Home / ಜಿಲ್ಲೆ / ಕೋಲಾರ / ನಿವಾರ್ ಅಬ್ಬರ- ಕೋಲಾರದಲ್ಲಿ ಭಾರೀ ಮಳೆ,

ನಿವಾರ್ ಅಬ್ಬರ- ಕೋಲಾರದಲ್ಲಿ ಭಾರೀ ಮಳೆ,

Spread the love

ಕೋಲಾರ: ಚೆನ್ನೈ ನಿವಾರ್ ಚಂಡ ಮಾರುತದ ಅಬ್ಬರ ಮುಂದುವರೆದಿದ್ದು, ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಪರಿಣಾಮ ಮನೆಯ ಗೋಡೆ ಕುಸಿದಿದ್ದು, ವ್ಯಕ್ತಿಯ ಕಾಲು ಮುರಿದಿದೆ.

ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ನಾಲ್ಕು ಮನೆ ಗೋಡೆ ಕುಸಿತವಾಗಿವೆ. ಪೆದ್ದೂರು ಗ್ರಾಮದ ಸೂರ್ಯ ನಾರಾಯಣ ಅವರ ಕಾಲು ಮುರಿದಿದೆ. ಮಲಗಿದ್ದಾಗ ಗೋಡೆ ಕುಸಿದ್ದರಿಂದ ಕಾಲು ಮುರಿದಿದೆ.

ಮುಷ್ಟೂರಲ್ಲಿ ನಾಗಮಣಿ, ವಿಜಿಯಮ್ಮ ಅವರ 2 ಮನೆಯ ಗೋಡೆ ಕುಸಿತವಾಗಿದೆ. ಅಬ್ಬೆಹಳ್ಳಿಯ ಭಾಗ್ಯಮ್ಮ ಅವರ ಮನೆಯ ಗೋಡೆ ಸಹ ಕುಸಿತವಾಗಿದೆ.ಜಿಲ್ಲೆಯ ಹಲವೆಡೆ ಬೆಳೆಗಳು ನಾಶವಾಗಿದ್ದು, ಮುಳಬಾಗಿಲು ತಾಲೂಕಿನ ಗುಮ್ಮಕಲ್ಲು, ಹೆಡಹಳ್ಳಿ ಬಳಿ ರೈತರ ಬೆಳೆಗಳು ನಾಶವಾಹಿವೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂಗಲಿ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಘಟನೆ ನಡೆದಿದೆ.

ಬಂಗಾಳಕೊಲ್ಲಿಯಲ್ಲಿ ವಾಯು ಭಾರ ಕುಸಿತ ಹಿನ್ನೆಲೆ ಜಿಲ್ಲೆಯಾದ್ಯಂತ ರಾತ್ರಿಯಿಡಿ ಮಳೆ ಸುರಿದಿದ್ದು, ರಾತ್ರಿ 9 ಗಂಟೆಯಿಂದ ನಿರಂತರವಾಗಿ ಮಳೆ ಸುರಿದಿದೆ. ನಾಳೆ ಸಹ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಕೋಲಾರ ಜಿಲ್ಲಾ ಕೃಷಿ ಹವಾಮಾನ ಘಟಕ ಮುನ್ಸೂಚನೆ ನೀಡಿದೆ. ಜಿಲ್ಲೆಯ ತಾಲೂಕುವಾರು ಮಳೆಯ ಪ್ರಮಾಣ ನೀಡಿ ಎಚ್ಚರಿಕೆ ನೀಡಿದೆ. ವಿಪರೀತ ಮಳೆಗೆ ಜನ ಮನೆಯಿಂದ ಹೊರ ಬರುತ್ತಿಲ್ಲ.

ತಾಲೂಕುವಾರು ಮಳೆ ಪ್ರಮಾಣ
ಮುಳಬಾಗಿಲಿನಲ್ಲಿ ಅತೀ ಹೆಚ್ಚು 137.2 ಮಿ.ಮೀ, ಬಂಗಾರಪೇಟೆ 133.4 ಮಿ.ಮಿ., ಕೋಲಾರ 123.1 ಮಿ.ಮೀ, ಶ್ರೀನಿವಾಸಪುರ 119.8 ಮಿ.ಮೀ ಹಾಗೂ ಮಾಲೂರಿನಲ್ಲಿ 95 ಮಿ.ಮೀ ಮಳೆಯಾಗಿದೆ.


Spread the love

About Laxminews 24x7

Check Also

ಬಿ.ವೈ.ವಿಜಯೇಂದ್ರ ‘ಮುಂದಿನ ಸಿಎಂ’; ಬಿಜೆಪಿ ಕಾರ್ಯಕರ್ತರಿಂದ ಘೋಷಣೆ

Spread the loveಕೋಲಾರ: ಬಿಜೆಪಿ ರಾಜ್ಯ ಉಪಾಧ್ಯಕ್ಷ್ಯ ಬಿ.ವೈ.ವಿಜಯೇಂದ್ರ ಅವರು ನ.2 ರಂದು ಕೋಲಾರಕ್ಕೆ ಆಗಮಿಸಿದ ವೇಳೆ ‘ಮುಂದಿನ ಸಿಎಂ’ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ