Breaking News

ರಾಜ್ಯ

ನೂತನ ಲೋಕಾಯುಕ್ತರಿಂದ ಸಬ್‌ರಿಜಿಸ್ಟರ್ ಕಚೇರಿ ಮೇಲೆ ದಾಳಿ

ಬೆಂಗಳೂರು, ಜೂನ್‌ 28: ನೂತನ ಲೋಕಾಯುಕ್ತರಾಗಿ ಅಧಿಕಾರವನ್ನು ವಹಿಸಿಕೊಂಡಿರುವ ನ್ಯಾ. ಬಿ. ಎಸ್. ಪಾಟೀಲ್‌ ಕಾರ್ಯಾಚರಣೆಗೆ ಇಳಿದಿದ್ದಾರೆ. ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಡೆಯುತ್ತಿದ್ದ ವ್ಯಾಪಕ ಭ್ರಷ್ಟಾಚಾರದ ವಿರುದ್ದ ಸಮರ ಸಾರಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವ್ಯಾಪಕ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಸೇರಿದಂತೆ 10 ಉಪ ನೋಂದಣಾಧಿಕಾರಿಗಳ ಕಚೇರಿಗಳ ಮೇಲೆ‌ ಲೋಕಾಯುಕ್ತ ನ್ಯಾ. ಬಿ. ಎಸ್. ಪಾಟೀಲ್‌ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. …

Read More »

ಇಡಿ ನೋಟಿಸ್, ಪಾರ್ಟಿ ಮೀಟಿಂಗ್: ದೆಹಲಿಗೆ ಹೊರಟ ಡಿ.ಕೆ .ಶಿ.

ಬೆಂಗಳೂರು: ಇಡಿ ನೋಟಿಸ್ ಮತ್ತು ಪಕ್ಷದ ಸಭೆಗಳಲ್ಲಿ ಭಾಗಿಯಾಗುವ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೆಹಲಿಗೆ ಹೊರಟಿದ್ದಾರೆ. ಇದಕ್ಕೂ ಮೊದಲು ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ನಮ್ಮ ಪಕ್ಷದ ಸಭೆಯಿದೆ. ಭಾರತ ಜೋಡು ಅಭಿಯಾನದ ಬಗ್ಗೆ ಸಭೆಯಿದೆ. ಇನ್ನೂ ಹಲವಾರು ವಿಚಾರಗಳು ಅಲ್ಲಿ ಚರ್ಚೆಯಾಗುತ್ತದೆ ಎಂದರು. ಇಡಿ ಕೇಸ್ ಇದೆ, ನನಗೆ ನೋಟಿಸ್ ಕೊಟ್ಟಿದ್ದಾರೆ. ಒಂದನೇ ತಾರೀಕು ವಿಚಾರಣೆಗೆ ಹಾಜರಾಗಬೇಕಿದೆ, ಅದಕ್ಕೆ ಈಗ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದು …

Read More »

ಕೇಂದ್ರ ಸಚಿವ ಸೊಮಪ್ರಕಾಶ ಊಟ ಮಾಡಬೇಕಿದ್ದ ದಲಿತರ ಮನೆಯಲ್ಲಿಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್‍ಸಿ ಚನ್ನರಾಜ ಹಟ್ಟಿಹೊಳಿ ಭಾವಚಿತ್ರದ ಕ್ಯಾಲೆಂಡರ್

ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ 8ವರ್ಷ ಪೂರೈಸುದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸೊಮಪ್ರಕಾಶ ಊಟ ಮಾಡಬೇಕಿದ್ದ ದಲಿತರ ಮನೆಯಲ್ಲಿ ‘ಕೈ’ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರದ ಕ್ಯಾಲೆಂಡರ್ ಕಂಡು ಬಿಜೆಪಿ ನಾಯಕರು ಧಂಗಾಗಿದ್ದಾರೆ. ಮಾಧ್ಯಮಗಳು ಅದನ್ನು ಚಿತ್ರೀಕರಿಸಲು ಪ್ರಾರಂಭಿಸುತ್ತಲೇ ಬಿಜೆಪಿ ಕಾರ್ಯಕರ್ತರು ಕ್ಯಾಲೆಂಡರ್‍ನ್ನು ತೆರವು ಮಾಡಿದ್ದಾರೆ. ಕೇಂದ್ರ ಸರಕಾರಕ್ಕೆ ಈಗ 8ವರ್ಷದ ಸಂಭ್ರಮ. ಈ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯ ರಾಜ್ಯ ಖಾತೆಯ ಸಚಿವ …

Read More »

ಸಿದ್ದರಾಮಯ್ಯ ಅಮೃತ ಮಹೋತ್ಸವ: ಕಾಂಗ್ರೆಸ್ ನಾಯಕರಿಗೆ ನಡುಕ ಆರಂಭ!

ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಎಪ್ಪತ್ತೈದನೇ ವರ್ಷದ ( ಅಮೃತ ಮಹೋತ್ಸವ ) ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅವರ ಆಪ್ತ ಬಣ ಸಂಚಾಲನ ಸಮಿತಿ ರಚನೆ ಮಾಡಿರುವುದು ಕಾಂಗ್ರೆಸ್ ವಲಯದಲ್ಲಿ ಡವಡವ ಸೃಷ್ಟಿಸಿದೆ. ಆ. 3 ರಂದು ದಾವಣೆಗೆರೆಯಲ್ಲಿ ಆಯೋಜಿಸಿರುವ ಈ ಅಮೃತ ಮಹೋತ್ಸವ ಕಾರ್ಯಕ್ರಮ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ವೇದಿಕೆ ಎಂದೇ ಕಾಂಗ್ರೆಸಿಗರು ವಿಶ್ಲೇಷಣೆ ನಡೆಸುತ್ತಿದ್ದಾರೆ. ಮೈಸೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಅಹಿಂದ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದ್ದಕ್ಕೆ …

Read More »

ಸಂಧಾನಕ್ಕಾಗಿ ದೇವೇಂದ್ರ ಫ‌ಡ್ನವೀಸ್‌ಗೆ ಉದ್ಧವ್‌ ಠಾಕ್ರೆ ಕರೆ?

ಮುಂಬಯಿ: ಶಿವಸೇನೆ ಶಾಸಕರು ಮತ್ತು ಸಚಿವರು ಬಂಡಾಯವೆದ್ದ ದಿನದಂದು ಫೇಸ್‌ಬುಕ್‌ ಲೈವ್‌ ಬಂದು ಮಾತನಾ ಡಿದ್ದ ಸಿಎಂ ಠಾಕ್ರೆ ಅಂದೇ ರಾಜೀನಾಮೆ ಕೊಡಲು ಮುಂದಾಗಿದ್ದರು. ಆದರೆ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರನ್ನು ತಡೆದಿದ್ದರು. ಅದರ ಮಾರನೇ ದಿನವೂ ಸಿಎಂ ರಾಜೀನಾಮೆ ನೀಡಲು ಸಜ್ಜಾಗಿದ್ದು, ಆಗಲೂ ಪವಾರ್‌ ತಡೆದಿದ್ದಾಗಿ ಮೂಲಗಳು ತಿಳಿಸಿವೆ. ಜೂ.21ರಂದು ರಾತ್ರಿ ಸಿಎಂ ಉದ್ಧವ್‌, ಮಾಜಿ ಸಿಎಂ ದೇವೇಂದ್ರ ಫ‌ಡ್ನವಿಸ್‌ಗೆ ಕರೆ ಮಾಡಿದ್ದರು. ಈ ವೇಳೆ ಬಿಜೆಪಿ …

Read More »

ಸರಕಾರದಿಂದ ನಮಗೆ ಬರಬೇಕಾದ ಮೂರು ತಿಂಗಳ ಗೌರವಧನವನ್ನು ಬಿಡುಗಡೆ ಮಾಡಿಲ್ಲ:ಅಂಗನವಾಡಿ ಕಾರ್ಯಕರ್ತೆಯರು

ಸರಕಾರ ಕಳೆದ ಮೂರು ತಿಂಗಳಿನಿಂದ ತಡೆಹಿಡಿದಿರುವ ಅಂಗನವಾಡಿ ಕಾರ್ಯ ಕರ್ತೆಯರು ಹಾಗೂ ಸಹಾಯಕಿಯರ ಗೌರವಧನವನ್ನು ಹಾಗೂ ಕೋಳಿ ಮೊಟ್ಟೆಯ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಇಂದು ಪ್ರತಿಭಟನೆ ನಡೆಸಿದರು. ಹೌದು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯ ಆವರಣದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಸರಕಾರ ತಡೆಹಿಡಿದಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಮೂರು …

Read More »

ಬೆಳಗಾವಿ ಡಿಸಿ ಕಚೇರಿಗೆ ಶಕ್ತಿದೇವತೆ, ಯಲ್ಲಮ್ಮ ದೇವಿಯ ಮೂರ್ತಿಯನ್ನು ಹೊತ್ತುಕೊಂಡುಬಂದ ಜೋಗತಿಯರು

ಉತ್ತರಕರ್ನಾಟಕದ ಶಕ್ತಿದೇವತೆ, ಲಕ್ಷಾಂತರ ಭಕ್ತರ ಪಾಲಿನ ಆರಾಧ್ಯ ದೇವಿ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಸುಕ್ಷೇತ್ರದಲ್ಲಿನ ಅವ್ಯವಸ್ಥೆಯನ್ನು ಖಂಡಿಸಿ ಜೋಗತಿಯರು ಬೆಳಗಾವಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ತಲೆ ಮೇಲೆ ಸವದತ್ತಿ ಯಲ್ಲಮ್ಮ ದೇವಿಯ ಮೂರ್ತಿಯನ್ನು ಹೊತ್ತುಕೊಂಡು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಜೋಗತಿಯರು ಯಲ್ಲಮ್ಮ ಗುಡ್ಡದಲ್ಲಿನ ಅವ್ಯವಸ್ಥೆಯ ವಿರುದ್ಧ ಅಸಮಾಧಾನ ಹೊರ ಹಾಕಿದರು. ಜಿಲ್ಲಾಡಳಿತ ಮತ್ತು ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ತೀವ್ರ …

Read More »

ರಾಜವಂಶಸ್ಥ ಯದುವೀರ ಒಡೆಯರ್ ಕುಟುಂಬ ಅಂಜನಾದ್ರಿಗೆ ಭೇಟಿ

ಗಂಗಾವತಿ (ಕೊಪ್ಪಳ): ಗಂಗಾವತಿ ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟಕ್ಕೆ ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ ಹಾಗೂ ಅವರ ತಾಯಿ ಪ್ರಮೋದದೇವಿ ಸೋಮವಾರ ಭೇಟಿ ನೀಡಿದರು. ಅಂಜನಾದ್ರಿ ಬೆಟ್ಟದ‌ 545 ಮೆಟ್ಟಿಲುಗಳನ್ನು ಹತ್ತಿ ದರ್ಶನ ಪಡೆದರು. ನಂತರ ಅರ್ಚಕರಿಂದ ವಿಶೇಷ ಪೂಜೆ ಸಲ್ಲಿಸಿ ಕೆಳಗಿಳಿದರು. ಈ ವೇಳೆ ದೇವಸ್ಥಾನದ ವ್ಯವಸ್ಥಾಪಕ ವೆಂಕಟೇಶ ಮಡಿವಾಳ, ಪೊಲೀಸ್ ಸಿಬ್ಬಂದಿ ಶ್ರೀನಿವಾಸ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಇದ್ದರು‌.

Read More »

ಆಪರೇಷನ್ ‌ಕಮಲಕ್ಕೆ ಪಾಪದ ಹಣ: ಸಿದ್ದರಾಮಯ್ಯ ಆರೋಪ

ಕೊಪ್ಪಳ: ಪ್ರಜಾಪ್ರಭುತ್ವಕ್ಕೆ ಆಪರೇಷನ್ ಕಮಲ ‌ಮಾರಕ‌ ಎನ್ನುವುದು ಗೊತ್ತಿದ್ದರೂ ಬಿಜೆಪಿ ಪಾಪದ ಹಣದಿಂದ ಈ‌ ಕೆಲಸ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಸಿಂಧನೂರಿಗೆ ತೆರಳುವ ಮುನ್ನ ಇಲ್ಲಿಗೆ ಸಮೀಪದ ಬಸಾಪುರ ಬಳಿ‌ ಇರುವ ಖಾಸಗಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಬಿಜೆಪಿ ಈಗ ಮಾಡುತ್ತಿರುವುದು ಎನು? ಎಂದು ಪ್ರಶ್ನಿಸಿದರು. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದು ಪ್ರಜಾಪ್ರಭುತ್ವಕ್ಕೆ …

Read More »

ಮಹಾರಾಷ್ಟ್ರ ಬಂಡಾಯಕ್ಕೆ ಬಿಜೆಪಿಯೇ ಹಿಂದಿನ ಸೀಟಿನ ಚಾಲಕ: ಎಚ್‌.ಕೆ.ಪಾಟೀಲ ಕಿಡಿ

ಗದಗ: ‘ಮಹಾರಾಷ್ಟ್ರದ ಬಂಡಾಯದ ಹಿಂದೆ ಬಿಜೆಪಿ ಇದೆ. ಬಿಜೆಪಿಯೇ ಅದರ ಹಿಂದಿನ ಸೀಟಿನ ಚಾಲಕ’ ಎಂದು ಶಾಸಕ ಎಚ್‌.ಕೆ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಬಿಜೆಪಿಯವರು ಈ ಹಿಂದೆ ಕರ್ನಾಟಕದಲ್ಲಿ 17 ಮಂದಿ ಶಾಸಕರ ರಾಜೀನಾಮೆ ಕೊಡಿಸಿ, ಸಮ್ಮಿಶ್ರ ಸರ್ಕಾರ ಬೀಳಿಸಿದರು. ಅಪರೇಷನ್ ಕಮಲದ ಮುಂದಿನ ಭಾಗವಾಗಿ ಮಹಾರಾಷ್ಟ್ರದಲ್ಲಿ ಇಡೀ ಪಕ್ಷವನ್ನೇ ಒಡೆಯಲು ಬಿಜೆಪಿ ಮುಂದಾಗಿದೆ’ ಎಂದು ಅವರು ಆರೋಪ ಮಾಡಿದರು. ‘ದೇಶದ ಜನರನ್ನು …

Read More »