ತ್ರಯಂಬಕೇಶವದಿಂದ ಕಾಲ್ನಡಿಗೆಯಲ್ಲಿ ವಿಜಯಪುರಕ್ಕೆ ಆಗಮಿಸಿದ ಬಸವ ಜ್ಯೋತಿ
ಬಸವ ಜಯಂತಿ ಹಿನ್ನೆಲೆಯಲ್ಲಿ ವಿಜಯಪುರ ನಗರಕ್ಕೆ ಬಸವೇಶ್ವರ ಜ್ಯೋತಿ ಯಾತ್ರೆ ಆಗಮಿಸಿತು. ಚಿಕ್ಕೋಡಿ ತಾಲ್ಲೂಕಿನ ಮುಗಳಿ ಗ್ರಾಮದ ಬಸವೇಶ್ವರ ದೇವಸ್ಥಾನ ಯುವ ಕಮಿಟಿಯ 50 ಜನ ಮಹಾರಾಷ್ಟ್ರದ ತೃಯಂಭಕೇಶವ ಕ್ಷೇತ್ರದಿಂದ “ಬಸವ ಜ್ಯೋತಿ” ಯನ್ನು ಕಾಲ್ನಡಿಗೆ ಮುಖಾಂತರ ಜ್ಞಾನ ಯೋಗಾಶ್ರಮಕ್ಕೆ
ಆಗಮಿಸಿದರು. ಪೂಜ್ಯ ಬಸವಲಿಂಗ ಸ್ವಾಮೀಜಿಗಳು ಜ್ಯೋತಿಯನ್ನು ಸ್ವಾಗತಿಸಿ ಯುವಕರಿಗೆ ಬಸವೇಶ್ವರ ವಚನ ಸಾಹಿತ್ಯದ ಸಂದೇಶ ನೀಡಿದರು.ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ವಿ ಸಿ ನಾಗಠಾಣ,ಶ್ರೀ ಸಿದ್ದೇಶ್ವರ ಸಂಸ್ಥೆಯ ಉಪಾಧ್ಯಕ್ಷ ರಾದ ಶ್ರೀ ಸಂಗು ಸಜ್ಜನ ಯಾದವಾಡ,ಶರಣ ಸಾಹಿತ್ಯ ಪರಿಷತ್ತಿನ ಜಂಬುನಾಥ ಕಂಚಾಣಿ,ದಾನಮ್ಮದೇವಿ ದೇವ ಸ್ಥಾನ ಕಮಿಟಿಯ ಅಧ್ಯಕ್ಷ ರಾದ ಅಪ್ಪು
ಇಟ್ಟಂಗಿ,ರುದ್ರಗೌಡ ಪಾಟೀಲ,ರವೀಂದ್ರ ಕತ್ತಿ ಸುಭಾಷ ಕರಕಬ್ಬಿ, ದುಗ೯ದ DI,ರವಿ ಸಿಂಹಾ ಸನ ಶಿವರಾಯಗೋಲ ಸಿದ್ದು ಕ್ಯಾತಪ್ಪನವರ ಸತೀಶ ಹಾಗೂ ಅಪಾರ ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಂಡು ರಸ್ತೆಯ ಮೂಲಕ
ಆನಂದ ನಗರದ ಶ್ರೀ ರುದ್ರಗೌಡ ಪಾಟೀಲ ಅವರ ನೂತನ ಮನೆಗೆ ಪ್ರವೇಶ ಮಾಡಿ ಶ್ರೀ ದಾನಮ್ಮದೇವಿ ದೇವಸ್ಥಾನದಲ್ಲಿ ಮಹಾ ಮಂಗಳಾರತಿ ಗೊಂಡಿತು
Laxmi News 24×7