ಶಾಸಕ ಬಸನಗೌಡ ಪಾಟೀಲ, ಯತ್ನಾಳ ವಿರುದ್ಧ ಒಮ್ಮೆ ಸ್ಪರ್ಧಿಸುವ ಇರಾದೆ ಇದೆ:ಸಚಿವ ಶಿವಾನಂದ ಪಾಟೀಲ ವಿಜಯಪುರ : ಕೆಲ ದಿನಗಳ ಹಿಂದೆ ಅಣ್ಣ ಬಸವಣ್ಣನವರ ಕುರಿತು ಅಪಮಾನಕರ ರೀತಿ ಮಾತನಾಡಿದ್ದ ಹುಚ್ಚು ಮನಸ್ಥಿತಿಯ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಇದೀಗ ಇಸ್ಲಾಂ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಪ್ರವಾದಿ ಮಹಮ್ಮದ್ ಪೈಗಂಭರ ಕುರಿತು ಅವಮಾನಕರ ಮಾತನಾಡಿದ್ದಾರೆ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ …
Read More »ಸಿದ್ದರಾಮಯ್ಯರಿಗೆ ‘ದಿಲ್ ಸೇ ಪಾಕ್’ ಪ್ರಶಸ್ತಿ ನೀಡಬೇಕು: ಜನಾರ್ದನರೆಡ್ಡಿ
ಗಂಗಾವತಿ (ಕೊಪ್ಪಳ): ಪಾಕಿಸ್ತಾನದ ಜೊತೆ ವಿರುದ್ದ ಯುದ್ದ ಬೇಡ ಎಂದು ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಓಲೈಕೆ ರಾಜಕೀಯದ ಕೊನೆಯ ಘಟ್ಟ ತಲುಪಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಪಾಕಿಸ್ತಾನದಿಂದ `ದಿಲ್ ಸೇ ಪಾಕಿಸ್ತಾನ’ ಪ್ರಶಸ್ತಿಗೆ ಭಾಜನರಾಗಬಹುದು ಎಂದು ಗಂಗಾವತಿ ಶಾಸಕ ಜಿ. ಜನಾರ್ದನರೆಡ್ಡಿ, ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಪಾಕಿಸ್ತಾನದೊಂದಿಗೆ ಯುದ್ಧ ಬೇಡ ಎಂದು ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರ ಹೇಳಿಕೆಗಳು ಪಾಕಿಸ್ತಾನದ ಮಾಧ್ಯಮಗಳಲ್ಲಿ ಸಿಎಂ …
Read More »ಹೊಲದಲ್ಲಿ ಪೂಜೆಗೆ ತೆರಳಿದ್ದ ಮಗ ಸಿಡಿಲಿಗೆ ಬಲಿ
ರಾಯಚೂರು: ಸಿಡಿಲು ಬಡಿದು ಮಗ ಸಾವನ್ನಪ್ಪಿ, ತಾಯಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಕೆ.ಗುಡದಿನ್ನಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಸಾಯಣ್ಣ(55) ಸಿಡಿಲಿಗೆ ಬಲಿಯಾದ ವ್ಯಕ್ತಿಯೆಂದು ಗುರುತಿಸಲಾಗಿದೆ. ಅವರ ತಾಯಿ ಲಕ್ಷ್ಮಮ್ಮ ಗಾಯಗೊಂಡಿದ್ದಾರೆ. ಅಮಾವಾಸ್ಯೆ ಹಿನ್ನೆಲೆಯಲ್ಲಿ ತಾಯಿ, ಮಗ ಜಮೀನಿನಲ್ಲಿನ ತಾಯಮ್ಮನ ಗುಡಿಗೆ ಪೂಜೆ ಸಲ್ಲಿಸಲು ಹೋಗಿದ್ದರು. ಈ ಸಮಯದಲ್ಲಿ ಸಿಡಿಲು ಅಪ್ಪಳಿಸಿ ಸಾಯಣ್ಣ ಗುಡಿಯಲ್ಲೇ ಸಾವನ್ನಪ್ಪಿದ್ದಾರೆ. ತಾಯಿ 70 ವರ್ಷದ ಲಕ್ಷ್ಮಮ್ಮಗೆ ಗಂಭೀರ ಗಾಯಗಳಾಗಿದ್ದು, ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. …
Read More »ಧರ್ಮದ ಆಧಾರದ ಮೇಲೆ ಜನರನ್ನು ಟಾರ್ಗೆಟ್ ಮಾಡಿರುವುದು ಕ್ರೂರ ಕೃತ್ಯ : ಸಚಿವ ಆರ್. ಬಿ. ತಿಮ್ಮಾಪುರ
ಬೆಂಗಳೂರು : ಧರ್ಮದ ಆಧಾರದ ಮೇಲೆ ಜನರನ್ನು ಗುರುತಿಸಿ ಟಾರ್ಗೆಟ್ ಮಾಡಿದ್ದು ಕ್ರೂರ ಕೃತ್ಯವಾಗಿದೆ ಎಂದು ಸಚಿವ ಆರ್. ಬಿ. ತಿಮ್ಮಾಪುರ ಪಹಲ್ಗಾಮ್ನಲ್ಲಿ ಏಪ್ರಿಲ್ 22 ರಂದು ನಡೆದ ಉಗ್ರರ ಕೃತ್ಯವನ್ನು ಇಂದು ಖಂಡಿಸಿದ್ದಾರೆ. ನಿನ್ನೆ ಬಾಗಲಕೋಟೆಯಲ್ಲಿ ಪಹಲ್ಗಾಮ್ ಉಗ್ರರ ಅಟ್ಟಹಾಸ ವಿಚಾರವಾಗಿ ಮಾತನಾಡುತ್ತಾ, ಧರ್ಮ ಕೇಳಿ ಹೊಡೆಯೋಕಾಗುತ್ತಾ, ಧರ್ಮ ಕೇಳಿ ಹೊಡೆಯುವಷ್ಟು ವ್ಯವಧಾನ ಯಾರಿಗೂ ಇಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ …
Read More »ಮನೆ ಬಳಿ ಪ್ರತ್ಯಕ್ಷವಾದ 15 ಅಡಿ ಉದ್ದದ ಮೊಸಳೆಯನ್ನು ಯುವಕರ ತಂಡ ಹರಸಾಹಸಪಟ್ಟು ಸೆರೆ ಹಿಡಿದು, ಅರಣ್ಯ ಇಲಾಖೆಗೆ ಒಪ್ಪಿಸಿದೆ.
ಚಿಕ್ಕೋಡಿ: ತೋಟದ ಮನೆ ಬಳಿ ಬಂದ ಬೃಹತ್ ಗಾತ್ರದ ಮೊಸಳೆಯನ್ನು ಯುವಕರು ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿರುವ ಘಟನೆ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನಡೆದಿದೆ. ಸುಟ್ಟಟ್ಟಿ ಗ್ರಾಮದ ಆಲಗೂರ ತೋಟದ ಮನೆ ಬಳಿ 15 ಅಡಿ ಉದ್ದದ ಮೊಸಳೆ ದಿಢೀರ್ ಪ್ರತ್ಯಕ್ಷವಾಗಿ, ಆತಂಕ ಸೃಷ್ಟಿಸಿದೆ. ನಂತರ ನಾಲ್ಕೈದು ಯುವಕರು ಸೇರಿಕೊಂಡು ಮೊಸಳೆಯನ್ನು ಕೃಷಿ ಜಮೀನಿನ ಕಡೆ ಕೊಂಡೊಯ್ದು ಹಗ್ಗದಲ್ಲಿ ಕಟ್ಟಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. …
Read More »ರಿಕ್ಕಿ ರೈ ಮೇಲಿನ ಗುಂಡಿನ ದಾಳಿ: ವಿಚಾರಣೆಗೆ ಹಾಜರಾದ ಮುತ್ತಪ್ಪ ರೈ ಎರಡನೇ ಪತ್ನಿ
ರಾಮನಗರ: ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣದ ಎರಡನೇ ಆರೋಪಿಯಾಗಿರುವ ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ ಅವರು ವಿಚಾರಣೆಗಾಗಿ ಬಿಡದಿ ಪೊಲೀಸ್ ಠಾಣೆಗೆ ಭಾನುವಾರ ಹಾಜರಾಗಿದ್ದರು. ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ಅನುರಾಧ ಅವರು ಎ2 ಆರೋಪಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಭಾನುವಾರ ತಮ್ಮ ವಕೀಲರ ಜೊತೆ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಬಿಡದಿ …
Read More »ಬೆಳಗಾವಿಯ ಮೇಲ್ಸೇತುವೆಗೆ “ವಿಶ್ವಗುರು ಜಗಜ್ಯೋತಿ ಬಸವೇಶ್ವರ ರೇಲ್ವೇ ಮೇಲ್ಸೇತುವೆ” ಎಂದು ನಾಮಕರಣ…
ಬೆಳಗಾವಿಯ ಮೇಲ್ಸೇತುವೆಗೆ “ವಿಶ್ವಗುರು ಜಗಜ್ಯೋತಿ ಬಸವೇಶ್ವರ ರೇಲ್ವೇ ಮೇಲ್ಸೇತುವೆ” ಎಂದು ನಾಮಕರಣ… ಬೆಳಗಾವಿಯ ಮೇಲ್ಸೇತುವೆಗೆ ಬಸವ ಜಯಂತಿಯ ಹಿನ್ನೆಲೆ “ವಿಶ್ವಗುರು ಜಗಜ್ಯೋತಿ ಬಸವೇಶ್ವರ ರೇಲ್ವೇ ಮೇಲ್ಸೇತುವೆ” ಎಂದು ನಾಮಕರಣ ಮಾಡಿ, ನಾಮಫಲಕವನ್ನು ಅನಾವರಣಗೊಳಿಸಲಾಯಿತು. ಬೆಳಗಾವಿಯ ಮೇಲ್ಸೇತುವೆಗೆ ಬಸವ ಜಯಂತಿಯ ಹಿನ್ನೆಲೆ “ವಿಶ್ವಗುರು ಜಗಜ್ಯೋತಿ ಬಸವೇಶ್ವರ ರೇಲ್ವೇ ಮೇಲ್ಸೇತುವೆ” ಎಂದು ನಾಮಕರಣ ಮಾಡಿ, ಸಂಸದ ಜಗದೀಶ್ ಶೆಟ್ಟರ್, ದಕ್ಷಿಣ ಶಾಸಕ ಅಭಯ್ ಪಾಟೀಲ್, ಕೆ.ಎಲ್.ಇ. ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ, ಮಾಜಿ …
Read More »ಗೋಕಾಕ : ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವಕನಿಗೆ ಥಳಿತ…
ಗೋಕಾಕ : ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವಕನಿಗೆ ಥಳಿತ….. ಪಿಎಸ್ಐ ವಿರುದ್ಧ ಎಸ್ಪಿಗೆ ದೂರು ನೀಡಿದ ಯುವಕ… ಪೆಹಲ್ಗಾಂ ಘಟನೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವಕನನ್ನು ಥಳಿಸಿದ್ದರಿಂದ ಪಿಎಸ್ಐ ವಿರುದ್ಧ ಯುವಕ ಎಸ್ ಪಿ ಗೆ ದೂರು ನೀಡಿದ್ದಾನೆ ಪಹಲ್ಗಾಂನಲ್ಲಿ ಗುಂಡಿನ ದಾಳಿಯ ನಂತರ ಸ್ಥಳೀಯ ಮುಸ್ಲಿಮರು ಹತ್ಯೆಯಾದವರ ಕುಟುಂಬ ಸದಸ್ಯರಿಗೆ ಸಹಾಯ ಸಹಕಾರ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗೋಕಾಕ್ ನಿವಾಸಿ ಶಾನುಲ್ ಸೌದಾಗರ ಎಂಬ …
Read More »ತ್ರಯಂಬಕೇಶವದಿಂದ ಕಾಲ್ನಡಿಗೆಯಲ್ಲಿ ವಿಜಯಪುರಕ್ಕೆ ಆಗಮಿಸಿದ ಬಸವ ಜ್ಯೋತಿ
ತ್ರಯಂಬಕೇಶವದಿಂದ ಕಾಲ್ನಡಿಗೆಯಲ್ಲಿ ವಿಜಯಪುರಕ್ಕೆ ಆಗಮಿಸಿದ ಬಸವ ಜ್ಯೋತಿ ಬಸವ ಜಯಂತಿ ಹಿನ್ನೆಲೆಯಲ್ಲಿ ವಿಜಯಪುರ ನಗರಕ್ಕೆ ಬಸವೇಶ್ವರ ಜ್ಯೋತಿ ಯಾತ್ರೆ ಆಗಮಿಸಿತು. ಚಿಕ್ಕೋಡಿ ತಾಲ್ಲೂಕಿನ ಮುಗಳಿ ಗ್ರಾಮದ ಬಸವೇಶ್ವರ ದೇವಸ್ಥಾನ ಯುವ ಕಮಿಟಿಯ 50 ಜನ ಮಹಾರಾಷ್ಟ್ರದ ತೃಯಂಭಕೇಶವ ಕ್ಷೇತ್ರದಿಂದ “ಬಸವ ಜ್ಯೋತಿ” ಯನ್ನು ಕಾಲ್ನಡಿಗೆ ಮುಖಾಂತರ ಜ್ಞಾನ ಯೋಗಾಶ್ರಮಕ್ಕೆ ಆಗಮಿಸಿದರು. ಪೂಜ್ಯ ಬಸವಲಿಂಗ ಸ್ವಾಮೀಜಿಗಳು ಜ್ಯೋತಿಯನ್ನು ಸ್ವಾಗತಿಸಿ ಯುವಕರಿಗೆ ಬಸವೇಶ್ವರ ವಚನ ಸಾಹಿತ್ಯದ ಸಂದೇಶ ನೀಡಿದರು.ಈ ಸಂದರ್ಭದಲ್ಲಿ ಅಖಿಲ ಭಾರತ …
Read More »ಪ್ರೇಮ ವೈಫಲ್ಯ ಬ್ರಿಡ್ಜ್ ಮೇಲಿಂದ ಬಿದ್ದು ಯುವಕ ಆತ್ಮಹತ್ಯೆ
ಪ್ರೇಮ ವೈಫಲ್ಯ ಬ್ರಿಡ್ಜ್ ಮೇಲಿಂದ ಬಿದ್ದು ಯುವಕ ಆತ್ಮಹತ್ಯೆ ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಯುವಕನೋರ್ವ ದೇವರಗುಡಿ ಹಾಳ ರಸ್ತೆಯ ಹತ್ತಿರದ ನ್ಯಾಶನಲ್ ಹೈವೇ ಬ್ರಿಡ್ಜ್ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕಿಕೊಂಡ ಘಟನೆ ನಡೆದಿದೆ. ನಗರದ ಹೆಗ್ಗೆರಿ ಜಗದೀಶ್ ನಗರ ನಿವಾಸಿ 21 ವರ್ಷದ ಅವಿನಾಶ್ ಮುದ್ದಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಯುವತಿಯು ಪ್ರೇಮದ ವಿಷಯದಲ್ಲಿ ನಿರಾಕರಣೆ ಮಾಡಿದ ವಿಚಾರಕ್ಕೆ ಮನನೊಂದು ಸಾವಿನ ಹಾದಿ ಹಿಡಿದಿದ್ದಾನೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ …
Read More »
Laxmi News 24×7