Breaking News

ರಾಜ್ಯ

ಪ್ರಮುಖ ನಗರಗಳಲ್ಲಿ 5G ಸೇವೆ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದ ಅಂಬಾನಿ

ಮುಂಬೈ(ಮಹಾರಾಷ್ಟ್ರ): ದೇಶದಲ್ಲಿ ಈಗಾಗಲೇ 5G ತರಂಗಾಂತರ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಮುಖೇಶ್ ಅಂಬಾನಿ ಒಡೆತನದ ಜಿಯೋ ಸಂಸ್ಥೆ 7,864 ಕೋಟಿ ರೂಪಾಯಿ ವ್ಯಯಿಸಿ ಹೆಚ್ಚಿನ ಸ್ಪೆಕ್ಟ್ರಮ್‌ ಖರೀದಿಸಿದೆ. ಇದರ ಬೆನ್ನಲ್ಲೇ ಇಂದು ಅಂಬಾನಿ ಮಹತ್ವದ ಘೋಷಣೆ ಮಾಡಿದ್ದಾರೆ. ರಿಲಯನ್ಸ್​ ಇಂಡಸ್ಟ್ರೀಸ್​​ನ 45ನೇ ವಾರ್ಷಿಕ ಸಭೆಯ ಉದ್ದೇಶಿಸಿ ಮಾತನಾಡಿರುವ ಮುಖೇಶ್ ಅಂಬಾನಿ, ಗ್ರಾಹಕರಿಗೆ ದೀಪಾವಳಿ ಗಿಫ್ಟ್​ ನೀಡಿದ್ದಾರೆ. ವಿಶ್ವದ ಅತ್ಯಂತ ವೇಗದ 5ಜಿ ರೋಲ್​​ಔಟ್‌ಗೆ ಸಿದ್ಧಗೊಂಡಿದೆ. ದೀಪಾವಳಿ ಹೊತ್ತಿಗೆ ದೆಹಲಿ, ಮುಂಬೈ, ಚೆನ್ನೈ …

Read More »

ಹಿಂದೂ-ಮುಸ್ಲಿಮ್ ಐಕ್ಯತೆಗೆ ಸಾಕ್ಷಿ: ಕೋಮು, ಧಾರ್ಮಿಕ ಸೌಹಾರ್ದತೆಗೆ ಗದಗ ಜಿಲ್ಲೆಯ ಈ ಗ್ರಾಮಸ್ಥರು ಮಾದರಿ!

ಗದಗ: ರಾಜ್ಯದ ವಿವಿಧೆಡೆ ಕೋಮುಗಲಭೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಇಲ್ಲಿ ಹಿಂದೂ-ಮುಸ್ಲಿಮರು ಒಂದೆಡೆ ಸೇರಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಗದಗ ಪಟ್ಟಣದಿಂದ 5 ಕಿಲೋ ಮೀಟರ್ ದೂರದಲ್ಲಿರುವ ಕಳಸಾಪುರ ಕಳೆದ ಎಂಟು ವರ್ಷಗಳಿಂದ ಕೋಮು ಮತ್ತು ಧಾರ್ಮಿಕ ಸೌಹಾರ್ದತೆಗೆ ಮಾದರಿಯಾಗಿದೆ.   ವಿಶಿಷ್ಟ ಆಚರಣೆಯನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳು ಮತ್ತು ಗದಗ ಪಟ್ಟಣದ ಜನರು ಈ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಕಳಸಾಪುರ ಗಣೇಶನನ್ನು ಈಗ ‘ಕೋಮು ಸೌಹಾರ್ದ ಗಣೇಶ’ ಎಂದು ಕರೆಯುತ್ತಾರೆ. …

Read More »

ನನ್ನ ವಿರುದ್ಧ ಮುರುಘಾ ಮಠದ ಒಳಗಡೆ ನಡೆಯುತ್ತಿದ್ದ ಪಿತೂರಿ ಇದೀಗ ಹೊರಗಡೆ ನಡೆಯುತ್ತಿದೆ ಎಂದು ಮರಾಧೀಶ ಡಾ. ಶಿವಮೂರ್ತಿ ಶರಣರು

ಚಿತ್ರದುರ್ಗ: ನನ್ನ ವಿರುದ್ಧ ಮುರುಘಾ ಮಠದ ಒಳಗಡೆ ನಡೆಯುತ್ತಿದ್ದ ಪಿತೂರಿ ಇದೀಗ ಹೊರಗಡೆ ನಡೆಯುತ್ತಿದೆ ಎಂದು ಮರಾಧೀಶ ಡಾ. ಶಿವಮೂರ್ತಿ ಶರಣರು ಸೋಮವಾರ ಹೇಳಿದರು. ಲೈಂಗಿಕ ಕಿರುಕುಳ ಪ್ರಕರಣ ಹಿನ್ನೆಲೆಯಲ್ಲಿ ಮಠದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇನು ಹೊಸದಲ್ಲ, ಕಳೆದ 15 ವರ್ಷದಿಂದ ನಡೆಯುತ್ತಿದೆ. ನಮ್ಮ ಮಠ ನ್ಯಾಯ ದೇಗುಲದಂತಿತ್ತು. ಇದೀಗ ಮಠದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದರು. ಈ ನೆಲದ ಕಾನೂನು ಎಲ್ಲರಿಗೂ ಒಂದೇ , ಕಾನೂನನ್ನು ಗೌರವಿಸೋಣ ಎಂದ …

Read More »

ಟಿವಿಎಸ್ ಎಕ್ಸೆಲ್ ಗೆ ಹಿಂಬದಿಯಿಂದ ಕಾರು ಢಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಗದಗ: ಟಿವಿಎಸ್ ಎಕ್ಸೆಲ್ ಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹೊಂಬಳ ರಸ್ತೆಯಲ್ಲಿ ಭಾನುವಾರ ನಡೆದಿದೆ. ಗದಗ ನಗರದ ಹಾಳದಿಬ್ಬ ನಿವಾಸಿ ಮಂಜಪ್ಪ ಬಸಪ್ಪ ಕಲಬಂಡಿ(25) ಮೃತಪಟ್ಟ ಸವಾರ.   ಮಂಜಪ್ಪ ಕಲಬಂಡಿ ಅವರು ಭಾನುವಾರಬೆಳಿಗ್ಗೆ ಮನೆಯಿಂದ ಹೊಂಬಳ ರಸ್ತೆಯಲ್ಲಿನ ಜಮೀನಿಗೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಮಂಜಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಳೆದ …

Read More »

ಮುರುಘಾ ಶ್ರೀ ಆರೋಪ; ತನಿಖೆಯ ನಂತರ ಸತ್ಯ ಹೊರಬೀಳಲಿದೆ, ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ವಿದೆ.:: ಬೊಮ್ಮಾಯಿ

ಬೆಂಗಳೂರು: ಮುರುಘಾ ಶ್ರೀಗಳ ಮೇಲೆ ಪೋಕ್ಸೋ ಅಡಿ ಎಫ್‌ಐಆರ್‌ ದಾಖಲಾಗಿದ್ದು, ತನಿಖೆಯ ನಂತರ ಸತ್ಯ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಭಾನುವಾರ ತಮ್ಮ ನಿವಾಸದ ಬಳಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ವಿದೆ. ತನಿಖೆ ಮಾಡಿದ ನಂತರ ಸತ್ಯ ಹೊರಗೆ ಬರಲಿದೆ ಎಂದರು. ಇದೊಂದು ಪ್ರಮುಖ ಪ್ರಕರಣ. ಪೋಸ್ಕೊ ಪ್ರಕರಣವೂ ಆಗಿದೆ ಹಾಗೂ ಚಿತ್ರದುರ್ಗದಲ್ಲಿ ಕಿಡ್ನಾಪ್‌ ಪ್ರಕರಣವೂ ದಾಖಲಾಗಿದೆ. ಎರಡೂ ಪ್ರಕರಣಗಳನ್ನು ದಾಖಲಿಸಿ ಪೊಲೀಸರು ತನಿಖೆ …

Read More »

ಮೂಡಲಗಿ ತಾಲೂಕಿನ ಕಲ್ಲೊಳ್ಳಿ ಯಲ್ಲಾಲಿಂಗ ಜಾತ್ರಾ ಮಹೋತ್ಸವದಲ್ಲಿ ಲಖನ ಜಾರಕಿಹೊಳಿ ಹಾಗೂ ವಿನಯ್ ಗುರೂಜಿ ಭಾಗಿ

ಮೂಡಲಗಿ ತಾಲೂಕಿನ ಕಲ್ಲೊಳ್ಳಿ ಯಲ್ಲಾಲಿಂಗ ಜಾತ್ರಾ ಮಹೋತ್ಸವದಲ್ಲಿ ಲಖನ ಜಾರಕಿಹೊಳಿ ಹಾಗೂ ವಿನಯ್ ಗುರೂಜಿ ಭಾಗಿ ಯಾಗಿದ್ದರು. ಜಾತ್ರಾ ಮಹೋತ್ಸವ ದಲ್ಲಿ ಸಾವಿರಾರು ಜನ ಭಾಗ ವಹಿಸಿದ್ದರು. ವಿನಯ ಗುರೂಜಿ ಹಾಗೂ ಲಖನ ಜಾರಕಿಹೊಳಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಛೋಟಾ ಸಾಹುಕಾರ ಮಾತನಾಡಿ ಕ್ಷೇತ್ರದ ಜನತೆಗೆ ಹಾಗೂ ವಿನಯ್ ಗುರೂಜಿ ಹಾಗೂ ಭಾಗಿಯಾಗಿದ್ದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ , ರೈತಾಪಿ ವರ್ಗದ ಹಾಗೂ ಎಲ್ಲ ಜನರು ಒಂದೇ ಅವರು …

Read More »

ಬೆಳಗಾವಿ ಜಿಲ್ಲೆಯ ಜನಪ್ರನಿಧಿಗಳು 2023 ರ ಚುನಾವಣೆಯಲ್ಲಿ ನೋಟಾ ಮತ ಪಡೆಯಲು ಸಿದ್ದರಾಗಿ: ಮೃತ್ಯುಂಜಯ ಮಹಾ ಸ್ವಾಮಿಗಳು

ಬೆಳಗಾವಿ ಜಿಲ್ಲೆಯ ಜನಪ್ರನಿಧಿಗಳು 2023 ರ ಚುನಾವಣೆಯಲ್ಲಿ ನೋಟಾ ಮತ ಪಡೆಯಲು ಸಿದ್ದರಾಗಿ ಎಂದು ಕೂಡಲ ಸಂಗಮದ ಜಯ ಮೃತ್ಯುಂಜಯ ಮಹಾ ಸ್ವಾಮಿಗಳು ಹೇಳಿದರು. ಅವರು 2ಎ ಮಿಸಲಾತಿಗಾಗಿ ಸೇಪ್ಟಂಬರ 26 ರಂದು ಮುಖ್ಯಮಂತ್ರಿಗಳ ಮನೆ ಎದುರು ಧರಣಿ ಸತ್ಯಾಗ್ರಹ ಹಾಗೂ ವಿಧಾನಸೌಧಕ್ಕೆ ಮುತ್ತಿಗೆ ಮಾಡುವ ಕುರಿತು ರಾಜ್ಯದ ಪ್ರತಿ ತಾಲೂಕಿನಲ್ಲಿ ಜಾಗ್ರತಾ ಜಾಥಾಗಳನ್ನು ಹಮ್ಮಿಕೊಂಡು ಇಂದು ಹುಕ್ಕೇರಿ ನಗರದ ಅಡವಿ ಸಿದ್ದೇಶ್ವರ ಮಠದ ಆವರಣದಲ್ಲಿ ಬಸವಣ್ಣವರ ಭಾವ ಚಿತ್ರಕ್ಕೆ …

Read More »

ದೈಹಿಕ ಸಂಪರ್ಕಕ್ಕೆ ಅವಕಾಶ ನೀಡದ್ದಕ್ಕೆ ಮಹಿಳೆ ಕೊಲೆ: ಇಬ್ಬರ ಬಂಧನ

ದಾಂಡೇಲಿ: ಜೊಯಿಡಾ ತಾಲ್ಲೂಕಿನ ಪೋಟೊಲಿ ಗ್ರಾಮದ ರೆಸಾರ್ಟ್‌ನಲ್ಲಿ ಗುರುವಾರ ಮಹಿಳೆಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯು ದೈಹಿಕ ಸಂಪರ್ಕಕ್ಕೆ ಅವಕಾಶ ನೀಡದ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿರುವುದು ವಿಚಾರಣೆಯಲ್ಲಿ ಗೊತ್ತಾಗಿದೆ.   ದಾಂಡೇಲಿ ಗಾಂಧಿನಗರ ಆಶ್ರಯ ಕಾಲೊನಿ ನಿವಾಸಿಗಳಾದ ರವಿಚಂದ್ರ ರಾಜು ರೆಡ್ಡಿ (50) ಹಾಗೂ ವಿಜಯ ಮಹಾದೇವ ಮಾಸಾಳ (30) ಬಂಧಿತರು.   ದಾಂಡೇಲಿ ಗಾಂಧಿನಗರ ನಿವಾಸಿಯಾಗಿದ್ದ ಮೃತ ಸುಶೀಲಾ …

Read More »

ಕೆಜಿಎಫ್’ ಚಾಚಾಗೆ ಕ್ಯಾನ್ಸರ್‌: ಕರೆ ಮಾಡಿ ಧೈರ್ಯ ತುಂಬಿದ ರಾಕಿಭಾಯ್!‌

ಬೆಂಗಳೂರು : ರಾಕಿಂಗ್‌ ಸ್ಟಾರ್‌ ಯಶ್‌ ಅವರು ಸಿನಿಮಾ ಹೊರತಾಗಿ ಹಲವು ವಿಚಾರಗಳಿಗೆ ಕನ್ನಡಿಗರ ಮನದಲ್ಲಿ ಉಳಿಯುತ್ತಾರೆ. ಈ ಹಿಂದೆ ಕೆರೆಯೊಂದರ ಅಭಿವೃದ್ಧಿ ಮೂಲಕ ದೇಶಕ್ಕೇ ಮಾದರಿಯಾಗಿದ್ದರು ರಾಕಿಂಗ್‌ ಸ್ಟಾರ್‌.‌ ಡೆಡ್ಲಿ ಕೊರೊನಾ ವಕ್ಕರಿಸಿದಾಗ ಸಂಕಷ್ಟದಲ್ಲಿದ್ದ ಚಿತ್ರರಂಗದ ಕಾರ್ಮಿಕರಿಗೆ ಸಹಾಯ ಮಾಡಿ ನೆರವಿಗೆ ನಿಂತಿದ್ರು. ಲಕ್ಷಾಂತರ ರೂಪಾಯಿ ಹಣವನ್ನ ನೇರವಾಗಿ ಅವರವರ‌ ಅಕೌಂಟ್‌ಗೆ ಟ್ರಾನ್ಸ್‌ಫರ್‌ ಮಾಡಿದ್ದರು. ಇದೀಗ ಮತ್ತದೇ ರೀತಿ ಮಾನವೀಯತೆ ಮೆರೆದಿದ್ದಾರೆ ರಾಕಿಂಗ್‌ ಸ್ಟಾರ್‌ ಯಶ್. ಬಣ್ಣದ ಬದುಕುಬೆಳ್ಳಿತೆರೆಯಮೇಲೆ ಎಷ್ಟು …

Read More »

ನವದೆಹಲಿ: ದೆಹಲಿಯಲ್ಲಿ ಬಿಜೆಪಿಯ ‘ಆಪರೇಷನ್ ಕಮಲ’ ವಿಫಲ ಎಂದ ಎಎಪಿ

ನವದೆಹಲಿ: ದೆಹಲಿಯಲ್ಲಿ ಬಿಜೆಪಿಯ ‘ಆಪರೇಷನ್ ಕಮಲ’ ವಿಫಲವಾಗಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಗುರುವಾರ ಹೇಳಿದೆ. ಇದಕ್ಕೂ ಮುನ್ನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಎಪಿ ವಕ್ತಾರ ಸೌರಭ್ ಭಾರದ್ವಾಜ್, “ಎಲ್ಲಾ ಎಎಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಮತ್ತು ದೆಹಲಿ ಸರ್ಕಾರ ಯಾವುದೇ ಅಡೆತಡೆಯಿಲ್ಲದೆ ಸಂಪೂರ್ಣವಾಗಿ ಸ್ಥಿರವಾಗಿದೆ” ಎಂದು ಹೇಳಿದರು. “ಇಂದು, ದೆಹಲಿಯಲ್ಲಿ ಬಿಜೆಪಿಯ ‘ಆಪರೇಷನ್ ಕಮಲ’ ವಿಫಲವಾಗಿದೆ ಎಂದು …

Read More »