ಬೆಂಗಳೂರು,ಮೇ 11- ಗೃಹ ಕಚೇರಿ ಕೃಷ್ಣಾದಲ್ಲಿ ಮೊಬೈಲ್ ಫೀವರ್ ಕ್ಲಿನಿಕ್‍ಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಬೆಂಗಳೂರಿನ ನಾಲ್ಕು ವಿಭಾಗಗಳಿಯೂ ಮೊಬೈಲ್ ಫೀವರ್ ಕ್ಲಿನಿಕ್ ಸಂಚಾರ ಮಾಡಲಿದ್ದು, ಈಗಾಗಲೇ ಮೈಸೂರು, ಮಂಗಳೂರಲ್ಲಿ ಈ ಮೊಬೈಲ್ ಫೀವರ್ ಕ್ಲಿನಿಕ್ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.
ನಾಲ್ಕು ಬಸ್‍ಗಳಲ್ಲಿ ಸಂಚಾರ ಮಾಡಲಿರುವ ಮೊಬೈಲ್ ಫೀವರ್ ಕ್ಲಿನಿಕ್‍ಗಳಲ್ಲಿ ಯಾರಿಗಾದರೂ ಅನಾರೋಗ್ಯ ಕಂಡುಬಂದರೆ ಇಲ್ಲಿ ಸಂಪರ್ಕಿಸಿದರೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.
ದೇಶದಲ್ಲಿ ಮೂರು ಹಂತಗಳ ಲಾಕ್‍ಡೌನ್ ವಿಧಿಸಿದರೂ ಡೆಡ್ಲಿ ಕೋವಿಡ್-19 ವೈರಾಣು ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಮುಂದಿನ ಮಾರ್ಗೋಪಾಯಗಳ ಬಗ್ಗೆ ವಿಡಿಯೋ ಸಂವಾದ ನಡೆಸಲಿದ್ದಾರೆ.
ಅಲ್ಲಿ ನಮ್ಮ ನಿಲುವುವನ್ನು ಅಲ್ಲಿ ಪ್ರಸ್ತಾಪಿಸುತ್ತೇವೆ. ಪ್ಯಾಕೇಜ್‍ಗೆ ಬೇಡಿಕೆ ಇಡುವ ಬಗ್ಗೆಯೂ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದ ತೇಜಸ್ವಿಸೂರ್ಯ ಉಪಸ್ಥಿತರಿದ್ದರು