ಚಿಕ್ಕೋಡಿ: ದೇವಸ್ಥಾನ ಕಂಪೌಂಡ್ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಿಎಸ್‍ಐ ಹಾಗೂ ಶಿಕ್ಷಕನೋರ್ವನ ಮಧ್ಯೆ ಗಲಾಟೆ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ನಡೆದಿದೆ. ಮುಗಳಖೋಡ ಪಟ್ಟಣದ ದುರ್ಗಾದೇವಿ ಸೇವಾಲಾಲ್ ದೇವಸ್ಥಾಕ್ಕೆ ಕಂಪೌಂಡ್ ನಿರ್ಮಾಣ ಮಾಡುವ ವಿಚಾರವಾಗಿ ಜಗಳ ನಡೆದಿದೆ. ಹಾರೂಗೇರಿ ಪಿಎಸ್‍ಐ ರಾಘವೇಂದ್ರ ಖೋತ್ ಹಾಗೂ ಶಿಕ್ಷಕ ಚಂದ್ರು ಲಮಾಣಿ ಮಧ್ಯೆ ವಾಗ್ವಾದ ನಡೆದಿದೆ. ದುರ್ಗಾದೇವಿ ಸೇವಾಲಾಲ್ ದೇವಸ್ಥಾಕ್ಕೆ ಕಂಪೌಂಡ್ ನಿರ್ಮಾಣ ಮಾಡಲು ಪುರಸಭೆ ಅಧಿಕಾರಿಗಳು ತಯಾರಿ …
Read More »ರಾಜ್ಯ ಸರ್ಕಾರಿ ನೌಕರ ಸಂಘ ಹುಕ್ಕೇರಿ ತಾಲೂಕು ಘಟಕದ ಅಧ್ಯಕ್ಷರಾಗಿ ಅವಿನಾಶ್ ಆಯ್ಕೆ
ಚಿಕ್ಕೋಡಿ(ಬೆಳಗಾವಿ): ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಹುಕ್ಕೇರಿ ತಾಲೂಕಾ ಘಟಕದ ನೂತನ ಅಧ್ಯಕ್ಷರಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಇಲಾಖೆ ನೌಕರ ಅವಿನಾಶ್ ಹೊಳೆಪ್ಪಗೋಳ ಅವಿರೋಧ ಆಯ್ಕೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಜರಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸದ ಹಿನ್ನಲೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಜಗದೀಶ್ ಗೌಡ ಪಾಟೀಲ್ ಅವರ ಸಮ್ಮುಖದಲ್ಲಿ ಅವಿನಾಶ್ ಅವರನ್ನು …
Read More »ಎಂಟು ತಿಂಗಳ ಹಿಂದೆಯಷ್ಟೇಮದುವೆಯಾಗಿದ್ದ ಯುವಕ ಬರ್ಬರವಾಗಿ ಕೊಲೆ
ಚಿಕ್ಕೋಡಿ: ಎಂಟು ತಿಂಗಳ ಹಿಂದೆಯಷ್ಟೇಮದುವೆಯಾಗಿದ್ದ ಯುವನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ- ಕಾತ್ರಾಳ ರಸ್ತೆ ನಡುವೆ ನಡೆದಿದೆ. ಚಿಂತಾಮಣಿ ಬಂಡಗರ (26) ಕೊಲೆಯಾದ ಯುವಕನಾಗಿದ್ದು, ತಡರಾತ್ರಿ 10 ಗಂಟೆ ಸುಮಾರಿಗೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಐನಾಪೂರದಿಂದ ಕಾತ್ರಾಳ ಕಡೆ ಬೈಕ್ ನಲ್ಲಿ ತೆರಳುವಾಗ ಹಿಂಬದಿಯಿಂದ ಲಾಂಗ್ ನಿಂದ ಹೊಡೆದು ಕೊಲೆ ಮಾಡಲಾಗಿದೆ. ಕೊಲೆಯಾದ ಯುವಕ ಚಿಂತಾಮಣಿ ಬಂಡಗರ, …
Read More »ಮನೆ ಕಳ್ಳತನಕ್ಕೆ ಬಂದ ಖತರ್ನಾಕ್ ಕಳ್ಳನೋರ್ವ ಬಾಲಕಿಯನ್ನೇ ಹೊತ್ತೊಯ್ದ
ಬೆಳಗಾವಿ: ಮನೆ ಕಳ್ಳತನಕ್ಕೆ ಬಂದ ಖತರ್ನಾಕ್ ಕಳ್ಳನೋರ್ವ ಬಾಲಕಿಯನ್ನೇ ಹೊತ್ತೊಯ್ದ ವಿಚಿತ್ರ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ. 1 ವರ್ಷದ ಬಾಲಕಿಯನ್ನು, ಅನಿಲ್ ರಾಮು ಲಂಬೂಗೋಳ (31) ಎಂಬ ಖದೀಮ ಭಾನುವಾರ ತಡರಾತ್ರಿ ಅಪಹರಿಸಿದ್ದಾನೆ. ಮನೆಯಲ್ಲಿ ಕಳ್ಳತನ ಮಾಡುವಾಗ ಮನೆಯವರ ಕಣ್ಣಿಗೆ ಬಿದ್ದಿದ್ದ ಅನಿಲ್ ರಾಮು, ಹೊರಗಡೆ ನಿಂತಿದ್ದ ಮಗುವನ್ನ ಅಪಹರಿಸಿದ್ದಾನೆ. ಈ ಬಗ್ಗೆ ಪೋಷಕರು ಅಂಕಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಪಹರಣ ಮಾಡಿದ ಬಾಲಕಿ ಮತ್ತು …
Read More »ಎಸ್ ಎಲ್ ಸಿ ಪೂರ್ವ ತಯಾರಿಯಲ್ಲಿ ಶೈಕ್ಷಣಿಕ ಜಿಲ್ಲಾ ಸಿದ್ದ
ಎಸ್ ಎಲ್ ಸಿ ಪೂರ್ವ ತಯಾರಿಯಲ್ಲಿ ಶೈಕ್ಷಣಿಕ ಜಿಲ್ಲಾ ಸಿದ್ದ ಈ ಬಾರಿ ಕೋವಿಡ್ ಲಕ್ಷಣಗಳು ಕಡೆಮೇ ಆದರೂ ಸಹ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ತಾಲ್ಲೂಕು ಆಡಳಿತ ಅಧಿಕಾರಿಗಳು ಸೂಕ್ಷ್ಮವಾಗಿ ಪರೀಕ್ಷೆ ಕೊಠಡಿಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಲಿದ್ದಾರೆ, ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣ ಅಧಿಕಾರಿ ಬಿ ಇ ಒ ಅವರು ನೇತೃತ್ವದಲ್ಲಿ ಪರೀಕ್ಷೆ ಬರೆಯುವ ಮಕ್ಕಳಿಗೆ ಯಾವುದೇ ರೀತಿಯ …
Read More »ಅಪ್ಪಾಸಾಬ್ ಮಕಾನಿ ಎಂಬುವರ ಮೇಲೆ ಹೆಸ್ಕಾಂ ಎಇಇ ಹಾಗೂ ಅವರ ಸಿಬ್ಬಂದಿ ಹಲ್ಲೆ ಮಾಡಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಚಿಕ್ಕೋಡಿ : ವಿದ್ಯುತ್ ಬಿಲ್ ಕಟ್ಟಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಗ್ರಾಹಕನಿಗೆ ಹೆಸ್ಕಾಂ ಎಇಇ ಅಧಿಕಾರಿಯೊಬ್ಬರು ಕಸಗುಡಿಸುವ ಪೊರಕೆಯಿಂದ ಥಳಿಸಿದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬಿರಡಿ ಗ್ರಾಮದಲ್ಲಿ ನಡೆದಿದೆ. ಅಪ್ಪಾಸಾಬ್ ಮಕಾನಿ ಎಂಬುವರ ಮೇಲೆ ಹೆಸ್ಕಾಂ ಎಇಇ ಹಾಗೂ ಅವರ ಸಿಬ್ಬಂದಿ ಹಲ್ಲೆ ಮಾಡಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಬಿರಡಿ ಗ್ರಾಮದ ಅಪ್ಪಾಸಾಬ್ ಎಂಬಾತ ಕಳೆದ 1 ವರ್ಷದಿಂದ ವಿದ್ಯುತ್ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿದ್ದಾನೆ. …
Read More »ಬಲೂನ್ ಸ್ಲೈಡ್‌ನಲ್ಲಿ ರಮೇಶ್ ಕತ್ತಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಳಗಾವಿ: ಖಾಸಗಿ ಕಾರ್ಯಕ್ರಮದಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ಮಕ್ಕಳಂತೆ ಆಟವಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಖಾಸಗಿ ಕಾರ್ಯಕ್ರಮದಲ್ಲಿ ರಮೇಶ್ ಕತ್ತಿ ಮಕ್ಕಳಂತೆ ಕುಣಿದು ಕುಪ್ಪಳಿಸಿ ಸಂತೋಷಪಟ್ಟಿದ್ದಾರೆ. ಬಲೂನ್ ಸ್ಲೈಡ್‌ನಲ್ಲಿ ಮಕ್ಕಳಂತೆ ಜಾರಿ ಆಟವಾಡಿದ ಮಾಜಿ ಸಂಸದ ರಮೇಶ್ ಕತ್ತಿಯವರ ಹುಡುಗಾಟಿಕೆಯನ್ನು ಕಂಡು ಸಾರ್ವಜನಿಕರು ನಕ್ಕು ನಲಿದಿದ್ದಾರೆ. ಎರಡು ದಿನಗಳ ಹಿಂದೆ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ …
Read More »ಈ ಸಾವು ನ್ಯಾಯವೇ..? ಪಾತ್ರೆ ತೊಳೆಯಲು ಇಟ್ಟಿದ್ದ ಬಕೆಟ್ನಲ್ಲಿ ಬಿದ್ದು ಪುಟ್ಟ ಕಂದಮ್ಮ ಸಾವು
ಚಿಕ್ಕೋಡಿ : ಪಾತ್ರೆ ತೊಳೆಯಲು ನೀರು ತುಂಬಿಟ್ಟ ಬಕೆಟ್ನಲ್ಲಿ ಒಂದೂವರೆ ವರ್ಷದ ಮಗು ಬಿದ್ದು ಸಾವು ಸಂಭವಿಸಿದ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಸಂಭವಿಸಿದೆ. ತಾಂವಶಿ ಗ್ರಾಮದ ಸನದಿ ತೋಟದಲ್ಲಿ ವಾಸವಿರುವ ನಿಂಗಪ್ಪ ಮಸರಗುಪ್ಪಿ ಇವರ ಒಂದೂವರೆ ವರ್ಷದ ವಿಜಯ ಮಸರಗುಪ್ಪಿ ಎಂಬ ಮಗು ಅಂಗಳದಲ್ಲಿ ಆಟ ಆಡುತ್ತಿರುವಾಗ ಪಾತ್ರೆ ತೊಳೆಯಲು ನೀರಿಟ್ಟ ಬಕೆಟ್ನಲ್ಲಿ ಆಟ ಆಡುತ್ತಾ ಬಕೆಟ್ಗೆ ಬಿದ್ದು ತನ್ನ ಪ್ರಾಣವನ್ನು …
Read More »ಕ್ಷೀರಭಾಗ್ಯ ಯೋಜನೆ ಹಾಲಿನಪುಡಿ ಅಕ್ರಮ ಸಾಗಾಟ, ಗ್ರಾಮಸ್ಥರಿಂದ ಓರ್ವನ ಸೆರೆ..
ಆಂಕರ್: ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಅಂಗನವಾಡಿ ಹಾಗೂ ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ ಹಾಲಿನ ಪುಡಿ ಸರಬರಾಜು ಮಾಡಲಾಗುತ್ತದೆ. ಆದರೆ ಚಿಕ್ಕೋಡಿ ಉಪವಿಭಾಗ ಅಥಣಿ ತಾಲೂಕಿನ ಖಿಳೆಗಾಂವ್ ಗ್ರಾಮದಲ್ಲಿ ಅಕ್ರಮವಾಗಿ ಹಾಲಿನ ಪುಡಿ ಸಾಗಾಟ ಮಾಡುತ್ತಿರುವ ಓರ್ವನನ್ನು ಗ್ರಾಮಸ್ಥರು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ. ಅಕ್ರಮವಾಗಿ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿಯನ್ನು ಬೈಕ್ ಮೇಲೆ ಸಾಗಾಟ ಮಾಡುತ್ತಿರುವ ಅಥಣಿ …
Read More »ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಸಾವಿರಾರು ಟನ್ ಕಬ್ಬು ಬೆಳೆ ನಾಶ
ಚಿಕ್ಕೋಡಿ: ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಸಾವಿರಾರು ಟನ್ ಕಬ್ಬು ಬೆಳೆ ನಾಶವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದಲ್ಲಿ ನಡೆದಿದೆ. ಯಡೂರವಾಡಿ ಮತ್ತು ಮಾಂಜರಿವಾಡಿ ಗ್ರಾಮಕ್ಕೆ ಸೇರಿದ 15 ಕ್ಕೂ ಹೆಚ್ಚು ರೈತರ ಜಮೀನುಗಳ ಕಬ್ಬಿನ ಬೆಳೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ನಂದಿಸಲು ಸ್ಥಳೀಯರ ಹರಸಾಹಸ ಪಡುತ್ತಿದ್ದಾರೆ.. ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಬೆಳೆ ಹಾನಿಯಿಂದ 15 …
Read More »