ನವದೆಹಲಿ, ಮಾ.05: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇಂಧನ ಏರಿಕೆ ಮಾಡಬೇಕೆಂಬ ಗ್ರಾಹಕರ ಬೇಡಿಕೆಯಲ್ಲಿ ಅರ್ಥವಿರುವುದನ್ಬು ಅವರು ಒಪ್ಪಿಕೊಂಡಿದ್ದಾರೆ. ಐಡಬ್ಲ್ಯೂಪಿಸಿಯಲ್ಲಿ ಪತ್ರಕರ್ತರ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ದರ ನೂರು ರೂ ಗಡಿ ದಾಟಿದೆ. ಇದಕ್ಕೆ ಕೇಂದ್ರ …
Read More »ನಿನ್ನೆ ನಾಪತ್ತೆ, ಇವತ್ತು ಮೃತದೇಹ ಪತ್ತೆ: ಅಂಬಾನಿ ಮನೆ ಬಳಿ ಸ್ಪೋಟಕವಿದ್ದ ವಾಹನದ ಮಾಲೀಕನ ಶವ ಪತ್ತೆ; ಸಾವಿನ ಸುತ್ತ ಅನುಮಾನದ ಹುತ್ತ
ಮುಂಬೈನಲ್ಲಿ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಬಳಿ ಸ್ಫೋಟಕ ತುಂಬಿದ ಸ್ಕಾರ್ಪಿಯೋ ವಾಹನದ ಮಾಲೀಕನ ಮೃತದೇಹ ಥಾಣೆಯಲ್ಲಿ ಪತ್ತೆಯಾಗಿದೆ. ಮುಂಬೈನಲ್ಲಿರುವ ಮುಕೇಶ್ ಅಂಬಾನಿಯ ಅಂಟಿಲಿಯಾ ನಿವಾಸದ ಬಳಿ 24 ಜಿಲೆಟಿನ್ ಕಡ್ಡಿಗಳನ್ನು ಇಡಲಾಗಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿದ್ದು, ಅನುಮಾನಾಸ್ಪದ ವಾಹನದಲ್ಲಿ ಸ್ಪೋಟಕಗಳನ್ನು ತುಂಬಿಟ್ಟಿದ್ದು ಭಯೋತ್ಪಾದಕರ ಕೃತ್ಯ ಇರಬಹುದೆಂದು ಹೇಳಲಾಗಿತ್ತು. ಮುಂಬೈ ಅಪರಾಧ ವಿಭಾಗದ ಪೊಲೀಸರು ಮತ್ತು ಎಟಿಎಸ್ ತನಿಖೆ ಕೈಗೊಂಡಿದ್ದು, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ ಮುಕೇಶ್ …
Read More »ಆಡಳಿತಾರೂಢ ಬಿಜೆಪಿಯ 12ಕ್ಕೂ ಹೆಚ್ಚು ಸಚಿವರು-ಶಾಸಕರಿಗೆ ಭಯ..!
ಬೆಂಗಳೂರು,ಮಾ.6- ಸಿಡಿ ಬಿಡುಗಡೆಯಾದ ಬೆನ್ನಲ್ಲೆ ಆಡಳಿತಾರೂಢ ಬಿಜೆಪಿಯಲ್ಲಿ ಸುಮಾರು ಒಂದು ಡಜನ್‍ಗೂ ಅಧಿಕ ಸಚಿವರು ಮತ್ತು ಶಾಸಕರಿಗೆ ಸಿ.ಡಿ ಭೂತ ಕಾಡುತ್ತಿದೆ. ಕಾಂಗ್ರೆಸ್-ಜೆಡಿಎಸ್‍ಗೆ ಕೈ ಕೊಟ್ಟು ಮುಂಬೈಗೆ ತೆರಳಿದ ಸಚಿವರು ಮತ್ತು ಶಾಸಕರಿಗೆ ಸಿ.ಡಿ ಭಯ ಎದುರಾಗಿದ್ದು, ಬಹುತೇಕ ಎಲ್ಲರೂ ನ್ಯಾಯಾಲಯದ ಮೊರೆ ಹೋಗಲು ಸಿದ್ದತೆ ನಡೆಸಿದ್ದಾರೆ. ಈಗಾಗಲೇ ಸಚಿವರಾದ ಎಸ್.ಟಿ.ಸೋಮಶೇಖರ್, ನಾರಾಯಣಗೌಡ, ಬಿ.ಸಿ.ಪಾಟೀಲ್, ಭೈರತಿ ಬಸವರಾಜ್ ಹಾಗೂ ಡಾ.ಕೆ.ಸುಧಾಕರ್ ತಮ್ಮ ವಿರುದ್ಧ ಯಾವುದೇ ರೀತಿಯ ಮಾನಹಾನಿ ವರದಿಗಳನ್ನು ಬಿತ್ತರಿಸದಂತೆ …
Read More »ಅನಾವಶ್ಯಕವಾಗಿ ಕೋರ್ಟ್ ಗೆ ಹೋಗಿ ಮತ್ತಷ್ಟು ಗೋಜಲಾಗಿಸುವುದು ಒಳ್ಳೆಯದಲ್ಲ: ಸದಾನಂದ ಗೌಡ
ಬೆಂಗಳೂರು: ಅನಾವಶ್ಯಕವಾಗಿ ಕೋರ್ಟ್ ಗೆ ಹೋಗಿ ಮತ್ತಷ್ಟು ಗೋಜಲಾಗಿಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಯಾವುದೇ ಆಕ್ಷೇಪಾರ್ಹ ಸುದ್ದಿಗಳನ್ನು ಪ್ರಸಾರ ಮಾಡದಿರುವಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕೆಂದು ರಾಜ್ಯದ ಆರು ಸಚಿವರು ಕೋರ್ಟ್ ಮೊರೆ ಹೋಗಿರುವ ವಿಚಾರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಸ್ವಾಭಾವಿಕವಾಗಿ ಇಂತಹ ಆರೋಪ ಬಂದಾಗ ತನಿಖೆಗೆ ಮಂತ್ರಿಗಳು ಸಹಕಾರ ನೀಡಬೇಕು. ವೈಯಕ್ತಿಕವಾಗಿ ಹಲವಾರು ಜನ …
Read More »ಸಂತ್ರೆಸ್ತೆಗೆ ರೇಣುಕಾಚಾರ್ಯ ಮಾಡಿದ ಮೋಸ, ಅನ್ಯಾಯ ಒಂದೊಂದಲ್ಲ: ದಿನೇಶ್ ಕಲ್ಲಹಳ್ಳಿ
ರಾಮನಗರ: ರೇಣುಕಾಚಾರ್ಯ ಬಗ್ಗೆ ಹೇಳೊಕೇನಿಲ್ಲ. ಅವ್ರ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ. ಸಂತ್ರಸ್ತೆಗೆ ಅವ್ರು ಮಾಡಿದ ಮೋಸ ಅನ್ಯಾಯ ಒಂದೊಂದಲ್ಲ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ. ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ‘ ರೇಣುಕಾಚಾರ್ಯ ಅವ್ರು ಸಂತ್ರಸ್ತೆಯನ್ನ ಯಾವ ಹೀನಾಯ ಸ್ಥಿತಿಗೆ ತಳ್ಳಿದ್ದಾರೆ ಅನ್ನೋದು ಗೊತ್ತಿದೆ. ಕೇಸ್ ವಾಪಸ್ ತೆಗೆದುಕೊಳ್ಳೋದಕ್ಕೆ ಹೇಳಿ ನಂತ್ರ ಅವರಿಗೆ ಒಂದು ರೂಪಾಯಿ ಕೂಡ ಕೊಡದೇ ಮೋಸ ಮಾಡಿದ್ದಾರೆ. ಬೇಕಾದ್ರೆ, ಅವರನ್ನೇ ಹೋಗಿ …
Read More »ಯಡಿಯೂರಪ್ನೋರೆ ನೀವು ತಡೆಯಾಜ್ಞೆ ತರಲ್ವಾ: ಸಿಎಂಗೆ ಕಾಂಗ್ರೆಸ್ ಟಾಂಗ್
ಮೈಸೂರು: ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಯಾದ ಬೆನ್ನ ಹಿಂದೆಯೇ ತಮ್ಮ ಬಗ್ಗೆ ಯಾವುದೇ ಸುದ್ದಿ ಪ್ರಸಾರ ಮಾಡಬಾರದೆಂದು ಕೋರ್ಟ್ ಮೆಟ್ಟಿಲೇರಿರುವ ಸಚಿವರ ವಿಷಯವಾಗಿ ಕಾಂಗ್ರೆಸ್, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲೆಳೆದಿದೆ. ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಯತ್ನಾಳ್ ಅವರು ಹೇಳಿದಂತೆ ಕಣ್ಣಲ್ಲಿ ನೋಡೋಕೇ ಆಗದಂತ ದೃಶ್ಯಗಳು ಇವೆಯಂತೆ. ಬಿಎಸ್‌ವೈ ಅವರು ಕೋರ್ಟ್ ಮೆಟ್ಟಿಲೇರುವುದಿಲ್ಲವೇ ಎಂದು ಟ್ವೀಟ್ ಮಾಡಲಾಗಿದೆ.
Read More »ಸಚಿವ ಜಗದೀಶ್ ಶೆಟ್ಟರ್ ಸಂಧಾನ: ಟೊಯೊಟಾ ಕಾರ್ಮಿಕರ ಸಮಸ್ಯೆ ಪರಿಹಾರ
ಬೆಂಗಳೂರು: ರಾಮನಗರ ಜಿಲ್ಲೆ ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಮಧೆ ಉದ್ಭವಿಸಿದ್ದ ಸಮಸ್ಯೆಗಳ ಪರಿಹಾರದಲ್ಲಿ ಪ್ರಮುಖ ಪಾತ್ರ ವಹಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಕಾರ್ಖಾನೆಯ ಆಡಳಿತ ಮಂಡಳಿಯ ಅಧಿಕಾರಿಗಳು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ. 2020 ನವೆಂಬರ್ 9ರಂದು ಪ್ರಾರಂಭವಾದ ಕಾರ್ಮಿಕರ ಮುಷ್ಕರದ ಸಂದರ್ಭದಲ್ಲಿ ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ …
Read More »ಜಾರಕಿಹೊಳಿ ಪ್ರಕರಣ: ಎಚ್ಡಿಕೆ ಹೇಳಿದ 5 ಕೋಟಿ ಡೀಲ್ ಮತ್ತು 6 ಸಚಿವರ ಕೋರ್ಟ್ ಮೊರೆ
ರಾಸಲೀಲೆ ಪ್ರಕರಣ ಭಾರತದ ರಾಜಕೀಯದಲ್ಲಿ ಹೊಸದೇನಲ್ಲ. ಇಂತಹ ಪ್ರಕರಣಗಳು ಸಾರ್ವಜನಿಕವಾದಾಗ ಸಿಗುವ ವೇಗಕ್ಕೆ ನಂತರ ತಾರ್ಕಿಕ ಅಂತ್ಯ ಸಿಕ್ಕ ಉದಾಹರಣೆಗಳು ಕಮ್ಮಿ. ರಮೇಶ್ ಜಾರಕಿಹೊಳಿ ಪ್ರಕರಣ ಅದೇ ದಾರಿಯಲ್ಲಿ ಸಾಗುವ ಸಾಧ್ಯತೆಯೂ ಇದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ವಿಚಾರವನ್ನು ಎರಡು ದಿನಗಳ ಹಿಂದೆ ಮೈಸೂರಿನಲ್ಲಿ ಪ್ರಸ್ತಾವಿಸಿದ್ದರು. ತಮ್ಮ ಹಿಂದಿನ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಜಾರಕಿಹೊಳಿ ಪ್ರಮುಖ ಕಾರಣವಾಗಿದ್ದರೂ, ತೂಕವಾಗಿ ಈ ವಿಚಾರದಲ್ಲಿ ಎಚ್ಡಿಕೆ ಹೇಳಿಕೆಯನ್ನು ನೀಡಿದ್ದಾರೆ. ಪ್ರಮುಖ …
Read More »ದೆಹಲಿಯಲ್ಲಿ ರಾಜ್ಯ ಶಾಲಾ ಶಿಕ್ಷಣ ಮಂಡಳಿಗೆ ರಾಜ್ಯ ಸರ್ಕಾರ ಒಪ್ಪಿಗೆ: ಕೇಜ್ರಿವಾಲ್
ನವದೆಹಲಿ : ದೆಹಲಿಯಲ್ಲಿ ರಾಜ್ಯ ಶಾಲಾ ಶಿಕ್ಷಣ ಮಂಡಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ. ಕ್ಯಾಬಿನೆಟ್ ಸಭೆಯ ಬಳಿಕ ಈ ಬಗ್ಗೆ ಮಾತನಾಡಿರುವ ಅರವಿಂದ್ ಕೇಜ್ರಿವಾಲ್, ರಾಜ್ಯದಲ್ಲಿ 1000 ಸರ್ಕಾರಿ ಶಾಲೆಗಳು ಮತ್ತು 1700 ಖಾಸಗಿ ಶಾಲೆಗಳು ಇವೆ. ಎಲ್ಲಾ ಸರ್ಕಾರಿ ಶಾಲೆಗಳನ್ನು ಮತ್ತು ಬಹುಪಾಲು ಖಾಸಗಿ ಶಾಲೆಗಳು ಸಿಬಿಎಸ್ ಸಿ ಯನ್ನು ಅನುಸರಿಸುತ್ತಿವೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ 20-25 ಸರ್ಕಾರಿ ಶಾಲೆಗಳನ್ನು ರಾಜ್ಯ …
Read More »ತೈಲ ಉತ್ಪಾದನೆ ಪ್ರಮಾಣ ಕಡಿಮೆಯಾಗುತ್ತಿರುವುದು ಬೆಲೆ ಏರಿಕೆಗೆ ಮೂಲ ಕಾರಣ
ನವದೆಹಲಿ: ಏಪ್ರಿಲ್ ತಿಂಗಳಲ್ಲಿ ತೈಲ ಉತ್ಪಾದನೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಒಪೆಕ್ ಹಾಗೂ ಒಪೆಕ್ ಮಿತ್ರ ರಾಷ್ಟ್ರಗಳು ನಿರ್ಧಾರ ಕೈಗೊಂಡಿವೆ. ತೈಲ ರಫ್ತು ರಾಷ್ಟ್ರಗಳ ಒಕ್ಕೂಟ(ಒಪೆಕ್) ತೈಲ ಉತ್ಪಾದನೆಯನ್ನು ಕಡಿತವನ್ನು ಮುಂದುವರೆಸಿದ್ದರಿಂದ ತೈಲ ಬೆಲೆ ಏರಿಕೆಯಾಗಿದೆ. ಏಪ್ರಿಲ್ ನಲ್ಲಿ ಖರೀದಿಸಲಾಗುವ ಡಬ್ಲ್ಯೂಟಿಐ (ವೆಸ್ಟ್ ಟೆಕ್ಸಾಸ್ ಇಂಟರ್ಮಿಡಿಯೆಟ್) ಕಚ್ಚಾ ತೈಲ ಬೆಲೆಯನ್ನು 2.55 ಡಾಲರ್ ಗೆ ಏರಿಕೆ ಮಾಡಲಾಗಿದ್ದು, ಪ್ರತಿ ಬ್ಯಾರಲ್ ಬೆಲೆ ನ್ಯೂಯಾರ್ಕ್ ಮರ್ಕೆಂಟೈಲ್ ಎಕ್ಸ್ಚೇಂಜ್ ನಲ್ಲಿ 63.83 ಡಾಲರ್ …
Read More »
Laxmi News 24×7