Breaking News

ರಾಜ್ಯ

ರಾಜ್ಯದಲ್ಲಿ ಮಳೆಗೆ ಉಕ್ಕಿ ಹರಿಯುತ್ತಿರುವ ನದಿಗಳು, ಎದುರಾದ ಪ್ರವಾಹ ಭೀತಿ; ಮುಂಬೈ-ಬೆಂಗಳೂರು ರಾ.ಹೆ. ಬಂದ್

ಮುಂಬೈ-ಬೆಂಗಳೂರು ರಾ.ಹೆ. ಬಂದ್ ಇನ್ನು, ಚಿಕ್ಕೋಡಿಯಲ್ಲಿ ಮಹಾ ಮಳೆಗೆ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಮುಂಬೈ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಂಚಾರ ಸ್ಥಗಿತಗೊಂಡಿದೆ. ವೇದ ಗಂಗಾ ನದಿಗೆ ಅಪಾರ ಪ್ರಮಾಣದ ನೀರು ಹಿನ್ನಲೆ ಸಂಚಾರ ಬಂದ್ ಆಗಿದೆ. ರಾಷ್ಟ್ರೀಯ ಹೆದ್ದಾರಿ ಮೇಲೆ ವೇದಗಂಗಾ ನದಿ ನೀರು ಹರಿದು ಬರುತ್ತಿದೆ. ಬೆಳಗಾವಿಯಲ್ಲಿ ಮಳೆ ಪಶ್ಚಿಮ ಘಟ ಪ್ರದೇಶದಲ್ಲಿ ‌ಭಾರೀ ಮಳೆ ಹಿನ್ನೆಲೆ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ನವೀಲುತೀರ್ಥ …

Read More »

ಕೊಂಕಣ ರೈಲು ಸೇವೆಗೆ ಮಳೆ ಅಡ್ಡಿ: ಮಹಾರಾಷ್ಟ್ರದಲ್ಲಿ ಸಿಲುಕಿದ 6000 ಪ್ರಯಾಣಿಕರು

ಮುಂಬೈ: ಕೊಂಕಣ ರೈಲು ಸೇವೆಗೆ ಮಳೆ ಅಡ್ಡಿ ಉಂಟಾಗಿದ್ದು ಕೊಂಕಣ ರೈಲ್ವೆ ಮಾರ್ಗದಲ್ಲಿ 6,000 ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಕೊಂಕಣ ಮಾರ್ಗದ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ತೀವ್ರ ಮಳೆಯ ಪರಿಣಾಮ ನದಿ ಉಕ್ಕಿ ಹರಿದಿದ್ದು, ರಸ್ತೆ ಹಾಗೂ ರೈಲು ಮಾರ್ಗದ ಸೇವೆಗಳಿಗೆ ಅಡ್ಡಿಯುಂಟಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಮುಂಬೈ ಅಧಿಕಾರಿಗಳು ಎನ್ ಡಿಆರ್ ಎಫ್ ನ ಸಹಾಯ ಕೋರಿದ್ದಾರೆ. ಕೊಂಕಣ ರೈಲ್ವೆ ಮಾರ್ಗದಲ್ಲಿ ಈ ವರೆಗೂ 9 ರೈಲುಗಳ …

Read More »

ಅಪಾಯಮಟ್ಟದಲ್ಲಿ ಹರಿಯುತ್ತಿರುವ ವಶಿಷ್ಟಿ ನದಿ: ಕೊಂಕಣ ರೈಲು ಸಂಚಾರ ವ್ಯತ್ಯಯ

: ಮಹಾರಾಷ್ಟ್ರದಲ್ಲಿ ಕೊಂಕಣ ರೈಲ್ವೆ ಮಾರ್ಗದ ಚಿಪ್ಳೂಣ್ ಹಾಗೂ ಕಮತೆ ನಿಲ್ದಾಣಗಳ ನಡುವೆ ರತ್ನಗಿರಿ ಪ್ರಾಂತ್ಯದಲ್ಲಿ ಹರಿ ಯುವ ವಶಿಷ್ಟಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಸೇತುವೆಯಲ್ಲಿ ಹಾದುಹೋಗುವ ರೈಲು ಹಳಿಗಳ ಮೇಲೂ ನೀರು ಹರಿಯುತ್ತಿರುವು ದರಿಂದ ರೈಲು ಸಂಚಾರವನ್ನು ಪ್ರಯಾಣಿಕರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ. ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳ ಮಾರ್ಗವನ್ನು ಬದಲಿಸಲಾಗಿದ್ದು, ಇನ್ನು ಕೆಲವು ರೈಲುಗಳನ್ನು ಕಮತೆ ನಿಲ್ದಾಣದಲ್ಲಿ …

Read More »

ಮಾಮೂಲಿ ಕೊಡದ್ದಕ್ಕೆ ಸುಳ್ಳು ಕೇಸ್ ದಾಖಲಿಸಿದ್ದ ಲೇಡಿ ಇನ್​ಸ್ಪೆಕ್ಟರ್, ಸಬ್​ ಇನ್​ಸ್ಪೆಕ್ಟರ್ ಸೇರಿ ಮೂವರ ಸಸ್ಪೆಂಡ್

ಬೆಂಗಳೂರು: ಮಾಮೂಲಿ ಕೊಡಲಿಲ್ಲ ಎಂಬ ಕಾರಣಕ್ಕೆ ಅಮಾಯಕನ ವಿರುದ್ಧ ಸುಳ್ಳು ಕೇಸ್​ ದಾಖಲಿಸಿದ್ದ ಮಹಿಳಾ ಇನ್​​ಸ್ಪೆಕ್ಟರ್​, ಈ ಪ್ರಕರಣದ ಆಂತರಿಕ ತನಿಖೆ ನಡೆಸುತ್ತಿದ್ದ ಡಿಸಿಪಿ ವಿರುದ್ಧವೇ ಸ್ಟಿಂಗ್ ಆಪರೇಷನ್​ಗೆ ಯತ್ನಿಸಿದ್ದ ಸಬ್​ ಇನ್​ಸ್ಪೆಕ್ಟರ್​ ಸೇರಿ ಮೂವರು ಪೊಲೀಸರನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​ ಅಮಾನತುಗೊಳಿಸಿದ್ದಾರೆ. ಆರ್​ಎಂಸಿ ಯಾರ್ಡ್ ಪೊಲೀಸ್ ಇನ್​ಸ್ಪೆಕ್ಟರ್​ ಪಾರ್ವತಮ್ಮ ಹಾಗೂ ಸಬ್​ ಇನ್​ಸ್ಪೆಕ್ಟರ್​ ಅಂಜಿನಪ್ಪ ಹಾಗೂ ಇನ್ನೊಬ್ಬ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಇನ್​ಸ್ಪೆಕ್ಟರ್ ಪಾರ್ವತಮ್ಮ ಹಾಗೂ ಎಸ್‌ಐ …

Read More »

ಪ್ರತಿದಿನ 2GB ಡೇಟಾ, 28 ದಿನ ವ್ಯಾಲಿಡಿಟಿ: ನಂ. 1 ಸ್ಥಾನಕ್ಕೆ ಏರ್ಟೆಲ್-ಜಿಯೋ ನಡುವೆ ಗುದ್ದಾಟ

ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ (Jio) ಹಾಗೂ ಏರ್‌ಟೆಲ್​ಗಳ (Airtel) ನಡುವೆ ಸಮತ ಮುಂದುವರೆಯುತ್ತಲೇ ಇದೆ. ನಂಬರ್ ಒನ್ ಪಟ್ಟಕ್ಕೇರಲು ಏರ್ಟೆಲ್ ಹರಸಾಹಸ ಪಡುತ್ತಿದ್ದು, ಹೊಸ ಹೊಸ ಆಕರ್ಷಕ ಪ್ಲಾನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಜಿಯೋ ಕೂಡ ಎಂದಿನಂತೆ ಕಡಿಮೆ ಬೆಲೆಗೆ ಆಕರ್ಷಕ ಡೇಟಾ ಪ್ಲಾನ್​ಗಳನ್ನು ಪರಿಚಯಿಸುತ್ತಿದೆ. ಗ್ರಾಹಕರನ್ನು ತನ್ನತ್ತ ಸೆಳೆಯರಲು ಎರಡೂ ನೆಟ್​ವರ್ಕ್ ಪೈಪೋಟಿಗೆ ಬಿದ್ದಂತೆ ಕಾಣುತ್ತಿದೆ. ಇದರ ನಡುವೆ ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್ (BSNL) ಮತ್ತು ವೊಡಾಫೋನ್ – ಐಡಿಯಾ …

Read More »

ಟೆಲಿಫೋನ್ ಕದ್ದಾಲಿಕೆ ಆರೋಪ: ಕಾಂಗ್ರೆಸ್‌ನಿಂದ ರಾಜಭವನಕ್ಕೆ ಮುತ್ತಿಗೆ

ಬೆಂಗಳೂರು: ಟೆಲಿಫೋನ್ ಕದ್ದಾಲಿಕೆ ಪ್ರತಿಭಟಿಸಿ ಕಾಂಗ್ರೆಸ್‌ ಶಾಸಕರು, ಮುಖಂಡರು ಕಾರ್ಯಕರ್ತರು ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಪ್ರತಿಭಟನೆಯ ನೇತೃತ್ವವನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ಹಿರಿಯ ಮುಖಂಡರಾದ ಎಚ್.ಕೆ. ಪಾಟೀಲ, ಅಲ್ಲಂ ವೀರಭದ್ರಪ್ಪ, ರಾಮಲಿಂಗಾರೆಡ್ಡಿ, ಕೆ.ಆರ್. ರಮೇಶ್ ಕುಮಾರ್, ಸಲೀಂ ಅಹ್ಮದ್‌ ವಹಿಸಿದ್ದರು. ಅದಕ್ಕೂ ಮೊದಲು ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ …

Read More »

ತಡರಾತ್ರಿ ಸ್ವಗ್ರಾಮಕ್ಕೆ ಬಂದ ಗದಗ ಯೋಧನ ಮೃತದೇಹ.. ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಗದಗ: ಛತ್ತೀಸ್​ಘಡದಲ್ಲಿ ನಕ್ಸಲರೊಂದಿಗೆ ಹೋರಾಡುತ್ತಾ ಹುತಾತ್ಮನಾದ ಯೋಧನ ಅಂತ್ಯಕ್ರಿಯೆ ತಡರಾತ್ರಿ ಗದಗ ಜಿಲ್ಲೆಯ ಸ್ವಗ್ರಾಮ ಗೊಜನೂರಿನಲ್ಲಿ ನಡೆದಿದೆ.     ನಕ್ಸಲರೊಂದಿಗೆ ಹೋರಾಡುವಾಗ ಗುಂಡು ತಗುಲಿ ಎರಡು ದಿನಗಳ ಹಿಂದೆ ಯೋಧ ಲಕ್ಷ್ಮಣ ಗೌರಣ್ಣವರ್ (30) ಹುತಾತ್ಮರಾಗಿದ್ದರು.. ರಾತ್ರಿ 11 ಗಂಟೆ ಸುಮಾರಿಗೆ ಪಾರ್ಥಿವ ಶರೀರ ಗ್ರಾಮಕ್ಕೆ ಬಂದಿದ್ದು ತಡರಾತ್ರಿ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ. ಪಾರ್ಥಿವ ಶರೀರ ಗ್ರಾಮಕ್ಕೆ ಬರುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.. ಯೋಧನ ಸಾವಿಗೆ ಇಡೀ …

Read More »

ಜುಲೈ 30 ರ ಒಳಗೆ ಸರ್ಕಾರ ಶಾಲೆ ತೆರೆಯದಿದ್ದರೆ.. ಆಗಸ್ಟ್ 1 ಕ್ಕೆ ನಾವೇ ಆರಂಭಿಸ್ತೇವೆ- ರುಪ್ಸಾ ಎಚ್ಚರಿಕೆ

ಶಿಕ್ಷಣ ಇಲಾಖೆ ಹಾಗೂ ಸರ್ಕಾರಕ್ಕೆ ರುಪ್ಸಾ ಎಚ್ಚರಿಕೆ ನೀಡಿದ್ದು ಸರ್ಕಾರ ಶಾಲೆ ಆರಂಭಕ್ಕೆ ಅವಕಾಶ ಕೊಟ್ಟಿಲ್ಲ ಅಂದ್ರೆ ತಾವೇ ಸ್ವತಃ ಶಾಲೆ ಆರಂಭಕ್ಕೆ ಸಿದ್ಧ ಎಂದಿದೆ. ತಮ್ಮ ಶಾಲೆಯಲ್ಲಿ ಇರುವ ಪೋಷಕರ ಅಭಿಪ್ರಾಯ ಪಡೆದು ಶಾಲೆ ಆರಂಭಕ್ಕೆ ಚಿಂತನೆ ನಡೆಸಿದ್ದೇವೆ.. ಕಳೆದ ವರ್ಷದ SOPಗೆ ಅನುಗುಣವಾಗಿ ಆಗಸ್ಟ್ 1 ಕ್ಕೆ ಶಾಲೆ ಆರಂಭಿಸುತ್ತೇವೆ ಎಂದಿದೆ. ಶಾಲೆಗಳ ಆರಂಭಕ್ಕೆ ICMR ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೇ ರುಪ್ಸಾ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯ್ತು.. …

Read More »

ಮಹಾರಾಷ್ಟ್ರ, ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮಳೆ – 8 ಸೇತುವೆಗಳು ಜಲಾವೃತ

ಚಿಕ್ಕೋಡಿ: ಮಹಾರಾಷ್ಟ್ರ ಹಾಗೂ ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿರುವ ಹಿನ್ನೆಲೆ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡಿದೆ. ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಚಿಕ್ಕೋಡಿ ಉಪವಿಭಾಗದ ಎಂಟು ಸೇತುವೆಗಳು ಜಲಾವೃತವಾಗಿವೆ. ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ತಾಲೂಕುಗಳ ಎಂಟು ಸೇತುವೆಗಳು ಜಲಾವೃತಗೊಂಡಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಡೂರು-ಕಲ್ಲೋಳ ಸೇತುವೆ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳಿಗೆ …

Read More »

ಕಾಂಗ್ರೆಸ್ ನ ಮಂಗಳೂರು ಸಭೆ ರದ್ದು: ಆಸ್ಕರ್ ಆರೋಗ್ಯ ವಿಚಾರಿಸಲು ಡಿಕೆ ಶಿವಕುಮಾರ್ ಮಂಗಳೂರಿಗೆ

ಬೆಂಗಳೂರು: ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಂಗಳೂರಿನಲ್ಲಿ ಶುಕ್ರವಾರ ನಡೆಸಬೇಕಿದ್ದ ಸಭೆಯನ್ನು ರದ್ದುಗೊಳಿಸಲಾಗಿದೆ. ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಲು ಡಿ.ಕೆ. ಶಿವಕುಮಾರ್ ಅವರು ಇಂದು ಸಂಜೆ ಮಂಗಳೂರಿಗೆ ತೆರಳಲಿದ್ದಾರೆ. ಉಳಿದಂತೆ ತುಮಕೂರಿನಲ್ಲಿ ಶನಿವಾರ ನಡೆಯಲಿರುವ ಸಭೆ ನಿಗದಿಯಂತೆ ಮುಂದುವರಿಯಲಿದೆ.

Read More »