Breaking News

ರಾಜ್ಯ

ವರುಣನ ಆರ್ಭಟದಿಂದ ಕೊರೊನಾ ನಿಯಂತ್ರಣವನ್ನು ಮರೆತುಬಿಡ್ತಾ ರಾಜ್ಯ ಸರ್ಕಾರ..?

ಬೆಂಗಳೂರು: ರಾಜ್ಯದ ನಾನಾ ಭಾಗಗಳಲ್ಲಿ ವ್ಯಾಪಕ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ನಿರ್ಮಾಣ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೊರೊನಾ ಸೋಂಕಿನ ನಿಯಂತ್ರಣವನ್ನು ಮರೆತಂತಿದೆ. ಸೋಂಕಿನ ನಿಯಂತ್ರಣದಲ್ಲಿದ್ದ ರಾಜ್ಯ ಸರ್ಕಾರಕ್ಕೆ ಸದ್ಯ ಪ್ರವಾಹ ಮತ್ತೊಂದು ಹೊಡೆತವನ್ನು ನೀಡಿದೆ. ರಾಜ್ಯದ ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕೆಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಮೊದಲು ಜನ ಮತ್ತು ಜಾನುವಾರಗಳನ್ನು ರಕ್ಷಿಸುವುದು …

Read More »

ಬೆಳಗಾವಿ: ಮತ್ತೆ 392 ಮಂದಿಗೆ ಕೋವಿಡ್ ದೃಢ

ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 392 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,498ಕ್ಕೆ ಏರಿದೆ. ಇಲ್ಲಿನ ವಿವಿಧ ಬಡಾವಣೆಗಳು ಮತ್ತು ತಾಲ್ಲೂಕಿನಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ನಗರದ ಗುರುಪ್ರಸಾದ ಕಾಲೊನಿ, ವಿಶ್ವಕರ್ಮ ಕಾಲೊನಿ, ತಾಲ್ಲೂಕಿನ ಕೆಎಸ್‌ಆರ್‌ಪಿ ಮಚ್ಚೆ, ಸಾಂಬ್ರಾದ ಏರ್‌ಮನ್‌ ತರಬೇತಿ ಶಾಲೆ, ರಾಮದುರ್ಗ, ಗೋಕಾಕ, ಅಥಣಿ, ರಾಯಬಾಗ, ಖಾನಾಪುರ, ಸವದತ್ತಿ, ಬೈಲಹೊಂಗಲ ತಾಲ್ಲೂಕುಗಳಲ್ಲಿ ಸೋಂಕು ದೃಢಪಟ್ಟಿರುವುದು ವರದಿಯಾಗಿದೆ. ಅಂಕಲಗಿ ಪೊಲೀಸ್ ಠಾಣೆಯ ಮೂವರಿಗೆ ದೃಢ‍ಪಟ್ಟಿದೆ. …

Read More »

ಬೆಳಗಾವಿ: ಪ್ರಾಣಾಪಾಯಕ್ಕೆ ಸಿಲುಕಿದ ಶ್ವಾನಗಳು

ಬೆಳಗಾವಿ: ಸತತ ಮಳೆಯಿಂದಾಗಿ ಇಲ್ಲಿನ ಬಳ್ಳಾರಿ ನಾಲಾ (ದೊಡ್ಡ ಚರಂಡಿ) ಉಕ್ಕಿ ಹರಿಯುತ್ತಿರುವುದರಿಂದ ತಾಲ್ಲೂಕಿನ ಹಲಗಾ ಸಮೀಪದ ಗದ್ದೆಯೊಂದರಲ್ಲಿನ ಶೆಡ್‌ ಜಲಾವೃತವಾಗಿದ್ದು, ಅಲ್ಲಿದ್ದ 45ಕ್ಕೂ ಹೆಚ್ಚಿನ ನಾಯಿಗಳಿಗೆ ಪ್ರಾಣಾಪಾಯ ಎದುರಾಗಿದೆ. ನಗರದ ಪ್ರಾಣಿ ಪ್ರೇಮಿಗಳಾದ ಶಂಕರ ಹಾಗೂ ಅವರ ಪುತ್ರಿ ಶ್ವೇತಾ ದೊಡ್ಡಮನಿ ಅವರು ಬೀದಿ ನಾಯಿಗಳನ್ನು ಹಿದಿಡು ತಂದು ಅಲ್ಲಿ ಸಾಕುತ್ತಿದ್ದರು. ಈಚೆಗೆ ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಅನ್ನ-ಆಹಾರ ಸಿಗದೆ ಕಂಗಾಲಾಗಿದ್ದ ಕೆಲವು ನಾಯಿಗಳನ್ನು ಕೂಡ ಅಲ್ಲಿ ತಂದು …

Read More »

ತಬ್ಲೀಗ್‌ ಸಮಾವೇಶ: 9 ವಿದೇಶಿಯರಿಗೆ 10 ವರ್ಷ ನಿರ್ಬಂಧ

ಬೆಂಗಳೂರು: ತಬ್ಲೀಗ್‌ ಜಮಾತ್ ಸಮಾವೇಶದ ಅಂಗವಾಗಿ ರಾಜ್ಯದಲ್ಲಿದ್ದ ಒಂಬತ್ತು ವಿದೇಶಿಯರ(ದಕ್ಷಿಣ ಆಫ್ರಿಕಾ ಮತ್ತು ಇಂಡೋನೇಷ್ಯಾದವರು) ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದು ಪಡಿಸಿರುವ ಹೈಕೋರ್ಟ್, ಮುಂದಿನ 10 ವರ್ಷ ಭಾರತಕ್ಕೆ ಭೇಟಿ ನೀಡುವುದಿಲ್ಲ ಎಂಬ ಪ್ರಮಾಣ ಪತ್ರ ಸಲ್ಲಿಸುವಂತೆ ನಿರ್ದೇಶಿಸಿದೆ. ಸಂಬಂಧಪಟ್ಟ ಪ್ರಾಧಿಕಾರ ವಿಧಿಸುವ ದಂಡದ ಮೊತ್ತ ಪಾವತಿಸಿ, ಮುಂದಿನ ಹತ್ತು ವರ್ಷಗಳವರೆಗೆ ಭಾರತಕ್ಕೆ ಭೇಟಿ ನೀಡುವುದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿದ ಬಳಿಕ ನಿರ್ಗಮನ ಪರವಾನಗಿ ನೀಡುವಂತೆ ವಿದೇಶಿಯರ ಪ್ರಾದೇಶಿಕ ನೋಂದಣಿ …

Read More »

ಸಂಪಾದಕೀಯ | ಆರ್‌ಬಿಐ ಹೊಸ ತೀರ್ಮಾನ ಹಣದ ಹರಿವಿಗೆ ಉತ್ತೇಜನ

ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸದಸ್ಯರು ಒಕ್ಕೊರಲಿನಿಂದ ತೀರ್ಮಾನಿಸಿದ್ದಾರೆ. ಈ ವರ್ಷದ ಫೆಬ್ರುವರಿಯ ನಂತರ ಆರ್‌ಬಿಐ, ರೆಪೊ ದರವನ್ನು ಶೇಕಡ 1.15ರಷ್ಟು ತಗ್ಗಿಸಿದೆ. ಹೀಗಾಗಿ, ಕೆಲವು ಅರ್ಥಶಾಸ್ತ್ರಜ್ಞರು ಮತ್ತು ಕಾರ್ಪೊರೇಟ್ ವಲಯದ ಕೆಲವರು ದರ ಕಡಿತದ ಪರ ಮಾತನಾಡಿದ್ದರೂ ಆ ತೀರ್ಮಾನ ಕೈಗೊಳ್ಳಲು ಆರ್‌ಬಿಐ ಮುಂದಾಗಿಲ್ಲ. ಕೇಂದ್ರೀಯ ಬ್ಯಾಂಕ್‌ನ ಈ ತೀರ್ಮಾನವನ್ನು ಷೇರು ಮಾರುಕಟ್ಟೆ ತಕ್ಷಣಕ್ಕೆ ಸ್ವಾಗತಿಸಿರುವುದನ್ನು …

Read More »

ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದ ಪಾಕಿಸ್ತಾನ : ಆರು ನಾಗರಿಕರಿಗೆ ಗಾಯ

ಶ್ರೀನಗರ: ಜಮ್ಮು ಕಾಶ್ಮೀರ ಗಡಿಯಲ್ಲಿ ಮತ್ತೆ ಪಾಕಿಸ್ತಾನ ಸೈನಿಕರು ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾರತೀಯ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಗುಂಡಿನ ದಾಳಿಯಲ್ಲಿ 6 ನಾಗರೀಕರು ಗಾಯಗೊಂಡಿದ್ದಾರೆ. ಕುಪ್ವಾರದ ನೌಗಾಮ್ ಮತ್ತು ಟ್ಯಾಂಗ್ದರ್ ಸೆಕ್ಟರ್ ನಲ್ಲಿ ಎಲ್ ಒಸಿಯಲ್ಲಿ ಪಾಕಿಸ್ತಾನ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಮಾರ್ಟರ್ ದಾಳಿಯಲ್ಲಿ 6 ಮಂದಿ ನಾಗರೀಕರು ಗಾಯಗೊಂಡಿದ್ದಾರೆ. ಆದರೆ ಯಾವುದೇ ಸಾವು ಸಂಭವಿಸಿಲ್ಲ. ಪಾಕಿಸ್ತಾನ ಸೇನೆಯ …

Read More »

ಗಣಿ ಕಾರ್ಮಿಕನಿಗೆ ಸಿಕ್ತು 35 ಲಕ್ಷ ಮೌಲ್ಯದ ವಜ್ರ…………..

ಭೋಪಾಲ್: ಕಾರ್ಮಿಕರೊಬ್ಬನಿಗೆ 35 ಲಕ್ಷ ಮೌಲ್ಯದ ವಜ್ರಗಳು ಸಿಕ್ಕಿರುವ ಘಟನೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ವಜ್ರ ಗಣಿಯೊಂದರಲ್ಲಿ ನಡೆದಿದೆ.   ಪನ್ನಾ ವಜ್ರ ಗಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸುಬಲ್ ಎಂಬವರಿಗೆ ಅಂದಾಜು 30 ಲಕ್ಷದಿಂದ 35 ಲಕ್ಷ ಮೌಲ್ಯದ ಮೂರು ವಜ್ರಗಳನ್ನು ಸಿಕ್ಕಿವೆ. 7.5 ಕ್ಯಾರೆಟ್ ನಿವ್ವಳ ತೂಕದ ಮೂರು ವಜ್ರಗಳನ್ನು ಗಣಿಯಲ್ಲಿ ಸಿಕ್ಕಿವೆ ಎಂದು ಪನ್ನಾ ಜಿಲ್ಲೆಯ ವಜ್ರಾಧಿಕಾರಿ ಆರ್.ಕೆ.ಪಾಂಡೆ ತಿಳಿಸಿದ್ದಾರೆ. ಈ ವಜ್ರಗಳನ್ನು ಕಾರ್ಮಿಕರ ಸುಬಲ್ …

Read More »

ನದಿ ತೀರದ ಗ್ರಾಮಗಳಿಗೆ ಪ್ರವಾಹ ಬೀತಿ ಸೇತುವೆಗಳು ಜಲಾವೃತ, ಸಂಚಾರ ಸ್ಥಗಿತ

ಮೂಡಲಗಿ: ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮಾರ್ಕಂಡೇಯ ನದಿಯಿಂದ ಘಟಪ್ರಭಾ ನದಿಗೆ ಗುರುವಾರದಂದು ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವದರಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಹಾರಾಷ್ಟ್ರ ಭಾಗದಲ್ಲಿ ಭಾರಿ ಮಳೆ ಮೈದುಂಬಿ ಸುರಿಯುತ್ತಿರುವ ಘಟಪ್ರಭೆ ನದಿ ಮೈದುಂಬಿ ಹರಿಯುತ್ತಿದ್ದು ಮೂಡಲಗಿ ತಾಲೂಕಿನ ಸುಣಧೋಳಿ, ಕಮ¯ದಿನ್ನಿ, ಹುಣಶ್ಯಾಳ ಪಿ.ವಾಯ್, ಢವಳೇಶ್ವರ, ಅವರಾದಿ ಹಾಗೂ ಗೋಕಾಕ ತಾಲೂಕಿನ ಉದಗಟ್ಟಿ …

Read More »

ಶಾಸಕ ಎಸ್.ರಾಮಲಿಂಗಾ ರೆಡ್ಡಿ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹೈದರಾಬಾದ್: ಟಿಆರ್ ಎಸ್ ಪಕ್ಷದ ಶಾಸಕ ಎಸ್.ರಾಮಲಿಂಗಾ ರೆಡ್ಡಿ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾಮಲಿಂಗಾ ರೆಡ್ಡಿಯವರು ದುಬ್ಬಾಕಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 59 ವರ್ಷದ ರಾಮಲಿಂಗಾ ರೆಡ್ಡಿ ಇತ್ತೀಚೆಗೆ ಕೊಂಪಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮೊಳಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆನಾರೋಗ್ಯ ಹಿನ್ನೆಲೆಯಲ್ಲಿ ಶಾಸಕರನ್ನು ರಾತ್ರಿ ಸುಮಾರು 2.30ಕ್ಕೆ ಗಾಚಿಬೌಲಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೆಲಂಗಾಣ ರಾಷ್ಟ್ರೀಯ ಪಕ್ಷದ ಹಿರಿಯ ನಾಯಕರಲ್ಲಿ ರಾಮಲಿಂಗಾ ರೆಡ್ಡಿ ಸಹ ಒಬ್ಬರಾಗಿದ್ದರು. ಶಾಸಕರ ಅಂತಿಮ ವಿಧಿವಿಧಾನಗಳು …

Read More »

ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆಯೇ? ಸಿದ್ಧರಾಮಯ್ಯ

ಬೆಂಗಳೂರು:  ಕಳೆದರಡು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆ, ಏರುತ್ತಿರುವ ನೆರೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಬೇಕಾಗಿರುವ ಸರ್ಕಾರ‌ ಸಂಪೂರ್ಣ ಸ್ಥಗಿತಗೊಂಡಿದೆ. ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆಯೇ? ಎಂದು ಆಸ್ಪತ್ರೆಯಲ್ಲಿರುವ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ರಾಜಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಮಾತ್ರವಲ್ಲ ಉತ್ತರ ಕರ್ನಾಟಕದಲ್ಲಿಯೂ ಮಳೆಯಿಂದಾಗಿ ಜನ ಪ್ರವಾಹದ ಭೀತಿಯಲ್ಲಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಅವರಿಗೆ …

Read More »