ಶಿವಮೊಗ್ಗ:ವಿಐಎಸ್‌ಎಲ್ ವಿಚಾರದಲ್ಲಿ ರಾಜಕೀಯ ಬೆಳೆಸುವ ಅವಶ್ಯಕತೆ ಇಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಯಿ ಅವರು ಬುಧವಾರ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗ ದಲ್ಲಿ ವಿವಿಧ ಕಾರ್ಯಕ್ರಮ ಉದ್ಘಾಟನೆ ಗೆ ಬಂದಿದ್ದೇನೆ,ವಿಐಎಸ್‌ಎಲ್ ಅವರ ನಿಯೋಗ ನನ್ನ ಬಳಿ ಬಂದಿತ್ತು. ಕೇಂದ್ರದ ಸಚಿವರಿಗೂ ಕೂಡ ಮಾಹಿತಿ ರವಾನೆ ಮಾಡಲಾಗಿದೆ. ಇದೇ ವಾರದಲ್ಲಿ ಸಭೆ ಕರೆಯುತ್ತೇನೆ. ಖಾಸಗಿ ಯವರ ಜೊತೆ ಕೂಡ ಮಾತನಾಡುತ್ತೇನೆ. ಪರಿಹಾರ ಕೊಡುವಂತಹ ಕೆಲಸವನ್ನು ಮಾಡುತ್ತೇವೆ. …
Read More »ಗರ್ಭಿಣಿ ಎಂದು ಘೋಷಿಸಿದ್ದ ಕೇರಳದ ತೃತೀಯಲಿಂಗಿ ದಂಪತಿಗಳಿಗೆ ಮಗುವಿನ ಜನನ!
ಕೋಝಿಕ್ಕೋಡ್ : ಇತ್ತೀಚೆಗೆ ಗರ್ಭಿಣಿ ಎಂದು ಘೋಷಿಸಿದ ಕೇರಳದ ತೃತೀಯಲಿಂಗಿ ದಂಪತಿಗಳು ಬುಧವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವನ್ನು ಪಡೆದಿದ್ದಾರೆ, ಇದು ದೇಶದಲ್ಲೇ ಮೊದಲ ಪ್ರಕರಣ ಎಂದು ಪರಿಗಣಿಸಲಾಗಿದೆ. “ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಬೆಳಗ್ಗೆ 9.30 ರ ಸುಮಾರಿಗೆ ಮಗು ಜನಿಸಿತು” ಎಂದು ತೃತೀಯಲಿಂಗಿ ದಂಪತಿಗಳಲ್ಲಿ ಒಬ್ಬರಾದ ಜಿಯಾ ಪಾವಲ್ ಪಿಟಿಐಗೆ ತಿಳಿಸಿದ್ದಾರೆ. ಮಗು ಮತ್ತು ಮಗುವಿಗೆ ಜನ್ಮ ನೀಡಿದ ಆಕೆಯ ಸಂಗಾತಿ ಜಹ್ಹಾದ್ ಇಬ್ಬರೂ …
Read More »ಬೊಮ್ಮಾಯಿ ಬಸವ ಚಿಂತಕರಲ್ಲ, ಮೋಸಗಾರ ಸಿಎಂ : ರೇವುನಾಯಕ ಬೆಳಮಗಿ
ವಾಡಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಸವಣ್ಣನ ಚಿಂತನೆ ಹೊಂದಿದ್ದಾರೆ. ಎಲ್ಲರಿಗೂ ನ್ಯಾಯ ಕೊಟ್ಟು ಸಮಾನತೆ ಕೊಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಅವರು ಇತರರಂತೆ ಮೋಸಗಾರ ಸಿಎಂ ಆಗಿದ್ದಾರೆ ಎಂದು ಮಾಜಿ ಸಚಿವ ರೇವುನಾಯಕ ಬೆಳಮಗಿ ಆರೋಪಿಸಿದರು. ಚಿತ್ತಾಪುರ ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮದ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ತಾಂಡಾಗಳಲ್ಲಿ ವಾಸಿಸುವ ಬಂಜಾರಾ ಸಮುದಾಯದ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ನಾಟಕ ಇತ್ತೀಚೆಗೆ …
Read More »ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರಕಾರ: ಗೋವಾ ಸಿಎಂ
ಮಂಗಳೂರು: ಕರ್ನಾಟದಲ್ಲಿ ಬಿಜೆಪಿ ಸರಕಾರದಿಂದ ಕಳೆದ ಐದು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಇದರಿಂದಾಗಿ ಮುಂದಿನ ಚುನಾವಣೆಯಲ್ಲೂ ಬಿಜೆಪಿ ಸರಕಾರವೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಗೋವಾ ಮುಖ್ಯಮಂತ್ರಿ ಡಾ| ಪ್ರಮೋದ್ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬುಧವಾರ ಮಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳ ನವ ಭಾರತ ನಿರ್ಮಾಣ ಕನಸಿಗೆ ಕರ್ನಾಟಕವೂ ಕೈಜೋಡಿಸಿದೆ. ಇಲ್ಲಿನ ಡಬಲ್ ಎಂಜಿನ್ ಸರಕಾರ ಪ್ರಧಾನ ಮಂತ್ರಿಗಳ ಆಶಯಕ್ಕೆ ಪೂರಕವಾಗಿ …
Read More »ಹೊಸಪೇಟೆಯಿಂದ ಸ್ಪರ್ಧಿಸಿದರೆ 1 ಕೋಟಿ ಕೊಡುವುದಾಗಿ ಘೋಷಣೆ ಮಾಡಿದ ಸಿದ್ದರಾಮಯ್ಯನವರ ಅಭಿಮಾನಿ
ಹೊಸಪೇಟೆ: ವಿಧಾನಸಭಾ ಚುನಾವಣೆ ಸ್ಪರ್ಧೆಗೆ ಕ್ಷೇತ್ರ ಹುಡುಕಾಟದ ಗೊಂದಲದಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಅಭಿಮಾನಿಯೋರ್ವರು ಭರ್ಜರಿ ಆಫರ್ ನೀಡಿದ್ದಾರೆ. ಸಿದ್ದರಾಮಯ್ಯನವರು ಹೊಸಪೇಟೆಯಿಂದ ಸ್ಪರ್ಧೆ ಮಾಡಿದರೆ ಅವರಿಗೆ 1 ಕೋಟಿ ರೂಪಾಯಿ ನೀಡುವುದಾಗಿ ಅಭಿಮಾನಿ ಕೆ.ಎಸ್.ಮಲಿಯಪ್ಪ ಘೋಷಣೆ ಮಾಡಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾದಿಗನೂರಿನ ನಿವಾಸಿ ಕೆ.ಎಸ್.ಮಲಿಯಪ್ಪ, ತಾನು ಜಮೀನು ಮಾರಿ 1 ಕೋಟಿ ರೂಪಾಯಿ ನೀಡುತ್ತೇನೆ. ಸಿದ್ದರಾಮಯ್ಯನವರು ಹೊಸಪೇಟೆಯಿಂದ ಚುನಾವಣೆಗೆ ಸ್ಪರ್ಧಿಸಲಿ ಎಂದು ಹೇಳಿದ್ದಾರೆ.
Read More »ವಿಧನಾಸಭಾ ಚುನಾವಣೆಗೆ ಭಾರಿ ಸಿದ್ಧತೆ ನಡೆಸಿರುವ ರಾಜ್ಯ ಬಿಜೆಪಿ : ಉಸ್ತುವಾರಿಗಳ ನೇಮಕ
ಬೆಂಗಳೂರು: ವಿಧನಾಸಭಾ ಚುನಾವಣೆಗೆ ಭಾರಿ ಸಿದ್ಧತೆ ನಡೆಸಿರುವ ರಾಜ್ಯ ಬಿಜೆಪಿ ಚುನಾವಣಾ ಪೂರ್ವ ಸಿದ್ಧತಾ ಕಾರ್ಯಕ್ರಮಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಜಿಲ್ಲೆಗಳಲ್ಲಿ ಮೋರ್ಚಾ ಸಮಾವೇಶ, ಫಲಾನುಭವಿಗಳ ಸಮ್ಮೇಳನ, ವಿಡಿಯೋ ವ್ಯಾನ್ ಪ್ರಚಾರ, ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನ, ರಥ ಯಾತ್ರೆಗಳಿಗೆ ಉಸ್ತುವಾರಿಗಳನ್ನು ನೀಮಕ ಮಾಡಿದೆ. ಯಾತ್ರೆ ಪ್ರಮುಖರಾಗಿ ಸಚಿವರ ಸಿಸಿ ಪಾಟೀಲ್, ಪಕ್ಷದ ಎಲ್ಲ ಮೋರ್ಚಾಗಳ ಜಿಲ್ಲಾ ಸಮಾವೇಶ ಸಂಚಾಲಕರಾಗಿ ಬಿ.ವೈ ವಿಜಯೇಂದ್ರ, ಫಲಾನುಭವಿಗಳ ಸಮ್ಮೇಳನದ ಸಂಚಾಲಕರಾಗಿ …
Read More »ರೆಪೊ ದರ ಹೆಚ್ಚಳದಿಂದಾಗಿ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಮೇಲೆ ಬಡ್ಡಿದರ ಹೆಚ್ಚಳ
ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ-ಆರ್ ಬಿಐ, ಸಾಲಗಾರರಿಗೆ ಮತ್ತೆ ಶಾಕ್ ನೀಡಿದೆ. ರೆಪೊ ದರವನ್ನು ಹೆಚ್ಚಳ ಮಾಡಿದ್ದು, ಬ್ಯಾಂಕ್ ಸಾಲದ ಬಡ್ಡಿದರದಲ್ಲಿ ಏರಿಕೆಯಾಗಲಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಆರ್ ಬಿಐ ರೆಪೊ ದರವನ್ನು 25 ಮೂಲಾಂಶದಷ್ಟು ಹೆಚ್ಚಿಸಿದೆ. ಈ ಮೂಲಕ ಪರಿಷ್ಕೃತ ರೆಪೊದರ ಶೇ.6.50ರಷ್ಟಾಗಿದೆ ಎಂದು ತಿಳಿಸಿದ್ದಾರೆ. ಕಳೆದ ಕೆಲವು ಹಣಕಾಸು ನೀತಿಯಲ್ಲಿ ಆರ್ ಬಿ ಐ ತನ್ನ ರೆಪೊ ದರವನ್ನು ಹೆಚ್ಚಿಸುತ್ತಾ …
Read More »ಸಂತೋಷ್ ಅಣ್ಣಾ ಜಾರಕಿಹೊಳಿ ಅವರ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಿಂದ ಈ ವರ್ಷದ ಕ್ಯಾಲೆಂಡರ್ ವಿತರಣೆ
: ಗೋಕಾಕ: ಗೋಕಾಕ ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರ್ ಒಡೆತನದ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಡಿಂದ ಹೊಸ ವರ್ಷದ ಕ್ಯಾಲೆಂಡರ್ ವಿತರಣೆ ಮಾಡಿದ್ದಾರೆ. ಪ್ರತಿ ವರ್ಷ ದಂತೆ ಈ ವರ್ಷವೂ ಕೂಡ ಟೇಬಲ್ ಕ್ಯಾಲೆಂಡರ್, ಡೈರಿ ಕೂಡ ಎಲ್ಲ ವಿವಿಧ ಗ್ರಾಮ ಪಂಚಾಯತಿ ಗಳಿಗೆ, KSRTC ಕಚೇರಿ ಗಳಿಗೆ, ತಹಸೀಲ್ದಾರ ಆಫೀಸ್ ಗಳನ್ನ್ ಸೇರಿ ನಗರದ ಹಾಗೂ ಗೋಕಾಕ ನ ವಿವಿಧ ಗ್ರಾಮ ಗಳಲ್ಲಿ ವಿತರಣೆ ಮಾಡಿದ್ದಾರೆ.
Read More »ಪ್ರಗತಿ ಪಥದತ್ತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್
ಗ್ರಾಮೀಣ ಬ್ಯಾಂಕು ಉಳ್ಳವರಿಗೂ ಬೇಕು… ಕೊಳ್ಳಲಿರುವವರಿಗೂ ಬೇಕು.. – ಊರಿನೆಲ್ಲರಿಗೂ ಬೇಕು.. ತಾ ಊರುಗೋಲಾಗಿ ಮುನ್ನಡೆಸಲು ಸರ್ವರನೂ.. ಜನ ಸಾಮಾನ್ಯರ ಅಭಿವೃದ್ಧಿ ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ 1975ರಲ್ಲಿ ಗ್ರಾಮೀಣ ಬ್ಯಾಂಕಿಂಗ್ ವ್ಯವಸ್ಥೆ ಆರಂಭಿಸಿತು. ರಾಜ್ಯದ ಮಲಪ್ರಭಾ, ಬಿಜಾಪೂರ, ವರದಾ, ನೇತ್ರಾವತಿ ಗ್ರಾಮೀಣ ಬ್ಯಾಂಕುಗಳು ಒಗ್ಗೂಡಿಸಿ 2005 ಸೆಪ್ಟೆಂಬರ್ 12ರಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಉದಯಗೊಂಡಿತು. ಈ ಬ್ಯಾಂಕ್‌ನಲ್ಲಿ ಕೇಂದ್ರ ಸರ್ಕಾರ (ಶೇ.50) ರಾಜ್ಯ ಸರ್ಕಾರ (ಶೇ.15) ಮತ್ತು …
Read More »ಕಳ್ಳರ ಹಾವಳಿ ತಪ್ಪಿಸಲು ‘ಸೀಟಿ’ ಅಸ್ತ್ರ
ಬೆಳಗಾವಿ: ಇಲ್ಲಿನ ಮಹಾಂತೇಶ ನಗರದ 11ನೇ ಬಡಾವಣೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಇದರಿಂದ ಮುಕ್ತಿ ಹೊಂದಲು ಸ್ವತಃ ನಾಗರಿಕರೇ ಸೀಟಿ ಹೊಡೆಯುವ ದಾರಿ ಕಂಡುಕೊಂಡಿದ್ದಾರೆ. ಕಳವು ಪ್ರಕಟಣಗಳಿಂದ ಬೇಸತ್ತ ಬಡಾವಣೆಯ ಮುಖಂಡರು 120 ಮನೆಗಳಿಗೆ ಸೀಟಿಗಳನ್ನು ವಿತರಿಸಿದ್ದಾರೆ. ಕಳ್ಳರು ಎಂಬ ಅನುಮಾನ ಬಂದ ತಕ್ಷಣ ಅಕ್ಕಪಕ್ಕದವರೆಲ್ಲ ಸೇರಿಕೊಂಡು ಸೀಟಿ ಊದಬೇಕು ಎಂದೂ ಮಾಹಿತಿ ನೀಡಿದ್ದಾರೆ. ಹಲವರು ತಮ್ಮ ಮನೆಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಂಡಿದ್ದಾರೆ. ಬಡಾವಣೆಗೆ ಭಿಕ್ಷುಕರು ಬರದಂತೆ, ಬಂದರೂ ಅವರಿಗೆ …
Read More »
Laxmi News 24×7