ಕೋಲಾರ: ಚೆನ್ನೈ ನಿವಾರ್ ಚಂಡ ಮಾರುತದ ಅಬ್ಬರ ಮುಂದುವರೆದಿದ್ದು, ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಪರಿಣಾಮ ಮನೆಯ ಗೋಡೆ ಕುಸಿದಿದ್ದು, ವ್ಯಕ್ತಿಯ ಕಾಲು ಮುರಿದಿದೆ. ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ನಾಲ್ಕು ಮನೆ ಗೋಡೆ ಕುಸಿತವಾಗಿವೆ. ಪೆದ್ದೂರು ಗ್ರಾಮದ ಸೂರ್ಯ ನಾರಾಯಣ ಅವರ ಕಾಲು ಮುರಿದಿದೆ. ಮಲಗಿದ್ದಾಗ ಗೋಡೆ ಕುಸಿದ್ದರಿಂದ ಕಾಲು ಮುರಿದಿದೆ. ಮುಷ್ಟೂರಲ್ಲಿ ನಾಗಮಣಿ, ವಿಜಿಯಮ್ಮ ಅವರ 2 ಮನೆಯ ಗೋಡೆ ಕುಸಿತವಾಗಿದೆ. ಅಬ್ಬೆಹಳ್ಳಿಯ ಭಾಗ್ಯಮ್ಮ ಅವರ …
Read More »ಲೈಟ್ ಕಂಬದ ವಿಚಾರಕ್ಕೆ ಜಗಳ – ನಾದಿನಿಗೆ ಹಿಗ್ಗಾಮುಗ್ಗ ಥಳಿಸಿದ ಬಾವ
ಕೋಲಾರ: ಕ್ಷುಲ್ಲುಕ ಕಾರಣಕ್ಕೆ ಉಂಟಾದ ಜಗಳದಲ್ಲಿ ವ್ಯಕ್ತಿಯೋರ್ವ ತನ್ನ ತಮ್ಮನ ಹೆಂಡತಿಯನ್ನು ಹಿಗ್ಗಾಮುಗ್ಗ ಥಳಿಸಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕಲ್ಲುಕುಂಟೆ ಗ್ರಾಮದಲ್ಲಿ ನಡೆದಿದೆ.ಮನೆ ಬಳಿ ವಿದ್ಯುತ್ ಕಂಬ ಅಳವಡಿಸುವ ವಿಚಾರದಲ್ಲಿ ಬಾವನೊಂದಿಗೆ ಜಗಳ ಕಿತ್ತ ನಾದಿನಿ, ಮೊದಲಿಗೆ ಬಾವನಿಗೆ ಪೊರಕೆ ಸೇವೆ ಮಾಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ಜಗಳ ಹೆಚ್ಚಾದಾಗ ಜಗಳ ಬಿಡಿಸುವ ನೆಪದಲ್ಲಿ ಬಂದ ಬಾವನ ಮಗನೂ ಕೂಡ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ. …
Read More »ರಾಷ್ಟ್ರ ಧ್ವಜ ಸುಟ್ಟ ಟಿಪ್ಪರ್ ಚಾಲಕ – ಹಿಡಿದು ಥಳಿಸಿದ ಸಾರ್ವಜನಿಕರು
ಕೋಲಾರ: ಕನ್ನಡ ರಾಜ್ಯೋತ್ಸವದೊಂದೆ ರಾಷ್ಟ್ರ ಧ್ವಜ ಸುಟ್ಟು ಅಪಮಾನವೆಸಿಗಿದ್ದ ಟಿಪ್ಪರ್ ಚಾಲಕನಿಗೆ ಸಾರ್ವಜನಿಕರು ಥಳಿಸಿದ ಘಟನೆ ಕೋಲಾರದಲ್ಲಿ ನಡೆದಿದೆಕೋಲಾರ ಜಿಲ್ಲೆಯ ಮಾಲೂರು ತಾಲೂಕು ಮಾಸ್ತಿ ಗ್ರಾಮದ ತಿಮ್ಮಸಂದ್ರ ಬಳಿ ಉತ್ತರ ಭಾರತ ಮೂಲದ ಟಿಪ್ಪರ್ ಲಾರಿ ಡ್ರೈವರ್ ಸತ್ಯೇಂದ್ರ ಕುಮಾರ್ ಯಾದವ್ ರಾಷ್ಟ್ರ ಧ್ವಜಕ್ಕೆ ಅಪಮಾನವೆಸಿಗಿದ್ದ ಕಿಡಿಗೇಡಿ. ರಾಷ್ಟ್ರಧ್ವಜಕ್ಕೆ ಅಪಮಾನವೆಸಗಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಅಪಮಾನವೆಸಗಿದ್ದ ಕಿಡಿಗೇಡಿ ಕೈಗೆ ರಾಷ್ಟ್ರ ಧ್ವಜ ಮತ್ತು ಕನ್ನಡ ಧ್ವಜವನ್ನು …
Read More »ಕುರಿ ಕಾಪಾಡಲು ಹೋದ ಇಬ್ಬರೂ ನೀರು ಪಾಲು- ಕುರಿ ಮಾತ್ರ ಸುರಕ್ಷಿತ
ಕೋಲಾರ: ಕುರಿ ಕಾಪಾಡಲು ಹೋಗಿ ನೀರಿನಲ್ಲಿ ಮುಳುಗಿ ಇಬ್ಬರು ಕುರಿಗಾಹಿಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕೋಲಾರದಲ್ಲಿ ನಡೆದಿದೆ. ಮುಳಬಾಗಲು ತಾಲ್ಲೂಕಿನ ಕೀಲು ಹೋಳಲಿ ಗ್ರಾಮದ ಕೆರೆಯಲ್ಲಿ ಇಂದು ಸಂಜೆ ಈ ಘಟನೆ ನಡೆದಿದ್ದು, ಮೊದಲಿಗೆ ಕುರಿ ಮೇಯಿಸುತ್ತಿದ್ದ 46 ವರ್ಷದ ತಿಮ್ಮಪ್ಪ ತನ್ನ ಕುರಿಯನ್ನ ರಕ್ಷಣೆ ಮಾಡಲು ಕೆರೆಗೆ ಇಳಿದಿದ್ದಾನೆ. ಕುರಿ ಬಚಾವ್ ಆಗಿ ಬಂದಿದೆ. ಕುರಿಯನ್ನು ಕಾಪಾಡಲು ಹೋಗಿದ್ದ ತಿಮ್ಮಪ್ಪ ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಾನೆ. ಈ ವಿಚಾರ ತಿಳಿದು …
Read More »ಅಕ್ರಮವಾಗಿ ಸಂಗ್ರಹಿಸಿದ್ದ 420 ಮೂಟೆ ಯೂರಿಯಾ ಗೊಬ್ಬರವನ್ನು ಕೃಷಿ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ
ಕೋಲಾರ: ಅಕ್ರಮವಾಗಿ ಸಂಗ್ರಹಿಸಿದ್ದ 420 ಮೂಟೆ ಯೂರಿಯಾ ಗೊಬ್ಬರವನ್ನು ಕೃಷಿ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಮಾಲೂರು ಕೃಷಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ರೈತರಿಗೆ ಸರಬರಾಜು ಮಾಡಬೇಕಿದ್ದ ಯೂರಿಯಾ ಗೊಬ್ಬರವನ್ನು ಖಾಸಗಿ ಕಾರ್ಖಾನೆ ಗೋಡೌನ್‍ನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೃಷಿ ಅಧಿಕಾರಿಗಳು 420 ಮೂಟೆ ಗೊಬ್ಬರವನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮಾಲೂರು ಸಹಾಯಕ ಕೃಷಿ ಅಧಿಕಾರಿ ಚಂದ್ರಪ್ಪ ಅವರ …
Read More »ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಾರಾ ಕೆ.ಎಚ್ ಮುನಿಯಪ್ಪ?
ಕೋಲಾರ: ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ರಾಜಕಾರಣದತ್ತ ಗಮನ ಹರಿಸುವಂತೆ ಕೆಪಿಸಿಸಿ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಅಭಿಮತ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಹೇಳಿದ್ರು. ಕೋಲಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು ಜೊತೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲವೆಂದು ಸ್ಪಷ್ಟಪಡಿಸಿದ್ರು. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ …
Read More »7 ಬಾರಿಯ ಸಂಸದ ಕೆ.ಹೆಚ್. ಮುನಿಯಪ್ಪ ರಾಜ್ಯ ರಾಜಕಾರಣಕ್ಕೆ? ಕ್ಷೇತ್ರ ಯಾವುದು?
ಕೋಲಾರ: ನಿರಂತರವಾಗಿ 1991ರಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ಲೋಕಸಭೆಗೆ ಆಯ್ಕೆಯಾಗುತ್ತಾ ಬಂದಿರುವ ಅದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎದುರು ಪರಾಜಯಗೊಂಡ ಕೆ.ಹೆಚ್. ಮುನಿಯಪ್ಪ ಇದೀಗ ರಾಜ್ಯ ರಾಜಕಾರಣಕ್ಕೆ ಬರಲು ಒಲವು ತೋರಿದ್ದಾರೆ ಎನ್ನುತ್ತಿವೆ ಪಕ್ಷದ ಮೂಲಗಳು. ಕ್ಷೇತ್ರ ಯಾವುದು, ಡಿಕೆಶಿ ಮಾಸ್ಟರ್ ಪ್ಲ್ಯಾನ್ ಏನು? ಕೇಂದ್ರದ ಮಾಜಿ ಸಚಿವ, 72 ವರ್ಷದ ಕೆ.ಎಚ್. ಮುನಿಯಪ್ಪ ರಾಜ್ಯ ರಾಜಕಾರಣದತ್ತ ಮರಳಲು ಕೆಪಿಸಿಸಿ ಅಧ್ಯಕ್ಷ್ಯ ಡಿಕೆ ಶಿವಕುಮಾರ್ ಒತ್ತಾಯ ಕಾರಣ ಎನ್ನಲಾಗಿದೆ. …
Read More »ರೈಲ್ವೆ ಇಲಾಖೆ ಎಡವಟ್ಟು: ಕುರಿ ಮೇಯಿಸಲು ಹೋದವರು ಪಕ್ಕದ ಕಾಲುವೆಯಲ್ಲಿ ಮುಳುಗಿ ಸತ್ತೇ ಹೋದ್ರು..
ಕೋಲಾರ: ಬಾಳಿ ಬದುಕಬೇಕಿದ್ದ ಮೂವರು ಮಕ್ಕಳು ಜೀವ ಕಳೆದುಕೊಂಡಿದ್ದಾರೆ. ಕುರಿ ಮೇಯಿಸಲು ಹೋದವರು ಬಾರದ ಲೋಕಕ್ಕೆ ಹೋಗಿದ್ದರಿಂದ ಹೆತ್ತವರು ದಿಕ್ಕೇ ತೋಚದಂತಾಗಿದ್ದಾರೆ. ರೈಲ್ವೆ ಇಲಾಖೆಯವರು ಮಾಡಿರೋ ಅವೈಜ್ಞಾನಿಕ ಕಾಲುವೆ ಇದಕ್ಕೆಲ್ಲ ಕಾರಣವಾಗಿದೆ. ಮೊನ್ನೆ ಕೋಲಾರ ಜಿಲ್ಲೆ ಬಂಗಾರಪೇಟೆ ಸುತ್ತಮುತ್ತ ಭರ್ಜರಿ ಮಳೆ ಸುರಿದಿತ್ತು. ಪರಿಣಾಮ ಕುಂಬಾರಪಾಳ್ಯದ ರೈಲ್ವೆ ಅಂಡರ್ಪಾಸ್ನಲ್ಲಿ ನೀರು ತುಂಬಿತ್ತು. ಈ ವೇಳೆ ತಮ್ಮ ಮನೆಯಲ್ಲಿದ್ದ ಕುರಿಗಳನ್ನ ಮೇಯಿಸುತ್ತಾ ಅಲ್ಲೇ ಆಟವಾಡಿಕೊಂಡಿದ್ದ ಮಕ್ಕಳು ನೀರಿಗೆ ಇಳಿದಿದ್ದಾರೆ. ನೀರಿನ ಆಳ ತಿಳಿಯದೆ …
Read More »ನಮ್ಮ ಸಮಾಜದಲ್ಲಿ ದೇವಸ್ಥಾನದಲ್ಲಿದೇವರು ಕಾಣದೆ ಇದ್ದರು, ಜನರು ಕೈ ಮುಗಿತಾರೆ. ಆದರೆ, ಹೆಣ್ಣನ್ನ ನೋಡುವ ದೃಷ್ಟಿಯೇ ಬೇರೆಯಿದೆ:ಕೆಜಿಎಫ್ ಶಾಸಕಿ ರೂಪಾ ಶಶಿಧರ್
ಕೋಲಾರ : ನಮ್ಮ ಸಮಾಜದಲ್ಲಿ ದೇವಸ್ಥಾನದಲ್ಲಿದೇವರು ಕಾಣದೆ ಇದ್ದರು, ಜನರು ಕೈ ಮುಗಿತಾರೆ. ಆದರೆ, ಹೆಣ್ಣನ್ನ ನೋಡುವ ದೃಷ್ಟಿಯೇ ಬೇರೆಯಿದೆ. ಅದು ಬದಲಾದಲ್ಲಿ ಮಾತ್ರ ಹೆಣ್ಣಿನ ರಕ್ಷಣೆ ಸಾಧ್ಯ ಎಂದು ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಉತ್ತರ ಪ್ರದೇಶ ಘಟನೆಯನ್ನ ಕಟುವಾಗಿ ಖಂಡಿಸಿದ್ದಾರೆ. ಇನ್ನು ಯುವತಿಯ ಮೇಲೆರೆಗಿ ಮೃಗಗಳಂತೆ ಕೆಲವರು ವರ್ತಿಸಿದರೆ, ಪೊಲೀಸ್ ಅಧಿಕಾರಿಗಳು ರಾತ್ರೋ ರಾತ್ರಿ ಸುಟ್ಟು ಹಾಕಿದ್ದಾರೆ, ಅಲ್ಲಿ ಯಾರೂ ಕೇಳುವವರು ಮಾಡುವವರು ಇಲ್ಲ, ಸ್ವಂತ ತಂದೆ …
Read More »ಚಿನ್ನದ ನಿಕ್ಷೇಪ ವಿರುವುದು ಖಚಿತವಾದರೆ ಚಿನ್ನದ ಗಣಿ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ
ಕೋಲಾರ: ವಿಶ್ವಕ್ಕೆ ಚಿನ್ನವನ್ನು ಕೊಟ್ಟ ಚಿನ್ನದ ನಾಡಿನಲ್ಲಿ ಎರಡು ದಶಕಗಳ ನಂತರ ಮತ್ತೆ ಚಿನ್ನದ ಗಣಿ ಪುನರಾರಂಭಕ್ಕೆ ತೆರೆಮರೆಯಲ್ಲಿ ತಯಾರಿಗಳು ನಡೆಯುತ್ತಿವೆ. ಈಗಾಗಲೇ ಚಿನ್ನದ ಗಣಿಯ ಭೂಮಿ ಹಾಗೂ ಮಣ್ಣಿನ ಪರೀಕ್ಷೆಗಳು ನಡೆಯುತ್ತಿದ್ದು, ಚಿನ್ನದ ನಾಡಿನ ಗತ ವೈಭವ ಮತ್ತೆ ಮರುಕಳಿಸುತ್ತಾ ಅನ್ನೋ ನಿರೀಕ್ಷೆ ಗರಿಗೆದರಿವೆ. ಜಿಲ್ಲೆಯ ಕೆಜಿಎಫ್ ನಗರ ಚಿನ್ನ ಬೆಳೆಯುತ್ತಿದ್ದ ನೆಲ. ಒಂದು ಕಾಲದಲ್ಲಿ ಇಡೀ ವಿಶ್ವಕ್ಕೆ ಚಿನ್ನವನ್ನು ಕೊಟ್ಟಂತಹ ಇತಿಹಾಸವೇ ಇದೆ. ಆದರೆ ಚಿನ್ನ ಬರಿದಾಗಿ …
Read More »