Breaking News

ರಾಜ್ಯ

ರೀಲ್ಸ್‌ನಲ್ಲಿ ಪರಿಚಯವಾದವನ ಜತೆ ಪತ್ನಿ ಪರಾರಿ

ಬೆಂಗಳೂರು: ಇತ್ತೀಚೆಗೆ ಚಿಕ್ಕಮಕ್ಕಳಿಂದ ವೃದ್ಧವರೆಗಿನ ಎಲ್ಲ ವಯಸ್ಸಿನವರು ರೀಲ್ಸ್‌ (ಮನರಂಜನೆ ಮೊಬೈಲ್‌ ಆಯಪ್‌)ನಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಮಹಿಳೆ ಪತಿಯನ್ನು ತೊರೆದು ರೀಲ್ಸ್‌ನಲ್ಲಿ ಪರಿಚಯವಾದ ವ್ಯಕ್ತಿ ಜತೆ ನಾಪತ್ತೆಯಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ.   ಈ ಘಟನೆಯಿಂದ ವಿಚಲಿತಗೊಂಡಿರುವ ಪತಿ, ಸುಬೇದಾರಪಾಳ್ಯ ನಿವಾಸಿ ಜೋಸೆಫ್ ಆಂಟೋನಿ ಎಂಬುವರು ಪತ್ನಿ ನಮಿತಾ ಕುಮಾರಿ ಮತ್ತು ನಾಲ್ಕು ವರ್ಷದ ಮಗನನ್ನು ಹುಡುಕಿಕೊಡುವಂತೆ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಿಸಿ ಕ್ಯಾಮೆರಾ …

Read More »

ಮೇಯರ್‌ ದಕ್ಷಿಣಕ್ಕೆ-ಉಪಮೇಯರ್‌ ಉತ್ತರಕ್ಕೆ

ಬೆಳಗಾವಿ: ಸರಿಸುಮಾರು ಒಂದೂವರೆ ವರ್ಷಗಳಬಳಿಕ ಮಹಾನಗರ ಪಾಲಿಕೆಗೆ ಮೇಯರ್‌ ಹುದ್ದೆ ಭಾಗ್ಯ ಲಭಿಸುತ್ತಿದ್ದು, ಪೂರ್ಣ ಬಹುಮತ ಹೊಂದಿರುವ ಕಮಲ ಪಾಳಯದವರು ಮೇಯರ್‌-ಉಪಮೆಯರ್‌ ಹುದ್ದೆ ಅಲಂಕರಿಸಲಿದ್ದಾರೆ. ದಕ್ಷಿಣ ಕ್ಷೇತ್ರಕ್ಕೆ ಮೇಯರ್‌, ಉತ್ತರ ಕ್ಷೇತ್ರಕ್ಕೆ ಉಪಮೇಯರ್‌ ಸಿಗುವುದು ಗ್ಯಾರಂಟಿಯಾಗಿದೆ.   ಫೆ. 6ರಂದು ಮಹಾನಗರ ಪಾಲಿಕೆ ಸಭಾಭವನದಲ್ಲಿ ನಡೆಯಲಿರುವ ಮೇಯರ್‌-ಉಪಮೇಯರ್‌ ಚುನಾವಣೆಗಾಗಿ ತೀವ್ರ ಕಸರತ್ತು ನಡೆದಿದೆ. ಬೆಳಗಾವಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆಗೆ ಪಕ್ಷದ ಚಿಹ್ನೆ ಮೇಲೆ ಚುನಾವಣೆ ನಡೆದಿದ್ದು, …

Read More »

ಖಾನಾಪುರ: ಸುವರ್ಣ ಮಹೋತ್ಸವ ಇಂದಿನಿಂದ

ಖಾನಾಪುರ: ತಾಲ್ಲೂಕಿನ ಗಾಡಿಕೊಪ್ಪ ಗ್ರಾಮದ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುರಾಯರ ಬೃಂದಾವನ ಪ್ರತಿಷ್ಠಾಪನೆ ಸುವರ್ಣ ಮಹೋತ್ಸವ ಆಚರಣೆಗೆ ಅಂಗವಾಗಿ ಫೆ.5 ರಿಂದ 11ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಲಾಗಿದೆ ಎಂದು ಮಠದ ಅರ್ಚಕ ಅಚ್ಯುತ ಪಾಟೀಲ ತಿಳಿಸಿದ್ದಾರೆ.   ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಫೆ.5ರಂದು ನವಗ್ರಹ ಹೋಮ, ಅಷ್ಟೋತ್ತರ ಪಾರಾಯಣ, ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಮತ್ತು ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ವಿಶೇಷ ಉಪನ್ಯಾಸ, …

Read More »

ಸವದತ್ತಿ: ಯಲ್ಲಮ್ಮನ ಗುಡ್ಡದಲ್ಲಿ ಭಾರತ ಹುಣ್ಣಿಮೆ ಸಡಗರ

ಸವದತ್ತಿ: ಇಲ್ಲಿನ ಯಲ್ಲಮ್ಮನಗುಡ್ಡದ ಭಾರತ ಹುಣ್ಣಿಮೆ ಜಾತ್ರೆ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧ. ಐತಿಹಾಸಿಕ, ಪೌರಾಣಿಕ ಹಾಗೂ ಜನಪದೀಯ ಸಂಸ್ಕೃತಿಯ ತ್ರಿವೇಣಿ ಸಂಗಮವಾಗಿರುವ ಈ ನೆಲದಲ್ಲಿ ಭಾನುವಾರ (ಫೆ.5) ಅದ್ದೂರಿ ಜಾತ್ರೆ ಜರುಗಲಿದ್ದು ‘ಸಪ್ತ ಕೊಳ್ಳಗಳ ನಾಡು’ ಸಂಭ್ರಮದಲ್ಲಿ ಮುಳುಗಿದೆ.   ಎತ್ತ ಕಣ್ಣು ಹಾಯಿಸಿದರೂ ಜನಸಾಗರ, ಕಣ್ಮನ ಸೆಳೆಯುತ್ತಿರುವ ಚಕ್ಕಡಿಗಳ ಸಾಲು, ಭಕ್ತರನ್ನು ರಂಜಿಸುತ್ತಿರುವ ಜೋಗತಿಯರ ಚೌಡಕಿ ನಿನಾದ ಹೀಗೆ. ಹಲವು ವಿಶೇಷಗಳ ಮೂಲಕ ಜಾತ್ರೆ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. …

Read More »

ಕಕಮರಿ: ‘ಪರೀಕ್ಷೆಗೆ ಭಯ ಪಡುವ ಅಗತ್ಯವಿಲ್ಲ

ಕಕಮರಿ: ‘ಮನಸ್ಸಿನ ಶಕ್ತಿ ದೇಹದ ಶಕ್ತಿಗಿಂತ ಬಲಿಷ್ಠ. ಅದು ಇದ್ದರೆ ಜಗತ್ತಿನಲ್ಲಿ ಎಲ್ಲವನ್ನೂ ಸಾಧಿಸಬಹುದು. ಅದಕ್ಕೆ ಬಡವ- ಶ್ರೀಮಂತ ಎನ್ನುವ ಭೇದಭಾವ ಇಲ್ಲ’ ಎಂದು ಕಕಮರಿ ಗುರುದೇವಾಶ್ರಮದ ಆತ್ಮಾರಾಮ್ ಸ್ವಾಮೀಜಿ ಹೇಳಿದರು. ಸಮೀಪದ ಕೊಟ್ಟಲಗಿ ಸಿದ್ಧೇಶ್ವರ ಆಂಗ್ಲ ಮಾಧ್ಯಮ ಶಾಲೆಯ 11ನೇ ವಾರ್ಷಿಕ ಸ್ನೇಹ ಸಮ್ಮಿಲನ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭ ಮತ್ತು ಮಕ್ಕಳಿಂದ ತಂದೆ- ತಾಯಿಗಳ ಪಾದಪೂಜೆ ಕಾರ್ಯಕ್ರಮದದಲ್ಲಿ ಅವರು ಮಾತನಾಡಿದರು.   ‘ವಿದ್ಯಾರ್ಥಿಗಳಿಗೆ ಅಂಕಗಳು …

Read More »

ಬೈಲಹೊಂಗಲ: ಇಂದು ಚನ್ನಬಸವೇಶ್ವರರ ವೈಭವದ ಜಾತ್ರೆ

ಬೈಲಹೊಂಗಲ: ಸವದತ್ತಿ ತಾಲ್ಲೂಕಿಗೆ ಒಳಪಟ್ಟ, ಬೈಲಹೊಂಗಲ ಸಮೀಪದ ಹಾರೂಗೊಪ್ಪ ಗ್ರಾಮದಲ್ಲಿ ಈಗ ಜಾತ್ರೆ ಸಡಗರ ಮನೆ ಮಾಡಿದೆ. 12ನೇ ಶತಮಾನದ ಮಹಾಶರಣ ಚನ್ನಬಸವೇಶ್ವರರು ಉಳವಿಗೆ ಹೋಗುವ ಸಂದರ್ಭದಲ್ಲಿ ಈ ಊರಿಗೆ ಬಂದು ತಂಗಿದ್ದರು. ಅಂದಿನಿಂದ ಇಲ್ಲಿ ಜಾತ್ರೆ ನಡೆಸಿಕೊಂಡು ಬರಲಾಗಿದೆ.   ಈ ಬಾರಿ ನಡೆಯುತ್ತಿರುವುದು 18ನೇ ವರ್ಷದ ಜಾತ್ರಾ ಮಹೋತ್ಸವ. ಜ.5ರಂದು ಸಂಜೆ 5ಕ್ಕೆ ರಥೋತ್ಸವ ನೆರವೇರಲಿದೆ. ಜಿಲ್ಲೆಯ ವಿವಿಧೆಡೆಯಿಂದ ಇಲ್ಲಿಗೆ ಭಕ್ತಾದಿಗಳು ಬರುತ್ತಾರೆ. ಭಾನುವಾರ ನಸುಕಿನಿಂದಲೇ ಚನ್ನಬಸವೇಶ್ವರ …

Read More »

ಐಗಳಿ: ಭೈರವನಾಥ ಜಾತ್ರೆ ಇಂದಿನಿಂದ

ಐಗಳಿ : ಇಲ್ಲಿಯ ಭೈರವನಾಥ ದೇವರ ಜಾತ್ರೆ ಫೆ. 5 ಹಾಗೂ 6ರಂದು ನಡೆಯಲಿದ್ದು, ಇದರ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಲಿವೆ. ಫೆ.5ರಂದು ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ, ನಂತರ ಹಂದರ ಹಾಕುವುದು. ಮಧ್ಯಾಹ್ನ ದೇವರಿಗೆ ಮಹಾ ನೈವೇದ್ಯ ಅರ್ಪಿಸುವುದು, ಸಂಜೆಯಲ್ಲಿ ಕಕಮರಿಯ ಗುರುದೇವ ಆಶ್ರಮದ ಆತ್ಮಾರಾಮ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ. ನಂತರ ಪಲ್ಲಕ್ಕಿ ಉತ್ಸವವು ವಿವಿಧ ವಾದ್ಯಗಳ ಮೂಲಕ ನಡೆಯಲಿದೆ. ರಾತ್ರಿ ಇಂಗಳಿ ಹಾಗೂ ಸತ್ತಿ …

Read More »

ಬೋಧಕರ ಕೊರತೆ: ಹಾವೇರಿ ಹಿಮ್ಸ್‌ನ 150 ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಹಾವೇರಿ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಹೊಸದಾಗಿ ಆರಂಭವಾಗಿರುವ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್‌) ಕಾಲೇಜಿನಲ್ಲಿ ಬೋಧಕರ ಕೊರತೆಯಿಂದ ಒಂದೂವರೆ ತಿಂಗಳು ಕಳೆದರೂ ಪಾಠಗಳೇ ಆರಂಭವಾಗಿಲ್ಲ. ಇದರಿಂದ 150 ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.   ಈ ಸರ್ಕಾರಿ ಮೆಡಿಕಲ್‌ ಕಾಲೇಜಿಗೆ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ಒಟ್ಟು 79 ಮಂದಿಯನ್ನು ಕಾಯಂ ನೇಮಕಾತಿ ಮಾಡಿಕೊಳ್ಳಲು 2022ರ ಜನವರಿಯಲ್ಲಿ ಸಂದರ್ಶನ ನಡೆಸಲಾಗಿತ್ತು. ಸಂದರ್ಶನ ದಲ್ಲಿ ಆಯ್ಕೆಯಾದವರ ತಾತ್ಕಾಲಿಕ ಪಟ್ಟಿಯನ್ನು …

Read More »

ಬೆಳಗಾವಿ: ರಾಷ್ಟ್ರಮಟ್ಟದ ಅಂಧರ ಕ್ರಿಕೆಟ್‌ ನಾಳೆ

ಬೆಳಗಾವಿ: ‘ಸಮರ್ಥನಂ’ ಅಂಗವಿಕಲರ ಸಂಸ್ಥೆ ಆಯೋಜಿಸಿದ ರಾಷ್ಟ್ರಮಟ್ಟದ ಅಂಧರ ಕ್ರಿಕೆಟ್‌ ಟೂರ್ನಿ ಹಾಗೂ ‘ಪ್ರಜಾವಾಣಿ’ ಅಮೃತ ಮಹೋತ್ಸವಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಇಲ್ಲಿನ ಆಟೊ ನಗರದಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಫೆ.5ರಿಂದ 9ರವರೆಗೆ ಟಿ-20 ಲೀಗ್‌ ಪಂದ್ಯಗಳು ನಡೆಯಲಿವೆ.   ದೇಶದ ಏಳು ನಗರಗಳಲ್ಲಿ ಈ ಲೀಗ್‌ ಪಂದ್ಯಗಳು ನಡೆಯಲಿವೆ. ಆ ಪೈಕಿ ‘ಬಿ’ ಗುಂಪಿನ 10 ಪಂದ್ಯಗಳನ್ನು ಬೆಳಗಾವಿಯಲ್ಲಿ ಅಯೋಜಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ …

Read More »

ಬಿಜೆಪಿಗೆ 130 ಸ್ಥಾನ ಖಚಿತ, ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಿಎಸ್‌ವೈ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ 130ರಿಂದ 140 ಸ್ಥಾನಗಳನ್ನು ಪಡೆಯಲಿದೆ. ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ (ಬಿಜೆಪಿ) 130ರಿಂದ 140 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನಮ್ಮ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್‌ನಲ್ಲಿ …

Read More »