Breaking News

ಬೆಂಗಳೂರು

ತೆಲುಗಿನಲ್ಲಿ ಯಾವುದೇ ಸಿನಿಮಾ ಬಿಡುಗಡೆಯಾದರೂ ಅಲ್ಲಿ ಕನ್ನಡ ಚಿತ್ರಗಳ ಬಿಡುಗಡೆಗೆ ಅವಕಾಶ ನೀಡುತ್ತಿಲ್ಲ.

ಬೆಂಗಳೂರು: ತೆಲುಗು ಚಿತ್ರರಂಗದ ಹೊಸ ನೀತಿ ವಿರುದ್ಧ ಸಿಡಿದೆದ್ದ ಚಾಲೇಂಜಿಂಗ್ ಸ್ಟಾರ್ ದರ್ಶನ್, ಕನ್ನಡ ಚಿತ್ರಗಳ ಬಿಡುಗಡೆ ತಡೆದು, ತೆಲುಗಿನ ಚಿತ್ರವನ್ನು ಬಿಡಿಗಡೆ ಮಾಡಲು ಅವಕಾಶ ನೀಡಿರುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ತೆಲುಗಿನಲ್ಲಿ ಯಾವುದೇ ಸಿನಿಮಾ ಬಿಡುಗಡೆಯಾದರೂ ಅಲ್ಲಿ ಕನ್ನಡ ಚಿತ್ರಗಳ ಬಿಡುಗಡೆಗೆ ಅವಕಾಶ ನೀಡುತ್ತಿಲ್ಲ. ಸಣ್ಣಪುಟ್ಟ ಸಿನಿಮಾ ರಿಲೀಸ್ ಇದ್ರೂ ಕನ್ನಡ ಚಿತ್ರಗಳ ಬಿಡುಗಡೆಯನ್ನು ತಡೆ ಹಿಡಿಯಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ತೆಲುಗಿನ ಯಾವ ಚಿತ್ರವನ್ನು, ಯಾವಾಗಬೇಕಾದರೂ ಬಿಡುಗಡೆ …

Read More »

ನನ್ನ ಮನೆಗೆ ಬೆಂಕಿ ಹಾಕಿದ್ರೂ ಸುಮ್ಮನಿದ್ರಿ: ಅಖಂಡ ಆಕ್ರೋಶ

ಬೆಂಗಳೂರು: ‘ಡಿ.ಜಿ.ಹಳ್ಳಿ ಗಲಭೆ ಸಂದರ್ಭದಲ್ಲಿ ನನ್ನ ಮನೆಗೆ ದುಷ್ಕರ್ಮಿಗಳು ಬೆಂಕಿ ಹಾಕಿದರೂ ನನ್ನ ಪರವಾಗಿ ಒಂದೂ ಹೇಳಿಕೆ ನೀಡಲಿಲ್ಲ. ಪ್ರತಿಭಟನೆ ಮಾಡಲಿಲ್ಲ. ಆದರೆ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಪರವಾಗಿ ಹೇಳಿಕೆ ಮತ್ತು ಹೋರಾಟ ನಡೆಸುತ್ತಿದ್ದೀರಿ’ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ. ಇತ್ತೀಚೆಗೆ ಕಾಂಗ್ರೆಸ್‌ ಪ್ರತಿಭಟನೆ ವೇಳೆ ಶಾಸಕಿ ಸೌಮ್ಯ ರೆಡ್ಡಿ ಮಹಿಳಾ ಪೊಲೀಸ್‌ವೊಬ್ಬರಿಗೆ ಹೊಡೆದಿದ್ದು ವಿವಾದಕ್ಕೆ …

Read More »

9ನೇ ತರಗತಿ, ಪ್ರಥಮ ಪಿಯುಸಿ ತರಗತಿ ಆರಂಭಕ್ಕೆ ದಿನಾಂಕ ನಿಗದಿ

ಬೆಂಗಳೂರು: ರಾಜ್ಯದಲ್ಲಿ ಒಂಬತ್ತನೇ ತರಗತಿ ಮತ್ತು ಪ್ರಥಮ ಪಿಯುಸಿ ತರಗತಿಯ ಆಫ್ ಲೈನ್ ಪಾಠಗಳನ್ನು ಪುನರಾರಂಭಿಸಲು ಸರ್ಕಾರ ತೀರ್ಮಾನಿಸಿದ್ದು, ಫೆಬ್ರವರಿ ಒಂದರಿಂದ ತರಗತಿಗಳು ಆರಂಭವಾಗಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್ ಈ ಕುರಿತು ಮಾಹಿತಿ ನೀಡಿದರು. ಫೆ.1ರಿಂದ 9ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ಪೂರ್ಣ ಪ್ರಮಾಣದ ತರಗತಿಗಳು ನಡೆಯಲಿದೆ. ಆಫ್ ಲೈನ್/ಆನ್ ಲೈನ್ ಆಯ್ಕೆ‌ ಮುಂದುವರೆಯಲಿದೆ. ಹಾಜರಾತಿ ಕಡ್ಡಾಯವಲ್ಲ. ಆರರಿಂದ ಎಂಟನೇ ತರಗತಿಯ ವರೆಗೆ ವಿದ್ಯಾಗಮ ತರಗತಿಗಳು …

Read More »

ಕೇಂದ್ರ ಸರ್ಕಾರ ಅದಾನಿ-ಅಂಬಾನಿ ಗುಲಾಮರಾಗಿದೆ : ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು, ಜ.27- ಕೇಂದ್ರ ಸರ್ಕಾರ ಉದ್ಯಮಿಗಳಾದ ಅದಾನಿ , ಅಂಬಾನಿಯವರಿಗೆ ಗುಲಾಮರಾಗಿದ್ದು, ಅದಕ್ಕಾಗಿಯೇ ರೈತರ ಪ್ರತಿಭಟನೆಯನ್ನು ದಿಕ್ಕು ತಪ್ಪಿಸುವ ಸಾಕಷ್ಟು ಸರ್ಕಸ್‍ಗಳನ್ನು ನಡೆಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಬಿಸಿಲು, ಮಳೆ ಎನ್ನದೆ ಎರಡು ತಿಂಗಳಿನಿಂದ ಪ್ರತಿಭಟನೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ 56 ಇಂಚಿನ ಎದೆ ಇದ್ದರೆ ಸಾಲದು. ಅದರ ಒಳಗೆ ಹೃದಯ …

Read More »

ದೇವೇಗೌಡರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ ಬಸವರಾಜ ಹೊರಟ್ಟಿ

ಬೆಂಗಳೂರು, ಜ.28- ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ತಮ್ಮ ಹೆಸರು ಘೋಷಣೆ ಮಾಡಿದ್ದಕ್ಕೆ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರು ಇಂದು ಬೆಳಗ್ಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಪದ್ಮನಾಭನಗರದಲ್ಲಿರುವ ಗೌಡರ ನಿವಾಸಕ್ಕೆ ಇಂದು ಬೆಳಗ್ಗೆ ಆಗಮಿಸಿದ ಬಸವರಾಜ ಹೊರಟ್ಟಿ ಅವರು ಹೂಗುಚ್ಛ ನೀಡಿ ಗೌಡರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೋನರೆಡ್ಡಿ ಉಪಸ್ಥಿತರಿದ್ದರು. ಬಿಜೆಪಿ ಸಭಾಪತಿ ಸ್ಥಾನವನ್ನು ಜೆಡಿಎಸ್‍ಗೆ …

Read More »

ವಿಧಾನಪರಿಷತ್‍ ಉಪಸಭಾಪತಿ ಸ್ಥಾನಕ್ಕೆ ಪ್ರಾಣೇಶ್ ನಾಮಪತ್ರ ಸಲ್ಲಿಕೆ

ಬೆಂಗಳೂರು, ಜ.28- ವಿಧಾನಪರಿಷತ್‍ನ ಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯ ಎಂ.ಕೆ.ಪ್ರಾಣೇಶ್ ಅವರು ಇಂದು ನಾಮಪತ್ರ ಸಲ್ಲಿಸಿದರು. ಇಂದು ಬೆಳಗ್ಗೆ 9.30ಕ್ಕೆ ಪಕ್ಷದ ಮುಖಂಡರೊಂದಿಗೆ ಆಗಮಿಸಿದ ಪ್ರಾಣೇಶ್ ಅವರು ವಿಧಾನಸಭೆಯ ಕಾರ್ಯದರ್ಶಿ ಮಹಾಲಕ್ಷ್ಮಿ ಅವರಿಗೆ ನಾಮಪತ್ರ ಸಲ್ಲಿಸಿದರು. ಒಂದು ವೇಳೆ ಉಪಸಭಾಪತಿ ಸ್ಥಾನಕ್ಕೆ ಯಾರೊಬ್ಬರೂ ನಾಮಪತ್ರ ಸಲ್ಲಿಸದಿದ್ದರೆ ಪ್ರಾಣೇಶ್ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.ಹಾಗೊಂದು ವೇಳೆ ಕಾಂಗ್ರೆಸ್‍ನಿಂದ ನಾಮಪತ್ರ ಸಲ್ಲಿಕೆಯಾದರೂ ಚುನಾವಣೆಯಲ್ಲಿ ಪ್ರಾಣೇಶ್ ಅವರೇ ವಿಜೇತರಾಗುವುದು ಖಚಿತ. ಈಗಾಗಲೇ ಪರಿಷತ್‍ನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ …

Read More »

ದರೋಡೆಗೆ ಹೋದ ಮನೆಯಲ್ಲಿ ಸೇಬು ತಿಂದು ಸಿಕ್ಕಿಬಿತ್ತು ಕಳ್ಳರ ಗ್ಯಾಂಗ್!

ಬೆಂಗಳೂರು (ಜ. 28): ಥೇಟ್ ಸಿನಿಮಾ ಶೈಲಿಯಲ್ಲಿ ಸ್ಕೆಚ್ ಹಾಕುತ್ತಿದ್ದ ಆ ಗ್ಯಾಂಗ್ ದೊಡ್ಡ ದೊಡ್ಡ ಮನೆಗಳನ್ನು ನೋಡಿ ಟಾರ್ಗೆಟ್ ಮಾಡುತ್ತಿತ್ತು. ಅವರು ಇಟ್ಟ ಗುರಿ ಯಾವತ್ತೂ ಮಿಸ್ ಆಗೇ ಇಲ್ಲ. ಆ ಗ್ಯಾಂಗ್‌ನ ಲೀಡರ್ ಮಾಡಿರೋ ಕೃತ್ಯಗಳು ಒಂದೆರಡಲ್ಲ. ಬರೋಬ್ಬರಿ 50ಕ್ಕೂ ಹೆಚ್ಚು ಪ್ಲಾನ್‌ ಮಾಡುತ್ತಿದ್ದ ಆ ಗ್ಯಾಂಗ್ ಕಂಬಿಯ ಹಿಂದೆ ಹೋಗಿದೆ. ಆ ಕಳ್ಳರ ಗ್ಯಾಂಗನ್ನು ಸಿನಿಮೀಯ ಶೈಲಿಯಲ್ಲಿ ಬಂಧಿಸಲಾಗಿದೆ. ಕದಿಯಲು ಹೋದ ಮನೆಯ ಅಡುಗೆ ಮನೆಯಲ್ಲಿ ಸೇಬು …

Read More »

ವಿಧಾನಮಂಡಲ ಅಧಿವೇಶನ ಪ್ರಾರಂಭ; ರಾಜ್ಯಪಾಲರ ಭಾಷಣದ ಹೈಲೈಟ್ಸ್

ಬೆಂಗಳೂರು(ಜ. 28): ಇಂದಿನಿಂದ ಏಳು ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಅಧಿವೇಶನ ಪ್ರಾರಂಭವಾಯಿತು. ಫೆ. 5ರವರೆಗೆ ನಡೆಯುವ ಈ ಅಧಿವೇಶನದಲ್ಲಿ ತೀವ್ರ ರಾಜಕೀಯ ಜಟಾಪಟಿ ನಡೆಯುವುದು ನಿಶ್ಚಿತವಾಗಿದೆ. ಈ ಮಧ್ಯೆ 11 ಮಸೂದೆಗಳು ಮಂಡನೆಗೆ ಸಿದ್ಧವಾಗಿವೆ. ಇವುಗಳ ಪೈಕಿ 2-3 ಮಸೂದೆಗಳ ಸುಗ್ರೀವಾಜ್ಞೆ ಕೂಡ ಆಗಲಿದೆ. ವಿಧಾನಪರಿಷತ್​ನಲ್ಲಿ ಸಭಾಪತಿ ಸ್ಥಾನಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮಧ್ಯೆ ಒಪ್ಪಂದ ಆಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. …

Read More »

ನಾವು ಮುಂಬೈ ಪಡದೇ ತಿರುತ್ತೇವೆ : ಡಿಸಿಎಂ ಲಕ್ಷ್ಮಣ ಸವದಿ

ಬೆಂಗಳೂರು : ಮುಂಬೈಯನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಬೇಕು. ಅಲ್ಲಿಯವರೆಗೆ ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಕ್ಷೇತ್ರದ ಮೊದಲ ಶಾಸಕ ಮುಂಬೈ ವಿಧಾನಸಭೆಗೆ ಹೋಗಿದ್ದರು. ಮುಂಬೈನಲ್ಲಿ ನಮ್ಮ ಆಸ್ತಿ ಇದೆ. ನಾವು ಮುಂಬೈಯನ್ನು ಕರ್ನಾಟಕದ ಭಾಗ ಎಂದು ತೀರ್ಮಾನಿಸಿದ್ದೇವೆ. ಹಾಗಾಗಿ ಮುಂಬೈಯನ್ನು ಕರ್ನಾಟಕಕ್ಕೆ ಸೇರಿಸಿ ಎಂದಿದ್ದಾರೆ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಸಂಬಂಧ ಮಹಾಜನ್​ …

Read More »

ಮಹಾರಾಷ್ಟ್ರ ಸಿಎಂ ಬಾಲ ಬಿಚ್ಚಿದ್ರೆ ನಾವು ಕೈಕಟ್ಟಿ ಕೂರುವುದಿಲ್ಲ : ಸಚಿವೆ ಶಶಿಕಲಾ ಜೊಲ್ಲೆ

ಬೆಂಗಳೂರು : ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ರಾಜ್ಯದಲ್ಲಿ ಪಕ್ಷಾತೀತ ವಿರೋಧ ವ್ಯಕ್ತವಾಗಿದ್ದು, ಎಲ್ಲ ಪಕ್ಷದ ನಾಯಕರು ಕಿಡಿ ಕಾರಿದ್ಧಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆಯೂ ಸಹ ಮುಂಬೈಯನ್ನು ಕರ್ನಾಟಕಕ್ಕೆ ಸೇರ್ಪಡೆಗೊಳಿಸಬೇಕು ಎಂದಿದ್ದಾರೆ. ಮಹಾರಾಷ್ಟ್ರ ಸಿಎಂ ಬಾಲ ಬಿಚ್ಚಿದರೆ ನಾವು ಕೈಕಟ್ಟಿ ಕೂರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಅವರು ಹಾಗೆ ಕೇಳಿದರೆ ನಾವೂ ಸೊಲ್ಲಾಪುರ, ಮುಂಬೈಯನ್ನು ಕೇಳ ಬೇಕಾಗುತ್ತದೆ. ನಾವು ವಿವಿಧತೆಯಲ್ಲಿ ಏಕತೆ …

Read More »