Breaking News

ರಾಜ್ಯ

ಬಳ್ಳಾರಿ ಸೆಂಟ್ರಲ್ ಜೈಲಿಗೆ ದರ್ಶನ್ ಶಿಫ್ಟ್

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ನಟ ದರ್ಶನ್‌ನ್ನು ಸ್ಥಳಾಂತರ ಮಾಡಲು ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಐಷರಾಮಿ ಸವಲತ್ತು ಮತ್ತು ರೌಡಿ ಸಹವಾಸ ಮಾಡಿದ್ದ ದರ್ಶನ್ ಫೋಟೋ, ವಿಡಿಯೋ ವೈರಲ್ ಆಗಿದ್ದವು. ಇದರಿಂದ ಸರ್ಕಾರಕ್ಕೆ ಮತ್ತು ಗೃಹ ಇಲಾಖೆಗೆ ಮುಜುಗರ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ರೇಣುಕಸ್ವಾಮಿ ಕೊಲೆ ಕೇಸಿನ ಆರೋಪಿಗಳನ್ನು ಸ್ಥಳಾಂತರ ಮಾಡಲು ಅನುಮತಿ ನೀಡುವಂತೆ ಪೊಲೀಸರು ಮತ್ತು ಜೈಲಾಧಿಕಾರಿಗಳು ಕೋರ್ಟ್ ಮೊರೆ ಹೋಗಿದ್ದರು. ಮನವಿಗೆ …

Read More »

ಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಪಕ್ಷಪಾತ ಮಾಡಬೇಡಿ:ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಪಕ್ಷಪಾತ ಮಾಡಬೇಡಿ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಮಾದರಿಯನ್ನಾಗಿ ಮಾಡುವ ಸಂಕಲ್ಪ ಮಾಡುವಂತೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪಪಂ ನೂತನ ಆಧ್ಯಕ್ಷ- ಉಪಾಧ್ಯಕ್ಷರಿಗೆ ಕಿವಿ ಮಾತು ಹೇಳಿದರು. ಕಲ್ಲೊಳ್ಳಿ ಪಟ್ಟಣ ಪಂಚಾಯತಿಗೆ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ- ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಅವರು, ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪಂಚಾಯತಿ ಕಮೀಟಿಯವರು ಶ್ರಮಿಸುವಂತೆ …

Read More »

ಧಾರವಾಡ: ಕರ್ನಾಟಕ ವಿ.ವಿ ಪದವಿ ಪರೀಕ್ಷೆ ಮುಂದೂಡಿಕೆ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯವು ಆಗಸ್ಟ್‌ 27ರಂದು ನಡೆಯಬೇಕಿದ್ದ ಪದವಿ ಪರೀಕ್ಷೆಗಳನ್ನು ಮುಂದೂಡಿದೆ. ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆ ಆಗಸ್ಟ್‌ 27ಕ್ಕೆ ನಿಗದಿಯಾಗಿರುವುದರಿಂದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.   ಮುಂದೂಡಿರುವ ಪದವಿ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿಯನ್ನು ವಿಶ್ವವಿದ್ಯಾಲಯದ www.kud.ac.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವ ಎನ್‌.ವೈ.ಮಟ್ಟಿಹಾಳ್‌ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

Read More »

ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ; ಕನ್ನಡತಿ ಶ್ರೇಯಾಂಕಾ ಪಾಟೀಲ್‌ಗೆ ಸ್ಥಾನ

ಅಕ್ಟೋಬರ್ 3ರಿಂದ ಆರಂಭವಾಗಲಿರುವ ಮಹಿಳಾ ಟಿ20 ವಿಶ್ವಕಪ್‌ಗೆ ಬಿಸಿಸಿಐ ಭಾರತ ತಂಡವನ್ನು ಆಯ್ಕೆ ಮಾಡಿದೆ. ಬಾಂಗ್ಲಾದೇಶದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಪಂದ್ಯಾವಳಿ ಅಲ್ಲಿ ದಂಗೆ ಶುರುವಾದ ಬಳಿಕ, ಯುಎಇಗೆ ಸ್ಥಳಾಂತರ ಮಾಡಿದೆ. ಭಾರತ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ್ದು, ಈ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಕನ್ನಡತಿ ಶ್ರೇಯಾಂಕಾ ಪಾಟೀಲ್ ಕೂಡ ಟಿ20 ವಿಶ್ವಕಪ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಹರ್ಮನ್‌ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಮೃತಿ ಮಂದಾನಗೆ ತಂಡದ ಉಪನಾಯಕಿ ಪಟ್ಟ …

Read More »

ಕೈದಿಗಳಿಗೆ ಇನ್ಮುಂದೆ ‘ಹಾಟ್‌ಬಾಕ್ಸ್‌’ನಲ್ಲಿ ಊಟ

ಮೈಸೂರು: ಇಲ್ಲಿನ ಕೇಂದ್ರ ಕಾರಾಗೃಹದ ಕೈದಿಗಳಿಗೆ ನೀಡುವ ಊಟವನ್ನು ಇದೇ ಮೊದಲ ಬಾರಿಗೆ ‘ಹಾಟ್‌ಬಾಕ್ಸ್‌’ನಲ್ಲಿ ಕೊಡುವುದಕ್ಕೆ ತಯಾರಿ ಆರಂಭವಾಗಿದೆ. ‘ಈ ಉಪಕ್ರಮದ ಮೂಲಕ ತಟ್ಟೆಯಲ್ಲಿ ಊಟ ಪಡೆಯುವುದು, ತಣ್ಣಗಾದ ಆಹಾರ ಸೇವಿಸುವ ಪ್ರಮೇಯ ತಪ್ಪಲಿದೆ’ ಎಂಬ ಆಶಯವನ್ನು ಇಲಾಖೆ ಹೊಂದಿದೆ. ಸದ್ಯ 810 ಕೈದಿಗಳಿರುವ ಕಾರಾಗೃಹದಲ್ಲಿ ನಿತ್ಯ ಸಂಜೆ 6.30ರೊಳಗೆ ರಾತ್ರಿ ಊಟ ವಿತರಿಸಲಾಗುತ್ತದೆ. ತಟ್ಟೆಗಳಲ್ಲಿ ಊಟ ಪಡೆಯುವ ಕೈದಿಗಳು ರಾತ್ರಿ ವೇಳೆ ಊಟ ಮಾಡುತ್ತಿದ್ದರು. ಅಷ್ಟರ ವೇಳೆಗೆ ಊಟವು …

Read More »

ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಆಟೋ ಚಾಲಕನಿಂದ ಅತ್ಯಾಚಾರ

ಮುಂಬೈ : ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಸೋಮವಾರ ಮಹಿಳೆ ತನ್ನ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರತ್ನಗಿರಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿನಿಗೆ ಆಟೋ ರಿಕ್ಷಾ ಚಾಲಕ ತನ್ನ ನೀರಿನಲ್ಲಿ ಮತ್ತು ಬೆರೆಸಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಪೊಲೀಸರ ಪ್ರಕಾರ, ಆಟೋ ರಿಕ್ಷಾದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ, ವಿದ್ಯಾರ್ಥಿನಿ ಚಾಲಕನಿಂದ ನೀರು …

Read More »

ಕರ್ನಾಟಕ ಸೇರಿ ದೇಶದಲ್ಲಿ 21 ನಕಲಿ ವಿಶ್ವವಿದ್ಯಾಲಯಗಳನ್ನು ಗುರುತಿಸಿದ `UGC’

ನವದೆಹಲಿ : ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ದೇಶದಲ್ಲಿ 21 ನಕಲಿ ವಿಶ್ವವಿದ್ಯಾಲಯಗಳನ್ನು ಗುರುತಿಸಿದೆ. ಇವುಗಳಲ್ಲಿ ದೆಹಲಿಯಲ್ಲಿ 8 ಮತ್ತು ಕರ್ನಾಟಕದಲ್ಲಿ ಒಂದು ನಕಲಿ ವಿಶ್ವವಿದ್ಯಾಲಯಗಳಿವೆ. ಕಳೆದ ವರ್ಷ 20 ನಕಲಿ ವಿಶ್ವವಿದ್ಯಾಲಯಗಳಿದ್ದು, ಈ ವರ್ಷ ಅವುಗಳ ಸಂಖ್ಯೆ 21ಕ್ಕೆ ತಲುಪಿದೆ. ಈ ವಿಶ್ವವಿದ್ಯಾಲಯಗಳು ನೀಡುವ ಪದವಿಗಳು ಮಾನ್ಯವಾಗಿಲ್ಲ ಎಂದು ಹೇಳಿದೆ. ಮೇಲಾಗಿ, ಈ ನಕಲಿ ವಿಶ್ವವಿದ್ಯಾನಿಲಯಗಳು ಪದವಿಗಳನ್ನು ನೀಡಿದ್ದರೂ, ಉದ್ಯೋಗದ ಉದ್ದೇಶಕ್ಕಾಗಿ ಅವುಗಳನ್ನು ಗುರುತಿಸಲಾಗುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ. …

Read More »

KAS’ ಪೂರ್ವಭಾವಿ ಪರೀಕ್ಷೆ : ಬೆಳಗಾವಿಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂದು ಪರೀಕ್ಷಾರ್ಥಿಗಳ ಪ್ರತಿಭಟನೆ!

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆ ಇಂದು ನಡೆಯುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಆರೋಪಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.   ಬೆಳಗಾವಿಯ ಅಂಜುಮನ್ ಕಾಲೇಜಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಅಲ್ಲದೇ ಪ್ರಶ್ನೆ ಪತ್ರಿಕೆ ಕೊಡಲು 15 ನಿಮಿಷ ತಡ ಮಾಡಲಾಗಿದೆ. ಒಎಂಆರ್ ಶೀಟ್ ಕೂಡ ಅದಲು ಬದಲಾಗಿದೆ ಎಂದು ಅಭ್ಯರ್ಥಿಗಳು ಪ್ರತಿಭಟನೆ ನಡೆಸಿರುವ …

Read More »

ನಮ್ಮ ಸರ್ಕಾರ ಇರುವವರೆಗೂ `ಗೃಹಲಕ್ಷ್ಮಿ’ ಯೋಜನೆ ನಿಲ್ಲಲ್ಲ : CM

ಬೆಂಗಳೂರು : ಗೃಹಲಕ್ಷ್ಮಿ ಯೋಜನೆ ಇಂದು ಬಹಳಷ್ಟು ಕುಟುಂಬಗಳ ಪಾಲಿಗೆ ಅಕ್ಷರಶಃ ವರದನವಾಗಿದೆ. ನಮ್ಮ ಸರ್ಕಾರ ಇರುವ ತನಕ ಈ ಯೋಜನೆ ನಿಲ್ಲಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಸಿಎಂ ಸಿದ್ದರಾಮಯ್ಯ, ಗೃಹಲಕ್ಷ್ಮಿಯರಿಗೆ ಬೆಲೆಯೇರಿಕೆಯ ಬಿಸಿ ತಟ್ಟದಿರಲಿ ಎಂಬ ಸದುದ್ದೇಶದಿಂದ ನಾವು ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆ ಇಂದು ಬಹಳಷ್ಟು ಕುಟುಂಬಗಳ ಪಾಲಿಗೆ ಅಕ್ಷರಶಃ ವರದಾನವಾಗಿದೆ. ಗೃಹಲಕ್ಷ್ಮಿಯ ಹಣ ಮಕ್ಕಳ ವಿದ್ಯಾಭ್ಯಾಸ, ಮನೆಗೆ …

Read More »

ನಕಲಿ ಟಿಕೆಟ್ ಸೃಷ್ಟಿಸಿ ಚಾರಣಕ್ಕೆ ಅವಕಾಶ: ಅರಣ್ಯಾಧಿಕಾರಿ ಅಮಾನತು

ಚಿಕ್ಕಮಗಳೂರು: ನಕಲಿ ಟಿಕೆಟ್ ಸೃಷ್ಟಿಸಿ ಚಾರಣಕ್ಕೆ ಅವಕಾಶ ನೀಡಿದ ಆರೋಪದ ಮೇಲೆ ಕೊಪ್ಪ ವಿಭಾಗದ ಕಳಸ ವಲಯದ ಉಪ ವಲಯ ಅರಣ್ಯ ಅಧಿಕಾರಿ ಚಂದನಗೌಡ ದ್ಯಾಮನಗೌಡರ ಅವರನ್ನು ಅರಣ್ಯ ಇಲಾಖೆ ಸೋಮವಾರ ಅಮಾನತು ಮಾಡಿ ಆದೇಶ ಹೊರಡಿಸಿದೆ. ಮೂಡಿಗೆರೆ ತಾಲೂಕಿನ ರಾಣಿಝರಿ ಪ್ರವಾಸಿ ತಾಣದ ಸಮೀಪದಿಂದ ಬಲ್ಲಾಳ ರಾಯನದುರ್ಗ ಮತ್ತು ಬಂಡಾಜೆ ಜಲಪಾತ ವೀಕ್ಷಣೆಗೆ ಚಾರಣಕ್ಕೆ ತೆರಳಲು ಆನ್ಲೈನ್ ಮೂಲಕ 250ರೂ. ಪಾವತಿಸಿ ಕಾಯ್ದಿರಿಸಲು ಅವಕಾಶವಿದೆ. ಈ ಚಾರಣದ ಉಸ್ತುವಾರಿಯನ್ನು ಅರಣ್ಯ …

Read More »