ಬೆಂಗಳೂರು, ನ.27- ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮತ್ತೊಂದು ಅಧಿವಗೆ ಸಿಎಂ ಆಗುವ ಆಸೆ ಹೊಂದಿಲ್ಲ. ಹಾಗಾಗಿ ಅವರು ಓಲೈಕೆ ರಾಜಕಾರಣ ಮಾಡುವ ಅಗತ್ಯ ಇಲ್ಲ ಎಂದು ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದೀರ್ಘ ಅವಯವರೆಗೂ ಯಡಿಯೂರಪ್ಪ ರಾಜಕೀಯದಲ್ಲಿದ್ದಾರೆ. ಅಧಿಕಾರದ ಕೊನೆಯ ದಿನಗಳಲ್ಲಿ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಎಂಬ ಆಸೆ ಅವರದು. ಹಾಗಾಗಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದಾರೆ. ಇದನ್ನು ಓಲೈಕೆ ರಾಜಕಾರಣ …
Read More »ಪೊಲೀಸ್ ಇಲಾಖೆ ಆಧುನಿಕರಣಕ್ಕೆ ಮುಂದಿನ ಬಜೆಟ್‍ನಲ್ಲಿ 100 ಕೋಟಿಗಳ ಅನುದಾನ:B.S.Y.
ಬೆಂಗಳೂರು,ನ.27- ಪೊಲೀಸ್ ಇಲಾಖೆ ಆಧುನಿಕರಣಕ್ಕೆ ಮುಂದಿನ ಬಜೆಟ್‍ನಲ್ಲಿ 100 ಕೋಟಿಗಳ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಮಡಿವಾಳದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪೊಲೀಸ್ ಸಮುದಾಯ ಭವನ ಹಾಗೂ ನ್ಯಾಯ ವಿಜ್ಞಾನ ಪ್ರಯೋಗಾಲಯ ನಿರ್ದೇಶಲಾಯದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಪೊಲೀಸ್ ವ್ಯವಸ್ಥೆ ಅತ್ಯುತ್ತಮವಾಗಿದೆ. ಅದನ್ನು ಇನ್ನಷ್ಟು ಶಸಕ್ತಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಪ್ರಯೋಗಾಲಯದ ಪ್ರಯೋಜನ ಸಮಾಜಕ್ಕೆ ದೊರೆಯಲಿ ಎಂದು ಆಶೀಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಗೃಹ …
Read More »2020ನೇ ಸಾಲಿನ ‘ವೀರ ಕನ್ನಡಿಗ ಪ್ರಶಸ್ತಿ’ಗೆ ಬೆಳಗಾವಿ ಜ್ಯೂನಿಯರ್ ಶಿವರಾಜ್ ಕುಮಾರ್ ( ಇಸ್ಮಾಯಿಲ್ ಪೀರಜಾದೆ) ಆಯ್ಕೆಯಾಗಿದ್ದಾರೆ.
ಬೆಂಗಳೂರು : ಹೂ ಅಲ್ ಶಿಫಹ ವನೌಷಧಿಕ ಆಯುರ್ವೇದ ವೈದ್ಯ ಪರಿಷತ್ ಹಾಗೂ ಜನಕಲ್ಯಾಣ ಟ್ರಸ್ಟ್, ಹಾಗೂ ಕರ್ನಾಟಕದ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಂಘರ್ಷ ಸಮಿತಿ ಸಹಯೋಗದಲ್ಲಿ 2020ನೇ ಸಾಲಿನ ‘ವೀರ ಕನ್ನಡಿಗ ಪ್ರಶಸ್ತಿ’ಗೆ ಬೆಳಗಾವಿ ಜ್ಯೂನಿಯರ್ ಶಿವರಾಜ್ ಕುಮಾರ್ ( ಇಸ್ಮಾಯಿಲ್ ಪೀರಜಾದೆ) ಆಯ್ಕೆಯಾಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಗುರುಭವನ ಸಂಭಾಣಗದಲ್ಲಿ ಇದೇ 29ರಂದು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. 2020 ನೇ ಸಾಲಿನ ಪ್ರಶಸ್ತಿಗೆ ಹತ್ತು …
Read More »ರಮೇಶ್ ಜಾರಕಿಹೊಳಿ ಮತ್ತು ನಾನು 20 ವರ್ಷದ ಸ್ನೇಹಿತರು ಅವರು ನನ್ನ ಪರವಾಗಿ ಹೈಕಮಾಂಡ್ ನಾಯಕರ ಬಳಿ ಮಾತನಾಡುತ್ತಿದ್ದಾರೆ ಸಿ.ಪಿ.ಯೋಗೇಶ್ವರ್
ಬೆಂಗಳೂರು, ನ.27- ಸರ್ಕಾರ ರಚನೆ ವೇಳೆ ನನ್ನ ಪಾತ್ರ ಏನು ಎಂಬುದು ಹೈಕಮಾಂಡ್ ನಾಯಕರಿಗೆ ಗೊತ್ತಿದೆ. ಹಾಗಾಗಿ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ. ನವದೆಹಲಿಯಲ್ಲಿಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡಬಾರದು ಎಂದು ವಿರೋಧ ವ್ಯಕ್ತಪಡಿಸುತ್ತಿರುವವರನ್ನು ಗಮನಿಸಿದ್ದೇನೆ. ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದರು. ಇಂದು ಬಿ.ಎಲ್.ಸಂತೋಷ್ ಅವರನ್ನು …
Read More »ಸೀಮಿತ ಆದಾಯದ ನಡುವೆ ಹೊಸ ಬಜೆಟ್ ಮಂಡನೆಗಾಗಿ ಈಗಾಗಲೇ ಹಣಕಾಸು ಇಲಾಖೆ ಪೂರ್ವಸಿದ್ಧತೆ ಪ್ರಾರಂಭ
ಬೆಂಗಳೂರು: ಸೀಮಿತ ಆದಾಯದ ನಡುವೆ ಹೊಸ ಬಜೆಟ್ ಮಂಡನೆಗಾಗಿ ಈಗಾಗಲೇ ಹಣಕಾಸು ಇಲಾಖೆ ಪೂರ್ವಸಿದ್ಧತೆ ಪ್ರಾರಂಭಿಸಿದೆ.ಆರ್ಥಿಕ ಸಂಕಷ್ಟದ ನಡುವೆ ಸಿಎಂ ಯಡಿಯೂರಪ್ಪ, 2021-22ನೇ ಸಾಲಿನ ಆಯವ್ಯಯ ಮಂಡಿಸಬೇಕಾಗಿದೆ. ತೆರಿಗೆ ಸಂಗ್ರಹದಲ್ಲಿನ ಕೊರತೆ, ಸೀಮಿತ ಆದಾಯ ಮೂಲ ಸರ್ಕಾರದ ಕೈಯನ್ನು ಕಟ್ಟಿ ಹಾಕಿದೆ. ಹೀಗಾಗಿ 2021-22ನೇ ಸಾಲಿನ ಆಯವ್ಯಯ ಸಿಎಂಗೆ ಕಬ್ಬಿಣದ ಕಡಲೆಯಾಗಿದೆ. ಒಂದೆಡೆ ಜನಪ್ರಿಯ ಯೋಜನೆಗಳು ಕೊಡುವ ಅಗತ್ಯವೂ ಇದೆ, ಇನ್ನೊಂದೆಡೆ ಪ್ರಮುಖ ಇಲಾಖೆಗಳಿಗೆ ಅನುದಾನ ಕಡಿತಗೊಳಿಸು ಹಾಗಿಲ್ಲ. ಈ …
Read More »ಲಿಂಗಾಯತ ಸಮುದಾಯ 2A ಗೆ ಸೇರಿಸದಿದ್ರೆ ಉಗ್ರ ಹೋರಾಟ: ಮೃತ್ಯುಂಜಯ ಸ್ವಾಮಿ
ಬೆಂಗಳೂರು : ಪಂಚಮಸಾಲಿ ಲಿಂಗಾಯತ ಸಮುದಾಯವನ್ನು 2ಎಗೆ ಸೇರಿಸಲು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಅಧಿಕಾರವಿದೆ. ಸಿಎಂ ತಮ್ಮ ಅಧಿಕಾರ ಬಳಸಿ ಈ ಕೆಲಸ ಮಾಡಬಹುದು. ಓಬಿಸಿ ಸೇರಿಸೋದನ್ನ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಅಂತಾ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಕ್ಟೋಬರ್ 28ರಂದು ನಾವು ಸತ್ಯಾಗ್ರಹ ಮಾಡಿದ್ಧೇವು. ನಾನು ಸಿಎಂ ಭೇಟಿಯಾಗಿದ್ದೆ. ನವೆಂಬರ್ 28ರ ಒಳಗೆ ಬೇಡಿಕೆ ಈಡೇರಿಸೋದಾಗಿ ಭರವಸೆ ನೀಡಿದ್ದಾರೆ. ಸಿಎಂ …
Read More »ಕಿಚ್ಚ ಖಡಕ್ ಆಗಿ ವರ್ಕೌಟ್ ಅಭಿಮಾನಿಗಳು ಕಿಚ್ಚನ ಬೇರ್ ಬಾಡಿ ನೋಡಿ ಫಿದಾ
ಬೆಂಗಳೂರು: ಕಿಚ್ಚ ಸುದೀಪ್ ಅವರು ಖಡಕ್ ಆಗಿ ವರ್ಕೌಟ್ ಮಾಡಿರುವ ಫೋಟೋ ಜೊತೆಗೆ ತಮ್ಮ ಫಿಟ್ನೆಸ್ ಮಂತ್ರವನ್ನು ರಿವೀಲ್ ಮಾಡಿದ್ದು, ಅಭಿಮಾನಿಗಳು ಕಿಚ್ಚನ ಬೇರ್ ಬಾಡಿ ನೋಡಿ ಫಿದಾ ಆಗಿದ್ದಾರೆ. ಹೀರೋಗಳು ಎಂದಮೇಲೆ ತಮ್ಮ ಫಿಟ್ನೆಸ್ ಕಡೆ ಗಮನಕೊಡಲೇಬೇಕು. ಇದಕ್ಕಾಗಿ ದಿನಾ ಬೆಳಗ್ಗೆ ಎದ್ದು ರಗಡ್ ಆಗಿ ವ್ಯಾಯಾಮ ಮಾಡಿ ತಮ್ಮ ದೇಹವನ್ನು ದಂಡಿಸಲೇಬೇಕು. ಈಗ ಕಿಚ್ಚ ಸುದೀಪ್ ಅವರು ಕೂಡ ಖಡಕ್ ಆಗಿ ವ್ಯಾಯಾಮ ಮಾಡಿದ್ದು, ಆ ಫೋಟೋವನ್ನು …
Read More »ದ್ವಿಚಕ್ರವಾಹನ ಕಳವು ಮಾಡುತ್ತಿದ್ದ ಆರೋಪಿ ಬಂಸಿಧಿ 2 ಲಕ್ಷ ರೂ. ಬೆಲೆ ಬಾಳುವ 5 ವಿವಿಧ ಕಂಪನಿಯ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ
ಬೆಂಗಳೂರು,- ದ್ವಿಚಕ್ರವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ಉತ್ತರ ವಿಭಾಗದ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಸಿಧಿ 2 ಲಕ್ಷ ರೂ. ಬೆಲೆ ಬಾಳುವ 5 ವಿವಿಧ ಕಂಪನಿಯ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ವಿಜಯಕುಮಾರ್ ಅಯ್ಯರ್(35) ಬಂತ ಆರೋಪಿ. ಈತನ ಬಂಧನದಿಂದ ಸುಬ್ರಹ್ಮಣ್ಯನಗರ, ಕೋಣನಕುಂಟೆ ಸೇರಿದಂತೆ ಐದು ದ್ವಿಚಕ್ರವಾಹನ ಪ್ರಕರಣಗಳಲ್ಲಿ 2 ಪ್ರಕರಣಗಳು ಪತ್ತೆಯಾಗಿದ್ದು, ಉಳಿದ ಮೂರು ವಾಹನಗಳ ವಾರಸುದಾರರ ಪತ್ತೆಕಾರ್ಯ ಮುಂದುವರೆದಿದೆ. ನ.19ರಂದು ಸಂಜೆ 6 ಗಂಟೆಯಲ್ಲಿ ಗಾಯತ್ರಿನಗರದ ಅನಿಲ್‍ಕುಮಾರ್(23) ಎಂಬುವರು ತಮ್ಮ …
Read More »ರಾಜ್ಯ ಸಚಿವ ಸಂಪುಟ ವಿಸ್ತರಣೆ ಪಕ್ಕಾ ಆಗುತ್ತಿದ್ದಂತೆ, ಮೂಲ ಬಿಜೆಪಿಗರು ತಕರಾರು
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಪಕ್ಕಾ ಆಗುತ್ತಿದ್ದಂತೆ, ಮೂಲ ಬಿಜೆಪಿಗರು ತಕರಾರು ಎತ್ತಿದ್ದಂತೆ ಕಾಣುತ್ತಿದೆ. ನಿನ್ನೆಯಷ್ಟೆ 17 ಮಂದಿಯಿಂದ ಸರ್ಕಾರ ಅಸ್ತಿತ್ವಕ್ಕೆ ಬಂದಿಲ್ಲ. 105 ಶಾಸಕರಿಂದ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ ಬೆನ್ನಲ್ಲೇ, ಇದೀಗ ಗುಂಪು ರಾಜಕೀಯ ಶುರುವಾಗಿದೆ. ಶಾಸಕರಾದ ಮುನಿರತ್ನ, ಉಮೇಶ್ ಕತ್ತಿ, ಮೇಲ್ಮನೆ ಸದಸ್ಯರಾದ ಆರ್. ಶಂಕರ್, ಸಿ.ಪಿ. ಯೋಗೇಶ್ವರ್, ಎಂಟಿಬಿ ನಾಗರಾಜ್ ಸಚಿವರಾಗುವುದು ಪಕ್ಕಾ ಆಗುತ್ತಿದ್ದಂತೆ, ದೆಹಲಿಯಲ್ಲಿ …
Read More »ಇವಿಎಂ ಬಳಕೆ ಕೈಬಿಟ್ಟು, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ:ಇವಿಎಂ ವಿರುದ್ಧ ವಕೀಲ ಸಿ.ಆರ್. ಜಯ ಸುಕಿನ್
ನವದೆಹಲಿ: ಚುನಾವಣೆಗಳಲ್ಲಿ ಇವಿಎಂ ಬಳಕೆ ಕೈಬಿಟ್ಟು, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಇವಿಎಂ ವಿರುದ್ಧ ವಕೀಲ ಸಿ.ಆರ್. ಜಯ ಸುಕಿನ್ ಎಂಬವವರು ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯು ಉಪ ಚುನಾವಣೆ ಸೇರಿದಂತೆ ಬಿಹಾರ ವಿಧಾನಸಭಾ ಚುನಾವಣೆ ಎಲ್ಲೆಡೆಯೂ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ಇದೀಗ ಎಲೆಕ್ಟ್ರಾನಿಕ್ ಮತ ಯಂತ್ರ (ಇವಿಎಂ) ಸರಿಯಾಗಿಲ್ಲ ಎಂಬ ಗಲಾಟೆ ಶುರುವಾಗಿದೆ. ಇದು ಪ್ರತಿ ಚುನಾವಣೆಯಲ್ಲಿ ನಡೆಯುತ್ತಿರುವ ವಿಷಯವೇ. ಆದರೆ …
Read More »