Breaking News

ರಾಜ್ಯ

ಆಮ್ಲಜನಕ ಟ್ಯಾಂಕರ್ ಗಳಿಗೆ2 ತಿಂಗಳು ಟೋಲ್ ಶುಲ್ಕ ವಿನಾಯಿತಿ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರಿಗೆ ಅಗತ್ಯವಾದ ಆಮ್ಲಜನಕ ಪೂರೈಕೆಗಾಗಿ ಮತ್ತೊಂದು ಕ್ರಮಕೈಗೊಳ್ಳಲಾಗಿದ್ದು, ಆಮ್ಲಜನಕ ಟ್ಯಾಂಕರ್ ಗಳಿಗೆ ಟೋಲ್ ಶುಲ್ಕ ವಿನಾಯಿತಿ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಮಾಹಿತಿ ನೀಡಿದ್ದು, ದ್ರವೀಕೃತ ವೈದ್ಯಕೀಯ ಆಮ್ಲಜನಕ ಸಾಗಣೆ ಮಾಡುವ ಟ್ಯಾಂಕರ್ ಗಳಿಗೆ ಹೆದ್ದಾರಿಗಳಲ್ಲಿ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದೆ. ದೇಶಾದ್ಯಂತ ಕೊರೊನಾ ಸೋಂಕಿತರಿಗಾಗಿ ವೈದ್ಯಕೀಯ ಆಮ್ಲಜನಕಕ್ಕೆ ಭಾರಿ ಬೇಡಿಕೆ ಇರುವ ಕಾರಣ ತುರ್ತು ಸೇವೆ ಎಂದು ಪರಿಗಣಿಸಲಾಗಿದ್ದು, ಎರಡು …

Read More »

ಬೇಡಿಕೆಗನುಗುಣವಾಗಿ ಬಾರದ ಕೊವ್ಯಾಕ್ಸಿನ್: ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಲಸಿಕೆ

ಬೆಂಗಳೂರು: ರಾಜ್ಯಕ್ಕೆ ಬೇಡಿಕೆಗೆ ಅನುಗುಣವಾಗಿ ಕೊವ್ಯಾಕ್ಸಿನ್ ಲಸಿಕೆ ಪೂರೈಕೆಯಾಗದ ಹಿನ್ನೆಲೆಯಲ್ಲಿ ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಲಸಿಕೆಯನ್ನು ನೀಡಲಾಗುವುದು ಎಂದು ಹೇಳಲಾಗಿದೆ. ರಾಜ್ಯಕ್ಕೆ ಬೇಡಿಕೆ ಅನುಸಾರ ಲಸಿಕೆ ಬಾರದ ಹಿನ್ನೆಲೆಯಲ್ಲಿ ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಬಳಸಲು ಸರ್ಕಾರ ನಿರ್ಧರಿಸಿದೆ. ಮೊದಲ ಡೋಸ್ ಕೊವ್ಯಾಕ್ಸಿನ್ ಪಡೆದವರಿಗೆ ಮಾತ್ರ ಇದೆ ಲಸಿಕೆಯನ್ನು ಎರಡನೇ ಡೋಸ್ ಪಡೆಯುವವರಿಗೆ ಕೊಡಲಾಗುತ್ತದೆ. 45 ವರ್ಷ ಮೇಲ್ಪಟ್ಟ ಮೊದಲ ಡೋಸ್ ಪಡೆಯುವವರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗುವುದು ಎಂದು …

Read More »

ಖಾನಾಪುರ ಪಟ್ಟಣದಲ್ಲಿ ಮಂಗಳವಾರದಿಂದ ಸಂಪೂರ್ಣ ಲಾಕ್ ಡೌನ್: ಕಿರಾಣಿ, ದಿನಸಿ ಸೇರಿದಂತೆ ಎಲ್ಲ ವ್ಯಾಪಾರ-ವ್ಯವಹಾರಗಳಿಗೂ ನಿರ್ಬಂಧ

ಖಾನಾಪುರ:  ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಕೋವಿಡ್ ಸೊಂಕನ್ನು ಹತ್ತಿಕ್ಕಲು ಪಟ್ಟಣದಲ್ಲಿ ಮಂಗಳವಾರ ಮೇ.೧೧ರಿಂದ ಶನಿವಾರದವರೆಗೆ ಐದು ದಿನಗಳ ಕಾಲ ಎಲ್ಲ ರೀತಿಯ ವ್ಯಾಪಾರ -ವಹಿವಾಟನ್ನು ನಿಷೇಧಿಸಿ ಖಡಕ್ ಲಾಕ್ ಡೌನ್ ಘೋಷಿಸಲಾಗಿದ್ದು, ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಸ್ಥಳೀಯ ಆಡಳಿತ ಕೈಗೊಂಡಿರುವ ಈ ಕ್ರಮಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕೆಂದು ಉಪವಿಭಾಗಾಧಿಕಾರಿ ಅಶೋಕ ತೇಲಿ ಹೇಳಿದರು. ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಪಟ್ಟಣದ ವಿವಿಧ ಜಾತಿ, …

Read More »

270 ಆಕ್ಸಿಜನ್‌ ಬೆಡ್‌ ಆರಂಭಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ

ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನೇ ದಿನೇ ಏರಿಕೆಯಾಗುತ್ತಿರುವುದನ್ನು ಮನಗೊಂಡ ಜಿಲ್ಲಾಡಳಿತ ಸೋಂಕಿತರ ಚಿಕಿತ್ಸೆಗಾಗಿ 270 ಆಕ್ಸಿಜನ್‌ ಬೆಡ್‌ಗಳ ವ್ಯವಸ್ಥೆಗೆ ನಿರ್ಧರಿಸಿದೆ. ಇದಲ್ಲದೇ, ಕೋವಿಡ್‌ಗಾಗಿ ಸದ್ಯ ಕೊಪ್ಪಳ ಮೆಡಿಕಲ್‌ ಕಾಲೇಜಿನ 142 ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಮುಂದಾಗಿದ್ದು, ಬೆಡ್‌ಗಳ ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಜಿಲ್ಲೆಯಲ್ಲಿ ಮೊದಲ ಅಲೆ ಹಾಗೂ ಎರಡನೆ ಅಲೆಯಲ್ಲಿ ಆರಂಭಿಕದಲ್ಲಿ ಸೋಂಕಿನ ಪ್ರಮಾಣ ಹೆಚ್ಚು ಇರಲಿಲ್ಲ. ಕ್ರಮೇಣ ಸೋಂಕಿನ ಆರ್ಭಟವು ಜೋರಾಗುತ್ತಿದ್ದು, ಅದರೊಟ್ಟಿಗೆ ಸಾವಿನ ಸಂಖ್ಯೆಯು ದಿನೇ …

Read More »

ಕೋವಿಡ್‌ ನಿರ್ವಹಣೆ: ಸರ್ಕಾರದ ವೈಫಲ್ಯಕ್ಕೆ ಖಂಡಿಸಿ ಆನ್‌ಲೈನ್‌ ಚಳವಳಿ

ವಿಜಯಪುರ: ಕೋವಿಡ್-19 ಎರಡನೇ ಅಲೆಯನ್ನು ತಡೆಗಟ್ಟುವಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಸಮಿತಿಯಿಂದ ಶನಿವಾರ ಆನ್‌ಲೈನ್‌ ಮೂಲಕ ಪ್ರತಿಭಟನೆ ನಡೆಸಲಾಯಿತು. ಕೋವಿಡ್‌ನಿಂದ ಹಳ್ಳಿ, ನಗರಗಳಲ್ಲಿ ಸಾಕಷ್ಟು ಜನರ ಸಾವು ನೋವುಗಳನ್ನು ಸಂಭವಿಸುತ್ತಿದ್ದರೂ ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಲುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದರು. ರಾಜಧಾನಿ ಬೆಂಗಳೂರಿನಿಂದ ಹಿಡಿದು ತಾಲ್ಲೂಕು ಮಟ್ಟದವರೆಗೆ ಆಮ್ಲಜನಕ, ಹಾಸಿಗೆ, ಔಷಧ, ಅಂಬುಲೆನ್ಸ್‌, …

Read More »

ಚಿಕ್ಕ-ಪುಟ್ಟ ಅಪರಾಧಗಳಿಗೆ ಬಂಧಿಸ್ಬೇಡಿ, ಜೈಲಿನಲ್ಲಿ ಜನದಟ್ಟಣೆ ಆಗ್ತಿದೆ : ಪೊಲೀಸರಿಗೆ ಸುಪ್ರೀಂ ಸೂಚನೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ತೀವ್ರವಾಗಿ ಹೆಚ್ಚಳವಾಗ್ತಿವೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಜನದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ. ಆಗತ್ಯವಿದ್ದರೇ ಮಾತ್ರ ಬಂಧಿಸಿ ಎಂದು ಪೊಲೀಸರಿಗೆ ಸೂಚಿಸಿರುವ ಸುಪ್ರೀಂಕೋರ್ಟ್‌, ಅಗತ್ಯವಿಲ್ಲದಿದ್ರೆ 7 ವರ್ಷಕ್ಕಿಂತ ಕಡಿಮೆ ಶಿಕ್ಷೆ ಉಳ್ಳ ಅಪರಾಧಗಳಲ್ಲಿ ಆರೋಪಿಗಳನ್ನ ಬಂಧಿಸಬೇಡಿ. ಇನ್ನು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ರಚಿಸಿರುವ ಉನ್ನತ ಸಮಿತಿಗಳಿಗೆ ಸೋಂಕಿಗೆ ಒಳಪಡುವ ಅಪಾಯವಿರುವ ಕೈದಿಗಳನ್ನ ಗುರುತಿಸಿ ಎಂದಿದೆ. ಇನ್ನು …

Read More »

ಆಮ್ಲಜನಕ ಪೂರೈಕೆ, ಉಪಚುನಾವಣೆ ಮತ್ತು ಕೊವಿಡ್​ ನಿರ್ವಹಣೆ; ಬೊಮ್ಮಾಯಿ ಮತ್ತು ವಿಜಯೇಂದ್ರರಿಂದ ವರದಿ ಪಡೆದ ಅಮಿತ್ ಶಾ

ನಿನ್ನೆ ಮಧ್ಯಾಹ್ನ ಪಕ್ಷದ ರಾಷ್ಟ್ರೀಯ ನಾಯಕರ ಕರೆಯ ಮೇರೆಗೆ ದೆಹಲಿಗೆ ಹೋಗಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಎಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಗ, ಬಿಜೆಪಿ ರಾಜ್ಯ ಉಪಾಧ್ಯಕ್ಷ, ಬಿ.ವೈ. ವಿಜಯೇಂದ್ರ, ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಅಧಿಕೃತವಾಗಿ ಯಾವುದೇ ಹೇಳಿಕೆ ಸರಕಾರದಿಂದ ಬಂದಿಲ್ಲದಿದ್ದರೂ ಪಕ್ಷದ ಮೂಲಗಳ ಪ್ರಕಾರ ಕೇಂದ್ರದ ನಾಯಕರು ಮೂರ್ನಾಲ್ಕು …

Read More »

ಕೋವಿಡ್ ಲಸಿಕೆ ಅಭಿಯಾನ: 2ನೇ ಡೋಸ್‌ ಸಿಗದೆ ಪರದಾಟ

ಶಿರಹಟ್ಟಿ: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮೇ 1ರಿಂದ ಕೋವಿಡ್‌ ಲಸಿಕೆ ನೀಡುತ್ತೇವೆ ಎಂದು ರಾಜ್ಯ ಸರ್ಕಾರವೇ ಹೇಳಿತ್ತು. ಆದರೆ, 60 ಮತ್ತು 45 ವರ್ಷ ಮೇಲ್ಪಟ್ಟ ತಾಲ್ಲೂಕಿನ ಸಾವಿರಾರೂ ಜನ ಎರಡನೇ ಲಸಿಕೆ ಹಾಕಿಸಿಕೊಳ್ಳಲು ಕಾಯುವಂತಾಗಿದೆ. ಶಿರಹಟ್ಟಿ ತಾಲ್ಲೂಕಿನಾದ್ಯಂತ ಈವರೆಗೂ 60 ವರ್ಷ ಮೇಲ್ಪಟ್ಟವರು 6,965 ಜನ ಮೊದಲ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರಲ್ಲಿ 45 ದಿನಗಳನ್ನು ಪೂರೈಸಿದ 1,595 ಜನ ಮಾತ್ರ ಎರಡನೇ ಲಸಿಕೆಯನ್ನು ಹಾಕಿಸಿಕೊಂಡದ್ದಾರೆ. 45 ವರ್ಷ …

Read More »

ಚುನಾವಣೆಯಿಂದ ಸೋಂಕು ಹೆಚ್ಚಾಗಿದೆ ಎಂಬುದು ಸುಳ್ಳು:ಶೆಟ್ಟರ್

ಬಳ್ಳಾರಿ: ಉಪ ಚುನಾವಣೆಯಿಂದ ಕೊರೊನಾ ಸೋಂಕು ಹೆಚ್ಚಳವಾಗಿದೆ ಎಂಬುದು ಸುಳ್ಳು, ಜನರೇ ಕೊರೊನಾ ವಿರುದ್ಧ ಹೋರಾಡಬೇಕು ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರಾಜ್ಯ ಮತ್ತು ರಾಜ್ಯದ ಉಪ ಚುನಾವಣೆಗಳಿಂದ ಕೊರೊನಾ ಹೆಚ್ಚಳ ಆಗಿದೆ ಎಂಬುದು ಸುಳ್ಳು. ಕೊರೊನಾ ಹೆಚ್ವಳಕ್ಕೆ ನೂರಾರು ಕಾರಣ ಇವೆ. ಜನರೇ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಆಕ್ಸಿಜನ್ ಹಂಚಿಕೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಿಎಂ ನನಗೆ ನೀಡಿದ್ದಾರೆ. …

Read More »

ಹಿಮಾಚಲಕ್ಕೆ ಹೋಗಲು ಬಿಗ್ ಬಿ, ಟ್ರಂಪ್ ಹೆಸರಿನಲ್ಲಿ ನಕಲಿ ಇ-ಪಾಸ್ : FIR ದಾಖಲು

ಶಿಮ್ಲಾ : ಹಿಮಾಚಲಕ್ಕೆ ಪ್ರವಾಸ ಕೈಗೊಳ್ಳಲು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿ ನಕಲಿ ಇ-ಪಾಸ್ ನೋಂದಣಿ ಮಾಡಲಾಗಿದ್ದು, ಆರೋಪಿ ವಿರುದ್ಧ FIR ದಾಖಲಾಗಿದೆ. ಹಿಮಾಚಲ ಪ್ರದೇಶ ಸರ್ಕಾರವು ಕೋವಿಡ್ ಸಮಯದಲ್ಲಿ ಪ್ರವಾಸ ಕೈಗೊಳ್ಳುವ ಪ್ರವಾಸಿಗರಿಗೆ ಇ-ಪಾಸ್ ಕಡ್ಡಾಯ ಮಾಡಿದೆ. ಈ ವೇಳೆ ಇಬ್ಬರು ಖ್ಯಾತ ನಾಮರ ಹೆಸರುಗಳನ್ನು ಬಳಿಸಿಕೊಂಡು, ಈ ಇಬ್ಬರು ಚತ್ತೀಸ್ ಗಡದಿಂದ ಶಿಲ್ಲಾಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದಾರೆ …

Read More »