ಚಿಕ್ಕಮಗಳೂರು: ಕನ್ನಡಿ ಅಂದ್ರೆ ಒಂದು ಶಕ್ತಿ.. ಇಂತಹ ಶಕ್ತಿ ಪ್ರತಿಯೊಬ್ಬ ಕನ್ನಡಿಗನ ನರನಾಡಿಯಲ್ಲೂ ಹರಿಯುತ್ತಿದೆ. ಕನ್ನಡಕ್ಕೆ ತನ್ನದೆ ಆದ ಇತಿಹಾಸವಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಬಳಕೆ ಮಾಡೋರು ಕಮ್ಮಿ. ಆದ್ರೆ ನೀವು ದೇಗುಲಕ್ಕೆ ಹೋದ್ರೆ ಎಲ್ಲವೂ ಕನ್ನಡಮಯ. ಕನ್ನಡ ಅನ್ನೋ ಭಾಷೆಗೆ ತನ್ನದೇ ಆದ ತಾಕತ್ತು ಇದೆ.. ಈ ಭಾಷೆ ಸಾಕಷ್ಟು ಮಹತ್ವವನ್ನ ಹೊಂದಿದೆ. ಕನ್ನಡ ಪದಗಳು ಕಿವಿಗೆ ಬೀಳುತ್ತಿದ್ದರೆ ಮನಸ್ಸಿಗೆ ನೆಮ್ಮದಿ. ಆದ್ರೆ ಇತ್ತೀಚಿನ …
Read More »ಕಾಡೆಮ್ಮೆಯನ್ನ ಕೂಗಿ-ಕೂಗಿ ಕರೆದ ಗ್ರಾಮಸ್ಥರು
ಚಿಕ್ಕಮಗಳೂರು: ಕಾಡೆಮ್ಮೆಯನ್ನ ಕೂಗಿ-ಕೂಗಿ ಕರೆದ ಗ್ರಾಮಸ್ಥರು ಕಾಡೆಮ್ಮೆ ಗ್ರಾಮದೊಳಗೆ ಬರುತ್ತಿದ್ದಂತೆ ಭಯಗೊಂಡು ಅಂಗಡಿಯೊಳಗೆ ಹೋಗಿ ರೋಲಿಂಗ್ ಶಟರ್ ಎಳೆದುಕೊಂಡ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಕೂಳೂರು ಗ್ರಾಮದಲ್ಲಿ ನಡೆದಿದೆ. ಜಯಪುರ ಸಮೀಪದ ಕೂಳುರು, ಧರೆಕೊಪ್ಪ ಭಾಗದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಕಾಡೆಮ್ಮೆಯೊಂದು ಬೀಡು ಬಿಟ್ಟಿತ್ತು. ಆಗಾಗ ಗ್ರಾಮಸ್ಥರ ಕಣ್ಣಿಗೂ ಬೀಳುತ್ತಿತ್ತು. ಗ್ರಾಮದ ಬಳಿ ಕಾಡೆಮ್ಮೆ ಆಗಾಗ ಕಂಡು ಕಾಡಂಚಿನಲ್ಲಿ ಮರೆಯಾಗುತ್ತಿತ್ತು. ಆದರೆ ಇಂದು ಕೂಳೂರು ಗ್ರಾಮದ ಗದ್ದೆ ಬದಿಯಲ್ಲಿ ನಿಂತಿದ್ದ …
Read More »ಗುಡಿಸಲು ತೆರವು ವೇಳೆ ಅರಣ್ಯ ಸಿಬ್ಬಂದಿ ಮೇಲೆ ಬಡಿಗೆ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಚಿಕ್ಕಮಗಳೂರು: ಗುಡಿಸಲು ತೆರವು ವೇಳೆ ಅರಣ್ಯ ಸಿಬ್ಬಂದಿ ಮೇಲೆ ಬಡಿಗೆ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಂದ ಹಾಗೆ, ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದಲ್ಲಿ 2 ದಿನಗಳ ಹಿಂದೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಜಾಗ ತಮ್ಮದೆಂದು ಹಲ್ಲೆಗೆ ಯತ್ನಿಸಿರುವ ಕುಟುಂಬಸ್ಥರ ವಿರುದ್ಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಡಿಸಲು ತೆರವು ಮಾಡುತ್ತಿದ್ದ ವೇಳೆ ಅರಣ್ಯ …
Read More »ಕೊರೊನಾ ಮಹಾಮಾರಿಯ ವಿರುದ್ಧದ ಸಮರದಲ್ಲಿ ಪ್ರಾಣ ತೆತ್ತ ಕೊರೊನಾ ಪೊಲೀಸ್ ವಾರಿಯರ್ಸ್ ಅನ್ನು ಸಹ ಸ್ಮರಿಸಲಾಗಿದೆ.
ಚಿಕ್ಕಮಗಳೂರು: ಇಂದು ರಾಜ್ಯಾದ್ಯಂತ ಪೊಲೀಸ್ ಸಂಸ್ಮರಣಾ ದಿನವನ್ನು ಆಚರಿಸಲಾಗುತ್ತಿದೆ. ಕರ್ತವ್ಯದ ವೇಳೆ ಮೃತಪಟ್ಟ ಪೊಲೀಸ್ ಸಿಬ್ಬಂದಿಗೆ ಗೌರವ ಸೂಚಿಸಲಾಗುತ್ತಿದೆ. ಅದರಲ್ಲೂ ಕೊರೊನಾ ಮಹಾಮಾರಿಯ ವಿರುದ್ಧದ ಸಮರದಲ್ಲಿ ಪ್ರಾಣ ತೆತ್ತ ಕೊರೊನಾ ಪೊಲೀಸ್ ವಾರಿಯರ್ಸ್ ಅನ್ನು ಸಹ ಸ್ಮರಿಸಲಾಗಿದೆ. ಅಂತೆಯೇ, ನಗರದ DAR ಮೈದಾನದಲ್ಲಿ ನಡೆದ ಪೋಲೀಸ್ ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ಪುಷ್ಪ ಸಮರ್ಪಣೆ ವೇಳೆ.. ಮಹಿಳಾ ಪೇದೆಯಾಗಿದ್ದ ಮೃತ ಮಗಳನ್ನ ನೆನೆದು ಆಕೆಯ ತಾಯಿ ಕಣ್ಣೀರಿಟ್ಟ ಮನಮಿಡಿಯುವ ದೃಶ್ಯ ಕಂಡುಬಂತು. ಹುತಾತ್ಮ …
Read More »ಒಂಟಿ ಸಲಗನ ದಾಳಿಗೆ ಕಾರು ನಜ್ಜುಗುಜ್ಜು.. ಇಬ್ಬರ ಸ್ಥಿತಿ ಗಂಭೀರ
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬಿಳಚೇನಹಳ್ಳಿಯ ಬಳಿ ಕಾರಿನ ಮೇಲೆ ಒಂಟಿ ಸಲಗ ದಾಳಿ ಮಾಡಿರುವ ಘಟನೆ ನಡೆದಿದೆ. ವಾಹನದಲ್ಲಿದ್ದ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂಟಿ ಸಲಗದ ದಾಳಿಯಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜು ಆಗಿದೆ. ಭರತ್, ಶರತ್ ಮತ್ತು ಮಧು ಎಂಬುವವರು ಕಾರಿನಲ್ಲಿ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ.
Read More »DC ಕಚೇರಿಯಲ್ಲಿ ಹಾವು ಪ್ರತ್ಯಕ್ಷ! ಕೆಲಸ ಬಿಟ್ಟು ಓಡಿ ಹೋದ ಸಿಬ್ಬಂದಿ..
ಚಿಕ್ಕಮಗಳೂರು: ಕೆರೆ ಹಾವೊಂದು ಅತ್ತಿಂದಿತ್ತ ಓಡಾಡಿ ಸಿಬ್ಬಂದಿಗಳಲ್ಲಿ ಆತಂಕ ಹುಟ್ಟಿಸಿದ್ದ ಪ್ರಸಂಗ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಆವರಣದ ಮಧ್ಯದಲ್ಲಿ ಗಾಂಧಿ ಪ್ರತಿಮೆ ಸುತ್ತಲೂ ಇರೋ ಹುಲ್ಲು ಹಾಸಿನ ಮೇಲೆ ಕೆರೆ ಹಾವನ್ನ ಕಂಡು ಸಿಬ್ಬಂದಿಗಳು ಹಾಗೂ ಕೆಲಸಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಜನಸಾಮಾನ್ಯರು ಗಾಬರಿಯಾಗಿದ್ದರು. ಒಂದು ಆಫೀಸಿನಿಂದ ಮತ್ತೊಂದು ಆಫೀಸ್ ಗೆ ಹೋಗುವಾಗ ಹಾವನ್ನ ಕಂಡ ಸಿಬ್ಬಂದಿಗಳು ಗಾಬರಿಗೊಂಡಿದ್ದರು. ಅತ್ಯಂತ ವೇಗವಾಗಿ ಓಡುವ ಕೆರೆ ಹಾವು ಸಿಬ್ಬಂದಿಗಳ …
Read More »ವರ್ಷಗಳ ಬಳಿಕ ತುಂಬಿದ ಕೆರೆ- ರೈತರ ಮೊಗದಲ್ಲಿ ಮಂದಹಾಸ
ಚಿಕ್ಕಮಗಳೂರು: ಕಳೆದ 15 ವರ್ಷಗಳಿಂದ ನೀರೇ ಇಲ್ಲದ ಮಕ್ಕಳ ಆಟದ ಮೈದಾನವಾಗಿದ್ದ ಬೃಹತ್ ಕೆರೆಗೆ ನೀರು ಹರಿದು ಬರುತ್ತಿದ್ದು ಚಿಕ್ಕಮಗಳೂರು ತಾಲೂಕಿನ ಬೆಳವಾಡಿ, ಕಳಸಾಪುರ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ತಾಲೂಕಿಣ ಬೆಳವಾಡಿಯ ಬೃಹತ್ ಕೆರೆಗೆ ನೀರು ಬಂದಿದ್ದು, ರೈತರಿಗೆ ಮರುಳುಗಾಡಲ್ಲಿ ಓಯಾಸಿಸ್ ಸಿಕ್ಕಂತಾಗಿದ್ದು, ಸ್ಥಳೀಯರ ಪಾಲಿಗೆ ಈ ಕೆರೆ ಪ್ರವಾಸಿ ತಾಣವಾಗಿದೆ. ತಾಲೂಕಿನ ಬೆಳವಾಡಿ, ಕಳಸಾಪುರ ಸೇರಿದಂತೆ ಈ ಭಾಗದ ಹತ್ತಾರು ಹಳ್ಳಿಗಳು …
Read More »ಕಾಫಿನಾಡಿಗರೇ ಹುಷಾರ್! ಅಸಲಿ ನೋಟುಗಳನ್ನು ಮೀರಿಸಿ ಚಲಾವಣೆಗೆ ಬಂದಿವೆ ಖೋಟಾ ನೋಟುಗಳು..
ಚಿಕ್ಕಮಗಳೂರು : ಅಂಗಡಿಗೆ ಹೋಗಿ ಚೇಂಜ್ ಇಸ್ಕೊಬೇಕಾದ್ರೆ ಹುಷಾರ್! ಲಕ್ಷಾಂತರ ರೂ ವ್ಯವಹಾರ ಮಾಡ್ಬೇಕಾದ್ರೂ ಜೋಪಾನ! ಅದ್ರಲ್ಲೂ 500-2000 ರೂಪಾಯಿಗಳ ನೋಟ್ ತೆಗೆದುಕೊಳ್ಳಬೇಕಾದ್ರೆ ಬಿ ಕೇರ್ ಫುಲ್! ಅಷ್ಟಕ್ಕೂ ನಾವ್ ನಿಮ್ನ ಸುಮ್ನೇ ಹೆದರಿಸ್ತಿಲ್ಲ, ಹಣದ ವ್ಯವಹಾರ ಮಾಡ್ಬೇಕಾದ್ರೆ ಮೋಸ ಹೋಗ್ಬೇಡಿ ಅಂತಾ ಎಚ್ಚರಿಸ್ತಾ ಇದ್ದೀವಿ. ಏಕೆಂದರೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಆ ಎರಡು ಪ್ರಕರಣಗಳು ನೀವು ಹುಷಾರಾಗಿರೋದು ಒಳಿತು ಅನ್ನೋದನ್ನ ಸಾರಿ ಸಾರಿ ಹೇಳ್ತಿದೆ. ಪ್ರಕರಣ 1: ನೂರಲ್ಲ, …
Read More »ರಸ್ತೆ ಬದಿಯ ಹಳ್ಳಕ್ಕೆ ಕಾರು ಪಲ್ಟಿ – ವಾರಕ್ಕೊಂದು ಗಾಡಿ ಪಲ್ಟಿಯಾದ್ರೂ ಸರ್ಕಾರ ಡೋಂಟ್ ಕೇರ್
ಚಿಕ್ಕಮಗಳೂರು: ರಸ್ತೆ ತಿರುವಿನಲ್ಲಿ ತಡೆಗೋಡೆಗಳಿಲ್ಲದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಶಿಫ್ಟ್ ಕಾರೊಂದು ರಸ್ತೆ ಬದಿಯ ಹಳ್ಳಕ್ಕೆ ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪದ ಮೂಲೆಮನೆ ಗ್ರಾಮದಲ್ಲಿ ನಡೆದಿದೆ. ಶಿಫ್ಟ್ ಕಾರಿನಲ್ಲಿ ನಾಲ್ವರು ಬೆಂಗಳೂರಿನಿಂದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಬೆಳಗಿನ ಜಾವ ಸುಮಾರು 4 ಗಂಟೆಗೆ ಮೂಲೆಮನೆ ಗ್ರಾಮದ ಬಳಿ ರಸ್ತೆ ತಿರುವಿನಲ್ಲಿ ಕಾರು ಹಳ್ಳಕ್ಕೆ ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ವಾರಕ್ಕೊಂದು ಅಪಘಾತ: …
Read More »ಕೊರೊನಾ ಚಿಕಿತ್ಸೆಗೆ 19 ದಿನಕ್ಕೆ 11 ಲಕ್ಷ ಬಿಲ್- 1 ರೂ.ಡಿಸ್ಕೌಂಟ್
ಚಿಕ್ಕಮಗಳೂರು: ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳು ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದು, ಚಿಕಿತ್ಸೆ ದಾಖಲಾದ ವ್ಯಕ್ತಿಗೆ ಕೇವಲ 19 ದಿನಕ್ಕೆ 11 ಲಕ್ಷ ರೂ.ಬಿಲ್ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯ ಪಿಳ್ಳೇನಹಳ್ಳಿ ಗ್ರಾಮದ 70 ವರ್ಷದ ನಂಜುಡಪ್ಪ ಅವರಿಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಆಗಸ್ಟ್ 24ರಂದು ನಗರದ ಆಶ್ರಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಚಿಕಿತ್ಸೆಗೆಂದು ದಾಖಲಾದ ವ್ಯಕ್ತಿಗೆ ಖಾಸಗಿ ಆಸ್ಪತ್ರೆ 19 ದಿನಕ್ಕೆ …
Read More »