ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಶ್ರುತಿ ಅವರ ನೇಮಕವನ್ನು ಸರ್ಕಾರ ಹಿಂಪಡೆದಿದೆ. ಅಚ್ಚರಿ ರೀತಿಯಲ್ಲಿ ಆ ಸ್ಥಾನಕ್ಕೆ ಕಾಪು ಸಿದ್ದಲಿಂಗಸ್ವಾಮಿ ಅವರನ್ನು ನೇಮಕ ಮಾಡಿ ಆದೇಶ ಹೊರಬಿದ್ದಿದೆ. ಈ ಬದಲಾವಣೆ ನಡೆದು 48 ತಾಸು ಕಳೆದರೂ ತೀರ್ಮಾನದ ವಿಷಯ ಶ್ರುತಿ ಅವರ ಗಮನಕ್ಕೆ ಬಂದಿಲ್ಲ. ಸರ್ಕಾರದ ಕಡೆಯಿಂದ ಅಥವಾ ಮುಖ್ಯಮಂತ್ರಿ ಕಚೇರಿಯಿಂದ ಶ್ರುತಿ ಅವರಿಗೆ ತಿಳಿಸುವ ಪ್ರಯತ್ನವನ್ನೂ ಮಾಡಿಲ್ಲ ಎನ್ನಲಾಗಿದೆ.ಶನಿವಾರ ಬೆಳಗ್ಗೆ ಆದೇಶ ಹೊರಟಿದ್ದು, ಭಾನುವಾರ ರಾತ್ರಿ …
Read More »ಸಿಎಂ ಬದಲಾವಣೆ ನಿಶ್ಚಿತ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಕೂಡ ಹೊರಕ್ಕೆ – ನಳೀನ್ ಕುಮಾರ್ ಕಟೀಲ್ ಆಡಿಯೋ
ಬೆಂಗಳೂರು – ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಕೆಳಗಿಳಿಯುವುದು ನಿಶ್ಚಿತವಾಗಿದ್ದು ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ,ಈಶ್ವರಪ್ಪ ಅವರನ್ನು ಕೂಡ ಹೊರಗಿಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಮಾತನಾಡಿದ್ದಾರೆನ್ನಲಾದ ಆಡಿಯೋ ಒಂದು ಬಹಿರಂಗವಾಗಿದೆ. ತಮ್ಮ ಅಪ್ತರ ಬಳಿ ತುಳು ಭಾಷೆಯಲ್ಲಿ ಮಾತುಕತೆ ನಡೆಸಿರುವ ನಳೀನ್ ಕುಮಾರ್ ಕಟೀಲ್ ಅವರು, ಈ ಸಂಗತಿಯನ್ನು ಬಹಿರಂಗಪಡಿಸಿರುವ ರೀತಿ ಯಡಿಯೂರಪ್ಪ ಅವರ ಪದಚ್ಯುತಿಯ ಸುಳಿವು ನೀಡಿದೆಯಲ್ಲದೆ ಸಧ್ಯದಲ್ಲೇ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬರಲಿದ್ದಾರೆ …
Read More »ನಾಳೆಯಿಂದ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ; ಕೆಲ ಮಾಹಿತಿಗಳು ಇಲ್ಲಿದೆ
ಬೆಂಗಳೂರು: ನಾಳೆಯಿಂದ (ಜುಲೈ 19) ರಾಜ್ಯಾದ್ಯಂತ ಎಸ್ಎಸ್ಎಲ್ಸಿ (SSLC) ಪರೀಕ್ಷೆ ಆರಂಭವಾಗುತ್ತಿದೆ. ನಾಳೆ ಗಣಿತ, ವಿಜ್ಞಾನ, ಸಮಾಜ ವಿಷಯಗಳಿಗೆ ಪರೀಕ್ಷೆ ನಡೆಯುತ್ತದೆ. ಪರೀಕ್ಷೆ ಬರೆಯಲು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ ಸಮಯವಿರುತ್ತದೆ. ಪರೀಕ್ಷೆಗೆ ಒಟ್ಟು 8,76,581 ವಿದ್ಯಾರ್ಥಿಗಳ ನೊಂದಣಿಯಾಗಿದ್ದು, ಇದರಲ್ಲಿ 4,72,643 ಬಾಲಕರು ಮತ್ತು 40,39,38 ಬಾಲಕಿಯರು ಪರೀಕ್ಷೆ ಬರೆಯುತ್ತಾರೆ. 22 ರಂದು ಭಾಷಾ ವಿಷಯಗಳಿಗೆ ಪರೀಕ್ಷೆ ನಡೆಯುತ್ತದೆ. ಪ್ರತಿದಿನ ಪರೀಕ್ಷೆ ಆರಂಭಕ್ಕೂ ಮುನ್ನ ಮತ್ತು ನಂತರ …
Read More »ನಿಮ್ಮ ತಂದೆಗೆ ಹುಟ್ಟಿದ್ದರೆ ಧರ್ಮಸ್ಥಳಕ್ಕೆಹೋಗಿ ಆಣೆ ಮಾಡಿ:ದರ್ಶನ್ಗೆ ಇಂದ್ರಜಿತ್ ಮರು ಸವಾಲು
ಬೆಂಗಳೂರು : ನೀವು ನಿಮ್ಮ ತಂದೆಗೆ ಹುಟ್ಟಿದ್ದರೆ ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡೋಣ. ನೀವು ವೇಟರ್ ಗೆ ಹೊಡೆದಿಲ್ಲ ಎಂದು ಆಣೆ ಮಾಡಿ ಎಂದು ನಟ ದರ್ಶನ್ ಅವರಿಗೆ ಪತ್ರಕರ್ತ ಇಂದ್ರಜಿತ್ ಲಂಕೇಶ್ ಮರು ಸವಾಲು ಹಾಕಿದರು. ಇಂದು ಸಂಜೆ ಮಾಧ್ಯಮಗೋಷ್ಠಿ ನಡೆಸಿದ ನಟ ದರ್ಶನ್ ಅವರು ಇಂದ್ರಜಿತ್ ಲಂಕೇಶ್ ವಿರುದ್ಧ ಹರಿಹಾಯ್ದರು. ನಿಮ್ಮಪ್ಪನಿಗೆ ಹುಟ್ಟಿದ್ದರೆ ನನ್ನ ವಿರುದ್ಧದ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಇಂದ್ರಜಿತ್ ಅವರಿಗೆ ನೇರ ಸವಾಲು …
Read More »ಗಾಂಧಿನಗರ ಅಲೆದು ಚಪ್ಪಲಿ ಸವೆಸಿ ದಡ ಮುಟ್ಟಿದೆ ಎಂದರೆ ಆತ್ಮದ್ರೋಹ ಆಗುತ್ತದೆ’ : ನಟ ದರ್ಶನ್ ಗೆ ಜಗ್ಗೇಶ್ ಪರೋಕ್ಷ ಟಾಂಗ್!
ಬೆಂಗಳೂರು : ಗಾಂಧಿನಗರ ಅಲೆದು ಚಪ್ಪಲಿ ಸವೆಸಿ ದಡ ಮುಟ್ಟಿದೆ ಎಂದರೆ ಆತ್ಮದ್ರೋಹ ಆಗುತ್ತದೆ. ನಮ್ಮನ್ನು ದಡ ಮುಟ್ಟಿಸಿದ್ದು ಅಂದಿನ ನಿರ್ದೇಶಕರು, ನಿರ್ಮಾಪಕರು, ಮಾಧ್ಯಮ ಮಿತ್ರರು ಹಾಗೂ ವಿಶೇಷವಾಗಿ ಸ್ವಾಭಿಮಾನಿ ಕನ್ನಡಿಗರು ಎಂದು ನಟ ದರ್ಶನ್ ಗೆ ನವರಸ ನಾಯಕ ಜಗ್ಗೇಶ್ ಟಾಂಗ್ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾದ ಪೋಸ್ಟ್ ಹಾಕಿರುವ ಜಗ್ಗೇಶ್ ನಟ ದರ್ಶನ್ ಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ. ತುಮಕೂರು ಜಿಲ್ಲೆಯ, ತುರುವೇಕೆರೆ ತಾಲ್ಲೂಕಿನ, ಮಾಯಸಂದ್ರ …
Read More »ತಮ್ಮನ್ನು ಪುಡುಂಗ ಎಂದಿರುವ ನಟ ದರ್ಶನ್ ಅವರಿಗೆ ನಿರ್ದೇಶಕ ಜೋಗಿ ಪ್ರೇಮ್ ಅವರ ಪ್ರತ್ಯುತ್ತರ
ಬೆಂಗಳೂರು: ತಮ್ಮನ್ನು ಪುಡುಂಗ ಎಂದಿರುವ ನಟ ದರ್ಶನ್ ಅವರಿಗೆ ನಿರ್ದೇಶಕ ಜೋಗಿ ಪ್ರೇಮ್ ಅವರು ಪ್ರತ್ಯುತ್ತರ ನೀಡಿದ್ದಾರೆ. ಇಂದು (ಜುಲೈ 17) ಫೇಸ್ ಬುಕ್ ನಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಪ್ರೇಮ್, ದಯವಿಟ್ಟು ಇನ್ನೊಬ್ರ ಬಗ್ಗೆ ಮಾತಾಡ್ಬೇಕಾದ್ರೆ ಯೋಚಿಸಿ ಮಾತಾಡಿ ದರ್ಶನ್ ಅವರೇ… Thank you for your kind words. ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ ಎಂದಿದ್ದಾರೆ. ಪ್ರೇಮ್ ಹೇಳಿರುವ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ : ”ದರ್ಶನ್ …
Read More »ವಿಜಯಪುರ ವಿ.ನಿಲ್ದಾಣ ಕಾರ್ಯಾಚರಣೆಗೆ ಮುಂದಾದ ಟರ್ಬೋ ಏರ್‌ಲೈನ್ ಕಂಪನಿ: ಗೋವಿಂದ ಕಾರಜೋಳ
ಬೆಂಗಳೂರು: ವಿಜಯಪುರ ವಿಮಾನ ನಿಲ್ದಾಣ ಕಾರ್ಯಾಚರಣೆ ನಡೆಸಲು ಮೆ.ಟರ್ಬೋ ಏರ್ ಲೈನ್ ಕಂಪನಿಯವರು ಮುಂದೆ ಬಂದಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ. ವಿಜಯಪುರ ವಿಮಾನ ನಿಲ್ದಾಣದಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿದಿನ ಎಟಿಆರ್ 72 ವಿಮಾನವನ್ನು ಹಾರಾಟ ನಡೆಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ಹೊಂದಿವೆ. ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಯು ತ್ವರಿತಗತಿಯಿಂದ ನಡೆಯುತ್ತಿದ್ದು, ಈ ಕಾಮಗಾರಿಯನ್ನು 2022ರ ಮಾರ್ಚ್ …
Read More »ಪೆರೋಲ್ ರಜೆ ಮೇಲೆ ತೆರಳಿದ 11 ಕೈದಿಗಳು ವಾಪಸು ಜೈಲಿಗೆ ಬಂದಿಲ್ಲ!
ಬೆಂಗಳೂರು, ಜು. 17: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳು ಜೈಲು ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಪೆರೋಲ್ ರಜೆ ಮೇಲೆ ತೆರಳಿರುವ ಹನ್ನೊಂದು ಮಂದಿ ಕೈದಿಗಳು ರಜೆ ಅವಧಿ ಮುಗಿದರೂ ವಾಪಸು ಜೈಲಿಗೆ ಬಂದಿಲ್ಲ. ಪೆರೋಲ್ ರಜೆ ಮೇಲೆ ಕೈದಿಗಳನ್ನು ಮೂರು ತಿಂಗಳ ರಜೆ ಮೇಲೆ ಕಳಿಸಿದ ಜೈಲು ಅಧಿಕಾರಿಗಳು ಇದೀಗ ಇಂಗು ತಿಂದ ಮಂಗನಂತಾಗಿದ್ದಾರೆ. ಜೀವಾವಧಿ ಅಥವಾ ಬೇರೆ ಯಾವುದೇ ಶಿಕ್ಷೆಗೆ ಗುರಿಯಾಗುವ ಕೈದಿಗಳಿಗೆ ವರ್ಷದಲ್ಲಿ ಮೂರು …
Read More »ಯಡಿಯೂರಪ್ಪ ದೆಹಲಿಗೆ ಒಯ್ದಿರುವ 6 ಬ್ಯಾಗ್ ರಹಸ್ಯವೇನು?
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದೆಹಲಿ ಪ್ರವಾಸದ ಬಗ್ಗೆ ಹೊಸ ಬಾಂಬ್ ಸಿಡಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಿಎಂ 6 ಬ್ಯಾಗ್ ಗಳ ಸಮೇತ ದೆಹಲಿಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಿನ್ನೆ ಸಿಎಂ ಯಡಿಯೂರಪ್ಪ ತಮ್ಮ ಇಬ್ಬರು ಪುತ್ರರು ಹಾಗೂ ಕೆಲ ಅಧಿಕಾರಿಗಳೊಂದಿಗೆ ದೆಹಲಿಗೆ ತೆರಳಿದ್ದಾರೆ. ಫ್ಲೈಟ್ ನಲ್ಲಿ 6 ದೊಡ್ಡ ದೊಡ್ಡ ಬ್ಯಾಗ್ ಗಳನ್ನು ಕೊಂಡೊಯ್ದಿದ್ದಾರೆ ಎಂಬ ಬಗ್ಗೆ ಮಾಹಿತಿ ಬಂದಿದೆ. ಆ …
Read More »ಜುಲೈ 20ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ – ಪಿಯುಸಿ ಬೋರ್ಡ್
ಬೆಂಗಳೂರು: ಕೊರೊನಾದಿಂದ ರದ್ದಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಜುಲೈ 20 ರಂದು ಪ್ರಕಟವಾಗಲಿದೆ. ಈಗಾಗಲೇ ಫಲಿತಾಂಶ ಪ್ರಕಟ ಮಾಡಲು ಪಿಯುಸಿ ಬೋರ್ಡ್ ಸಿದ್ಧತೆ ಮಾಡಿಕೊಂಡಿದೆ. ಜುಲೈ 20ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಅಂತ ಪಬ್ಲಿಕ್ ಟಿವಿಗೆ ಪಿಯುಸಿ ಬೋರ್ಡ್ ನಿರ್ದೇಶಕಿ ಸ್ನೇಹಲ್ ಮಾಹಿತಿ ನೀಡಿದ್ದಾರೆ. ಜುಲೈ 20 ರಂದು ಇಲಾಖೆಯ ವೆಬ್ ಸೈಟ್ ನಲ್ಲಿ ಪಿಯುಸಿ ಫಲಿತಾಂಶ ಪ್ರಕಟವಾಗಲಿದ್ದು, ಗ್ರೇಡ್ ಬದಲಿಗೆ ಅಂಕಗಳನ್ನೇ ನೀಡಲು ಪಿಯುಸಿ ಬೋರ್ಡ್ …
Read More »