Breaking News

ರಾಜ್ಯ

17 ಕೋಟಿ ರೂಪಾಯಿ ವೆಚ್ವದಲ್ಲಿ ಸುಸಜ್ಜಿತ ಪೊಲೀಸ್ ಆಯುಕ್ತರ ಕಚೇರಿ

ಬೆಳಗಾವಿ: ಬೆಳಗಾವಿ ಮಹಾನಗರಕ್ಕೆ ತಕ್ಕಂತೆ 17 ಕೋಟಿ ರೂಪಾಯಿ ವೆಚ್ವದಲ್ಲಿ ಸುಸಜ್ಜಿತ ಪೊಲೀಸ್ ಆಯುಕ್ತರ ಕಚೇರಿಯನ್ನು ನಿರ್ಮಿಸಲಾಗುವುದು ಎಂದು ಗೃಹ ಇಲಾಖೆಯ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದ ಕಾಲೇಜು ರಸ್ತೆಯಲ್ಲಿ ಪೊಲೀಸ್ ಆಯುಕ್ತರ ಕಚೇರಿ ನಿರ್ಮಾಣಕ್ಕೆ ಮಂಗಳವಾರ (ಡಿ.1) ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಪೊಲೀಸ್ ಆಯುಕ್ತರ ಕಚೇರಿ ನಿರ್ಮಿಸಿಬೇಕು ಎಂಬುದು ಬಹಳ ದಿನಗಳ ಬೇಡಿಕೆಯಾಗಿತ್ತು. ನಗರದಲ್ಲಿಯೇ ಎರಡು ಎಕರೆ ಜಾಗೆ ಲಭ್ಯವಿತುವುದರಿಂದ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು …

Read More »

ದೇವಸ್ಥಾನ ಜಮೀನು ವಿವಾದ: ಬೆಳಗಾವಿಯಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಸ್ಥಿತಿ ಚಿಂತಾಜನಕ

ಬೆಳಗಾವಿ : ತಾಲ್ಲೂಕಿನ ಗೌಂಡವಾಡ ಗ್ರಾಮದ ಕಾಳಬೈರವನಾಥ್ ದೇವಸ್ಥಾನದ ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಐದು ಜನರ ಗುಂಪು ಓರ್ವ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಗೌಂಡವಾಡ ಗ್ರಾಮದ ಸತೀಶ್ ಪಾಟೀಲ(34) ಹಲ್ಲೆಗೊಳಗಾದ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ. ನಿನ್ನೆ ರಾತ್ರಿ 9.30 ರ ಸುಮಾರಿಗೆ ಬೆಳಗಾವಿ ನಗರದ ಮರಾಠ ಮಂಡಳ ಕಾಲೇಜ್ ಸಮೀಪವಿರುವ ತಮ್ಮ ಅಂಗಡಿಯನ್ನು ಬಂದ್ ಮಾಡಿಕೊಂಡು ಮನೆಗೆ …

Read More »

ರಾಜಕಾರಣದಲ್ಲಿ ಯಾವ ಶಾಪವೂ ತಟ್ಟುವುದಿಲ್ಲ: ಸಾರಾ ಮಹೇಶ್ ಗೆ ಸಚಿವ ರಮೇಶ್ ತಿರುಗೇಟು

ಬೆಳಗಾವಿ : ಎಚ್.ವಿಶ್ವನಾಥ್ ಅವರಿಗೆ ಚಾಮುಂಡೇಶ್ವರಿ ಶಾಪ ತಟ್ಟಿದೆ ಎಂದು ಸಾ.ರಾ ಮಹೇಶ್ ಹೇಳಿಕೆಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಂಗಳವಾರ ತಿರುಗೇಟು ನೀಡಿದ್ದಾರೆ. ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾವುದೇ ಶಾಪ ತಟ್ಟುವುದಿಲ್ಲ. ಎಚ್.ವಿಶ್ವನಾಥ್ ಅವರ ಹೈಕೋರ್ಟ್ ಆದೇಶದ ಕುರಿತು ಸುಪ್ರೀಂ ಕೋರ್ಟ್ ಅಪೀಲು ಸಲ್ಲಿಸುತ್ತೇವೆ ಎಂದಿದ್ದಾರೆ. ವಿಶ್ವನಾಥ್ ಅವರ ಜೊತೆಗೆ ನೂರಕ್ಕೆ ನೂರರಷ್ಟು 17 ಜನರು ಜೊತೆಗಿದ್ದೇವೆ. ಸುಪ್ರೀಂ ಕೋರ್ಟ್ ಬಾಗಿಲು ತಟ್ಟುತ್ತೇವೆ ಎನ್ನುವ …

Read More »

ಆಶಿಕಿ ನಟ ರಾಹುಲ್‍ರಾಯ್ ಗೆ ಬ್ರೇನ್ ಸ್ಟ್ರೋಕ್ ಆಗಿದೆ

ಮುಂಬೈ,- ಎಲ್ ಎ ಸಿ- ಲಿವ್ ದಿ ಬ್ಯಾಟಲ್ ಇನ್ ದಿ ಕಾರ್ಗಿಲ್ ಎಂಬ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ನಟ ರಾಹುಲ್ ರಾಯ್‍ಗೆ ಬ್ರೇನ್ ಸ್ಟ್ರೋಕ್ ಆಗಿದ್ದು ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಶಿಕಿ ಚಿತ್ರದ ನಂತರ ಹೆಂಗಳೆಯರ ದಿಲ್ ಗೆದ್ದಿದ್ದ ರಾಹುಲ್‍ರಾಯ್ ನಂತರ ಜುನೂನ್, ಗೂಮ್ರಾ, ಅಗ್ರಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದು ಪ್ರಸ್ತುತ ಎಲ್‍ಎಸಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಲ್‍ಎಸಿ ಚಿತ್ರದ ಚಿತ್ರೀಕರಣವು ಕಾರ್ಗಿಲ್‍ನಲ್ಲಿ ನಡೆಯುತ್ತಿದ್ದು …

Read More »

ಸಿಎಂಗೆ ಕಣ್ಣು, ಬಾಯಿ ಇಲ್ಲ ಅಂದ್ರು ಉಮಾಶ್ರೀ

ಬಾಗಲಕೋಟೆ: ಮಹಲಿಂಗಪುರ ಸದಸ್ಯೆ ತಳ್ಳಾಟ ನೂಕಾಟದಿಂದ ಮಾನಸಿಕ ಹಿಂಸೆ ಹಾಗೂ ದೈಹಿಕ ಹಿಂಸೆಯ ಪರಿಣಾಮ ಅವರಿಗೆ ಗರ್ಭಪಾತವಾಗಿದೆ. ಸಿಎಂಗೆ ಕಿವಿ, ಕಣ್ಣೂ, ಬಾಯಿಯೂ ಇಲ್ಲದಂತಾಗಿದೆ ಎಂದು ಮಾಜಿ ಸಚಿವೆ, ನಟಿ ಉಮಾಶ್ರೀ ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಶಾಸಕ ಮತ್ತು ಬೆಂಬಲಿಗರ ತಳ್ಳಾಟದಿಂದಾಗಿ ಪುರಸಭೆ ಸದಸ್ಯೆಗೆ ಗರ್ಭಪಾತ ವಿಚಾರವಾಗಿ ಮಾತನಾಡಿದ ಉಮಾಶ್ರೀ, ಗರ್ಭಪಾತ ಆಗಿರೋದು ಕೊಲೆಗೆ ಸಮಾನವಾಗಿದೆ. ಆದರೆ ಸರ್ಕಾರ ಮಾತ್ರ ಏನು ಕ್ರಮ ಕೈ ಗೊಳ್ಳುತ್ತಿಲ್ಲ. ಈ ಘಟನೆಯಲ್ಲಿ ಇದ್ದ ನೀಚ …

Read More »

ಚುನಾವಣೆ ಅಂದ್ರೆ ಏನು ಅಂತ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತೋರಿಸುತ್ತೇವೆ: ಪ್ರಜ್ವಲ್ ರೇವಣ್

ಹಾಸನ: ಚುನಾವಣೆ ಅಂದ್ರೆ ಏನು ಅಂತ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತೋರಿಸುತ್ತೇವೆ ಎಂದು ಸಂಸದ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.ಹಾಸನ ತಾಲೂಕಿನ ತೇಜೂರು ಗ್ರಾಮದಲ್ಲಿ ರಸ್ತೆ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ತಂದಿರುವ ಅನುದಾನಕ್ಕೆ ಶಾಸಕ ಪ್ರೀತಂಗೌಡ ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ಎಂಪಿ ಅನುದಾನದಲ್ಲಿ ಎಂಪಿಯವರ ಸಹಿ ಇಲ್ಲದೆ ರಸ್ತೆ ಮಂಜೂರಾತಿ ಆಗಲ್ಲ ಎಂಬುದು ಅವರಿಗೆ ಗೊತ್ತಿಲ್ಲ. ಅವರು ತಂದ ಅನುದಾನವನ್ನು ನಾವೇನು ಹೋಗಿ ಪೂಜೆ ಮಾಡಲ್ಲ. ನಾವು …

Read More »

BIG BREAKING ಕನ್ನಡ ಹೋರಾಟಗಾರರಿಗೆ ಸೆಡ್ಡು-ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರ ಅಧಿಕೃತ ಆದೇಶ

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಈ ಮೂಲಕ ಕನ್ನಡ ಹೋರಾಟಗಾರರಿಗೆ ಸೆಡ್ಡು ಹೊಡೆದಿದೆ.ಮರಾಠ ಪ್ರಾಧಿಕಾರಕ್ಕೆ 50 ಕೋಟಿ ಅನುದಾನ ಮಂಜೂರು ಮಾಡಿ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯಲ್ಲಿ ಪ್ರಾಧಿಕಾರ ರಚನೆಗೆ ಸಿಎಂ ಬಿಎಸ್‍ವೈ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಕನ್ನಡ ಹೋರಾಟಗಾರರ ಬಂದ್ ಎಚ್ಚರಿಕೆಗೂ ಸರ್ಕಾರ ಕ್ಯಾರೇ ಎಂದಿಲ್ಲ. ಮರಾಠ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಅಭಿವೃದ್ಧಿಗಾಗಿ ನಿಗಮ …

Read More »

ಸಿನಿಮಾ ಸೀನ್ ಅಲ್ಲ- ವೈರಲ್ ಆಯ್ತು ಐಪಿಎಸ್ ಅಧಿಕಾರಿ ಹಂಚಿಕೊಂಡ ವೀಡಿಯೋ

ಚೆನ್ನೈ: ಐಪಿಎಸ್ ಅಧಿಕಾರಿ ಮಹೇಶ್ ಅಗರ್ವಾಲ್ ಹಂಚಿಕೊಂಡ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪೊಲೀಸ್ ಅಧಿಕಾರಿಯ ಸಾಹಸಹಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸಿನಿಮಾಗಳಲ್ಲಿ ಪೊಲೀಸರು ಕಳ್ಳರನ್ನ ಚೇಸ್ ಮಾಡಿ ಕಳ್ಳರನ್ನು ಹಿಡಿಯುವ ದೃಶ್ಯಗಳನ್ನ ನೋಡಿರುತ್ತೀರಿ. ಅಂತಹವುದೇ ಘಟನೆ ಚೆನ್ನೈನಲ್ಲಿ ನಡೆದಿದೆ. ಗ್ರೇಟರ್ ಚೆನ್ನೈನಲ್ಲಿ ಎಸ್‍ಐ ಅಂತ್ಲಿನ್ ರಮೇಶ್ ಮೊಬೈಲ್ ಕಳ್ಳರನ್ನ ಬೈಕಿನಲ್ಲಿ ಚೇಸ್ ಮಾಡಿ ಹಿಡಿದಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡ್ತಿದೆ. ಬೈಕ್ ಮೇಲೆ ಹೊರಟ ಇಬ್ಬರು …

Read More »

ಮಹಲಿಂಗಪುರ ಪುರಸಭೆ ಸದಸ್ಯೆಯರ ತಳ್ಳಾಟ ನೂಕಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸದಸ್ಯೆಗೆ ಗರ್ಭಪಾತವಾಗಿದೆ.

ಬಾಗಲಕೋಟೆ: ಮಹಲಿಂಗಪುರ ಪುರಸಭೆ ಸದಸ್ಯೆಯರ ತಳ್ಳಾಟ ನೂಕಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸದಸ್ಯೆಗೆ ಗರ್ಭಪಾತವಾಗಿದೆ. ಚಾಂದಿನಿ ನಾಯಕ್ ಗರ್ಭಪಾತವಾದ ಪುರಸಭೆ ಸದಸ್ಯೆ. ಈಕೆಗೆ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಮಹಲಿಂಗಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅಬಾರ್ಷನ್ ಆಗಿದೆ. ನವೆಂಬರ್ 9 ರಂದು ನಡೆದಿದ್ದ ಶಾಸಕರು ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ತಳ್ಳಾಟ ನೂಕಾಟದಿಂದ ಕೆಳಕ್ಕೆ ಬಿದ್ದಿದ್ದ ಚಾಂದಿನಿ ನಾಯಕ್ ಅವರ ಹೊಟ್ಟೆಗೆ ಏಟು ಬಿದ್ದಿತ್ತು. ಆಗ ಚಾಂದಿನಿ ಅವರು ಮೂರು ತಿಂಗಳು ಗರ್ಭಿಣಿಯಾಗಿದ್ದರು. …

Read More »

ಭೀಕರ ಅಪಘಾತ : ಸ್ಥಳದಲ್ಲೇ ಬೈಕ್ ಸವಾರಿಬ್ಬರು ಸಾವು

ದಕ್ಷಿಣ ಕನ್ನಡ : ಪಿಕಪ್ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಕೃಷ್ಣ ಪ್ರಸಾದ್ ಶೆಟ್ಟಿ, ಜಯರಾಮ್ ಗೌಡ ಮೃತ ದುರ್ದೈವಿಗಳು. ದ್ವಿಚಕ್ರ ವಾಹನದ ಮೇಲೆ ಇಬ್ಬರು ಮನೆಗೆ ತೆರಳುತ್ತಿದ್ದರು. ಹಿಂದಿನಿಂದ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದರು, ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದರು. ಸ್ಥಳೀಯರು ಮಾಹಿತಿ ನೀಡಿದ ಆದಾರದ ಮೇಲೆ ಕಾರ್ಯಾಚರಣೆ ನಡೆಸಿ ಪೊಲೀಸರು …

Read More »