Breaking News

ರಾಜ್ಯ

ಗೋವಾದ ಕ್ಯಾಸಿನೋದಲ್ಲಿ ಜೂಜಾಟದಿಂದ ಬಂದ ಹಣಕ್ಕಾಗಿಯೇ ನವನಗರದ ಬಾಲಕಿ ಅಪಹರಣ ನಡೆದಿರುವುದು ಬೆಳಕಿಗೆ ಬಂದಿದೆ.

ಬಾಗಲಕೋಟೆ: ಗೋವಾದ ಕ್ಯಾಸಿನೋದಲ್ಲಿ ಜೂಜಾಟದಿಂದ ಬಂದ ಹಣಕ್ಕಾಗಿಯೇ ನವನಗರದ ಬಾಲಕಿ ಅಪಹರಣ ನಡೆದಿರುವುದು ಬೆಳಕಿಗೆ ಬಂದಿದೆ. ಅಕ್ಟೋಬರ್ 27ರಂದು ನವನಗರದ ಸೆಕ್ಟರ್ ನಂಬರ 61ರಲ್ಲಿ ಕೃತಿಕಾ ಕೊಡಗಾನೂರ (7) ಎಂಬ ಬಾಲಕಿಯನ್ನು ಅಪಹರಣ ಮಾಡಲಾಗಿತ್ತು. ಅಪಹರಣ ಆಗಿರುವ ಬಾಲಕಿ ಸಹೋದರ ಮಾವ ಅನಿಲ ಎಂಬುವನು ಗೋವಾಗೆ ಹೋಗಿ ಕ್ಯಾಸಿನೋದಲ್ಲಿ ಅಂದಾಜು 45 ಲಕ್ಷ ರೂಪಾಯಿಗಳು ತೆಗೆದುಕೊಂಡು ಬಂದಿದ್ದನು. ಅಪಹರಣಕ್ಕೆ ಪ್ಲ್ಯಾನ್ ಮಾಡಿದ ಪ್ರಮುಖ ಆರೋಪಿ ಭೀರಪ್ಪ ಬೂದಿಹಾಳ ಎಂಬುವನು ಅನಿಲ ಜೊತೆಗೆ …

Read More »

ಉತ್ತರ ಕರ್ನಾಟಕ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗಿದೆ. ಹೀಗಾಗಿ, ಪ್ರತ್ಯೇಕ ರಾಜ್ಯದ ಕೂಗು ಸದ್ಯಕ್ಕೆ ಬೇಕಾಗಿಲ್ಲ.

ಬಾಗಲಕೋಟೆ : ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಆದಾಗ ಪ್ರತ್ಯೇಕ ರಾಜ್ಯದ ಬೇಡಿಕೆ ಕೂಗು ಇರಲಿದೆ. ಈಗ ಒಬ್ಬ ಜವಾಬ್ದಾರಿಯುತ ಮಂತ್ರಿಯಾಗಿದ್ದೇನೆ. ಹೀಗಾಗಿ, ಆ ವಿಚಾರ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು. ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾದಿಂದ ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಹೀಗಾಗಿ, ಉತ್ತರ ಕರ್ನಾಟಕ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ …

Read More »

ಮಹಿಳಾ-ಯುವಕ ಮಂಡಳದಿಂದ ಅಗಲಿದ ಅಪ್ಪುಗೆ ಶ್ರದ್ಧಾಂಜಲಿ

ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನಕ್ಕೆ ಎಲ್ಲರೂ ಮಮ್ಮಲ ಮರಗುತ್ತಿದ್ದಾರೆ. ಈ ಸಾವು ನ್ಯಾಯವೇ ಎನ್ನುತ್ತಿದ್ದಾರೆ. ಇನ್ನು ನಾಡಿನ ಮೂಲೆ ಮೂಲೆಯಲ್ಲಿ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಅದೇ ರೀತಿ ಬೆಳಗಾವಿಯ ಕಪಿಲೇಶ್ವರ ಮಹಿಳಾ ಮಂಡಳ ಮತ್ತು ಯುವಕ ಮಂಡಳ ವತಿಯಿಂದಲೂ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬೆಳಗಾವಿಯ ಕಪಿಲೇಶ್ವರ ಏರಿಯಾದಲ್ಲಿ ಕಪಿಲೇಶ್ವರ ಮಹಿಳಾ ಮಂಡಳ ಮತ್ತು ಯುವಕ ಮಂಡಳದ ಪದಾಧಿಕಾರಿಗಳು ಅಗಲಿದ ಕನ್ನಡದ ಕಣ್ಮನಿ, ಯುವರತ್ನ, ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರ ಇರುವ …

Read More »

ದೇಶಾಧ್ಯಂತ ಪಾದಯಾತ್ರೆ ಕೈಗೊಂಡ ಮಹಾರಾಷ್ಟ್ರದ ಯುವಕ

ಪ್ಲಾಸ್ಟಿಕ್ ಮುಕ್ತ ಭಾರತ, ಗುರುಕುಲ ವ್ಯವಸ್ಥೆ ಪುನರ್ ಆರಂಭ ಹಾಗೂ ದೇಶದಲ್ಲಿ ಭ್ರಾತೃತ್ವ ಭಾವನೆ ಎಲ್ಲರಲ್ಲಿಯೂ ಬರಬೇಕು ಎಂಬ ಉದ್ದೇಶದಿಂದ ಮಹಾರಾಷ್ಟ್ರದ ಯುವಕನೊರ್ವ ದೇಶಾಧ್ಯಂತ ಪಾದಯಾತ್ರೆ ಕೈಗೊಂಡಿದ್ದಾನೆ. ಸಧ್ಯ ಬೆಳಗಾವಿಗೆ ಆಗಮಿಸಿರುವ ಈ ಯುವಕನಿಗೆ ಕನ್ನಡಪರ ಸಂಘಟನೆಗಳು ಆತ್ಮೀಯವಾಗಿ ಬರಮಾಡಿಕೊಂಡಿವೆ. ಹೌದು ನೀವು ನೋಡುತ್ತಿರುವ ಈ ಯುವಕನ ಹೆಸರು ರೋಹನ್ ಅಗರವಾಲ್ ಅಂತಾ. ಈತ ಮಹಾರಾಷ್ಟ್ರದ ನಾಗ್ಪುರದವನು. ಇನ್ನು ಕೇವಲ 19 ವರ್ಷ ವಯಸ್ಸು. ತನ್ನ ಕಾಲೇಜು, ತನ್ನ ಮನೆ …

Read More »

ಪುನೀತ್ ನಿಧನದ ಬಳಿಕ ಬೆಂಗಳೂರಿನ ಜಯದೇವ, ಮಂಗಳೂರು.. ಸೇರಿದಂತೆ ಮಂಡ್ಯದ ಪ್ರಿಯದರ್ಶಿನಿ ಹಾರ್ಟ್ ಕೇರ್ ಸೆಂಟರ್‌ಗೆ ರೋಗಿಗಳ ದೌಡಾ

: ಮಂಡ್ಯ: ಸ್ಯಾಂಡಲ್​​ವುಡ್​​ ಪವರ್​ ಸ್ಟಾರ್​ ಪುನೀತ್​ ರಾಜಕುಮಾರ್​​ ಹಠಾತ್ ನಿಧನ ಜನರ ಆತಂಕಕ್ಕೆ ಕಾರಣವಾಗಿದೆ. ಪುನೀತ್ ನಿಧನದ ಬಳಿಕ ಆತಂಕದಿಂದಲೇ ಆಸ್ಪತ್ರೆಯತ್ತ ಜನ ದೌಡಾಯಿಸಿದ್ದಾರೆ. ಆಸ್ಪತ್ರೆಗೆ ಬರುವ ಹೃದಯ ಸಂಬಂಧಿ ರೋಗಿಗಳ ಸಂಖ್ಯೆ 1ಕ್ಕಿಂತ 3 ಪಟ್ಟು ಹೆಚ್ಚಾಗತೊಡಗಿದೆ. : ಬೆಂಗಳೂರಿನ ಜಯದೇವ, ಮಂಗಳೂರು.. ಸೇರಿದಂತೆ ಮಂಡ್ಯದ ಪ್ರಿಯದರ್ಶಿನಿ ಹಾರ್ಟ್ ಕೇರ್ ಸೆಂಟರ್‌ಗೆ ರೋಗಿಗಳ ದೌಡಾಯಿಸಿದ್ದಾರೆ. ಹೃದ್ರೋಗ ತಜ್ಞ ಡಾ. ಪ್ರಶಾಂತ್ ಬಳಿ ಚಿಕಿತ್ಸೆ ಪಡೆಯಲು ಸಾಲುಗಟ್ಟಿ ನಿಂತಿದ್ದಾರೆ. …

Read More »

18 ತಿಂಗಳ ಬಳಿಕ ವಿಮಾನ ಕಾರ್ಯಾಚರಣೆ ಆರಂಭಿಸಿದ ದೆಹಲಿ ವಿಮಾನ ನಿಲ್ದಾಣ ಟರ್ಮಿನಲ್-1

ಹೊಸದಿಲ್ಲಿ: ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1 ಹದಿನೆಂಟು ತಿಂಗಳ ಬಳಿಕ ಮೊದಲ ಬಾರಿಗೆ ಕಾರ್ಯಾರಂಭ ಮಾಡಿದೆ. ರವಿವಾರ ಸಂಜೆ 6 ಗಂಟೆವರೆಗೆ 133 ವಿಮಾನಗಳು ಟೇಕಾಫ್ ಅಥವಾ ಲ್ಯಾಂಡಿಗ್ ಆಗಿವೆ. ಇಡೀ ದಿನ 200ಕ್ಕೂ ಹೆಚ್ಚು ವಿಮಾನಗಳು ಮೊದಲ ದಿನ ಕಾರ್ಯಾಚರಣೆ ಮಾಡಿವೆ ಎಂದು ದೆಹಲಿ ಇಂಟರ್‌ ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಡಿಐಎಲ್‌ಎಲ್) ಪ್ರಕಟಿಸಿದೆ.   “ಇಂಡಿಗೊ ಮತ್ತು ಸ್ಪೈಸ್‌ ಜೆಟ್ ವಿಮಾನಗಳೊಂದಿಗೆ ಟರ್ಮಿನಲ್-1ರಲ್ಲಿ ಮೊದಲ ಬಾರಿಗೆ 18 …

Read More »

ಅಪ್ಪು ನೋಡಿಕೊಳ್ಳುತ್ತಿದ್ದ 1800ವಿದ್ಯಾರ್ಥಿಗಳ ವ್ಯಾಸಂಗದ ಖರ್ಚನ್ನು ಇನ್ನು ಮುಂದೆ ಖ್ಯಾತ ತಮಿಳು ನಟ ವಿಶಾಲ ನೋಡಿಕೊಳ್ಳುತ್ತಾರೆ..!

ಬೆಂಗಳೂರು: ನಟ ವಿಶಾಲ್​​ ಅವರ ನಿರ್ಧಾರದಿಂದ ಒಬ್ಬ ತಂದೆಯಾಗಿ ಹೆಮ್ಮೆ ಆಗ್ತಿದೆ. ಮಗನ ಕಾರ್ಯಕ್ಕೆ ನಾನು ನೆರವು ನೀಡ್ತೀನಿ.. ಪುನೀತ್​ ದೂರ ಆಗಿರುವುದು ನನಗೆ ವೈಯಕ್ತಿಕ ನಷ್ಟ ಎಂದು ವಿಶಾಲ್​ ತಂದೆ ಜಿ.ಕೆ ರೆಡ್ಡಿ ಹೇಳಿದ್ದಾರೆ. ಮಾತನಾಡಿದ ಜಿ.ಕೆ ರೆಡ್ಡಿ, ಪುನೀತ್​ರನ್ನು ಭೇಟಿಯಾದಾಗ 80 ವರ್ಷ ಆದ್ರು ನೀವು ಇಷ್ಟು ಫಿಟ್​ ಆಗಿದ್ದೀರಿ, ನಿಮ್ಮ ಸಿಕ್ರೇಟ್​​ ಏನು ಅಂತ ಕೇಳಿದ್ರು. ಆಗ ನಾನು ಹೇಳಿದ್ದೆ, ನೀವು ಕೂಡ ವರ್ಕೌಟ್​ ಮಾಡೋವಾಗ …

Read More »

ಕನ್ನಡಿಗ ಶ್ರೀ ಸುಹಾಸ ಲಾಲಿನಕೆರೆ ಯತಿರಾಜ, ಹಾಗೂಅಶೋಕ ಚಂದರಗಿ ಅವರನ್ನು ಸನ್ಮಾನಿಸಿದ: ಸಭಾಪತಿ ಶ್ರೀ ಬಸವರಾಜ ಹೊರಟ್ಟಿ

ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯ ವಿಧಾನ ಮಂಡಲದ ವತಿಯಿಂದ ಆಚರಿಸಲಾದ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಇಂದು ಮುಂಜಾನೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಶ್ರೀ ಅಶೋಕ ಚಂದರಗಿ ಹಾಗೂ ಟೋಕಿಯೊ ಓಲಂಪಿಕ್ಸನ ಕೋಚ್ ಹಾಗೂ ಉತ್ತರ ಪ್ರದೇಶದ ನೊಯಿಡಾ ಜಿಲ್ಲಾಧಿಕಾರಿಯಾದ ಕನ್ನಡಿಗ ಶ್ರೀ ಸುಹಾಸ ಲಾಲಿನಕೆರೆ ಯತಿರಾಜ ಅವರನ್ನು ವಿಧಾನ ಪರಿಷತ್ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ ಹಾಗೂ ವಿಧಾನ ಸಭಾಧ್ಯಕ್ಷ ಶ್ರೀ ವಿಶ್ವೇಶ್ವರ …

Read More »

ಕನ್ನಡ ರಾಜ್ಯೋತ್ಸವ’ಕ್ಕೆ ಕನ್ನಡದಲ್ಲೇ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ನವದೆಹಲಿ : ರಾಜ್ಯಾದ್ಯಂತ ಇಂದು 66 ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಕನ್ನಡ ರಾಜ್ಯೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲೇ ನಾಡಿನ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಟ್ವೀಟರ್ ನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯ ಕೋರಿರುವ ಪ್ರಧಾನಿ ಮೋದಿ, ಕರ್ನಾಟಕ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಶುಭ ಹಾರೈಕೆಗಳು. ಕರ್ನಾಟಕವು ತನ್ನ ಜನರ ಹೊಸತನದ ಶೋಧದ ತುಡಿತದಿಂದಾಗಿ ವಿಶೇಷ ಛಾಪು ಮೂಡಿಸಿದೆ. ರಾಜ್ಯವು ಅತ್ಯುತ್ಕೃಷ್ಟ ಸಂಶೋಧನೆ ಮತ್ತು ಉದ್ಯಮಶೀಲತೆಯಿಂದಾಗಿ ಮುಂಚೂಣಿಯಲ್ಲಿದೆ. …

Read More »

ಮನೆ ಬಾಗಿಲಿಗೇ ಸರ್ಕಾರದ ಸೇವೆಗಳಿಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ರಾಜ್ಯ ಸರ್ಕಾರವು ಜನತೆಗೆ ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದ್ದು, ನಾಗರಿಕರ ಮನೆ ಬಾಗಿಲಿಗೇ ಸರ್ಕಾರದ ಸೇವೆಗಳಿಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ಇಂದು ಬೆಂಗಳೂರು ಮಹಾನಗರದ 27 ವಿಧಾನಸಭಾ ಕ್ಷೇತ್ರಗಳ 198 ವಾರ್ಡ್ ಗಳಲ್ಲಿ ಜನಸೇವಕ ಯೋಜನೆಗೆ ಇಂದು ಬೆಳಗ್ಗೆ 11 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ಜನಸೇವಕ ಯೋಜನೆಯಲ್ಲಿ ಸರ್ಕಾರದ ಯಾವುದೇ ಯೋಜನೆಗಳ ಬಗ್ಗೆ ಕುಂದುಕೊರತೆ ದಾಖಲೆ, ವೆಬ್ ಪೋರ್ಟಲ್/ಮೊಬೈಲ್ …

Read More »