಬು ಎತ್ತಿಕೊಂಡಿದ್ದರು. ಎಲ್ಲವೂ ಸಿಸಿ ಕ್ಯಾಮೆರಾದಲ್ಲಿ …
Read More »ಜುಬಿಲೆಂಟ್ಸ್ ಕಾರ್ಖಾನೆಗೆ ಸೋಂಕು ತಗುಲಿದ್ದು ಹೇಗೆ : ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ
ಮೈಸೂರು (ಏಪ್ರಿಲ್ 25); ಜಿಲ್ಲೆಯ ನಂಜನಗೂಡಿನಲ್ಲಿ ಜುಬಿಲೆಂಟ್ಸ್ ಕಾರ್ಖಾನೆ ಕೊರೋನಾ ಹಾಟ್‌ಸ್ಪಾಟ್ ಆಗಿರುವ ಹಿನ್ನೆಲೆಯಲ್ಲಿ, ಕಾರ್ಖಾನೆಗೆ ಸೋಂಕು ತಗುಲಿದ್ದರ ಬಗ್ಗೆ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಮೈಸೂರು ಕೋವಿಡ್-19 ವಿಶೇಷಾಧಿಕಾರಿ ಹರ್ಷಗುಪ್ತ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದ್ದು, ಒಂದು ವಾರದ ಒಳಗಾಗಿ ಸರ್ಕಾರಕ್ಕೆ ವರದಿ ನೀಡುವಂತೆ ಸೂಚಿಸಲಾಗಿದೆ. ಕಾರ್ಖಾನೆ ಸೋಂಕು ಎಲ್ಲಿಂದ ಬಂತು? ಯಾರಿಂದ ಬಂತು? ಪ್ರಥಮವಾಗಿ ಯಾರಿಗೆ ಬಂತು? ಸೋಂಕು ಹರಡುವಿಕೆಗೆ ಕಾರಣವೇನು? ಕಾರ್ಖಾನೆ ಜವಬ್ದಾರಿ ಏನು? ಹೀಗೆ ಎಲ್ಲಾ ವಿಚಾರಗಳ …
Read More »ಮೈಸೂರು ಮೃಗಾಲಯದಲ್ಲಿ ಹೆಣ್ಣಾನೆ ದತ್ತು ಪಡೆದ ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು: ಮೈಸೂರು ಮೃಗಾಲಯದಲ್ಲಿರುವ ಚಾಮುಂಡಿ ಎಂಬ 5 ವರ್ಷದ ಹೆಣ್ಣಾನೆಯನ್ನು ಮಾನ್ಯ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು 1 ಲಕ್ಷ 75 ಸಾವಿರ ರೂಪಾಯಿ ವೈಯುಕ್ತಿಕ ನೆರವನ್ನು ನೀಡುವ ಮೂಲಕ 1 ವರ್ಷಕ್ಕೆ ದತ್ತು ಪಡೆದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯಕ್ಕೆ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಅಭಿರಾಂ ಶಂಕರ್ ಮತ್ತು ಸ್ಥಳೀಯ ಶಾಸಕರಾದ ರಾಮದಾಸ್ ಅವರ ಒಡಗೂಡಿ ಭೇಟಿ ನೀಡಿ ಪರಿಶೀಲಿಸಿದರು. ಇದೇ …
Read More »ಸೈಕಲ್‍ನಲ್ಲಿ ಬಂದು ನಾಣ್ಯಗಳನ್ನು ಎಸೆದು ಹೋದ ವ್ಯಕ್ತಿ, ಮೈಸೂರಲ್ಲಿ ಆತಂಕ..!
ಮೈಸೂರು, ಏ.22- ನಗರದ ಸೀಬಯ್ಯ ರಸ್ತೆಯಲ್ಲಿ ಸೈಕಲ್‍ನಲ್ಲಿ ಬಂದ ವ್ಯಕ್ತಿಯೊಬ್ಬ ನಾಣ್ಯಗಳನ್ನು ಎಸೆದು ಹೋಗಿದ್ದು, ಈ ನಾಣ್ಯಗಳನ್ನು ತೆಗೆದುಕೊಂಡಿದ್ದ ವ್ಯಕ್ತಿಯನ್ನು ಪಾಲಿಕೆ ಆರೋಗ್ಯ ಅಧಿಕಾರಿಗಳು ಪತ್ತೆಹಚ್ಚಿ ನಾಣ್ಯಗಳನ್ನು ವಶಕ್ಕೆ ಪಡೆದು ವೈರಾಣು ನಿರೋಧಕ ಸಿಂಪಡಿಸಿದ್ದಾರೆ. ಈ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಸೈಕಲ್‍ನಲ್ಲಿ ಬಂದು ನಾಣ್ಯಗಳನ್ನು ದಾರಿಯುದ್ದಕ್ಕೂ ಎಸೆದು ಹೋಗಿದ್ದಾನೆ. ಈ ಸಂದರ್ಭದಲ್ಲಿ ಈ ಮಾರ್ಗವಾಗಿ ಬರುತ್ತಿದ್ದ ದಾರಿಹೋಕರೊಬ್ಬರು ನಾಣ್ಯ ಬಿದ್ದಿರುವುದನ್ನು ಗಮನಿಸಿ ತೆಗೆದುಕೊಂಡಾಗ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಇನ್ನೂ ಹಲವು ನಾಣ್ಯಗಳು …
Read More »ಅಮೆರಿಕದಲ್ಲಿ ಮೈಸೂರಿನ ವೈದ್ಯೆಗೆ ವಿಶೇಷ ಗೌರವ……….
ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸೇವೆ ಸಲ್ಲಿಸಿ ಮನೆಗೆ ಮರಳಿದ ಮೈಸೂರು ಮೂಲದ ವೈದ್ಯೆ ಉಮಾ ಮಧುಸೂದನ್ ಅವರಿಗೆ ವಿಶೇಷ ಗೌರವ ಸಿಕ್ಕಿದೆ. ಓಕ್‍ಲ್ಯಾಂಡ್‍ನ ಸೌತ್ ವಿಂಡ್ಸರ್ ಆಸ್ಪತ್ರೆ ಮತ್ತು ಸ್ಥಳೀಯ ಆಡಳಿತ ಡಾ.ಉಮಾ ಮಧುಸೂದನ್ ಅವರಿಗೆ ಡ್ರೈವ್ ಆಫ್ ಹಾನರ್ ಮೂಲಕ ಗೌರವ ಸಲ್ಲಿಸಿದೆ. ವೈದ್ಯ ಉಮಾ ಅವರ ಮನೆ ಎದುರು ನೂರಾರು ವಾಹನಗಳಲ್ಲಿ ಬಂದ ಜನ, ಅಂಬುಲೆನ್ಸ್ ಸಿಬ್ಬಂದಿ, ಅಗ್ನಿಶಾಮಕ ಪಡೆ, ಅಧಿಕಾರಿಗಳು ನಿಮ್ಮ ಸೇವೆ ಅನನ್ಯ …
Read More »ಮೈಸೂರಲ್ಲಿ ಕೊರೊನಾ ಸರ್ವೇಗೆ ಬಂದ ಆಶಾ ಕಾರ್ಯಕರ್ತೆಗೆ ಬೆದರಿಕೆ
ಮೈಸೂರು, ಏ.21- ಕೊರೊನಾ ಸರ್ವೇ ಮಾಡಲು ಬಂದ ಆಶಾ ಕಾರ್ಯಕರ್ತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಘಟನೆ ಎನ್.ಆರ್.ಪೊಲೀಸ್ ಠಾಣೆ ವ್ಯಾಪ್ತಿಯ ಅಲೀಂ ನಗರದಲ್ಲಿ ನಡೆದಿದೆ.ಸುಮಯಾ ಫಿರ್ದೋಷಿ ಎಂಬ ಆಶಾ ಕಾರ್ಯಕರ್ತೆ ನಿನ್ನೆ ಸಂಜೆ ಅಲೀಂ ನಗರಕ್ಕೆ ಸರ್ವೆ ಮಾಡಲು ಬಂದ ಸಂದರ್ಭದಲ್ಲಿ ಗುಂಪು ಕಟ್ಟಿಕೊಂಡು ಮಾತನಾಡುತ್ತಿದ್ದ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದಿದ್ದಕ್ಕೆ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಅವರು ಹಿರಿಯ ಅಧಿಕಾರಿಗಳಿಗೆ …
Read More »ಜ್ಯೂಬಿಲಿಯೆಂಟ್‍ನಿಂದ ಕೊರೊನಾ- ಸೋಂಕಿನ ಮೂಲ ಹುಡುಕಲು ತಜ್ಞರ ತಂಡ
ಮೈಸೂರು: ಜಿಲ್ಲೆಯ ಜ್ಯೂಬಿಲಿಯೆಂಟ್ ಔಷಧಿ ತಯಾರಿಕಾ ಘಟಕದಿಂದ ಕೊರೊನಾ ಸೋಂಕು ಹೇಗೆ ಹರಡಿತು. ಇದರ ಮೂಲ ಯಾವುದು ಎಂಬುದರ ಕುರಿತು ಪೊಲೀಸರು ತಲೆಕೆಡಿಸಿಕೊಂಡಿದ್ದು, ಸೋಂಕಿನ ರಹಸ್ಯ ಬೇಧಿಸಲು ಮೈಸೂರು ಎಸ್‍ಪಿ ಸಿ.ಬಿ.ರಿಷ್ಯಂತ್ ಮಾರ್ಗದರ್ಶನದಲ್ಲಿ ತನಿಖಾ ತಂಡ ರಚಿಸಲಾಗಿದೆ. ಡಿವೈಎಸ್‍ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಮೂವರು ಇನ್ಸ್ ಪೆಕ್ಟರ್ ಗಳನ್ನು ಒಳಗೊಂಡ ತಂಡ ಸದ್ಯ ರೋಗಿ ನಂ.52ಕ್ಕೆ ಸೋಂಕು ತಗುಲಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದು, ರೋಗಿಯ ಪತ್ನಿ, …
Read More »