Breaking News

ರಾಜ್ಯ

ಒಂದೇ ಕುಟುಂಬದ ನಾಲ್ವರು ಕೊರೋನಾ ಗೆ ಬಲಿ

ಬಾಗಲಕೋಟೆ: ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಕೊರೊನಾದಿಂದ ಮೃತಪಟ್ಟಿದ್ದು, ಒಬ್ಬರ ಹಿಂದೆ ಮತ್ತೊಬ್ಬರನ್ನ ಈ ಹೆಮ್ಮಾರಿ ಬಲಿ ಪಡೆದಿದೆ. ಪತಿ, ಪತ್ನಿ, ಅತ್ತೆ, ಮಾವ ನಾಲ್ವರರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಬಾಗಲಕೋಟೆ ತಾಲೂಕಿನ ದೇವಿನಾಳ ಗ್ರಾಮದ ವೆಂಕಟೇಶ್ ಒಂಟಗೋಡಿ(45), ವೆಂಕಟೇಶ್ ಪತ್ನಿ ಶಿಕ್ಷಕಿ ರಾಜೇಶ್ವರಿ(40), ಮಾವ(ರಾಜೇಶ್ವರಿ ಅಪ್ಪ) ರಾಮನಗೌಡ ಉದಪುಡಿ(74), ಅತ್ತೆ(ರಾಜೇಶ್ವರಿ ತಾಯಿ) ಹಾಗೂ ಲಕ್ಷ್ಮೀಬಾಯಿ(68) ಮೃತ ದುರ್ದೈವಿಗಳು. ಮೇ 3 ರಿಂದ 15 ರ ಅವಧಿಯಲ್ಲಿ ಬಾಗಲಕೋಟೆ ನಗರದ ವಿವಿಧ …

Read More »

ಗಾಜಾ ನಗರದ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ

ಗಾಜಾ ನಗರ: ಗಾಜಾ ನಗರದ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ ಮುಂದುವರಿಸಿದೆ. ಭಾನುವಾರ ಬೆಳಿಗ್ಗೆ ಇಸ್ರೇಲ್‌ನ ಯುದ್ಧವಿಮಾನಗಳು ನಡೆಸಿದ ದಾಳಿಯಲ್ಲಿ ಹಲವಾರು ಕಟ್ಟಡಗಳು ನೆಲಸಮಗೊಂಡಿದ್ದು, ರಸ್ತೆಗಳು ಹಾಳಾಗಿವೆ. ಎರಡು ಗಂಟೆಗಳಿಗೂ ಹೆಚ್ಚು ಅವಧಿಗೆ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮಕ್ಕಳು ಹಾಗೂ ಮಹಿಳೆಯರು ಸೇರಿ 25 ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.   ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯ ಮುಂದುವರಿದಿದೆ. ಕಟ್ಟಡಗಳು, ರಸ್ತೆಗಳು …

Read More »

ಕಾಂಗ್ರೆಸ್ ರಾಜ್ಯಸಭಾ ಸದಸ್ಯ ರಾಜೀವ ಸಾತವಾ ಕೊರೋನಾಕ್ಕೆ ಬಲಿ

ನವದೆಹಲಿ – ಕಾಂಗ್ರೆಸ್ ರಾಜ್ಯಸಭಾ ಸದಸ್ಯ ರಾಜೀವ ಸಾತವಾ ಕೊರೋನಾಕ್ಕೆ ಬಲಿಯಾಗಿದ್ದಾರೆ. ಒಂದು ವಾರದ ಹಿಂದೆ ಸಾತವಾ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಅತ್ಯಂತ ಕ್ರಿಯಾಶೀಲ, ಉತ್ಸಾಹಿ ಸಂಸದರಾಗಿದ್ದ ರಾಜೀವ, ಗಾಂಧಿ ಕುಟುಂಬಕ್ಕೆ ಹತ್ತಿರದವರಾಗಿದ್ದರು.   Its not at all believable. We lost a humble and grounded person today. Shri #RajeevSatav Ji was an inspiration for …

Read More »

ಖಾನಾಪುರ ತಾಲೂಕಲ್ಲಿ ಅಜ್ಜಿ ಮೊಮ್ಮಗ ಸಾವು

ಬೆಳಗಾವಿ –  ಭಾನುವಾರ ಮೇ.16ರಂದು ಮುಂಜಾನೆ 9 ಗಂಟೆ ಸಮಯದಲ್ಲಿ ಖಾನಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ಮನೆ ಗೋಡೆ ಕುಸಿದ ಪರಿಣಾಮ ದೊಡ್ಡವ್ವ ರುದ್ರಪ್ಪ ಪಟ್ಟೆದ (55) ಮತ್ತು ಅವರ ಮೊಮ್ಮಗ ಅಭಿಷೇಕ ಸುರೇಶ ಪಟ್ಟೆದ (3)  ಮೃತಪಟ್ಟಿದ್ದಾರೆ. ಶನಿವಾರ ರಾತ್ರಿಯಿಂದ ಗ್ರಾಮದಲ್ಲಿ ಸುರಿಯುತ್ತಿರುವ ಮಳೆ-ಗಾಳಿಗೆ ಇವರು ವಾಸವಿದ್ದ ಮನೆಯ ಗೋಡೆ ಕುಸಿದು ಬಿದ್ದು ಮೃತಪಟ್ಟಿರುತ್ತಾರೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂದಗಡ  ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ …

Read More »

ಅಂತ್ಯಕ್ರಿಯೆಗೆ ಕೆಲವೇ ನಿಮಿಷವಿರುವಾಗ ಎದ್ದು ನಿಂತ ಕೋವಿಡ್ ಪೀಡಿತ ಮಹಿಳೆ

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಒಂದು ವಿಲಕ್ಷಣ ಘಟನೆಯೊಂದರಲ್ಲಿ ಬಾರಾಮತಿಯ ಮುಧಲೆ ಗ್ರಾಮದ, 76 ವರ್ಷದ ಮಹಿಳೆ ಕೋವಿಡ್ ನಿಂದ ಮೃತಪಟ್ಟಿದ್ದಾಳೆಂದು ನಂಬಿ ಕುಟುಂಬದವರು ಅಂತ್ಯಕ್ರಿಯೆಗೆ ತಯಾರಿ ನಡೆಸುತ್ತಿದ್ದಾಗ ಮಹಿಳೆ ಎದ್ದುನಿಂತಿರುವ ಒಂದು ವಿಲಕ್ಷಣ ಘಟನೆಯೊಂದು ವರದಿಯಾಗಿದೆ. ಮಹಿಳೆಯನ್ನು ಶಕುಂತಲಾ ಗಾಯಕ್ವಾಡ್ ಎಂದು ಗುರುತಿಸಲಾಗಿದೆ. ಮಹಿಳೆ ಕೆಲವು ದಿನಗಳ ಹಿಂದೆ ಕೋವಿಡ್ -19 ಸೋಂಕಿಗೆ ತುತ್ತಾಗಿದ್ದರು. ಮನೆಯಲ್ಲಿ ಪ್ರತ್ಯೇಕವಾಗಿದ್ದರು. ಆದರೆ ವೃದ್ಧಾಪ್ಯದಿಂದಾಗಿ ಆಕೆಯ ಸ್ಥಿತಿ ಹದಗೆಟ್ಟಿತು, ಹೀಗಾಗಿ ಕುಟುಂಬದವರು ಮಹಿಳೆಯನ್ನು ಬಾರಾಮತಿಯ ಆಸ್ಪತ್ರೆಗೆ ಸ್ಥಳಾಂತರಿಸಲು …

Read More »

ಹೊಸ ಗಂಡ ತಂದೇ ಬಿಟ್ಟ ಗಂಡಾಂತರ: 23 ವರ್ಷ ಯುವಕನ ಮೇಲಿನ ಮೋಹಕ್ಕೆ 6 ವರ್ಷದ ಮಗನೇ ಬಲಿಯಾದ!

ನೆಲಮಂಗಲ: ಕೇವಲ ಮೋಹ, ಕಾಮದ ಹಿಂದೆ ಹೋದರೆ ಸಂಬಂಧಗಳೆಲ್ಲಾ ಹೇಗೆ ಮಣ್ಣಾಗುತ್ತವೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಆತನದ್ದು ತಂದೆಯಾಗುವ ವಯಸ್ಸೇ ಅಲ್ಲ ಅಂತದ್ದರಲ್ಲಿ 6 ವರ್ಷ ಬಾಲಕನಿಗೆ ಮಲತಂದೆಯಾಗಿದ್ದ. ಬಾಲಕನ ತಾಯಿಯ ಮೇಲಿನ ಮೋಹ 23 ವರ್ಷಕ್ಕೆ ಮಲತಂದೆಯನ್ನಾಗಿ ಮಾಡಿತ್ತು. ಕೇವಲ ತಾಯಿಯೊಂದಿಗಿನ ಸಂಬಂಧ ಬಯಸ್ಸಿದ್ದ 23 ವರ್ಷ ಯುವಕನಿಗೆ ತಂದೆಯಾಗುವುದು ಬೇಕಾಗಿಯೇ ಇರಲಿಲ್ಲ. 6 ವರ್ಷ ಹುಡುಗನ ಆಟ-ತುಂಟಾಟಗಳಿಗೆ ಮಲತಂದೆ ಎನಿಸಿಕೊಂಡವನು ಅಡಿಗಡಿಗೂ ಸಿಡಿಸಿಡಿ ಎನ್ನುತ್ತಿದ್ದ. ಕೊನೆಗೆ …

Read More »

ಕೊರೋನಾ ಕರುಣಾಜನಕ ಘಟನೆ: ದಂಪತಿ ಸಾವು, 5 ದಿನದ ಹೆಣ್ಣುಮಗು ಅನಾಥ

ಮಂಡ್ಯ: ಕೊರೋನಾ ಸೋಂಕು ತಗುಲಿದ್ದರಿಂದ ದಂಪತಿ ಸಾವನ್ನಪ್ಪಿದ್ದು, 5 ದಿನದ ಹೆಣ್ಣುಮಗು ಅನಾಥವಾಗಿದೆ. ನಾಗಮಂಗಲ ತಾಲೂಕಿನ ದೊಡ್ಡೇನಹಳ್ಳಿಯಲ್ಲಿ ಘಟನೆ ನಡೆದಿದೆ. 45 ವರ್ಷದ ನಂಜುಂಡೇಗೌಡ ಮತ್ತು 31 ವರ್ಷದ ಮಮತಾ ದಂಪತಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದಾಗಿ ದಂಪತಿಯ 5 ದಿನದ ಹೆಣ್ಣುಮಗು ಅನಾಥವಾಗಿದೆ. ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ ನಂಜುಂಡೇಗೌಡ ಕೊರೋನಾ ಸೋಂಕು ತಗುಲಿದ್ದರಿಂದ ಏಪ್ರಿಲ್ 30 ರಂದು ಮೃತಪಟ್ಟಿದ್ದರು. ಗರ್ಭಿಣಿಯಾಗಿದ್ದ ಅವರ ಪತ್ನಿ ಮಮತಾ ಅವರಿಗೂ ಕೊರೊನಾ ಸೋಂಕು …

Read More »

ಯಾದಗಿರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಕೋವಿಡ್‌ಗೆ ಬಲಿ

ಕಲಬುರ್ಗಿ: ಕಲಬುರ್ಗಿಯ ಕರುಣೇಶ್ವರ ನಗರದ ನಿವಾಸಿ, ಯಾದಗಿರಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಬುದ್ಧೇಶ್ ಶಂಕರ ಸಿಂಗೆ (53) ಅವರು ಸೊಲ್ಲಾಪುರದ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು. ಕೊರೊನಾ ಸೋಂಕಿನಿಂದ ಬಳಲಿದ್ದ ಅವರು ಚಿಕಿತ್ಸೆಯ ನಂತರ ಗುಣಮುಖರಾಗಿ ಮರಳಿದ್ದರು. ಆದರೆ, ಕೆಲವೇ ದಿನಗಳಲ್ಲಿ ಮತ್ತೆ ಅವರಿಗೆ ಬಹು ಅಂಗಾಂಗ ವೈಫಲ್ಯ ಕಂಡುಬಂದಿದ್ದರಿಂದ ಸೊಲ್ಲಾಪುರದ ವೈದ್ಯರು ಕಪ್ಪುಶಿಲೀಂದ್ರ (ಬ್ಲ್ಯಾಕ್‌ ಫಂಗಸ್‌) ಸೋಂಕು ಇರಬಹುದು ಎಂದು ಶಂಕಿಸಿದ್ದರು.ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. …

Read More »

ಮಾರಕ ಕೊರೋನಾಕ್ಕೆ ಬಲಿಯಾದ ಮತ್ತೊಬ್ಬ ಹಿರಿಯ ಪತ್ರಕರ್ತ ಲಕ್ಷ್ಮೀ ನಾರಾಯಣ.

ಬೆಂಗಳೂರು : ಮಾರಕ ಕೊರೋನಾಕ್ಕೆ ಬಲಿಯಾದ ಮತ್ತೊಬ್ಬ ಹಿರಿಯ ಪತ್ರಕರ್ತ ಲಕ್ಷ್ಮೀ ನಾರಾಯಣ. ಖಾಸಗಿ ಸುದ್ದಿ ವಾಹಿನಿಯಲ್ಲಿ ಹಿರಿಯ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ನಾರಾಯಣ ಅವರು ಕೊರೋನಾದಿಂದ ಮೃತಪಟ್ಟಿದ್ದಾರೆ . ಒಂದು ವಾರದ ಹಿಂದೆ ಅವರಿಗೆ ಕೊರೋನಾ ಸೋಂಕು ಕಂಡು ಬಂದಿತ್ತು . ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಇದೀಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ . ಲಕ್ಷ್ಮೀ ನಾರಾಯಣ ಅವರು ಈಟಿವಿ ನ್ಯೂಸ್ …

Read More »

ಒಳಿತು ಮಾಡು ಮನುಷ್ಯಾ.. ನೀ ಇರೋದು ಮೂರು ದಿವಸಾ: ಹಿಂಗೆ ನಡೆದುಕೊಳ್ಳುತ್ತಿದ್ದಾರೆ ಹುಬ್ಬಳ್ಳಿ ಪೊಲೀಸರು…!

ಹುಬ್ಬಳ್ಳಿ: ಕೊರೋನಾ ಎಂಬ ಮಹಾಮಾರಿ ಪ್ರತಿಯೊಬ್ಬರ ನೆಮ್ಮದಿಯನ್ನ ಹಾಳು ಮಾಡುವುದಲ್ಲದೇ, ಬದುಕನ್ನ ನಿರ್ಜೀವಿಯನ್ನಾಗಿ ಮಾಡುತ್ತಿರುವುದು ಎಲ್ಲರಿಗೂ ಗೊತ್ತೆಯಿದೆ. ತಾನೂ ಇರುವುದೆಷ್ಟು ದಿನ ಎಂಬುದು ಗೊತ್ತೆಯಿಲ್ಲದಿದ್ದರೂ, ಮನುಷ್ಯ ಮಾತ್ರ ಮಾನವೀಯ ಇನ್ನೂ ಮೈಗೂಡಿಸಿಕೊಳ್ಳುತ್ತಿಲ್ಲ. ಆದರೆ, ಸದಾಕಾಲ ಸಾರ್ವಜನಿಕರಿಂದ ವಿನಾಕಾರಣ ಬೈಸಿಕೊಳ್ಳುವ ಪೊಲೀಸರು ಮಾತ್ರ, ತಾವೂ ಎಷ್ಟು ಮಾನವೀಯತೆ ಹೊಂದಿದ್ದೇವ ಎಂಬುದನ್ನ ಸದ್ದಿಲ್ಲದೇ ತೋರಿಸಿಕೊಂಡು ಹೋಗುತ್ತಿದ್ದಾರೆ.. ಹುಬ್ಬಳ್ಳಿ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಬಂದ ನಂತರ ಪೊಲೀಸ್ ವ್ಯವಸ್ಥೆಯಲ್ಲಿ ಸಾಕಷ್ಟು ಉತ್ತಮ ಬೆಳವಣಿಗೆಗಳು …

Read More »