ಬಿಗ್ ಬಾಸ್ ಮನೆಯಲ್ಲಿ ಏನೆಲ್ಲ ಆಗುತ್ತದೆ, ಯಾರು ಹೇಗೆ ನಡೆದುಕೊಳ್ಳುತ್ತಾರೆ ಎಂದು ಊಹೀಸೋದು ತುಂಬಾನೇ ಕಷ್ಟ. ಈಗ ಕನ್ನಡ ಬಿಗ್ ಬಾಸ್ ಮನೆಯಲ್ಲೂ ಅದೇ ರೀತಿ ಆಗುತ್ತಿದೆ. ಎಲ್ಲಾ ಸದಸ್ಯರು ತಮ್ಮ ಅಸಲಿ ಮುಖವನ್ನು ಅನಾವರಣ ಮಾಡುತ್ತಿದೆ. ಅದೇ ಮನೆ ಒಳಗೆ ತೆರಳಿರುವ ಪ್ರಶಾಂತ್ ಸಂಭರಗಿ ಡಬಲ್ ಗೇಮ್ ಆಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ನಿನ್ನೆ ನಡೆದ ಘಟನೆ ಹೊಸ ಉದಾಹರಣೆ. ಮಂಜು ಮತ್ತು ಶಮಂತ್ ಉದ್ದೇಶಪೂರ್ವಕವಾಗಿ …
Read More »ಸಿ.ಡಿ. ಪ್ರಕರಣ ಎಸ್‌ಐಟಿಗೆ : ಐಜಿಪಿ ಸೌಮೇಂದು ಮುಖರ್ಜಿ ನೇತೃತ್ವ
ಬೆಂಗಳೂರು: ರಮೇಶ್ ಜಾರಕಿಹೊಳಿ ಅವರ ಅಶ್ಲೀಲ ವೀಡಿಯೊ ಪ್ರಕರಣದ ಕುರಿತು ವಿಸ್ತೃತ ತನಿಖೆ ನಡೆಸಲು ರಾಜ್ಯ ಸರಕಾರವು ಐಜಿಪಿ ಸೌಮೇಂದು ಮುಖರ್ಜಿ (ಪ್ರಸ್ತುತ ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು) ನೇತೃತ್ವದ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದೆ. ಗೃಹ ಹಾಗೂ ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ ಬುಧವಾರ ಬೆಳಗ್ಗಿನಿಂದಲೇ ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾ.9ರಂದು ರಮೇಶ್ …
Read More »ಕಿತ್ತೂರು ಚನ್ನಮ್ಮನ ಅಮೃತ ಮಹೋತ್ಸವದ ಉದ್ಘಾಟನಾ ಸಮಾರಂಭ: ನರೇಂದ್ರ ಮೋದಿ ಅವರು ವರ್ಚುವಲ್ ವೇದಿಕೆಯ ಮೂಲಕ ಚಾಲನೆ
ಬೆಳಗಾವಿ : ಬೆಳಗಾವಿ ಜಿಲ್ಲಾಡಳಿತ ವತಿಯಿಂದ ಶುಕ್ರವಾರ (ಮಾ.೧೨) ಬೆಳಿಗ್ಗೆ ೧೦ ಗಂಟೆಗೆ ಕಿತ್ತೂರು ಚನ್ನಮ್ಮನ ಕೋಟೆ ಆವರಣದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ. ಇದಕ್ಕೂ ಮುಂಚೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ದೇಶದ ೭೫ ಸ್ಥಳಗಳಲ್ಲಿ ಏಕಕಾಲಕ್ಕೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ವೇದಿಕೆಯ ಮೂಲಕ ಚಾಲನೆ ನೀಡಲಿದ್ದಾರೆ. ರಾಜ್ಯದ ಬೆಳಗಾವಿ ಜಿಲ್ಲೆಯ ಕಿತ್ತೂರು, ಮಂಡ್ಯ ಜಿಲ್ಲೆಯ ಮದ್ದೂರು ಹಾಗೂ …
Read More »ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ
ಬೆಂಗಳೂರು(ಮಾ.10): ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಸಚಿವೆ ಶಶಿಕಲಾ ಜೊಲ್ಲೆ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ …
Read More »ಕರ್ನಾಟಕಕ್ಕೆ ಬರುವ ಪ್ರವಾಸಿಗರಿಗೆ ವಿಶ್ವ ದರ್ಜೆಯ ಸೌಲಭ್ಯ
ಬೆಂಗಳೂರು, ಮಾ.10- ದೇಶ-ವಿದೇಶಗಳಿಂದ ರಾಜ್ಯಕ್ಕೆ ಬರುವ ಪ್ರವಾಸಿಗರಿಗೆ ವಿಶ್ವ ದರ್ಜೆಯ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ. ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಸಿ.ಪಿ.ಯೋಗೇಶ್ರ್ವ ಅವರು ಮೆ: ರೈಟ್ಸ ಸಂಸ್ಥೆ ಅಧಿಕಾರಿಗಳು ಹಾಗೂ ಕೆ ಎಸ್ ಟಿ ಡಿ ಸಿ ಅಕಾರಿಗಳ ಜೊತೆ ಸಭೆಯಲ್ಲಿ ಮಾತನಾಡಿದರು. ರಾಜ್ಯದ ಪ್ರಖ್ಯಾತ ಪ್ರವಾಸಿ ತಾಣಗಳಾದ ಬೇಲೂರು, ಹಂಪಿ, …
Read More »ಎಸ್ಡಿಎ ಪರೀಕ್ಷೆ ಮುಂದೂಡಿಕೆ
ಬೆಂಗಳೂರು: ಮಾ.20 ಮತ್ತು 21ರಂದು ನಡೆಯಬೇಕಿದ್ದ ಎಸ್ಡಿಎ (ದ್ವಿತೀಯ ದರ್ಜೆ ಸಹಾಯಕರು/ಕಿರಿಯ ಸಹಾಯಕರ) ಪರೀಕ್ಷೆಯನ್ನು ಮೂಂದೂಡಿ ಕೆಪಿಎಸ್ಸಿ ಆದೇಶ ಹೊರಡಿಸಿದೆ. 2020ರ ಮೇ 14ರ ಅಧಿಸೂಚನೆಯನ್ವಯ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2019ನೇ ಸಾಲಿನ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಜೂನ್ 6 ಮತ್ತು 7ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಕರೊನಾ ಕಾರಣಕ್ಕೆ ಮೂಂದೂಡಲಾಗಿತ್ತು. ತದನಂತರ 2021ರ ಮಾರ್ಚ್ 20ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಮತ್ತು …
Read More »ಕಾಂಗ್ರೆಸ್ಸಿಗರೇ ಶರ್ಟ್, ಪ್ಯಾಂಟ್ ಬಿಚ್ಚಿದ್ದಾರಾ.? : ರಮೇಶ್ ಜಾರಕಿಹೊಳಿಗೆ ಡಿಚ್ಚಿ ಹೊಡೆದ ಡಿಕೆ ಶಿವಕುಮಾರ್
ಬೆಂಗಳೂರು : ರಮೇಶ್ ಜಾರಕಿಹೊಳಿ ಹೇಳಿದಂತ ಮಹಾನಾಯಕ ಯಾರು ಅಂತ ಗೊತ್ತಿಲ್ಲ. ನನ್ನ ಮೇಲೆ ಹೇಳಲಿ ಬಿಡಿ. ಇದು ರಾಜಕೀಯ ಚೆಸ್ ಗೇಮ್ ಆಗಿದೆ. ರಮೇಶ್ ಜಾರಕಿಹೊಳಿಯೇ ಸಿಡಿ ನಕಲಿ ಎಂದಿದ್ದಾರೆ. ಸಿಡಿ ಫೇಕ್ ಅಂತ ಹೇಳುವುದಾದರೇ ತನಿಖೆ ಏಕೆ.? ತನಿಖೆಗೆ ಬಿಜೆಪಿಯವರು ಏಕೆ ಒತ್ತಾಯಿಸ್ತಿದ್ದಾರೆ.? ಕಾಂಗ್ರೆಸ್ ನವರು ಏನ್ ಶರ್ಚ್, ಪ್ಯಾಂಟ್ ಬಿಚ್ಚಿದ್ರಾ.? ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಮೇಶ್ ಜಾರಕಿಹೊಳಿಗೆ ಡಿಚ್ಚಿ ಹೊಡೆದಿದ್ದಾರೆ. ರಮೇಶ್ ಜಾರಕಿಹೊಳಿ …
Read More »ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಪ್ರಕರಣ ವಾಪಾಸ್ ಪಡೆದ ಬಗ್ಗೆ ದಿನೇಶ್ ಕಲ್ಲಹಳ್ಳಿ ಹೇಳಿದ್ದೇನು .?
ಬೆಂಗಳೂರು : ನಾನು ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರಿಗೆ ಸಂಬಂಧಿಸಿದ್ದು ಎನ್ನಲಾದಂತ ಸಿಡಿ ಪ್ರಕರಣ ಕುರಿತಂತೆ ದೂರು ವಾಪಾಸ್ ಪಡೆಯಲು ಹಲವಾರು ಕಾರಣಗಳಿದ್ದಾವೆ. ನನ್ನ ವಕೀಲರು ಹೇಳಿದ ಬಳಿಕ, ನಾನು ಠಾಣೆಗೆ ಹೋಗಿ ದೂರು ವಾಪಾಸ್ ಪಡೆದಿರುವುದಾಗಿ ತಿಳಿಸಿದ್ದಾರೆ. ಈ ಕುರಿತಂತೆ ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ನಾನು ಯಾವುದೇ ಒತ್ತಡಗಳಿಗೆ ಮಣಿದು ಆಗಲಿ ರಮೇಶ್ ಜಾರಕಿಹೊಳಿ ವಿರುದ್ಧದ ದೂರು ವಾಪಾಸ್ ಪಡೆದಿಲ್ಲ. ಬದಲಾಗಿ ಮಾನಸಿಕವಾಗಿ …
Read More »ಅಂತರರಾಷ್ಟ್ರೀಯ ಮಹಿಳಾ ದಿನ: ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಇಂದು
ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೀಡಲಾಗುವ ರಾಜ್ಯಮಟ್ಟದ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ಬುಧವಾರ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರು, ಮಕ್ಕಳು, ಸಂಘ ಸಂಸ್ಥೆಗಳು ಮತ್ತು ಸ್ತ್ರೀ ಶಕ್ತಿ ಗುಂಪುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಸೋಮವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ. ಆದರೆ, ಅದೇ ದಿನ …
Read More »C.D. ಪ್ರಕರಣ – ಯುವತಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು!
ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ವಿಡಿಯೋದಲ್ಲಿದ್ದ ಯುವತಿ ಮಾ. 2ರಂದು ಮನೆಯಿಂದ ಹೊರಗೆ ಬಂದಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಅಂದು ರಾತ್ರಿ 9.30ಕ್ಕೆ ಯುವತಿ ಬ್ಯಾಗ್ ಹಿಡಿದು ಹೊರಗೆ ಬಂದಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ರಾಸಲೀಲೆಯ ವಿಡಿಯೋ ಬಿಡುಗಡೆಗೊಂಡ ನಂತರ ನಾಲ್ಕೂವರೆ ಗಂಟೆ ಯುವತಿ ಫೋನ್ ಆನ್ ಆಗಿತ್ತು. ಆದರೆ, ಮನೆಯಿಂದ ಹೊರಗೆ ಹೋಗುವ ಮೊದಲು ಅದು ಸ್ವೀಚ್ ಆಫ್ ಆಗಿದೆ. …
Read More »