Breaking News

ಬೆಂಗಳೂರು

ಐದು ಕಾರುಗಳ ನಡುವೆ ಸರಣಿ ಅಪಘಾತ,. ಎರಡು ಕಾರು ಪಲ್ಟಿ

ಬೆಂಗಳೂರು: ಏರ್​ಪೋರ್ಟ್ ರಸ್ತೆಯ ಬ್ಯಾಟರಾಯನಪುರ ಫ್ಲೈಓವರ್ ಬಳಿ ಐದು ಕಾರುಗಳ ನಡುವೆ ಸರಣಿ ಅಪಘಾತವಾಗಿದೆ. ಎರಡು ಕಾರು ಪಲ್ಟಿಯಾಗಿದ್ದು. ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್ ಸವಾರರ ಜಾಲಿ ರೈಡ್ ನಿಂದಾಗಿ ಈ ಸರಣಿ ಅಪಘಾತ ಸಂಭವಿಸಿದೆ. ನಂದಿಬೆಟ್ಟಕ್ಕೆ ಜಾಲಿ ರೈಡ್ ಹೋಗುತ್ತಿದ್ದ ಬೈಕ್ ಸವಾರರ ಟೀಂ ವೇಗವಾಗಿ ಬಂದು ಕಾರ್ ಓವರ್ ಟೆಕ್ ಮಾಡಿದ್ದಾರೆ. ಗಾಬರಿಯಾದ ಕಾರ್ ಚಾಲಕ ಎದುರು ರಸ್ತೆಗೆ ನುಗ್ಗಿದ ಪರಿಣಾಮ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. …

Read More »

ವಿಷ್ಣುವರ್ಧನ್ ಪ್ರತಿಮೆ ಧ್ವಂಸಕರಿಗೆ ಸುದೀಪ್ ಎಚ್ಚರಿಕೆ

ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ ಪ್ರತಿಮೆ ಧ್ವಂಸಕರಿಗೆ ಅಭಿನಯ ಚಕ್ರವರ್ತಿ ರನ್ನ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದು, ನಿಮ್ಮ ಹೆಸರು ತಿಳಿಯುವ ಮೊದಲು ದೇಶ ಬಿಟ್ಟು ಹೋಗಿ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಎಚ್ಚರಿಕೆ ನೀಡಿರುವ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ವಿಷ್ಣು ಸರ್ ಪ್ರತಿಮೆ ಧ್ವಂಸಗೊಳಿಸಿರುವ ವಿಷಯ ನನಗೆ ತಡವಾಗಿ ತಿಳಿಯಿತು. ವಿಷ್ಣು ಸರ್ ಅಭಿಮಾನಿಯಾಗಿ ಮೂರ್ತಿಯನ್ನ ಒಡೆದು ಹಾಕಿರೋರಿಗೆ ಕೆಲ ವಿಷಯಗಳನ್ನ ಹೇಳಲು ಇಷ್ಟಪಡುತ್ತೇನೆ. …

Read More »

ಹೊಸ ವರ್ಷಕ್ಕೆ ಪ್ರತ್ಯೇಕವಾಗಿ ಮಾರ್ಗಸೂಚಿ 30 ಮತ್ತು 31 ರಂದು ಟಫ್ ರೂಲ್ಸ್ ಇರಲಿದೆ

ಬೆಂಗಳೂರು: ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಮಾರ್ಗಸೂಚಿ ಬರುವುದು ಫಿಕ್ಸ್ ಆಗಿದೆ. ಡಿಸೆಂಬರ್ 30 ಮತ್ತು 31ಕ್ಕೆ ಕಟ್ಟು ನಿಟ್ಟಿನ ಕ್ರಮ ಇರುತ್ತೆ ಅಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ. ಬ್ರಿಟನ್‍ನಿಂದ ಬೆಂಗಳೂರಿಗೆ ಬಂದವರ ಪೈಕಿ 150 ಜನ ನಾಪತ್ತೆಯಾಗಿರೋದು ಒಂದುಕಡೆ ಆತಂಕ ಹೆಚ್ಚಿಸಿದೆ. ಇದರ ಮಧ್ಯೆಯೇ ಹೊಸ ವರ್ಷಕ್ಕೆ ಬೆಂಗಳೂರು ಸಜ್ಜಾಗ್ತಿದೆ. ಈಗ ಬ್ರಿಟನ್ ಕೊರೊನಾ ಹರಡುವುದನ್ನು ನಿಯಂತ್ರಣ ಮಾಡುವ ಸಲುವಾಗಿ ಬೆಂಗಳೂರಿನಲ್ಲಿ 2 …

Read More »

ಮತದಾರರನ್ನು ಸೆಳೆಯಲು ಕೆಲವು ಪ್ರಮುಖ ರಾಜಕೀಯ ನಾಯಕರ ಭಾವಚಿತ್ರ

ಬೆಂಗಳೂರು,ಡಿ.27- ಮತದಾರರನ್ನು ಸೆಳೆಯಲು ಕೆಲವು ಪ್ರಮುಖ ರಾಜಕೀಯ ನಾಯಕರ ಭಾವಚಿತ್ರ ಮತ್ತು ಪ್ರಮುಖ ರಾಜಕೀಯ ಪಕ್ಷಗಳ ಗುರುತನ್ನು ಬಳಸಿರುವುದು ಗ್ರಾಮ ಪಂಚಾಯತ್ ಅಭ್ಯರ್ಥಿಗಳಿಗೆ ಸಮಸ್ಯೆ ತಂದೊಡ್ಡಿದೆ. ಈ ಸಂಬಂಧ ಹಲವು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದೆ ಎಂದು ರಾಜ್ಯ ಚುನಾವಣಾ ಆಯೋಗ ದಾಖಲಿಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅಭ್ಯರ್ಥಿಗಳು ಎಲ್ಲಾ ಪಕ್ಷಗಳೊಂದಿಗೆ ಗುರುತಿಸಿಕೊಂಡಂತೆ ಕಂಡುಬರುತ್ತಿದೆ. ತಮ್ಮ ಗೆಲುವಿಗಾಗಿ ಮತದಾರರನ್ನು ಸೆಳೆಯಲು ಪ್ರಧಾನ ಮಂತ್ರಿ ನರೇಂದ್ರ ಮೋದಿ, …

Read More »

ಬೆಂಗಳೂರು ಸೇಫ್ ಸಿಟಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮಂಜೂರು ಮಾಡಿರುವ 619 ಕೋಟಿ ಹಗರಣ ಪ್ರಕರಣ ಹೊಸ ತಿರುವು

ಬೆಂಗಳೂರು: ಬೆಂಗಳೂರು ಸೇಫ್ ಸಿಟಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮಂಜೂರು ಮಾಡಿರುವ 619 ಕೋಟಿ ಹಗರಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ವಿಚಾರದಲ್ಲಿ ಹಸ್ತಕ್ಷೇಪ ಆರೋಪ ಎದುರಿಸುತ್ತಿರೋ ಐಪಿಎಸ್ ಅಧಿಕಾರಿ ಡಿ.ರೂಪಾ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಪ್ರತಿಕ್ರಿಯೆ ನೀಡಿರುವ ಐಪಿಎಸ್ ಅಧಿಕಾರಿ ಡಿ.ರೂಪಾ, ಜನರ ಹಣ ಮತ್ತು ಸರ್ಕಾರದ ಹಣ ಪೋಲಾಗಬಾರದೆಂದು ಕರೆಮಾಡಿದ್ದು ನಿಜ. ಇದರಲ್ಲಿ ಯಾವುದೇ ಹಿತಾಸಕ್ತಿಯೂ ಇರಲಿಲ್ಲ. ಕೆಲವೊಂದು ದಾಖಲೆಯ …

Read More »

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಮುಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದುರ್ಬಲರಾಗಿದ್ದಾರೆ : ಡಿ.ಕೆ.ಶಿ

ಬೆಂಗಳೂರು, – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಮುಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದುರ್ಬಲರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ ಕಫ್ರ್ಯೂ ಜಾರಿಗೆ ತರುವಾಗ ಯಾವ ಮಂತ್ರಿಯ ಮಾತನ್ನು ಕೇಳಿಲ್ಲ. ಒಬ್ಬ ಸಚಿವ ಹೇಳಿದ ಎಂಬ ಕಾರಣಕ್ಕೆ ಯಡಿಯೂರಪ್ಪ ಸಹಿ ಮಾಡಿದ್ದರು. ಕೊನೆಗೆ ಅವರದೇ ಸರ್ಕಾರದ ಸಚಿವರು, ಪಕ್ಷದವರು ಟೀಕಿಸಿದರೆ ಎಂಬ ಕಾರಣಕ್ಕೆ …

Read More »

ಪ್ರಧಾನಿ ಸಂವಾದದ ವೇಳೆ ನಿದ್ರೆಗೆ ಜಾರಿದ ಸಿಎಂ, B.S.Y.ಸದಾನಂದ ಗೌಡ,& ಕಾರಜೊಳ

ಪ್ರಧಾನಮಂತ್ರಿ ನರೇಂದ್ರ ಮೋದಿ ರೈತರೊಂದಿಗೆ ಸಂವಾದ ನಡೆಸುವ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದ ಗೌಡ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ನಿದ್ರೆಗೆ ಜಾರಿದ್ದರು. ಈ ಕುರಿತ ವೀಡಿಯೋ ಈಗ ವೈರಲ್ ಆಗಿದೆ. ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ 6 ರಾಜ್ಯಗಳ ರೈತರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಬೆಂಗಳೂರಿನಲ್ಲಿ ಕಾರ್ಯಕ್ರಮ ವೀಕ್ಷಿಸುತ್ತಿದ್ದ ವೇಳೆ ಈ ಮೂವರೂ ಸಾಲಿನಲ್ಲಿ ಕುಳಿತು ನಿದ್ದೆಗೆ ಜಾರಿದ್ದರು.

Read More »

29ರಂದು ಬಿಎಸ್‍ವೈ-ಷಾ ಭೇಟಿ, ಸಂಕ್ರಾಂತಿಗೆ ಸಂಪುಟಕ್ಕೆ ಸರ್ಜರಿ ಫಿಕ್ಸ್..?

ಬೆಂಗಳೂರು,ಡಿ.25- ಕಳೆದ ಹಲವು ತಿಂಗಳಿನಿಂದ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುನ್ನೆಲೆಗೆ ಬಂದಿದ್ದು, ಸಂಕ್ರಾಂತಿ ಹಬ್ಬದ ನಂತರ ವಿಸ್ತರಣೆಯಾಗುವ ಸಾಧ್ಯತೆಯಿದೆ. ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ಕರ್ನಾಟಕದ ಬೆಳವಣಿಗೆಗಳ ಕುರಿತಂತೆ ವಿಜಯೇಂದ್ರ ಮಾತುಕತೆ …

Read More »

ಕರ್ತವ್ಯಲೋಪ ಎಸಗಿದ ಪೊಲೀಸ್ ಇನ್ಸ್ ಪೆಕ್ಟರ್ ಗೆ ಒಂದು ವಾರಗಳ ತನಕ ರಸ್ತೆ ಸ್ವಚ್ಛಗೊಳಿಸುವ ಶಿಕ್ಷೆ: ಕಲಬುರ್ಗಿ  ಹೈಕೋರ್ಟ್

ಬೆಂಗಳೂರು : ಕರ್ತವ್ಯಲೋಪ ಎಸಗಿದ ಪೊಲೀಸ್ ಇನ್ಸ್ ಪೆಕ್ಟರ್ ಗೆ ಒಂದು ವಾರಗಳ ತನಕ ರಸ್ತೆ ಸ್ವಚ್ಛಗೊಳಿಸುವ ಶಿಕ್ಷೆ ನೀಡಿ ಕಲಬುರ್ಗಿ  ಹೈಕೋರ್ಟ್ ವಿಭಾಗೀಯ ಪೀಠ (Kalburgi Bench) ಆದೇಶ ನೀಡಿದೆ. ಮಗ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಲು ತೆರಳಿದ ಮಹಿಳೆಯಿಂದ ದೂರು ಸ್ವೀಕರಿಸಲು ಮತ್ತು ತನಿಖೆ ನಡೆಸಲು ವಿಫಲವಾದ ಪೊಲೀಸ್ ಇನ್ಸ್ ಪೆಕ್ಟರ್ ಗೆ ರಾಜ್ಯ ಹೈಕೋರ್ಟ್ ಈ ಅಪರೂಪದ ಶಿಕ್ಷೆ ಪ್ರಕಟಿಸಿದೆ. ಮುಂದಿನ ಒಂದು ವಾರಗಳ ತನಕ ಠಾಣೆಯ …

Read More »

ನಟ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿ ಪುತ್ರಿ ನಿಹಾರಿಕಾ ವಿವಾಹ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿ ಪುತ್ರಿ ನಿಹಾರಿಕಾ ವಿವಾಹ ನಿಶ್ಚಯವಾಗಿದ್ದು, ಡಿಸೆಂಬರ್ 28ರಂದು ವಿವಾಹ ನಡೆಯಲಿದೆ. ಮಗಳ ಮದುವೆ ತಯಾರಿಯಲ್ಲಿ ರಮೇಶ್ ಸಖತ್ ಬ್ಯುಸಿಯಾಗಿದ್ದು, ನಿಹಾರಿಕಾ ಅವರು ಅಕ್ಷಯ್ ಅವರನ್ನು ಕೈ ಹಿಡಿಯುತ್ತಿದ್ದಾರೆ. ಅಕ್ಷಯ್ ಸಿನಿಮಾ ಕ್ಷೇತ್ರದವರಲ್ಲ ಬದಲಿಗೆ ನಿಹಾರಿಕಾ ಅವರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡೂ ಕುಟುಂಬದವರು ನಿಶ್ಚಯಿಸಿ ವಿವಾಹ ಮಾಡುತ್ತಿದ್ದಾರೆ. ಕೊರೊನಾ ಹಿನ್ನೆಲೆ ಗ್ರ್ಯಾಂಡ್ ಆಗಿ ವಿವಾಹ ಮಾಡುತ್ತಿಲ್ಲ. ಹೆಚ್ಚು ಜನರು …

Read More »