Breaking News

ರಾಜ್ಯ

ರಾಜ್ಯದಲ್ಲಿ ದೇಶದ್ರೋಹಿ ಶಕ್ತಿ ಇನ್ನೂ ಜೀವಂತ : ಮುತಾಲಿಕ್

ಮಡಿಕೇರಿ: ಹಿಜಬ್ ಪ್ರಕರಣದಿಂದ ರಾಜ್ಯದಲ್ಲಿ ದೊಡ್ಡಮಟ್ಟದ ಚಿಂತನಾ ಮಂಥನ ಉಂಟಾಗಿದ್ದು, ಇದರಿಂದ ಹಿಂದೂ ಸಮಾಜ ಜಾಗೃತವಾಗುತ್ತಿದೆ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಕೊಡಗಿನ ಕುಶಾಲನಗರದ ಖಾಸಗಿ ಸಭಾಂಗಣದಲ್ಲಿ ಮಾತನಾಡಿದ ಅವರು, ಇಲ್ಲಿವರೆಗೆ ಎಡವಿರುವ ಹಿಂದೂ ಸಮಾಜ ಸುಧಾರಿಸಿಕೊಳ್ಳುತ್ತಿದೆ. ಇಲ್ಲಿವರೆಗಿನ ಹಿಂದೂ ಸಂಘಟನೆಗಳ ಜಾಗೃತಿ ಹೋರಾಟ ಯಶಸ್ವಿಯಾಗಿದೆ. ಮುಂದೆ ವಕ್ಛ್ ಬೋರ್ಡ್ ಗೋಲ್ಮಾಲ್, ಅಜಾನ್ ಮೈಕ್ ಕಿರಿಕಿರಿ, ಗೋಹತ್ಯೆ, ಬೈಬಲ್ ಬೋಧನೆ ವಿರೋಧಿ ಹೋರಾಟ ಮತ್ತು ಮತಾಂತರ ನಿಷೇದ ಕಾಯ್ದೆ …

Read More »

ನಕಲಿ ನೋಟು ಮತ್ತು ಅಸಲಿ ನೋಟುಚಲಾವಣೆ ಜಾಲದ ವ್ಯವಹಾರವನ್ನು ಬಯಲಿಗೆ

ಅಂಕೋಲಾ: ನಕಲಿ ನೋಟು ಮತ್ತು ಅಸಲಿ ನೋಟು ವಿನಿಮಯ ಮಾಡುತ್ತಿರುವ ಸಂದರ್ಭದಲ್ಲಿ ಅಂಕೋಲಾ ಪೊಲೀಸರ ತಂಡ ದಾಳಿ ನಡೆಸಿ ನಾಲ್ವರನ್ನು ಬಂಧಿಸಿ ಅಂತಾರಾಜ್ಯ ಖೋಟಾ ನೋಟು ಚಲಾವಣೆ ಜಾಲದ ವ್ಯವಹಾರವನ್ನು ಬಯಲಿಗೆಳಿದ್ದಿದ್ದಾರೆ. ಕಾರವಾರದ ಕೊಡಿಭಾಗದ ಹೋಟೆಲ್‌ನಲ್ಲಿ ಕೆಲಸಕ್ಕಿದ್ದ ಪ್ರವೀಣ್ ರಾಜನ ನಾಯರ್, ಗೋವಾ ರಾಜ್ಯದ ಮಡಗಾಂವ್ ನಿವಾಸಿ ಲೋಯ್ಡ್‌ ಲಾರೆನ್ಸ್ ಸ್ಟೇವಿಸ್, ಗೋವಾ ಪತ್ರೋಡಾದ ಲಾರ್ಸನ್ ಲೂಯಿಸ್ ಸಿಲ್ವಾ, ಮಡಗಾಂವ್ ಪ್ರನೋಯ ಫರ್ನಾಂಡಿಸ್ ಬಂಧಿತ ಆರೋಪಿಗಳು. ಈ ಜಾಲದ ಪ್ರಮುಖ ಆರೋಪಿ …

Read More »

ನಾನು ಜನ್ಮ ದಿನಾಚರಣೆ ಆಚರಿಸಲ್ಲ, ಜಾಹೀರಾತು ನೀಡೋದಾದ್ರೇ ಕಾಂಗ್ರೆಸ್ ಹೋರಾಟ, ಪ್ರತಿಭಟನೆ ಬಗ್ಗೆ ನೀಡಿ – ಡಿಕೆ ಶಿವಕುಮಾರ್

ಬೆಂಗಳೂರು: ಮೇ.15ರಂದು ನನ್ನ ಜನ್ಮ ದಿನಾಚರಣೆಯನ್ನು ನಾನು ಆಚರಿಸಿಕೊಳ್ಳೋದಿಲ್ಲ. ನನ್ನ ಮನೆ ಬಳಿಗೆ ಬರಬೇಡಿ. ನಾನು ಉದಯಪುರದಲ್ಲಿ ಇರುತ್ತೇನೆ. ನನ್ನ ಜನ್ಮ ದಿನಾಚರಣೆ ನಿಮಿತ್ತ ಮಾಧ್ಯಮಗಳಿಗೆ ಜಾಹೀರಾತು ಕೊಡೋ ಬದಲಾಗಿ ಕಾಂಗ್ರೆಸ್ ಪಕ್ಷದಿಂದ ( Congress Party ) ಸರ್ಕಾರದ ವಿರುದ್ಧ ನಡೆಸಿದಂತ ಹೋರಾಟ, ಪ್ರತಿಭಟನೆಗಳ ಬಗ್ಗೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( DK Shivakumar ) ಮನವಿ ಮಾಡಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ …

Read More »

ನಿಮ್ಮನ್ನು ಸಿಎಂ ಮಾಡ್ತೇವೆ 2500 ಕೋಟಿ ಕೊಡಿ ಎಂದಿದ್ರು: ಸ್ಪೋಟಕ ಹೇಳಿಕೆ ನೀಡಿದ ಯತ್ನಾಳ್

ಬೆಳಗಾವಿ: ನಿಮ್ಮನ್ನು ಸಿಎಂ ಮಾಡುತ್ತೇವೆ 2500 ಕೋಟಿ ರೂ. ಕೊಡಿ ಎಂದು ದೆಹಲಿಯಿಂದ ಬಂದ ಕೆಲವರು ಕೇಳಿದ್ದರು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಮಾತನಾಡಿದ ಅವರು, 2500 ಕೋಟಿ ರೂ. ಕೇಳಿದಾಗ ನಾನು 2500 ಕೋಟಿ ಅಂದರೆ ಏನು ಅಂತ ತಿಳಿದಿದ್ದೀರಿ ಎಂದು ಕೇಳಿದೆ. ಆ ಎರಡೂವರೆ ಸಾವಿರ ಕೋಟಿ ಹೇಗೆ ಇಡುವುದು? ಕೋಣೆಯಲ್ಲಿ ಇಡುವುದಾ? ಗೋದಾಮಿನಲ್ಲಿ ಇಡುವುದಾ? ಎಂದಿದ್ದೆ. ಟಿಕೆಟ್ ಕೊಡಿಸುತ್ತೇವೆ …

Read More »

ರಾಜ್ಯದ ಜನತೆಗೆ ಸಿಹಿಸುದ್ದಿ : ಅಕ್ಟೋಬರ್ 2 ಕ್ಕೆ `ಯಶಸ್ವಿನಿ ಯೋಜನೆ’ ಉದ್ಘಾಟನೆ : ಸಿಎಂ ಬೊಮ್ಮಾಯಿ

ಬೆಂಗಳೂರು : ಅಕ್ಟೋಬರ್ 2 ರಂದು ಯಶಸ್ವಿನಿ ಯೋಜನೆಯನ್ನು ಉದ್ಘಾಟನೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳಿಗೆ ಜುಲೈ ತಿಂಗಳೊಳಗೆ ಫಲಾನುಭವಿಗಳ ಆಯ್ಕೆಯನ್ನು ಪೂರ್ಣಗೊಳಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.   ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿಎಂ ಬೊಮ್ಮಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿವಿಧ ಯೋಜನೆಗಳಿಗೆ …

Read More »

P.S.I.ನೇಮಕಾತಿ ಹಗರಣದ ತನಿಖೆಯನ್ನು ಸಿಐಡಿಗೆ ನೀಡಿರುವುದರ ಹಿಂದೆ ಸತ್ಯ ಹೊರಬರುವುದನ್ನು ತಡೆಯುವ ಹುನ್ನಾರ: ಭಾಸ್ಕರ್ ರಾವ್

ಬೆಂಗಳೂರು: ಪಿಎಸ್‍ಐ ನೇಮಕಾತಿ ಹಗರಣದ ತನಿಖೆಯನ್ನು ಸಿಐಡಿಗೆ ನೀಡಿರುವುದರ ಹಿಂದೆ ಸತ್ಯ ಹೊರಬರುವುದನ್ನು ತಡೆಯುವ ಹುನ್ನಾರವಿದೆ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದರು.   ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರೇ ಆರೋಪಿಗಳಾಗಿರುವ ಹಗರಣವನ್ನು ಬಿಜೆಪಿ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಿಐಡಿಯಿಂದಲೇ ತನಿಖೆ ಮಾಡಿಸುವುದು ಹಾಸ್ಯಾಸ್ಪದ. ಈ ತನಿಖೆಗೆ ಯಾವ ಬೆಲೆಯೂ ಇಲ್ಲ. ಅನುಮಾನಾಸ್ಪದ ಅಭ್ಯರ್ಥಿಯ ತನಿಖೆ ವೇಳೆ …

Read More »

ವೈದ್ಯನೊಬ್ಬ ಪೋಸ್ಟ್​ ಮಾರ್ಟಂ ಮಾಡಬೇಕಾದರೆ 16000 ರೂ. ನೀಡುವಂತೆ ಲಂಚಕ್ಕೆ ಬೇಡಿಕೆ

ನೆಲ್ಲೂರು(ಆಂಧ್ರಪ್ರದೇಶ): ಆತ್ಮಹತ್ಯೆ ಮಾಡಿಕೊಂಡ ಪತಿ ಶವವನ್ನು ಪೋಸ್ಟ್‌ಮಾರ್ಟಂ ಮಾಡಲು ಮಹಿಳೆಯೊಬ್ಬರು ಹರಸಾಹಸ ಪಟ್ಟಿದ್ದು, ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯನೊಬ್ಬ ಲಂಚ ಕೇಳಿರುವ ಅಮಾನವೀಯ ಘಟನೆಯೊಂದು ನೆಲ್ಲೂರು ಜಿಲ್ಲೆಯ ಉದಯಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಲಂಚಕ್ಕೆ ಬೇಡಿಕೆ ಇಟ್ಟ ವೈದ್ಯನ ಹೆಸರು ಸಂದಾನಿ ಬಾಷಾ. ಮರಣೋತ್ತರ ಪರೀಕ್ಷೆ ಮಾಡಲು ಲಂಚ ಕೇಳಿದ ವೈದ್ಯದೂರವಾಣಿ ಮೂಲಕ ಮಾತನಾಡಿರುವ ವೈದ್ಯ ಹಣ ನೀಡಿದರೆ ಮಾತ್ರ ಗಂಡನ ದೇಹವನ್ನು ಪೋಸ್ಟ್​ಮಾರ್ಟಂ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ದಿಗ್ಭ್ರಮೆಗೊಂಡ ಮಹಿಳೆ …

Read More »

ಮೇ 15 ರಿಂದ ಬದಲಾಗಲಿದೆ ಈ 6 ರಾಶಿಯವರ ಭವಿಷ್ಯ, ಸೂರ್ಯ ಬೆಳಗಲಿದ್ದಾನೆ ಅದೃಷ್ಟ

ಬೆಂಗಳೂರು : Surya Gochar in May 2022: ಸೂರ್ಯನ ರಾಶಿಚಕ್ರ ಬದಲಾವಣೆಯು ಎಲ್ಲಾ ಜನರ ಜೀವನದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಏಕೆಂದರೆ ಸೂರ್ಯನು ವ್ಯಕ್ತಿಯ ವೃತ್ತಿ, ಆರೋಗ್ಯ, ಯಶಸ್ಸು ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತಾನೆ. ಸೂರ್ಯನು ಪ್ರತಿ ತಿಂಗಳು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಮೇ 15 ರಂದು, ಸೂರ್ಯನು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ ಜೂನ್ 15 ರವರೆಗೆ ವೃಷಭ ರಾಶಿಯಲ್ಲಿಯೇ ಇರುತ್ತಾನೆ. ಈ ಸಮಯದಲ್ಲಿ …

Read More »

ಗಮನಿಸಿ: ಕರ್ನಾಟಕದಲ್ಲಿ ಈ ವೀಕೆಂಡ್‌ನಲ್ಲಿ ಎಣ್ಣೆ ಸಿಗಲ್ಲ!

ಬೆಂಗಳೂರು, ಮೇ 5: ಸಿಲಿಕಾನ್ ಸಿಟಿಯಲ್ಲಿ ವೀಕೆಂಡ್ ಪಾರ್ಟಿ ಮಾಡಬೇಕು. ಸ್ಯಾಲರಿ ಬಂದಿರುವ ಖುಷಿಯಲ್ಲಿ ಫ್ರೆಂಡ್ಸ್ ಜೊತೆ ಗುಂಡು ಹಾಕಬೇಕು ಎಂದುಕೊಂಡಿರುವ ಮದ್ಯಪ್ರಿಯರಿಗೆಲ್ಲ ಒಂದು ಶಾಕಿಂಗ್ ನ್ಯೂಸ್. ಶುಕ್ರವಾರದಿಂದಲೇ ರಾಜ್ಯದಲ್ಲಿ ಮುಂದಿನ ಮೇ 19ವರೆಗೂ ಎಣ್ಣೆ ಸಿಗುವುದಿಲ್ಲ.   ರಾಜ್ಯದಲ್ಲಿ ಮೇ 6 ರಿಂದ 19ರವರೆಗೂ ಮದ್ಯ ಮಾರಾಟಗಾರರು ಮುಷ್ಕರ ನಡೆಸುವುದಕ್ಕೆ ನಿರ್ಧರಿಸಿದ್ದಾರೆ. ಇದರಿಂದ ಮುಂದಿನ 15 ದಿನಗಳವೆರಗೂ ಮದ್ಯಪ್ರಿಯರಿಗೆ ಎಣ್ಣೆ ಸಿಗುವುದೇ ಅನುಮಾನವಾಗಿದೆ. ಉಡುಪಿಯಲ್ಲಿ ಮಾತನಾಡಿದ ರಾಜ್ಯ ಮದ್ಯ …

Read More »

ಪಿಎಸ್​ಐ ನೇಮಕಾತಿ ಹಗರಣ: ಡಿವೈಎಸ್​ಪಿ, ಇನ್​ಸ್ಪೆಕ್ಟರ್​ ಸಿಐಡಿ ಬಲೆಗೆ

ಬೆಂಗಳೂರು/ ಕಲಬುರಗಿ: ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ಗಳ 545 ಹುದ್ದೆ ನೇಮಕಾತಿಯಲ್ಲಿ ಅಕ್ರಮ ಎಸಗಿರುವ ಪ್ರಕರಣದಲ್ಲಿ ಶಾಮೀಲಾಗಿರುವ ಡಿವೈಎಸ್​ಪಿ, ಇನ್​ಸ್ಪೆಕ್ಟರ್​ನನ್ನು ಸಿಐಡಿ ಕೊನೆಗೂ ಬಂಧಿಸಿದೆ. ಈ ಇಬ್ಬರಿಗೂ ಕೋಳ ತೊಡಿಸುವ ಮೂಲಕ ಬಂಧಿತರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ರಾಯಚೂರು ಜಿಲ್ಲೆ ಲಿಂಗಸೂಗುರು ಡಿವೈಎಸ್​ಪಿ ಮಲ್ಲಿಕಾರ್ಜುನ ಸಾಲಿ ಮತ್ತು ಬೆರಳಚ್ಚು ವಿಭಾಗದ ಇನ್​ಸ್ಪೆಕ್ಟರ್​ ಆನಂದ ಮೇತ್ರೆನನ್ನು ಕಲಬುರಗಿಯಲ್ಲಿ ವಿಚಾರಣೆಗಾಗಿ ಕರೆದು ಬಂಧಿಸಲಾಗಿದೆ. ಅದೇ ರೀತಿ ಮೈಸೂರು ರಸ್ತೆ ಕುಂಬಳಗೋಡು ಠಾಣೆ ಕಾನ್​ಸ್ಟೇಬಲ್​ ಸೋಮನಾಥ್​ ಮತ್ತು …

Read More »