Breaking News

ಬೆಂಗಳೂರು

ಪಂಚಮಸಾಲಿ ಮೀಸಲಾತಿ ಹೋರಾಟ : ಸಮಾಜದ ಶಾಸಕರು ಸದನದ ಬಾವಿಗಿಳಿದು ಹೋರಾಟ ಮಾಡುವಂತೆ ಸ್ವಾಮೀಜಿ ಕರೆ

ಬೆಂಗಳೂರು : ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಸಮಾಜದ ಶಾಸಕರು ಸದನದ ಬಾವಿಗಿಳಿದು ಹೋರಾಟ ಮಾಡುವಂತೆ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿಗಳು, ಪಂಚಮಸಾಲಿ ಸಮಾಜದ 2 ಎ ಮೀಸಲಾತಿ ಸಂಬಂಧಿಸಿದಂತೆ ಬಿಜೆಪಿ ಶಾಸಕ ಯತ್ನಾಳ್ ಗೆ ಸಮಾಜದ 22 ಶಾಸಕಕರು ಬೆಂಬಲ ನೀಡಬೇಕು. ಇಲ್ಲದಿದ್ದರೆ ನಾಳೆ ಸಮಾಜದ 22 ಶಾಸಕರನ್ನು ಜನರು ನಿರ್ಲಕ್ಷ್ಯ ಮಾಡುತ್ತಾರೆ.   …

Read More »

ಬಹಳ ದಿನಗಳ ನಂತರ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ಸಿ.ಎಂ. ಇಬ್ರಾಹಿಂ!

ಬೆಂಗಳೂರು: ಬಹಳ ದಿನಗಳ ನಂತರ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಅವರು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದರು. ಕಾಂಗ್ರೆಸ್ ನಲ್ಲಿರುವ ಸಿ ಎಂ ಇಬ್ರಾಹಿಂ ಅವರು ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಸಿದ್ದರಾಮಯ್ಯ ಭೇಟಿ ಕುತೂಹಲ ಮೂಡಿಸಿದೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ ಇಬ್ರಾಹಿಂ, ಇಂದು ಶುಭ ಶುಕ್ರವಾರ, ಎಲ್ಲವೂ ಒಳ್ಳೆಯದಾಗುತ್ತದೆ ಎಂದರು. ಜೆಡಿಎಸ್ ಗೆ ಸೇರುವ ವಿಚಾರವಾಗಿ ಮಾತನಾಡಿದ ಅವರು, ಅದು …

Read More »

ಸೆಲೆಬ್ರಿಟಿಗಳಿಗೆ ಡ್ರಗ್ ಪೂರೈಸುತ್ತಿದ್ದ ಆರೋಪ: ಮಸ್ತಾನ್ ಚಂದ್ರ ಸೇರಿದಂತೆ ನೈಜೀರಿಯಾ ಮೂಲದ ಪ್ರಜೆ ಬಂಧನ

ಬೆಂಗಳೂರು: ಸೆಲೆಬ್ರಿಟಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಆರೋಪದ ಮೇಲೆ ಮಸ್ತಾನ್ ಚಂದ್ರ ನೈಜೀರಿಯಾ ಮೂಲದ ವ್ಯಕ್ತಿಯನ್ನು ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಗೋವಿಂದಪುರ ಬಳಿಯ ಆತನ ನಿವಾಸದಿಂದ ಮಸ್ತಾನ್ ಚಂದ್ರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದು, ಕೆಲ ಕನ್ನಡ ಸಿನೆಮಾಗಳಲ್ಲಿ ಕೂಡ ನಟಿಸಿದ್ದ ಎಂದು ತಿಳಿದುಬಂದಿದೆ. ಈ ಮೂಲಕ ಅಕ್ರಮವಾಗಿ ಮಾದಕ ವಸ್ತುಗಳ ಸಂಗ್ರಹ, ಮಾರಾಟ, ಕಳ್ಳಸಾಗಣೆ, ಸೇವನೆ …

Read More »

ಬಿಗ್ ಬಾಸ್ʼ ಖ್ಯಾತಿಯ ಮಸ್ತಾನ್ ಪೊಲೀಸ್ ವಶಕ್ಕೆ

ಬೆಂಗಳೂರು: ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದ ʼಬಿಗ್ ಬಾಸ್ʼ ಖ್ಯಾತಿಯ ಮಸ್ತಾನ್ ಚಂದ್ರ ನಿವಾಸದ ಮೇಲೆ ದಾಳಿ ನಡೆಸಿರುವ ಪೊಲೀಸರು ಮಸ್ತಾನ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಡ್ರಗ್ಸ್ ಪ್ರಕರಣ ಸಂಬಂಧ ಬಂಧನಕ್ಕೀಡಾಗಿದ್ದ ನೈಜಿರಿಯನ್ ಪ್ರಜೆ ವಿಚಾರಣೆ ವೇಳೆ ಮಸ್ತಾನ್ ಹೆಸರು ಬಾಯ್ಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಬಾಣಸವಾಡಿ ಎಸಿಪಿ ಸಕ್ರಿ ನೇತೃತ್ವದಲ್ಲಿ ಮಸ್ತಾನ್ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ಪ್ರಮುಖ ಡ್ರಗ್ ಪೆಡ್ಲರ್ ಗಳ ಜೊತೆ …

Read More »

ಮಾಜಿ ಸಿಎಂ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಕೆಶಿ

ಬೆಂಗಳೂರು : ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಫೋಟೋ ಒಂದು ಸಖತ್ ವೈರಲ್ ಆಗಿದೆ. ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಜನಧ್ವನಿ ಜಾಥಾ ಆರಂಭಕ್ಕೂ ಮೊದಲು ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ರಹೆಮಾನ್ ಖಾನ್ ಅವರ ಕಾಲು ಹಿಡಿದು ಡಿಕೆಶಿ ಆಶೀರ್ವಾದ ಪಡೆದಿದ್ದರು. ಇದರಲ್ಲಿ ಡಿಕೆಶಿ ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದ್ದು, …

Read More »

ಸಚಿವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರು ಯಾರು, ಆ ವ್ಯಕ್ತಿಯನ್ನು ಪತ್ತೆ ಮಾಡಬೇಕೆಂದು ಸರ್ಕಾರ ಸೂಚನೆ

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ವಿಚಾರ ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಿಡಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ದೂರುದಾರ ದಿನೇಶ್ ಸಂತ್ರಸ್ತೆಯ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ, ಇನ್ನೊಂದು ಕಡೆ ಪೊಲೀಸರು ರಮೇಶ್ ಜಾರಕಿಹೊಳಿ ವಿಡಿಯೋ ಹಿಂದೆ ಬಿದ್ದಿದ್ದಾರೆ. ಸಚಿವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರು ಯಾರು, ಆ ವ್ಯಕ್ತಿಯನ್ನು ಪತ್ತೆ ಮಾಡಬೇಕೆಂದು ಸರ್ಕಾರ ಸೂಚನೆ ನೀಡಿದೆ. ಸದ್ಯ ವೈರಲ್ ಆಗಿರುವ ವಿಡಿಯೋ ಮೂಲ ಪತ್ತೆಗಾಗಿ ಹುಡುಕಾಟ …

Read More »

ವಿಸ್ಕಿ ಡಿಸ್ಟ್ರಿಬ್ಯೂಟರ್​ವೊಬ್ಬರ ಮೇಲೆ ಹಲ್ಲೆಗೈದು, ಕಿಡ್ನ್ಯಾಪ್ ಮಾಡಲು ಯತ್ನ

ಬೆಂಗಳೂರು: ನಗರದಲ್ಲಿ ವಿಸ್ಕಿ ಡಿಸ್ಟ್ರಿಬ್ಯೂಟರ್​ವೊಬ್ಬರ ಮೇಲೆ ಹಲ್ಲೆಗೈದು, ಕಿಡ್ನ್ಯಾಪ್ ಮಾಡಲು ಯತ್ನಿಸಿರೋ ಘಟನೆ ನಿನ್ನೆ ಸಂಜೆ ನಾಗರಭಾವಿ ಎರಡನೇ ಹಂತದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೋನ್ ಸ್ಟಾಗ್ ವಿಸ್ಕಿ ಡಿಸ್ಟ್ರಿಬ್ಯೂಟರ್ ಅವಿನಾಶ್ ಹಲ್ಲೆಗೊಳಗಾದವರು. ಅವಿನಾಶ್​ರಿಂದ, ಪ್ರವೀಣ್ ಶೆಟ್ಟಿ ಎಂಬುವವರು ₹35 ಲಕ್ಷ ‌ಮೌಲ್ಯದ ಮದ್ಯವನ್ನ ಪಡೆದಿದ್ರು. ಆದ್ರೆ ಕೊರೊನಾ ಶುರುವಾದ ಹಿನ್ನೆಲೆ ವಿಸ್ಕಿ ಡಿಸ್ಟ್ರಿಬ್ಯೂಟ್ ಮಾಡಲಾಗಿಲ್ಲ ಅಂತ ಪ್ರವೀಣ್ ಶೆಟ್ಟಿ ಅವಿನಾಶ್​ಗೆ ಹಣ ನೀಡಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ …

Read More »

ರಮೇಶಣ್ಣನ ಮರ್ಯಾದೆ ತೆಗೆಯಲು ಕೋಟ್ಯಂತರ ಹಣ ಖರ್ಚು ಮಾಡಿದ್ದಾರೆ, ದಿನೇಶ್ ಕಲ್ಲಹಳ್ಳಿ ಕೇವಲ ದಾಳ. : ಡಾ.ಕೆ. ಸುಧಾಕರ್​

ಬೆಂಗಳೂರು: ಉದ್ಯೋಗದ ಆಮಿಷವೊಡ್ಡಿ ಯುವತಿಯನ್ನ ಕಾಮತೃಷೆಗೆ ಬಳಸಿಕೊಂಡ ಆರೋಪ ಹೊತ್ತ ರಮೇಶ್​ ಜಾರಕಿಹೊಳಿ ಸದ್ಯ ಬಿಎಸ್​ವೈ ಸಚಿವ ಸಂಪುಟದಿಂದ ಔಟ್​ ಆಗಿದ್ದಾರೆ. ಆದರೂ ರಾಜ್ಯ ರಾಜಕೀಯಲ್ಲಿ ಸಿಡಿ ರಿಲೀಸ್​ನದ್ದೇ ಸದ್ದು. ಇದೊಂದು ಪ್ಲಾನ್ಡ್ ಎಫರ್ಟ್, ರಾಜಕೀಯದ ಷಡ್ಯಂತ್ರ. ಅವ್ರು ಸಂಪೂರ್ಣ‌ ನಿರ್ದೋಷಿ ಆಗಿ ಆಚೆ ಬರ್ತಾರೆ. ರಾಜಕಾರಣಿಗಳ ಬಗ್ಗೆ ಅಸಹ್ಯ ಹುಟ್ಟಿಸೋ ಸಂಚು ಅಡಗಿದೆ. ಎಲ್ಲರ ಮೇಲೂ ಪ್ರಯೋಗ ಮಾಡುವ ಅಸ್ತ್ರ ಆಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್​ …

Read More »

ವಿಚಾರಣೆಗೆ ಹಾಜರಾಗದ ಈ ವ್ಯಕ್ತಿ ನಿಜವಾದ ಸಾಮಾಜಿಕ ಹೋರಾಟಗಾರನಾ…?

ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ನೀಡಿರುವ ದೂರಿನ ವಿಚಾರಣೆಗೆ ಗುರುವಾರ ಗೈರಾಗಿರುವ ದೂರುದಾರ ದಿನೇಶ್ ಕಲ್ಲಹಳ್ಳಿ, ‘ಸಚಿವ ರಮೇಶ್ ಜಾರಕಿಹೊಳಿ ಅವರು ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಮಾ. 2ರಂದು ದೂರು ನೀಡಿದ್ದೇನೆ. ಅದರ ಹೆಚ್ಚಿನ ವಿಚಾರಣೆಗೆ ಠಾಣೆಗೆ ಬರುವಂತೆ ನೋಟಿಸ್‌ ನೀಡಿದ್ದಿರಾ. ಈ ಬಗ್ಗೆ ಈಗಾಗಲೇ ರಾಮನಗರ ಜಿಲ್ಲಾ ಎಸ್ಪಿಗೆ ದೂರು ನೀಡಿದ್ದೇನೆ. ಭದ್ರತೆ ಇಲ್ಲದ ಕಾರಣದಿಂದಾಗಿ ವಿಚಾರಣೆಗೆ ಬರಲು ಆಗುವುದಿಲ್ಲ’ ಎಂದೂ ಪತ್ರದಲ್ಲಿ …

Read More »

ಮರಳು ಗಣಿಗಾರಿಕೆ: ಅಧ್ಯಯನಕ್ಕೆ ಸರ್ಕಾರ ಸಿದ್ಧವಿದೆಯೇ?: ಹೈಕೋರ್ಟ್

ಬೆಂಗಳೂರು: ಕರಾವಳಿ ನಿಯಂತ್ರಣ ವಲಯದಲ್ಲಿ ಮರಳು ಗಣಿಗಾರಿಕೆಗೆ ತಾತ್ಕಾಲಿಕವಾಗಿ ಪರವಾನಗಿ ನೀಡುವ ಕುರಿತು ಅಧ್ಯಯನ ನಡೆಸಲು ಸರ್ಕಾರ ಸಿದ್ಧವಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಫಲ್ಗುಣಿ ನದಿಯಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡಿರುವ ಸಂಬಂಧ ಫ್ರಾಂಕಿ ಡಿಸೋಜಾ ಮತ್ತು ಮಂಗಳೂರಿನ ಇತರ 9 ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಪರಿಶೀಲನೆ …

Read More »