Breaking News
Home / ಜಿಲ್ಲೆ / ಬೆಂಗಳೂರು / ರಾಜ್ಯದ ಎಲ್ಲಾ ಉತ್ಪನ್ನಗಳ ಪ್ಯಾಕೆಟ್‍ಗಳ ಮೇಲೆ ಕನ್ನಡವನ್ನು ಪ್ರಧಾನವಾಗಿ ಬಳಸಬೇಕು,

ರಾಜ್ಯದ ಎಲ್ಲಾ ಉತ್ಪನ್ನಗಳ ಪ್ಯಾಕೆಟ್‍ಗಳ ಮೇಲೆ ಕನ್ನಡವನ್ನು ಪ್ರಧಾನವಾಗಿ ಬಳಸಬೇಕು,

Spread the love

ಬೆಂಗಳೂರು, – ರಾಜ್ಯದ ಎಲ್ಲಾ ಉತ್ಪನ್ನಗಳ ಪ್ಯಾಕೆಟ್‍ಗಳ ಮೇಲೆ ಕನ್ನಡವನ್ನು ಪ್ರಧಾನವಾಗಿ ಬಳಸಬೇಕು, ಕನ್ನಡದ ಹೆಸರುಗಳನ್ನು ದಪ್ಪಅಕ್ಷರಗಳಲ್ಲಿ ಕಾಣುವಂತೆ ಹಾಕುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಒತ್ತಾಯಿಸಿದರು. ರಾಜಾಜಿನಗರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಪಂಚದಾಧ್ಯಂತ ಕರ್ನಾಟಕದ ಅಸ್ಮಿತೆಯನ್ನು ಜಗತ್ತಿಗೆ ಸಾರುವ ಸಂಸ್ಥೆಯಿದು.

ಇದರ ಪ್ರತಿಯೊಂದು ಉತ್ಪನ್ನಗಳ ಮೂಲಕ ಜಗತ್ತಿನಾದ್ಯಂತ ಕರ್ನಾಟಕ ಹೆಸರು ಕೇಳುತ್ತಿದೆ. ಅದರ ಜೊತೆಗೆ ಇಲಾಖೆಯ ರಾಯಬಾರಿಯಂತೆ ಕೆಲಸ ನಿರ್ವಹಿಸಬೇಕು ಎಂದರು. ಯಾವುದೇ ಉತ್ಪನ್ನಗಳ ಪಾಕೆಟ್‍ಗಳ ಮೇಲೆ ಕನ್ನಡ ಲಿಪಿಯಿರುವಂತೆ ಕ್ರಮ ವಹಿಸಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ.ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಈ ಸಂಸ್ಥೆಯೂ ಎಸ್.ಬಿ.ಎಂ. ರೀತಿಯಲ್ಲಿ ಕಳೆದು ಹೋಗದೆ ಪೈಪೋಟಿಯ ರೀತಿಯಲ್ಲಿ ಬೆಳೆಯುವ ಅಗತ್ಯವಿದ್ದು, ಇದೂ ಕೂಡ ಸ್ವಾಯತ್ತ ಸಂಸ್ಥೆಯಾಗಿ ಉತ್ತಮ ರೀತಿಯಲ್ಲಿ ಬೆಳೆಯಬೇಕು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ