ಬೆಂಗಳೂರು, ಮೇ 12- ಕೊರೊನಾ ಸೋಂಕು ಹೆಚ್ಚಾಗಲು ತಬ್ಲಿಘೀಗಳು ಕಾರಣ ಎಂಬ ಆರೋಪದಲ್ಲಿ ಸತ್ಯವಿಲ್ಲ. ಕೋಮುವಾದಿಗಳು ಮತ್ತು ಆರ್‍ಎಸ್‍ಎಸ್‍ನವರು ರಾಜಕೀಯ ಕಾರಣಕ್ಕಾಗಿ ಸುಳ್ಳು ಪ್ರಚಾರ ಮಾಡಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಕೆಪಿಸಿಸಿ ಕಚೇರಿಯಲ್ಲಿಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಜನಜೀವನವನ್ನು ಸುಧಾರಿಸಲು, ಸೋಂಕನ್ನು ನಿಯಂತ್ರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.
ಈವರೆಗೆ ನಾವು ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬಂದಿದ್ದೇವೆ. ಈವರೆಗೂ ಸರ್ಕಾರವನ್ನು ಟೀಕಿಸಿಲ್ಲ. ಆದರೆ, ಪೂರ್ವ ಸಿದ್ಧತೆ ಇಲ್ಲದೆ ಲಾಕ್‍ಡೌನ್ ಘೋಷಣೆ ಮಾಡಲಾಯಿತು. ವಲಸೆ ಕಾರ್ಮಿಕರು ತವರೂರಿಗೆ ಹೋಗಲಾರದೆ ಪರದಾಡುವಂತಾಯಿತು. ಕಾರ್ಮಿಕರಿಗೆ ಇಲ್ಲಿ ಊಟ, ತಿಂಡಿ ಕೊಟ್ಟಿಲ್ಲ.
ಅದಕ್ಕಾಗಿ ಸುಮಾರು ಏಳು ಲಕ್ಷ ಜನ ರಾಜ್ಯ ಬಿಟ್ಟು ಹೊರ ಹೋಗಲು ತಯಾರಾಗಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರವೇ ಕಾರಣ. ಕೇಂದ್ರ ಸರ್ಕಾರ ಆರಂಭದಲ್ಲೇ ವಿದೇಶದಿಂದ ಆಗಮಿಸುವ ವಿಮಾನಗಳನ್ನು ನಿಷೇಧಿಸಿದ್ದರೆ, ವಿದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡಿದ್ದರೆ ಭಾರತಕ್ಕೆ ಸೋಂಕು ಹರಡುತ್ತಲೇ ಇರಲಿಲ್ಲ. ಕೇಂದ್ರ ಸರ್ಕಾರ ಅಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ತಬ್ಲಿಘಿಗಳಿಂದ ಸೋಂಕು ಹೆಚ್ಚಾಗಿದೆ ಎಂಬ ಆರೋಪ ಮಾಡಲಾಗಿದೆ. ಅಮೆರಿಕಾ, ಸ್ಪೇನ್, ಇಟಲಿಯಲ್ಲಿ ಯಾವ ತಬ್ಲಿಘೀಗಳಿದ್ದರು. ಅಲ್ಲಿ ಸೋಂಕು ಹೇಗೆ ಹೆಚ್ಚಾಯಿತು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ದೇಶಾದ್ಯಂತ ಸೋಂಕು ಹೆಚ್ಚಾಗಲು ತಬ್ಲಿಘೀಗಳು ಕಾರಣ ಅಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೇಜಾವಾಬ್ದಾರಿಯಿಂದ ಸೋಂಕು ಹೆಚ್ಚಾಗಿದೆ. ತಬ್ಲಿಘೀಗಳ ವಿರುದ್ಧ ಆರ್‍ಎಸ್‍ಎಸ್ ನಡೆಸಿದ ಅಪಪ್ರಚಾರದ ಹುನ್ನಾರ ಎಂದರು.