ಬೆಂಗಳೂರು: ಕೊರೊನಾ ಸೃಷ್ಟಿಸಿದ ಅವಾಂತರಗಳಿಂದ ಒಂದೆಡೆ ಜನಸಾಮಾನ್ಯರು ಕೆಲಸವಿಲ್ಲದೇ ಪರದಾಡುತ್ತಿದ್ದರೆ, ಮತ್ತೊಂದೆಡೆ ದುಡಿದ ಕೆಲಸಕ್ಕೂ ಸಂಬಳ ಸಿಗದೇ ಕೆಲ ಜನ ಒದ್ದಾಡುತ್ತಿದ್ದಾರೆ. ಇದಕ್ಕೆ ನೈಜ ಉದಾಹರಣೆಯೆಂದರೆ ಸೆಕ್ಯೂರಿಟಿ ಗಾರ್ಡ್. ಖಾಸಗಿ ಕಾಲೇಜೊಂದು ಸೆಕ್ಯೂರಿಟಿ ಗಾರ್ಡ್ ಗಳಿಗೆ ಸಂಬಳವನ್ನು ನೀಡದೇ ಸತಾಯಿಸುತ್ತಿದೆ. ಹೌದು. ಕೊರೊನಾದಿಂದಾಗಿ ಬಡವರ ಬದುಕು ಬೀದಿಗೆ ಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಳು ಲಾಕ್ ಡೌನ್ ಆದ್ರೂ ಕೆಲವೆಡೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಬೆಂಗಳೂರಿನ ಎಂಎಸ್ ಪಾಳ್ಯದ …
Read More ».ಬೆಂಗಳೂರಿಗೆ ವಿಮಾನ ಹಾರಾಟ ಬೇಡ- ಪ್ರಧಾನಿ ಮೋದಿಗೆ ಸಿಎಂ ಬಿಎಸ್‍ವೈ ಸಲಹೆ!
ಬೆಂಗಳೂರು: ಕಂಟೈನ್ಮೆಂಟ್ ಝೋನ್‍ಗಳಿಗಷ್ಟೇ ಲಾಕ್‍ಡೌನ್ ಸೀಮಿತ ಮಾಡಿ ಎಂದು ದೇಶದ ಬಹುತೇಕ ಮುಖ್ಯಮಂತ್ರಿಗಳು ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆ. ಇತ್ತ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪ್ರಧಾನ ಮಂತ್ರಿಯವರ ವಿಡಿಯೋ ಕಾನ್ಫರೆನ್ಸ್ ನಲ್ಲಿ ಕರ್ನಾಟಕದ ಸಲಹೆಗಳನ್ನು ಮುಂದಿಟ್ಟಿದ್ದು, ಜಿಲ್ಲಾವಾರು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳನ್ನು ಗುರುತಿಸಬಾರದು. ಕಂಟೈನ್ಮೆಂಟ್ ವಲಯಗಳನ್ನು ಮಾತ್ರ ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು ಎಂಬ ಸಲಹೆಗಳನ್ನು ನೀಡಿದ್ದಾರೆ. ಸಿಎಂ ಬಿಎಸ್‍ವೈ ಮುಖ್ಯಮಂತ್ರಿಗಳು ಮಂಡಿಸಿದ ಅಂಶಗಳು: …
Read More »ನಾಯಿ ಕಳೆದುಕೊಂಡ ದುಃಖದಲ್ಲಿ ಮೊಗ್ಗಿನ ಮನಸು ಬೆಡಗಿ………….
ಬೆಂಗಳೂರು: ಬಹುತೇಕರಿಗೆ ಪೆಟ್ ಡಾಗ್ ಎಂದರೆ ಎಲ್ಲಿಲ್ಲದ ಪ್ರೀತಿ, ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ಸಾಕಿರುತ್ತಾರೆ. ಅವುಗಳ ಜೊತೆ ಯಾವಾಗಲೂ ಕಾಲ ಕಳೆಯುತ್ತಿರುತ್ತಾರೆ. ಈ ಮೂಲಕ ಕೆಲಸದ ದಣಿವನ್ನು ನೀಗಿಸಿಕೊಳ್ಳುತ್ತಿರುತ್ತಾರೆ. ಹೀಗೆ ಸಾಕು ಪ್ರಾಣಿಗಳು ಅವರ ಜೀವನದ ಭಾಗವೇ ಆಗಿರುತ್ತವೆ. ಅದೇ ರೀತಿ ನಟಿ ಶುಭ ಪೂಂಜಾ ಸಹ ನಾಯಿಯನ್ನು ಸಾಕಿದ್ದರು. ಆದರೆ ಅದು ಈಗ ಸಾವನ್ನಪ್ಪಿದೆ. ನಾಯಿಯನ್ನು ಕಳೆದುಕೊಂಡ ದುಃಖದಲ್ಲಿ ಶುಭ ಪೂಂಜ ಕೊರಗುತ್ತಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲೇ ಇರುವ …
Read More »ಕೊರೊನಾ ವಿರುದ್ಧ ಸಮರ್ಥವಾಗಿ ಹೋರಾಡುತ್ತಿರುವ ಸಿಎಂಗಳ ಪಟ್ಟಿಯಲ್ಲಿ ಬಿಎಸ್ವೈಗೆ 2ನೇ ಸ್ಥಾನ..!
ಬೆಂಗಳೂರು, ಮೇ 11-ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ವೈರಸ್ ಹೆಚ್ಚು ಹಬ್ಬದಂತೆ ಯಶಸ್ವಿಯಾಗಿ ನಿರ್ವಹಣೆ ಮಾಡಿದ ಮುಖ್ಯಮಂತ್ರಿಗಳ ಪೈಕಿ ಬಿ.ಎಸ್.ಯಡಿಯೂರಪ್ಪನವರಿಗೆ ದೇಶದಲ್ಲೇ 2ನೇ ಸ್ಥಾನ ದೊರಕಿದೆ. ಟೈಮ್ಸ್ ನೌ ಹಾಗೂ ಓರೊ ಮಾಕ್ಸ್ ಜಂಟಿಯಾಗಿ ದೇಶದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಮುಖ್ಯಮಂತ್ರಿಗಳ ಪೈಕಿ ದೆಹಲಿಯಲ್ಲಿ ಅರವಿಂದ್ ಕ್ರೇಜಿವಾಲ್‍ಗೆ ಮೊದಲ ಸ್ಥಾನ ಬಂದಿದ್ದರೆ, ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ 2ನೇ ಸ್ಥಾನ ಸಿಕ್ಕಿದೆ. ಕೊರೊನಾ ಭಾರತಕ್ಕೆ ಅಧಿಕೃತವಾಗಿ ಕಾಲಿಟ್ಟ ನಂತರ ಅದನ್ನು ತಡೆಗಟ್ಟಲು ಪ್ರಧಾನಿ …
Read More »ದರೋಡೆ ಮಾಡಿ ಎಸ್ಕೇಪ್ ಆಗುತ್ತಿದ್ದ ಮೂವರಿಗೆ ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು
ಬೆಂಗಳೂರು, ಮೇ 11- ಮೂರು ಮಂದಿ ದರೋಡೆಕೋರರನ್ನು ಸಾರ್ವಜನಿಕರೇ ಹಿಡಿದು ಸಿದ್ದಾಪುರ ಪೊಲೀಸರ ವಶಕ್ಕೆ ನೀಡಿದ್ದಾರೆ.ಸಿದ್ದಾಪುರ ಠಾಣೆ ಪೊಲೀಸರು ಈ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಚಂದ್ರಾ ಲೇಔಟ್‍ನ ಸಯ್ಯದ್ ನದೀಮ್ (23), ಮಾಗಡಿ ರಸ್ತೆಯ ಚೌಳರಪಾಳ್ಯ ರಾಮದಾಸ್ ಲೇಔಟ್‍ನ ಇರ್ಫಾನ್ ಪಾಷ (20) ಮತ್ತು ಪಾದರಾಯನಪುರದ ಮೌಶಾಕ್ ಅಹಮ್ಮದ್ (44) ಪೊಲೀಸರ ವಶದಲ್ಲಿರುವ ಆರೋಪಿಗಳು. ಈ ಮೂವರು ಹೊಸೂರು ರಸ್ತೆಯ ಸೆಲ್ ಪೆಟ್ರೋಲ್ ಬಂಕ್ ಬಳಿ ವ್ಯಕ್ತಿಯೊಬ್ಬರ …
Read More »ಮೊಬೈಲ್ ಫೀವರ್ ಕ್ಲಿನಿಕ್‍ಗೆ ಚಾಲನೆ ನೀಡಿದ ಸಿಎಂ …………
ಬೆಂಗಳೂರು,ಮೇ 11- ಗೃಹ ಕಚೇರಿ ಕೃಷ್ಣಾದಲ್ಲಿ ಮೊಬೈಲ್ ಫೀವರ್ ಕ್ಲಿನಿಕ್‍ಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಬೆಂಗಳೂರಿನ ನಾಲ್ಕು ವಿಭಾಗಗಳಿಯೂ ಮೊಬೈಲ್ ಫೀವರ್ ಕ್ಲಿನಿಕ್ ಸಂಚಾರ ಮಾಡಲಿದ್ದು, ಈಗಾಗಲೇ ಮೈಸೂರು, ಮಂಗಳೂರಲ್ಲಿ ಈ ಮೊಬೈಲ್ ಫೀವರ್ ಕ್ಲಿನಿಕ್ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು. ನಾಲ್ಕು ಬಸ್‍ಗಳಲ್ಲಿ ಸಂಚಾರ ಮಾಡಲಿರುವ ಮೊಬೈಲ್ ಫೀವರ್ ಕ್ಲಿನಿಕ್‍ಗಳಲ್ಲಿ ಯಾರಿಗಾದರೂ ಅನಾರೋಗ್ಯ ಕಂಡುಬಂದರೆ ಇಲ್ಲಿ ಸಂಪರ್ಕಿಸಿದರೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ …
Read More »ಸಂಜೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬಿಡುಗಡೆಯಾದ ಬುಲೆಟಿನ್………
ಬೆಂಗಳೂರು: ಇಂದು 14 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆಯಾಗಿದೆ. ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, ದಾವಣಗೆರೆ 3, ಬೀದರ್ 2, ಬಾಗಲಕೋಟೆ 2, ಕಲಬುರಗಿ 1, ಮಂಡ್ಯ 1, ಹಾವೇರಿ 1 ಮತ್ತು ವಿಜಯಪುರದಲ್ಲಿ 1, ಹಾವೇರಿ 1, ಆಂಧ್ರದ ಮೂಲದ ವ್ಯಕ್ತಿಯಿಂದ ಆತನ ಪತ್ನಿಗೆ, ಬೆಂಗಳೂರಿನಲ್ಲಿ 1 ಹೊಸ ಕೊರೊನಾ ಪ್ರಕರಣಗಳು …
Read More »ಬೆಂಗ್ಳೂರು ಹೋಟಿಲಿನಲ್ಲಿ ಕ್ವಾರಂಟೈನ್ – 1 ದಿನಕ್ಕೆ ಊಟ, ತಿಂಡಿ, ಬಾಡಿಗೆ ಎಷ್ಟು?
ಬೆಂಗಳೂರು: ವಿದೇಶದಿಂದ ಕರ್ನಾಟಕಕ್ಕೆ ಆಗಮಿಸುತ್ತಿರುವ 6,100 ಮಂದಿ ಕನ್ನಡಿಗರನ್ನು ಕ್ವಾರಂಟೈನ್ ಮಾಡಲು ಸರ್ಕಾರ ಹೋಟೆಲ್ ಗಳನ್ನು ಬುಕ್ ಮಾಡಿದೆ. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲಾಧಿಕಾರಿ ಮತ್ತು ಬಿಬಿಎಂಪಿ ಆಯುಕ್ತರು ಈ ವ್ಯವಸ್ಥೆ ಮಾಡಿದ್ದಾರೆ. 18 ಫೈವ್ ಸ್ಟಾರ್, 23 ತ್ರಿಸ್ಟಾರ್, 18 ಬಜೆಟ್ ಹೋಟೆಲ್ ಸೇರಿದಂತೆ ಒಟ್ಟು 6,008 ರೂಂ ಗಳನ್ನು ಬುಕ್ ಮಾಡಲಾಗಿದ್ದು, ಕ್ವಾರಂಟೈನ್ ವೆಚ್ಚವನ್ನು ಅವರೇ ತುಂಬಬೇಕಾಗುತ್ತದೆ. ಮೊದಲು ಬಂದವರು ತಮ್ಮ ಆಯ್ಕೆ ಅನ್ವಯ ಹೋಟೆಲಿಗೆ ಕರೆದುಕೊಂಡು …
Read More »ನೆಗೆಟಿವ್ ಬಂದಿದ್ದ ತಬ್ಲಿಘಿಗೆ ಮತ್ತೆ ಪಾಸಿಟಿವ್………..
ಬೆಂಗಳೂರು: ಇಂದು 10 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 858ಕ್ಕೆ ಏರಿಕೆಯಾಗಿದೆ. ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, ದಾವಣಗೆರೆ 3, ಬೀದರ್ 2, ಬಾಗಲಕೋಟೆ 2, ಕಲಬುರಗಿ 1, ಹಾವೇರಿ 1 ಮತ್ತು ವಿಜಯಪುರದಲ್ಲಿ 1 ಹೊಸ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದೆ. ಸೋಂಕಿತರ ವಿವರ: 1. ರೋಗಿ-849: ಕಲಬುರಗಿಯ 38 ವರ್ಷದ ಪುರುಷ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. …
Read More »ಇ-ಪಾಸ್ ಪಡೆದ ಅಂತರ್ ರಾಜ್ಯ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ – ಕೆಎಸ್ಆರ್ಟಿಸಿ ಸಂಸ್ಥೆ
ಬೆಂಗಳೂರು: ದೇಶದಲ್ಲಿ ಕೊರೋನಾ ವೈರಸ್‌ನ ಅಟ್ಟಹಾಸ ಮುಂದುವರೆದಿದೆ. ಹೀಗಾಗಿ ಈ ಸೋಂಕು ನಿಯಂತ್ರಣಕ್ಕೆ ಜಾರಿಗೊಳಿಸಿದ್ದ ಲಾಕ್‌ಡೌನ್ ವಿಸ್ತರಣೆಯಾಗಿದೆ. ಎರಡು ಹಂತದ ಲಾಕ್‌ಡೌನ್‌ಗಳನ್ನು ಬಹಳ ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದ ಕೇಂದ್ರ ಸರ್ಕಾರ ಮೂರನೇ ಹಂತದ ಲಾಕ್‌ಡೌನ್ ಸಡಿಲಗೊಳಿಸಿ ಹಲವು ಕ್ಷೇತ್ರಗಳಿಗೆ ವಿನಾಯಿತಿ ನೀಡಿದೆ. ಇದರಲ್ಲಿ ಅಂತರ್ ರಾಜ್ಯ ಪ್ರಯಾಣವೂ ಒಂದು. ಹೌದು, ಅಂತರ್ ರಾಜ್ಯ ಪ್ರಯಾಣಕ್ಕಾಗಿ ಜನ ಸರ್ಕಾರದಿಂದ ಇ- ಪಾಸ್ ಪಡೆಯಬೇಕಾದ ಅಗತ್ಯ ಇದೆ. ಯಾವುದೇ ಮುನ್ಸೂಚನೆ ಇಲ್ಲದೇ ದೇಶವ್ಯಾಪಿ …
Read More »