ಬೆಂಗಳೂರು : ರಾಜ್ಯ ಸಿಬ್ಬಂದಿ ಮತ್ತು ಸುಧಾರಣಾ ಇಲಾಖೆಯು ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು-2021 ಪ್ರಕಟಗೊಳಿಸಿದೆ. ಇಂತಹ ನಡತೆಯ ನಿಯಮಗಳಲ್ಲಿ ಸರ್ಕಾರಿ ನೌಕರನ ಕುಟುಂಬ ಸದಸ್ಯರು ಎಂದರೆ?, ಸಂಘ/ ಸಂಸ್ಥೆಗಳಿಗೆ ಸೇರಿಕೊಳ್ಳುವುದು, ಚುನಾವಣೆಗೆ ಸ್ಪರ್ಧೆಯ ಸಂದರ್ಭದಲ್ಲಿ ಹೇಗಿರಬೇಕು, ಸಮೂಹ ಮಾಧ್ಯಮಗಳೊಂದಿಗೆ ಸಂಪರ್ಕ, ಪುಸ್ತಕ, ಲೇಖನಗಳ ಪ್ರಕಟಣೆಗೊಳಿಸುವ ಮೊದಲು ಯಾವೆಲ್ಲಾ ನಿಯಮ ಪಾಲಿಸಬೇಕು ಸೇರಿದಂತೆ ವಿವಿಧ ನೂತನ ತಿದ್ದುಪಡಿಗಳ ನಡತೆಯ ನಿಯಮ ಪ್ರಕಟಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರದ …
Read More »ಸಾಲ ಪಡೆದವರಿಗೆ ಸರ್ಕಾರದಿಂದ ಗುಡ್ ನ್ಯೂಸ್: ಬಲವಂತದ ಸಾಲ ವಸೂಲಿಗೆ ಬ್ರೇಕ್
ಬೆಂಗಳೂರು: ಬಲವಂತವಾಗಿ ಸಾಲ ವಸೂಲಿ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ. ಮೀಟರ್ ಬಡ್ಡಿ ದಂಧೆಕೋರರಿಗೆ ಮೂಗುದಾರ ಹಾಕಲು ಕಾಯ್ದೆ ತಿದ್ದುಪಡಿಗೆ ಸಂಪುಟ ಸಭೆ ಸಮ್ಮತಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಲೇವಾದೇವಿದಾರರ ಕಾಯ್ದೆಗೆ ತಿದ್ದುಪಡಿ ತರಲು ಅನುಮೋದನೆ ನೀಡಲಾಗಿದೆ. ಈ ಮೂಲಕ ಹೆಚ್ಚಿನ ಬಡ್ಡಿ ಕೊಡುವಂತೆ ಕಿರುಕುಳ ನೀಡಿ ಬಲವಂತದಿಂದ ಸಾಲ ವಸೂಲಿ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ. ಮೀಟರ್ ಬಡ್ಡಿ ವಿಧಿಸಿ ಬಲವಂತದಿಂದ ಸಾಲ …
Read More »ನಾವು ಎಚ್ಚರಿಕೆ ವಹಿಸ್ಬೇಕು ಇಲ್ಲವಾದ್ರೆ ಲಾಕ್‌ಡೌನ್ ಮಾಡುವ ಸ್ಥಿತಿ ಬರಬಹುದು: ಬಿಬಿಎಂಪಿ ಆಯುಕ್ತ
ಬೆಂಗಳೂರು: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗ್ತಿದ್ದು, ಹೀಗಾಗಿ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಮಾಡುತ್ತಿದ್ದಾರೆ. ಇಲ್ಲಿ ಲಾಕ್‌ಡೌನ್ ಮಾಡುವ ಸ್ಥಿತಿ ನಮಗೆ ಬರಬಾರದು ಅಂದ್ರೆ ಎಚ್ಚರವಾಗಿರಬೇಕು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ನಗರದಲ್ಲಿ ಇಂದು ಮಾತನಾಡಿದ ಬಿಬಿಎಂಪಿ ಆಯುಕ್ತರು, ‘ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಬಹುತೇಕ ಹೆಚ್ಚಳವಾಗ್ತಿದೆ. ಹಾಗಾಗಿ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಮಾಡುತ್ತಿದ್ದಾರೆ. ನಮಗೂ ಲಾಕ್‌ಡೌನ್ ಮಾಡುವ ಸ್ಥಿತಿ ನಮಗೆ ಬರಬಾರದೆಂದರೆ ಅಂದ್ರೆ ನಾವು ಎಚ್ಚರಿಕೆ ವಹಿಸಬೇಕು’ …
Read More »ನಮ್ಮ ಭರವಸೆಗಳು ಸುಳ್ಳಾಗಿವೆ, ನೀವೂ ವಿಫಲರಾಗಿದ್ದೀರಿ: ಪ್ರಧಾನಿ ಮೋದಿ ಬಗ್ಗೆ ಶಂಕರ್ ಬಿದರಿ
ಬೆಂಗಳೂರು, ಫೆ,18: ಮೋದಿಯವರು 2014ರಲ್ಲಿ ಅಧಿಕಾರಕ್ಕೆ ಬಂದಾಗ ನಾನು ಉತ್ಸಾಹದಲ್ಲಿದ್ದೆ. ಮೋದಿ ಜನರನ್ನು ತನ್ನೊಂದಿಗೆ ಕೊಂಡೊಯ್ದು ದೇಶದ ಹಣೆಬರಹವನ್ನು ಬದಲಾಯಿಸುತ್ತಾರೆ ಎಂದು ನಂಬಿಕೊಂಡಿದ್ದೆ. ಈ ಕಾರಣಕ್ಕೇ ನಾನು ಅವರಿಗೆ ನೋಟ್ ಬ್ಯಾನ್ ಹಾಗೂ 370ರ ವಿಧಿ ಸಂಬಂಧ ಬೆಂಬಲ ವ್ಯಕ್ತಪಡಿಸಿದ್ದೆ. ಆದರೆ ಇಂದು ನನಗೆ ತುಂಬಾ ಬೇಸರವಾಗುತ್ತಿದೆ. ಮೋದಿ ಕೂಡ ಸೋತಿದ್ದಾರೆ” ಎಂದು ರಾಜ್ಯ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಫೇಸ್‌ಬುಕ್‌ನಲ್ಲಿ ಹಲವು …
Read More »ಅಭಿವೃದ್ಧಿ ಬಗ್ಗೆ ತಾರಾತಮ್ಯ ನಡೆದಿಲ್ಲ :ಡಿಸಿಎಂ ಲಕ್ಷ್ಮಣ ಸವದಿ
ಕಲಬುರಗಿ : ಅಭಿವೃದ್ಧಿ ಬಗ್ಗೆ ತಾರಾತಮ್ಯ ನಡೆದಿಲ್ಲ. ಐಐಟಿ ಬಂದಾಗ ಧಾರವಾಡ ಮತ್ತು ರಾಯಚೂರಿಗೆ ಆದ್ಯತೆ ಕೊಟ್ಟಿದ್ದೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಏಮ್ಸ್‌ಗೆ ಎಲ್ಲರ ಬೇಡಿಕೆ ಇರುತ್ತದೆ. ಈ ಬಗ್ಗೆ ನಿರ್ಣಯ ತೆಗೆದುಕೊಳ್ಳೊದು ಕೇಂದ್ರ ಸರ್ಕಾರ. ಹೀಗಾಗಿ ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ ಎಂದು ಹೇಳಿದರು. ಪ್ರತ್ಯೇಕ ರಾಜ್ಯದ ಬಗ್ಗೆ ಇಷ್ಟು ಮಹತ್ವ ಕೊಡುವುದು ಸರಿಯಲ್ಲ. ನಮ್ಮ ಪೂರ್ವಜರು ಅಖಂಡ ಕರ್ನಾಟಕಕ್ಕೆ …
Read More »ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ”
ಬೆಂಗಳೂರು,ಫೆ.18-ಕಾನೂನು ತಜ್ಞರ ಜೊತೆ ಚರ್ಚಿಸಿ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆಶ್ವಾಸನೆ ನೀಡಿದ್ದಾರೆಂದು ಶಾಸಕ ರಾಜುಗೌಡ ನಾಯಕ್ ಹೇಳಿದ್ದಾರೆ. ಸಿಎಂ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನಮ್ಮ ಸಮುದಾಯದ ಮುಖಂಡರು, ಯಡಿಯೂರಪ್ಪನವರೊಂದಿಗೆ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಚರ್ಚೆ ಮಾಡಿದ್ದೇವೆ. ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ನಮ್ಮ ಸಮುದಾಯ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ …
Read More »ನಟ ರಾಘವೇಂದ್ರ ರಾಜ್ ಕುಮಾರ್ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಂಗಳೂರು: ಅನಾರೋಗ್ಯದಿಂದ ಫೆಬ್ರವರಿ 16ರಂದು ಸಂಜೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದ ನಟ-ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಅವ್ರು ಸಧ್ಯ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ನಂತ್ರ ಮಾತನಾಡದ ರಾಘಣ್ಣ ‘ಬೆಳಕು ಸಿನಿಮಾದ ಶೂಟಿಂಗ್ನಲ್ಲಿದ್ದೆ. ಆ ಸಮಯದಲ್ಲಿ ಹೃದಯ ಬಡಿತದಲ್ಲಿ ಏರು ಪೇರು ಕಾಣಿಸಿಕೊಳ್ತು. ಆಗಲೇ ಆಸ್ಪತ್ರಗೆ ಬಂದು ಅಡ್ಮಿಟ್ ಆದೆ. ಇದೇ ಆಸ್ಪತ್ರೆಯಲ್ಲಿ ನಾನು ಏಳು ವರ್ಷದ ಹಿಂದೆ ಸ್ಟ್ರೋಕ್ ಆದಾಗಲೂ ಅಡ್ಮಿಟ್ ಆಗಿದ್ದೆ. ಇಲ್ಲಿ ಬಂದು ಆಯಂಜಿಯೋಗ್ರಾಮ್ ಮಾಡಿ …
Read More »ಹೊಸ ಚಿತ್ರದಲ್ಲಿ ಕುರಿ ಪ್ರತಾಪ್ ಹೀರೋ.. ಆದ್ರೆ ನಾಯಕಿಯ ಭೇಟಿಗೆ ಅವಕಾಶವೇ ಇಲ್ಲ!
ಕಾಮಿಡಿಯನ್ಗಳಾಗಿ ಕಾಣಿಸಿಕೊಂಡ ನಂತರ ಹೀರೋ ಆಗುವ ಪ್ರಯತ್ನವನ್ನು ಕನ್ನಡ ಚಿತ್ರರಂಗದಲ್ಲಿ ಅನೇಕರು ಮಾಡಿದ್ದಾರೆ. ಇದರಲ್ಲಿ ಕೆಲವರು ಯಶಸ್ಸು ಕಂಡರೆ, ಇನ್ನೂ ಕೆಲವರು ಸೋತಿದ್ದಾರೆ. ಈಗ ಕನ್ನಡದ ಹಾಸ್ಯ ನಟ ಕುರಿ ಪ್ರತಾಪ್ (Kuri Prathap) ಇದೇ ರೀತಿಯ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಹೀರೋ ಆಗಿ ತೆರೆಮೇಲೆ ಬರುತ್ತಿದ್ದಾರೆ. ಚಿತ್ರಕ್ಕೆ ‘ಆರ್ಸಿ ಬ್ರದರ್’ ಎಂದು ನಾಮಕರಣ ಮಾಡಲಾಗಿದೆ. ನಿರ್ದೇಶಕ ಪ್ರಕಾಶ್ ಕುಮಾರ್ ಈ ಚಿತ್ರಕ್ಕೆ ಆಯಕ್ಷನ್ …
Read More »ಬಾಗಲೂರು: ಮದ್ಯ ಸೇವಿಸಬೇಡ ಎಂದು ಬುದ್ದಿ ಹೇಳಿದ್ದಕ್ಕೆ ಪತಿಯನ್ನೇ ಬಿಟ್ಟು ಹೋದ ಪತ್ನಿ
ಬೆಂಗಳೂರು: ಮದ್ಯ ಸೇವಿಸುವ ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿ ತವರು ಮನೆ ಸೇರಿದ ಅದೆಷ್ಟೋ ಪ್ರಸಂಗಗಳು ದಿನ ನಿತ್ಯ ನಡೆಯುತ್ತಲೇ ಇರುತ್ತವೆ. ಆದ್ರೆ ಇಲ್ಲೊಂಚೂರು ಬೇರೆ. ಮದ್ಯ ಸೇವಿಸಬೇಡ ಎಂದಿದ್ದಕ್ಕೆ ಪತಿಯನ್ನ ಪತ್ನಿ ಬಿಟ್ಟುಹೋಗಿದ್ದಾರೆ. ಇಂತಹದೊಂದು ಘಟನೆ ಬೆಂಗಳೂರಿನ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮದ್ಯ ಸೇವಿಸಬೇಡ ಎಂದು ಬೈದು ಬುದ್ಧಿ ಹೇಳಿದಕ್ಕೆ ಗಂಡನನ್ನೇ ಬಿಟ್ಟು ಹೆಂಡತಿ ನಾಪತ್ತೆಯಾಗಿದ್ದಳು. ಈ ಬಗ್ಗೆ ದೂರು ದಾಖಲಾದ ಬಳಿಕ ಪೊಲೀಸರು ಮಹಿಳೆಯ ಮನವೊಲಿಸಿ …
Read More »ಆನ್ ಲೈನ್ ಜೂಜಾಟ: ಸಂಪುಟ ನಿರ್ಧಾರ ಕೇಳಿದ ಹೈಕೋರ್ಟ್
ಬೆಂಗಳೂರು: ಆನ್ ಲೈನ್ ಜೂಜಾಟ ನಿಲ್ಲಿಸಬೇಕು ಎಂದು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್, ಈ ಬಗ್ಗೆ ರಾಜ್ಯ ಸಚಿವ ಸಂಪುಟ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪ್ರಶ್ನಿಸಿದೆ. ಸಚಿವ ಸಂಪುಟವು ತೆಗೆದುಕೊಳ್ಳುವ ನಿರ್ಧಾರವನ್ನು ಕೋರ್ಟ್ ಮುಂದೆ ದಾಖಲಿಸಬೇಕು ಎಂದು ಆನ್ ಲೈನ್ ಬೆಟ್ಟಿಂಗ್ ವಿಷಯವನ್ನು ಸಂಪುಟದ ಮುಂದೆ ಇಡಲಾಗಿದೆ ಮತ್ತು ಇದರ ಬಗ್ಗೆ ಶೀಘ್ರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ …
Read More »