Breaking News

ನೇಹಾ ಹಿರೇಮಠ ಕೊಲೆ ಪ್ರಕರಣ: ಐದನೇ ಬಾರಿಯೂ ಹಂತಕನ ಜಾಮೀನು ಅರ್ಜಿ ರಿಜೆಕ್ಟ್..!

Spread the love

ನೇಹಾ ಹಿರೇಮಠ ಹತ್ಯೆ ನಡೆದು 2 ವರ್ಷವೇ ಕಳೆದಿದೆ. ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ನ್ಯಾಯ ಕೊಡಿಸುತ್ತೇವೆ ಎಂಬ ಸರ್ಕಾರ ಭರವಸೆ ಹುಸಿಯಾಗಿದೆ. ಆದರೆ ನೇಹಾ ಪರ ವಕೀಲರ ಪರಿಶ್ರಮದಿಂದ ಹಂತಕನಿಗೆ ಐದನೇ ಬಾರಿಯೂ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

ಹುಬ್ಬಳ್ಳಿಯ ಬಿವಿಬಿ ಕಾಲೇಜ್‌ನಲ್ಲಿಯೇ ಹಾಡಹಗಲೇ ಭೀಕರವಾಗಿ ಹತ್ಯೆಗೀಡಾಗಿದ್ದ ನೇಹಾ ಹಿರೇಮಠ, ಕೊಲೆಯಾಗಿ ಏಪ್ರಿಲ್ 18ಕ್ಕೆ ಎರಡು ವರ್ಷ ಕಳೆದಿದೆ. ಆದ್ರೆ, ಈ ವರೆಗೂ ನೇಹಾಳ ಸಾವಿಗೆ ನ್ಯಾಯ ದೊರಕಿಲ್ಲ. ತ್ವರಿತ ನ್ಯಾಯಾಲಯ ಸ್ಥಾಪಿಸಿ ಶೀಘ್ರ ನ್ಯಾಯ ಕೊಡಿಸುತ್ತೇವೆಂದಿದ್ದ ಸರ್ಕಾರದ ಭರವಸೆ ಹುಸಿಯಾಗಿದೆ.

2024 ರ ಏಪ್ರಿಲ್ 18 ರಂದು ನೇಹಾಳನ್ನು ಫಯಾಜ್ ಬರ್ಬರವಾಗಿ ಇರಿದು ಹತ್ಯೆ ಮಾಡಿದ್ದ. ಈ ಹತ್ಯೆ ರಾಜ್ಯವಷ್ಟೇ ಅಲ್ಲ, ದೇಶಾದ್ಯಂತ ಸಂಚಲನ ಮೂಡಿಸಿತ್ತು. ದೇಶಾದ್ಯಂತ ರಸ್ತೆ ತಡೆ, ಪ್ರತಿಭಟನೆಗಳೆಲ್ಲ ನಡೆದು ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ರಾಜಕೀಯ ಸಂಘರ್ಷಕ್ಕೂ ಈ ಪ್ರಕರಣ ನಾಂದಿಯಾಗಿತ್ತು. ಲೋಕಸಭೆ ಚುನಾವಣೆ ವೇಳೆಯೇ ಆಗಿದ್ದ ಈ ಕೊಲೆ ಕಾಂಗ್ರೆಸ್ ಸರ್ಕಾರವನ್ನು ಅಕ್ಷರಶಃ ನಡುಗಿಸಿತ್ತು. ಆದರೆ ನೇಹಾ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಲು ವಕೀಲರಾದ ರಾಘವೇಂದ್ರ ಮುತಗಿಕರ ವಕೀಲರು ಸತತ ಪರಿಶ್ರಮ ನಡೆಸಿದ್ದು, ಐದನೇ ಬಾರಿಯೂ ಹಂತಕನ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

ಇನ್ನೂ ಸಾರ್ವಜನಿಕರ ಒತ್ತಡಕ್ಕೆ ಮಣಿದ ಸರ್ಕಾರ. ಈ ಪ್ರಕರಣವನ್ನು ಅತ್ಯಂತ ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಭರವಸೆ ನೀಡಿತ್ತು‌. ಆದ್ರೆ, ಅದು ಭರವಸೆಯಾಗಿಯೇ ಉಳಿಯಿತು. ಈವರೆಗೂ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆಯಾಗಿಲ್ಲ. ಆದರೆ ಕೋರ್ಟ್ ನಲ್ಲಿ ಫಯಾಜ್ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿರುವ ಅರ್ಜಿಗಳು ಸತತವಾಗಿ ಐದು ಬಾರಿ ತಿರಸ್ಕೃತಗೊಂಡಿದ್ದು, ನೇಹಾ ಪರ ವಕೀಲರಾದ ರಾಘವೇಂದ್ರ ಮುತಗಿಕರ ಹಂತಕನ ಜಾಮೀನು ಅರ್ಜಿ ವಜಾ ಮಾಡಲು ಸಾಕಷ್ಟು ಪ್ರತಿವಾದ ಮಂಡಿಸಿ ಯಶಸ್ವಿಯಾಗಿದ್ದಾರೆ.


Spread the love

About Laxminews 24x7

Check Also

ಬೌರಿಂಗ್ ಆಸ್ಪತ್ರೆ ದುರಂತ: ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜಿಬಿಎ ಆಯುಕ್ತರುಗಳ ಸಭೆ

Spread the loveಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದು ಏಳು ಜನರ ಸಾವಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಾರ್ಯಪಾಲಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ