ದಾವಣಗೆರೆ: ವಿಷ ಆಹಾರ ಸೇವಿಸಿ 100ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ದುರ್ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಣ್ಣೆಹಳ್ಳಿ ಗ್ರಾಮದ ಮನೆ ಒಂದರಲ್ಲಿ ಸೀಮಂತ ಕಾರ್ಯ ನಡೆದಿತ್ತು. ಈ ವೇಳೆ ನೂರಾರು ಜನರಿಗೆ ಸಿಹಿಯೂಟ ಹಾಕಲಾಗಿತ್ತು. ಊಟ ಸೇವಿಸಿದ 100ಕ್ಕೂ ಹೆಚ್ಚು ಮಂದಿಯಲ್ಲಿ ವಾಂತಿ-ಭೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅಸ್ವಸ್ಥರೆಲ್ಲರನ್ನೂ ಬೆಣ್ಣೆಹಳ್ಳಿ ಪಿಎಚ್‌ಸಿ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲವರು …
Read More »ಆಟೊ ಚಾಲಕರಿಗೆ ಮಹತ್ವದ ಮಾಹಿತಿ : ಸೆ. 1 ರಿಂದ ಆಟೊಗಳಿಗೆ ಮೀಟರ್ ಕಡ್ಡಾಯ
ದಾವಣಗೆರೆ : ದಾವಣಗೆರೆ ಜಿಲ್ಲೆಯಲ್ಲಿ ಸೆಪ್ಟೆಂಬರ್ 1 ರಿಂದ ಆಟೊ ಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶ ಹೊರಡಿಸಿದ್ದಾರೆ. ಕರಾವಳಿ ಸೇರಿ ರಾಜ್ಯದ ಹಲವೆಡೆ ಇನ್ನೂ 4 ದಿನ ಭಾರೀ ಮಳೆ : ಹೈ ಅಲರ್ಟ್ ಸೆಪ್ಟೆಂಬರ್ 1 ರಿಂದ ಜಿಲ್ಲೆಯಲ್ಲಿ ಆಟೊ ಗಳಿಗೆ ಮೀಟರ್ ಕಡ್ಡಾಯಗೊಳಿಸಲಾಗಿದ್ದು, ಎಲ್ಲಾ ಆಟೋ ಚಾಲಕ, ಮಾಲೀಕರು ತಮ್ಮ ಆಟೊಗಳಿಗೆ ಅನುಮತಿ ಇರುವ ಫ್ಲಾಗ್ ಮೀಟರ್ ಗಳನ್ನು ಅಳವಡಿಸಿಕೊಂಡು ದರಕ್ಕೆ …
Read More »ಖಾಲಿ ಜಾಗದಲ್ಲಿ ಗುಡಿಸಲು ಹಾಕಿ, ಕೈಯಲ್ಲಿ ದೊಣ್ಣೆ ಹಿಡಿದು ಡಿ.ಸಿ ಕಚೇರಿ ಮುಂದೆ ಈ ಬಡವರು ಪ್ರತಿಭಟನೆ ನಡೆಸುತ್ತಿರುವುದು ಏಕೆ?
ದಾವಣಗೆರೆ: ಬಡವರಿಗಾಗಿ ಮೀಸಲಿಟ್ಟ ಸೈಟ್ಗಳನ್ನು ಬೇರೆಯವರಿಗೆ ನೀಡಲು ಮುಂದಾದ ಮಹಾನಗರ ಪಾಲಿಕೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಖಾಲಿ ಜಾಗದಲ್ಲಿ ತಮ್ಮ ಗುಡಿಸಲು ಹಾಕಿ ಪ್ರತಿಭಟನೆ ನಡೆಸಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಬಸಾಪುರ ಹಳ್ಳದ ಬಳಿ ಇರುವ ಜಾಗದಲ್ಲಿ ಬಡವರಿಗೆ ಉಚಿತ ಸೈಟ್ ನೀಡುವುದಾಗಿ ಹಲವು ವರ್ಷಗಳ ಹಿಂದೆಯೇ ತಿಳಿಸಲಾಗಿತ್ತು. ಹೀಗಾಗಿ ಈ ಭಾಗದ ಜನರು ಮಹಾನಗರ ಪಾಲಿಕೆಗೆ ಅರ್ಜಿ ಸಹ ಸಲ್ಲಿಸಿದ್ದರು. ಆದರೆ ಇವರೆಗೂ ಯಾವುದೇ ಸೈಟ್ …
Read More »ಕೋವಿಡ್ ಕೇರ್ ಸೆಂಟರನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟನೆ ಮಾಡಿದರು
ದಾವಣಗೆರೆ: ಕೋವಿಡ್ ಸೋಂಕಿತರಿಗಾಗಿ ದಾವಣಗೆರೆ-ಶಿರಮಗೊಂಡನಹಳ್ಳಿ ಮಾರ್ಗದಲ್ಲಿರುವ ತರಳಬಾಳು ವಿದ್ಯಾರ್ಥಿನಿಯರ ವಸತಿನಿಲಯವನ್ನು ಕೋವಿಡ್ ಕೇರ್ ಸೆಂಟರ್ ಆಗಿ ವ್ಯವಸ್ಥೆಗೊಳಿಸಲಾಗಿದ್ದು, ಶನಿವಾರ ಸಂಸದ ಜಿ.ಎಂ. ಸಿದ್ದೇಶ್ವರ ಅದಕ್ಕೆ ಚಾಲನೆ ನೀಡಿದರು. ‘ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸೋಂಕಿತರಿಂದ ಇತರರಿಗೆ ರೋಗ ಹರಡುವುದನ್ನು ತಡೆಗಟ್ಟಲು ಜಿಲ್ಲೆಯಲ್ಲಿ ವಿವಿಧೆಡೆ ವ್ಯವಸ್ಥಿತವಾಗಿ ಕೋವಿಡ್ ಕೇರ್ ಸೆಂಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ತರಳಬಾಳು ವಿದ್ಯಾರ್ಥಿನಿಯರ ವಸತಿನಿಲಯವನ್ನು ಕೋವಿಡ್ ಕೇರ್ ಸೆಂಟರ್ ಮಾಡಲು ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ …
Read More »ರಾತ್ರಿ 2 ಗಂಟೆಗೆ ಆಕ್ಸಿಜನ್ ತಂದುಕೊಟ್ಟ ರೇಣುಕಾಚಾರ್ಯ; 20 ರೋಗಿಗಳು ಅಪಾಯದಿಂದ ಪಾರು
ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಆಸ್ಪತ್ರೆಯಲ್ಲಿ ರಾತ್ರೋರಾತ್ರಿ ವೈದ್ಯಕೀಯ ಆಕ್ಸಿಜನ್ ಖಾಲಿಯಾಗುವ ಹಂತ ತಲುಪಿದ್ದು, ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಂದ ರಾತ್ರಿ 2 ಗಂಟೆ ಸುಮಾರಿಗೆ ಆಕ್ಸಿಜನ್ ಪೂರೈಕೆ ಆಗಿದೆ. ಪಿಪಿಇ ಕಿಟ್ ಹಾಕಿಕೊಂಡು ವಾರ್ಡ್‌ಗೆ ಭೇಟಿ ನೀಡುವ ಸಲುವಾಗಿ ರೇಣುಕಾಚಾರ್ಯ ಆಸ್ಪತ್ರೆಗೆ ಬಂದಿದ್ದಾಗ ಮೆಡಿಕಲ್ ಆಕ್ಸಿಜನ್ ಖಾಲಿಯಾಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೇವಲ 3 ಗಂಟೆಗಳಿಗೆ ಆಗುವಷ್ಟು ಆಕ್ಸಿಜನ್ ಮಾತ್ರ ಇದೆ, ಆಕ್ಸಿಜನ್ ಬೇಕೆಂದು ವೈದ್ಯರು ಶಾಸಕರಿಗೆ ತಿಳಿಸಿದ್ದರು. …
Read More »ಪಾರ್ಶ್ವವಾಯುಗೆ ತುತ್ತಾಗಿದ್ದ ವಿದ್ಯಾರ್ಥಿನಿಗೆ ಚಿನ್ನದ ಪದಕ
ದಾವಣಗೆರೆ: ಬ್ರೈನ್ ಸ್ಟ್ರೋಕ್ (ಮೆದುಳಿನ ಪಾರ್ಶ್ವವಾಯು) ಆಗಿದ್ದ ವಿದ್ಯಾರ್ಥಿನಿ ಹಾಸಿಗೆಯಲ್ಲಿ ಮಲಗಿದ್ದರೂ ಛಲ ಬಿಡದೇ ಓದಿ ಸ್ನಾತಕೋತ್ತರ ಪದವಿಯಲ್ಲಿ (ಇಂಗ್ಲಿಷ್) ಚಿನ್ನದ ಪದಕ ಪಡೆದಿದ್ದಾರೆ. ದಾವಣಗೆರೆ ವಿದ್ಯಾನಗರದ ನಿಸರ್ಗ ಕೆ.ಪಿ. ಈ ಸಾಧಕ ವಿದ್ಯಾರ್ಥಿನಿ. ಸಿವಿಲ್ ಕಂಟ್ರಾಕ್ಟರ್ ಪಂಚಾಕ್ಷರಿ-ಬಸಮ್ಮ ದಂಪತಿಯ ಮಗಳಾಗಿರುವ ನಿಸರ್ಗ ಅವರಿಗೆ 2020ರ ಏಪ್ರಿಲ್‌ನಲ್ಲಿ ಬ್ರೈನ್ ಸ್ಟ್ರೋಕ್ ಆಗಿತ್ತು. ಶಿವಮೊಗ್ಗದ ಮಾನಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾ ಕಾರಣದಿಂದ ತಡವಾಗಿ ಅಂದರೆ ಸೆಪ್ಟೆಂಬರ್‌ನಲ್ಲಿ ಪರೀಕ್ಷೆ …
Read More »ರಾಜಕೀಯ ಸಮಾವೇಶಗಳಲ್ಲಿ ಇಲ್ಲದ ನಿರ್ಬಂಧ ಸಿನಿಮಾ ಥಿಯೇಟರ್‌ಗೆ ಏಕೆ..?: ದುನಿಯಾ ವಿಜಿ
ದಾವಣಗೆರೆ: ರಾಜಕೀಯ ಸಮಾವೇಶಗಳಲ್ಲಿ ಸಾವಿರಾರು ಜನ ಸೇರ್ತಾರೆ. ಅದಕ್ಕೆ ನಿರ್ಬಂಧ ಇಲ್ಲ. ಎಲ್ಲೂ ಇಲ್ಲದ ನಿಯಮಗಳು ಸಿನಿಮಾ ಥಿಯೇಟರ್‌ಗೆ ಏಕೆ ಎಂದು ಸ್ಯಾಂಡಲ್‍ವುಡ್ ನಟ ದುನಿಯಾ ವಿಜಯ್ ಪ್ರಶ್ನಿಸಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹರಿಹರದ ಬೆಳ್ಳೂಡಿ ಕಾಗಿನೆಲೆ ಶಾಖಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಥಿಯೇಟರ್‌ಗಳಿಗೆ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಎಂಬ ಸರ್ಕಾರದ ಅದೇಶಕ್ಕೆ ಪ್ರತಿಕ್ರಿಯಿಸಿದರು. ಅಲ್ಲದೆ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದರು. ಎಲ್ಲೂ ಇಲ್ಲದ ನಿಯಮಗಳು …
Read More »ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗೆ ಬೆಳಗಾವಿ ಹುಕ್ಕೇರಿ ಹಿರೇಮಠದಿಂದ ಗೌರವ
ಹರಿಹರ (ರಾಜನಹಳ್ಳಿ): ವಾಲ್ಮೀಕಿ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ಸಂಘಟಿಸುತ್ತಿರುವ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರಿಗೆ ಬೆಳಗಾವಿಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಅವರು ಸ್ವಾಮೀಜಿ ಯವರನ್ನು ಸನ್ಮಾನಿಸಿ ಮಾತನಾಡಿ, “ಬೆಳಗಾವಿ ಹುಕ್ಕೇರಿ ಹಿರೇಮಠ ಎಲ್ಲ ಸಮುದಾಯದೊಂದಿಗೆ ಬೆರೆತು ಕಾರ್ಯವನ್ನು ಮಾಡುತ್ತಿದೆ. ವಾಲ್ಮೀಕಿ ಪೀಠದ ಗುರುಗಳಿಗೆ ಗೌರವಿಸಿದ್ದು ನನಗೆ ಅತೀವ ಸಂತಸ ತಂದಿದೆ” ಎಂದು ಹೇಳಿದರು. ಹುಕ್ಕೇರಿ ಹಿರೇಮಠದ …
Read More »ನಟ ಸುದೀಪ್ ನೋಡಲು ಮುಗಿಬಿದ್ದ ಅಭಿಮಾನಿಗಳು : ಪೊಲೀಸರಿಂದ ಲಾಠಿ ಪ್ರಹಾರ, ಖುರ್ಚಿ, ಸೋಫಾ ಪೀಸ್ ಪೀಸ್
ದಾವಣಗೆರೆ : ಜಿಲ್ಲೆ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ಮಂಗಳವಾರ ನಟ ಸುದೀಪ ಅವರಿಗೆ ಪ್ರಸನ್ನಾನಂದ ಸ್ವಾಮೀಜಿ ‘ ವಾಲ್ಮೀಕಿ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದರು. ಈ ಮೊದಲು ನಟ ಕಿಚ್ಚ ಸುದೀಪ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನ ನೋಡಲು ಹಾಗೂ ಸೆಲ್ಫಿ ತೆಗೆಸಿಕೊಳ್ಳಲು ಜಮಾಯಿಸಿದಾಗ ನೂಕು ನುಗ್ಗಲು ಸಂಭವಿಸಿದೆ. ಪರಿಸ್ಥಿತಿಯನ್ನ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೇಳೆ ಸುದೀಪ್ …
Read More »ವಾಲ್ಮೀಕಿ ಜಾತ್ರೆಯಲ್ಲಿ ಪ್ರಿಯಾಂಕ.. ಪುತ್ರಿಗೆ ರಾಜಕೀಯ ತರಬೇತಿ ನೀಡುತ್ತಿದ್ದಾರಾ ಸತೀಶ್ ಜಾರಕಿಹೊಳಿ?
ದಾವಣಗೆರೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಮಗಳಿಗೆ ರಾಜಕೀಯ ತರಬೇತಿ ನೀಡುತ್ತಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ವಾಲ್ಮೀಕಿ ಜಾತ್ರೆಯಲ್ಲಿ ಪ್ರಿಯಾಂಕ ಜಾರಕಿಹೊಳಿ.. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ನಡೆಯುತ್ತಿರುವ 3ನೇ ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಗಳು ಪ್ರಿಯಾಂಕ ಅವರು ಆಗಮಿಸಿ, ವಾಲ್ಮೀಕಿ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಕೆಲವು ದಿನಗಳಿಂದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಹ ಹೆಚ್ಚು …
Read More »