ಬೆಂಗಳೂರು: ಬೆಡ್ ಬ್ಲಾಕಿಂಗ್ ಹಗರಣದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ದಾಖಲೆಗಳಿಲ್ಲದೇ ಮಾತನಾಡುತ್ತಿದ್ದಾರೆ. ಯಾವುದೇ ದಾಖಲೆಗಳಿಲ್ಲದೇ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಮೀರ್ ಅಹ್ಮದ್, ಬೆಡ್ ಬ್ಲಾಕಿಂಗ್ ಹಗರಣದಲ್ಲಿ ನಿಮ್ಮದೇ ಶಾಸಕ ಸತೀಶ್ ರೆಡ್ಡಿ ಪಿಎ ಶಾಮೀಲಾಗಿದ್ದಾರೆ ಇದಕ್ಕೇನು ಉತ್ತರಿಸುತ್ತೀರಿ ತೇಜಸ್ವಿ ಸೂರ್ಯ? ತಪ್ಪುಗಳಾದಾಗ ನಿಮಗೆ ಕೇವಲ ಮುಸ್ಲಿಂಮರು ಮಾತ್ರ ಕಾಣುತ್ತಾರೆ. ನಿಮ್ಮಲ್ಲಿ ಅದೆಷ್ಟು ವಿಷ ಇಟ್ಟುಕೊಂಡಿದ್ದೀರಿ. ವಾರ್ ರೂಂ …
Read More »ಆತ ಅಮಾವಾಸ್ಯೆ ಗಿರಾಕಿ -ತೇಜಸ್ವಿ ಸೂರ್ಯ ವಿರುದ್ಧ ಡಿ.ಕೆ. ಶಿವಕುಮಾರ್ ಕಿಡಿ
ಬೆಂಗಳೂರು: ‘ಬೆಡ್ ಬ್ಲಾಕ್ ದಂಧೆ ಪ್ರಕರಣದಲ್ಲಿ ರಾಜಕೀಯ ಕೆಸರೆರಚಾಟ ಮುಂದುವರಿದಿದೆ. ಪ್ರಕರಣ ಬಯಲು ಮಾಡಿದ ಸಂಸದ ತೇಜಸ್ವಿ ಸೂರ್ಯ, ಒಂದು ಕೋಮಿನ 17 ಜನರನ್ನು ಮಾತ್ರ ಉಲ್ಲೇಖಿಸಿರುವುದು ಹಾಗೂ ಪ್ರಕರಣದಲ್ಲಿ ಬಿಜೆಪಿ ಶಾಸಕರ ಕೈವಾಡದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ತೇಜಸ್ವಿ ಸೂರ್ಯ ಓದಿಕೊಂಡಿರುವವನು. ಒಳ್ಳೆಯ ಕೆಲಸ ಮಾಡಿದ್ದಾನೆ ಎಂದುಕೊಂಡಿದ್ದೆ. ಆತ ಅಮಾವಾಸ್ಯೆ ಗಿರಾಕಿ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಳೆಸನ್ನು ಕರೆದುಕೊಂಡು …
Read More »ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಆಪರೇಷನ್ ಆಕ್ಸಿಜನ್, ತಪ್ಪಿದ ಭಾರೀ ಅನಾಹುತ, ಉಳಿಯಿತು 200 ಸೋಂಕಿತರ ಜೀವ
ಬೆಂಗಳೂರು: ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ವೈದ್ಯರು ಹಾಗೂ ಇಡೀ ಆಸ್ಪತ್ರೆ ಸಿಬ್ಬಂದಿಯ ಮುನ್ನೆಚ್ಚರಿಕೆ ಮತ್ತು ಕ್ಷಿಪ್ರ ಕಾರ್ಯಾಚರಣೆಯಿಂದ ಬೆಂಗಳೂರಿನಲ್ಲಿ ಸಂಭವೀಯ ಬಹುದೊಡ್ಡ ಆಕ್ಸಿಜನ್ ಕೊರತೆ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಈ ದುರಂತ ತಪ್ಪಿದ್ದು, ಇಡೀ ರಾತ್ರಿ ಡಿಸಿಎಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆಮ್ಲಜನಕದ ವ್ಯವಸ್ಥೆ ಮಾಡಲಾಗಿದ್ದು, ಈ ಮೂಲಕ ವೆಂಟಿಲೇಟರ್ ಹಾಗೂ ಆಕ್ಸಿಜನ್ ಬೆಡ್‌ಗಳ ಮೇಲೆ ಚಿಕಿತ್ಸೆ ಪಡೆಯುತ್ತಿದ್ದ ಒಟ್ಟು 200 (100 ಬೆಡ್ ಐಸಿಯು …
Read More »ಬೆಡ್ ಸಿಗದೇ ವಿಧಾನಸೌಧಕ್ಕೇ ಸೋಂಕಿತೆಯನ್ನು ಕರೆತಂದ ಕುಟುಂಬಸ್ಥರು
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸ್ಥಿತಿ ಕೇಳುವವರಿಲ್ಲದಂತಾಗಿದೆ. ಒಂದೆಡೆ ಆಸ್ಪತ್ರೆಗಳಿಗೆ ಅಲೆದಾಡಿದರೂ ಬೆಡ್ ಸಿಗುತ್ತಿಲ್ಲ, ಇನ್ನೊಂದೆಡೆ ಸಾವನ್ನಪ್ಪಿದರೆ ಚಿತಾಗಾರವೂ ಸಿಗದ ಘೋರ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಬೆಡ್ ಸಿಗದ ಕಾರಣ ಸೋಂಕಿತ ಮಹಿಳೆಯೊಬ್ಬರು ಆಂಬುಲೆನ್ಸ್ ನಲ್ಲಿ ವಿಧಾನಸೌಧಕ್ಕೆ ಆಗಮಿಸಿರುವ ಘಟನೆ ನಡೆದಿದೆ. ಮಹಿಳೆಯೊಬ್ಬರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಕಳೆದ ಎರಡುದಿನಗಳಿಂದ ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳಿಗೂ ಅಲೆದಾಡಿದರೂ ಬೆಡ್ ವ್ಯವಸ್ಥೆ ಸಿಕ್ಕಿಲ್ಲ. ಇದರಿಂದ ಬೇಸತ್ತ ಕುಟುಂಬದವರು ಸೋಂಕಿತ ಮಹಿಳೆಯನ್ನು …
Read More »ನಾನು ಈಗಾಗಲೇ ರಾಜೀನಾಮೆ ಕೊಟ್ಟೆ ಇಲ್ಲಿಗೆ ಬಂದಿರೋದು.. ರೇಣುಕಾಚಾರ್ಯಗೆ ಡಾ. ಕೆ. ಸುಧಾಕರ್ ತಿರುಗೇಟು
ಬೆಂಗಳೂರು: ಶಾಸಕ ಎಂಪಿ ರೇಣುಕಾಚಾರ್ಯ ಅವರು ಇತ್ತೀಚೆಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ರಾಜೀನಾಮೆಗೆ ಒತ್ತಾಯ ಮಾಡಿದ್ದರು. ಈ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಡಾ. ಕೆ. ಸುಧಾಕರ್ ಅವರು ರೇಣುಕಾಚಾರ್ಯ ವಿರುದ್ದ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನಾನು ಈಗಾಗಲೇ ರಾಜೀನಾಮೆ ಕೊಟ್ಟೆ ಇಲ್ಲಿಗೆ ಬಂದಿರೋದು. ರಾಜೀನಾಮೆ ಕೊಟ್ಟು ಕಷ್ಟ ಅನುಭವಿಸಿ ಇಲ್ಲಿಗೆ ಬಂದಿದ್ದೇನೆ. ಸರ್ಕಾರನೂ ಬಂದಿದೆ. ಈ ಸಮಯದಲ್ಲಿ ನಾನು ರಾಜಕೀಯ ಮಾತಾಡಿಲ್ಲ ಎಂದಿದ್ದಾರೆ. ನಾನು …
Read More »ಚಿತಾಗಾರಗಳ ಅಕ್ಕಪಕ್ಕದಲ್ಲಿ ಮೃತದೇಹಗಳ ಅವಶೇಷಗಳು..!
ಬೆಂಗಳೂರು,ಮೇ.5-ಕೊರೊನಾ ಸೋಂಕಿನಿಂದ ಮೃತಪಟ್ಟ ನಿಮ್ಮ ಕುಟುಂಬ ಸದಸ್ಯರ ಮೃತದೇಹಗಳ ಶವಸಂಸ್ಕಾರ ಸಮರ್ಪಕವಾಗುತ್ತಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಇಲ್ಲ ಅಂದರೆ ಮೃತದೇಹಗಳ ಅರೆಬೆಂದ ದೇಹದ ಭಾಗಗಳು ನಾಯಿ ನರಿ ಪಾಲಾಗಲಿದೆ.ಹೇಗೆ ಅಂತಿರಾ. ಹಾಗಾದರೆ ಈ ಸುದ್ದಿ ಓದಿ.. ನಗರದಲ್ಲಿ ದಿನೇ ದಿನೇ ನೂರಾರು ಮಂದಿ ಕೊರೊನಾ ಸೋಂಕಿನಿಂದ ಬಲಿಯಾಗುತ್ತಿದ್ದಾರೆ. ಸಾಯುತ್ತಿರುವವರ ಶವಗಳ ಸಂಸ್ಕಾರ ಮಾಡಲು ನಗರದಲ್ಲಿ ಸ್ಮಶಾನಗಳು ಸಾಕಾಗುತ್ತಿಲ್ಲ. ಹೀಗಾಗಿ ಪ್ರತಿನಿತ್ಯ ನೂರಾರು ಶವಗಳನ್ನು ಬೇಕಾಬಿಟ್ಟಿ ಸುಡಲಾಗುತ್ತಿದೆ. ಈಗಾಗಲೇ ಸುಮನಹಳ್ಳಿ ರುದ್ರಭೂಮಿಯಲ್ಲಿ ತಾಂತ್ರಿಕ …
Read More »ಬೆಡ್ ಬ್ಲಾಕಿಂಗ್ ದಂಧೆಯ ಅತೀ ದೊಡ್ಡ ಜಾಲ – ಇಬ್ಬರು ವೈದ್ಯರು ಸೇರಿ 17 ಮಂದಿ ಅರೆಸ್ಟ್
ಬೆಂಗಳೂರು: ಸಿಲಿಕಾನ್ ಸಿಟಿ ವ್ಯಾಪ್ತಿಯಲ್ಲಿ ನಡೆದಿದ್ದ ಕೋವಿಡ್ ಬೆಡ್ ಬ್ಲಾಕಿಂಗ್ ದಂಧೆ ಸುದ್ದಿ ಅಲ್ಲೋಲಕಲ್ಲೋಲ ಉಂಟು ಮಾಡಿತ್ತು. ಸಂಸದ ತೇಜಸ್ವಿ ಸೂರ್ಯ ಭೇಟಿ ಬಳಿಕ ಮಾತನಾಡಿದ್ದ ಮುಖ್ಯಮಂತ್ರಿ ಸೂಕ್ತ ತನಿಖೆಯ ಭರವಸೆ ನೀಡಿದ್ರು. ಅಲ್ಲದೇ ಪ್ರಕರಣವನ್ನು ಕಳೆದ ರಾತ್ರಿಯೇ ಸಿಸಿಬಿಗೆ ಕೂಡ ವರ್ಗಾಯಿಸಿದ್ರು. ಈ ಬೆನ್ನಲ್ಲೇ ತನಿಖೆ ಶುರು ಮಾಡಿದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಜಯನಗರ ಠಾಣೆಗೆ ಭೇಟಿ ಕೊಟ್ಟು, ಆರೋಪಿಗಳಾದ ರೋಹಿತ್, ನೇತ್ರಾ ವಿಚಾರಣೆ ನಡೆಸಿದ್ರು. …
Read More »ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಷಿಜನ್ ರಾಜ್ಯದ ಬಳಕೆಗೆ ಇರಲಿ: ಸಿದ್ದರಾಮಯ್ಯ ಆಗ್ರಹ
ಬೆಂಗಳೂರು: ಕರ್ನಾಟಕದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಅನ್ನು ರಾಜ್ಯದ ಬಳಕೆಗೇ ಮೀಸಲಿಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಸಂಸದರು ಸಹ ಕೇಂದ್ರ ಸರ್ಕಾರದ ಮೇಲೆ ಈ ಕುರಿತು ಒತ್ತಡ ಹೇರಬೇಕು ಎಂದು ಅವರು ಹೇಳಿದ್ದಾರೆ. ಈಗ ರಾಜ್ಯಕ್ಕೆ ನಿಗದಿ ಮಾಡಿರುವ ಆಕ್ಸಿಜನ್ ಪ್ರಮಾಣ ಬೇಡಿಕೆಯ ಶೇ. 50ರಷ್ಟು ಸಹ ಇಲ್ಲ. ಬೇಡಿಕೆಗೆ ಅನುಗುಣವಾಗಿ ರಾಜ್ಯಕ್ಕೆ ಆಕ್ಸಿಜನ್ ಪೂರೈಸಲು ಕೇಂದ್ರ …
Read More »ಬೆಡ್ ಬ್ಲಾಕಿಂಗ್ ಹಗರಣ: ಬೆಂಗಳೂರಿನ ಎಲ್ಲಾ ವಲಯದ ಕೊವಿಡ್ ವಾರ್ ರೂಮ್ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿ
ಬೆಂಗಳೂರು: ನಗರದ ಎಲ್ಲಾ ವಲಯದ ವಾರ್ ರೂಮ್ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿ ಮಾಡಿದ್ದಾರೆ. ದಾಖಲೆಗಳು ಮತ್ತು ಅಂಕಿಅಂಶಗಳ ಹುಡುಕಾಟ ನಡೆಯುತ್ತಿದೆ. ಬೆಡ್ ಬುಕ್ಕಿಂಗ್ ಪ್ರಕರಣದಲ್ಲಿ ಇದುವರೆಗೆ ನಾಲ್ಕು ಜನರ ಬಂಧನವಾಗಿದೆ. ಒಟ್ಟು ಎರಡು ಪ್ರಕರಣ ದಾಖಲಾಗಿದೆ. ಸಾಫ್ಟ್‌ವೇರ್ ಮೂಲಕ ವಂಚನೆ ಮಾಡುವ ಮಾಹಿತಿ ಇದೆ. ಬಂಧಿತ ಇಬ್ಬರು ಡಾಕ್ಟರ್ಗಳು ವಾರ್ ರೂಮ್ ಇನ್ಚಾರ್ಜ್ಗಳಾಗಿದ್ದರು. ಅವರು ಸರ್ಕಾರಿ ವೈದ್ಯರಾಗಿದ್ದರು. ಸಿಸಿಬಿ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸ್ತಾ ಇದ್ದಾರೆ ಎಂದು ನಗರ …
Read More »ರಾಜ್ಯದ ಆಮ್ಲಜನಕ ಬೇರೆಡೆ ಹಂಚಿಕೆಗೆ ಆಕ್ರೋಶ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವ ಸಂದರ್ಭದಲ್ಲಿ ಇಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಪೂರ್ಣ ಪ್ರಮಾಣದಲ್ಲಿ ರಾಜ್ಯದಲ್ಲೇ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದಲ್ಲಿ ನಿತ್ಯವೂ 1,043 ಟನ್ ಆಮ್ಲಜನಕ ಉತ್ಪಾದನೆಯಾಗುತ್ತಿದೆ. ಅದರಲ್ಲಿ 865 ಟನ್ ರಾಜ್ಯಕ್ಕೆ ಹಂಚಿಕೆ ಮಾಡಿದ್ದು, 675 ಟನ್ ಮಾತ್ರ ಬಳಕೆಗೆ ಲಭ್ಯವಾಗುತ್ತಿದೆ ಎಂಬ ಮಾಹಿತಿಯುಳ್ಳ ವರದಿಯನ್ನು ‘ಪ್ರಜಾವಾಣಿ’ ಮಂಗಳವಾರ ಪ್ರಕಟಿಸಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಪತ್ರಿಕೆಯ ವರದಿಯ ತುಣುಕನ್ನು ಹಂಚಿಕೊಂಡಿರುವ …
Read More »