Breaking News
Home / ಜಿಲ್ಲೆ / ದಾವಣಗೆರೆ / ರಾತ್ರಿ 2 ಗಂಟೆಗೆ ಆಕ್ಸಿಜನ್​ ತಂದುಕೊಟ್ಟ ರೇಣುಕಾಚಾರ್ಯ; 20 ರೋಗಿಗಳು ಅಪಾಯದಿಂದ ಪಾರು

ರಾತ್ರಿ 2 ಗಂಟೆಗೆ ಆಕ್ಸಿಜನ್​ ತಂದುಕೊಟ್ಟ ರೇಣುಕಾಚಾರ್ಯ; 20 ರೋಗಿಗಳು ಅಪಾಯದಿಂದ ಪಾರು

Spread the love

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಆಸ್ಪತ್ರೆಯಲ್ಲಿ ರಾತ್ರೋರಾತ್ರಿ ವೈದ್ಯಕೀಯ ಆಕ್ಸಿಜನ್ ಖಾಲಿಯಾಗುವ ಹಂತ ತಲುಪಿದ್ದು, ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಂದ ರಾತ್ರಿ 2 ಗಂಟೆ ಸುಮಾರಿಗೆ ಆಕ್ಸಿಜನ್ ಪೂರೈಕೆ ಆಗಿದೆ. ಪಿಪಿಇ ಕಿಟ್ ಹಾಕಿಕೊಂಡು ವಾರ್ಡ್‌ಗೆ ಭೇಟಿ ನೀಡುವ ಸಲುವಾಗಿ ರೇಣುಕಾಚಾರ್ಯ ಆಸ್ಪತ್ರೆಗೆ ಬಂದಿದ್ದಾಗ ಮೆಡಿಕಲ್ ಆಕ್ಸಿಜನ್ ಖಾಲಿಯಾಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೇವಲ 3 ಗಂಟೆಗಳಿಗೆ ಆಗುವಷ್ಟು ಆಕ್ಸಿಜನ್ ಮಾತ್ರ ಇದೆ, ಆಕ್ಸಿಜನ್ ಬೇಕೆಂದು ವೈದ್ಯರು ಶಾಸಕರಿಗೆ ತಿಳಿಸಿದ್ದರು. ವಿಷಯ ಕಿವಿಗೆ ಬೀಳುತ್ತಿದ್ದಂತೆಯೇ ಆಕ್ಸಿಜನ್​ ಪೂರೈಕೆಗೆ ಸಜ್ಜಾದ ಶಾಸಕರು ತಾವೇ ಮುಂದೆ ನಿಂತು ಕೆಲಸ ಮಾಡಿದ್ದಾರೆ.

ಆಕ್ಸಿಜನ್​ ವ್ಯವಸ್ಥೆ ಮಾಡಲು ಸಿಬ್ಬಂದಿಯ ಜತೆಗೆ ಸ್ವತಃ ಶಾಸಕರೇ ಹರಿಹರಕ್ಕೆ ತೆರಳಿದ್ದು, ರಾತ್ರಿ 2 ಗಂಟೆ ಸುಮಾರಿಗೆ ತಮ್ಮ ವಾಹನದಲ್ಲೇ ಆಕ್ಸಿಜನ್ ಸಿಲಿಂಡರ್ ತಂದುಕೊಟ್ಟಿದ್ದಾರೆ. ಆ ಮೂಲಕ ಆಕ್ಸಿಜನ್​ ಬೆಡ್​ನಲ್ಲಿದ್ದ ಸುಮಾರು 20 ಜನರ ಜೀವವನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಶಾಸಕರ ಸಮಯ ಪ್ರಜ್ಞೆಗೆ ಹಾಗೂ ತಾವೇ ಮುಂದೆ ನಿಂತು ತಮ್ಮ ವಾಹನದಲ್ಲೇ ಆಕ್ಸಿಜನ್ ಪೂರೈಕೆ ಮಾಡಿದ್ದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಶ್ರೇಯಸ್ ಆಸ್ಪತ್ರೆಯಲ್ಲಿ ನಿನ್ನೆ (ಮೇ 12) ತಡರಾತ್ರಿ ಆಕ್ಸಿಜನ್ ಪ್ಲಾಂಟ್ ಸೋರಿಕೆಯಾಗಿದೆ. ಅದೃಷ್ಟವಶಾತ್ ಆಸ್ಪತ್ರೆ ಸಿಬ್ಬಂದಿ ಸಮಯಪ್ರಜ್ಞೆಯಿಂದ ಭಾರೀ ದುರಂತ ತಪ್ಪಿಹೋಗಿದೆ. ಆಸ್ಪತ್ರೆಯ ಪ್ಲಾಂಟ್‌ನಿಂದ ಆಕ್ಸಿಜನ್ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದ ತಕ್ಷಣ ಆಸ್ಪತ್ರೆ ಸಿಬ್ಬಂದಿ, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ. ಜತೆಗೆ, ಸೋನುಸೂದ್ ಚಾರಿಟಬಲ್ ಟ್ರಸ್ಟ್‌ಗೂ ವಿಷಯ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ಸೋನುಸೂದ್ ಚಾರಿಟಬಲ್ ಟ್ರಸ್ಟ್‌ ಸದಸ್ಯರು ತಡಮಾಡದೇ ಧಾವಿಸಿ ಕಾರ್ಯಪ್ರವೃತ್ತರಾಗಿದ್ದಾರೆ. ಪರಿಣಾಮ ಆಸ್ಪತ್ರೆಯಲ್ಲಿದ್ದ 30ಕ್ಕೂ ಹೆಚ್ಚು ರೋಗಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಷಯ ತಿಳಿದ ಕೂಡಲೇ 6 ಜಂಬೋ ಸಿಲಿಂಡರ್ ತಂದು ಆಸ್ಪತ್ರೆಗೆ ಕೊಟ್ಟ ಸೋನುಸೂದ್ ಚಾರಿಟಬಲ್ ಟ್ರಸ್ಟ್ ಸದಸ್ಯರು ಬಳಿಕ ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್ ಲೀಕೇಜ್ ದುರಸ್ತಿ ಮಾಡಿಸಿದ್ದಾರೆ. ಎಸಿಪಿ ರೀನಾ ಸುವರ್ಣ ಮತ್ತು ಸೋನುಸೂದ್ ಚಾರಿಟಬಲ್ ಟ್ರಸ್ಟ್ ಸಮಯಪ್ರಜ್ಞೆಯಿಂದ ಆಸ್ಪತ್ರೆಯಲ್ಲಿ ಘಟಿಸಬಹುದಾಗಿದ್ದ ದುರಂತ ತಪ್ಪಿಹೋಗಿದ್ದು ವೈದ್ಯರಾದಿಯಾಗಿ ಇಡೀ ಆಸ್ಪತ್ರೆ ಸಿಬ್ಬಂದಿ ವರ್ಗದವರು ಸಹಾಯ ಹಸ್ತ ಚಾಚಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದ್ದಾರೆ.

 

Spread the love

About Laxminews 24x7

Check Also

ಲಂಚ ಪಡೆಯುತ್ತಿದ್ದ ಹರಿಹರ ನಗರಸಭೆ ಸದಸ್ಯೆ ಲೋಕಾಯುಕ್ತ ಬಲೆಗೆ

Spread the love ದಾವಣಗೆರೆ: ಲಂಚ ಸ್ವೀಕರಿಸುವ ವೇಳೆ ಹರಿಹರ ನಗರಸಭೆ ಕಾಂಗ್ರೆಸ್ ಸದಸ್ಯೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗುತ್ತಿಗೆದಾರನಿಂದ 20 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ