Breaking News

ರಾಜಕೀಯ

ವಧು–ವರ ಮೆಳವಿಗಳು ಹಾಗೂ ಸಾಮೂಹಿಕ ವಿವಾಹ ಸಮಾರಂಭಗಳು ಪವಿತ್ರ ಪುಣ್ಯಕಾರ್ಯ : ಶಾಸಕ ಮಾರುತ್ತಿರಾವ್ ಮುಳೆ

ವಧು–ವರ ಮೆಳವಿಗಳು ಹಾಗೂ ಸಾಮೂಹಿಕ ವಿವಾಹ ಸಮಾರಂಭಗಳು ಪವಿತ್ರ ಪುಣ್ಯಕಾರ್ಯ : ಶಾಸಕ ಮಾರುತ್ತಿರಾವ್ ಮುಳೆ ರಾಜಮಾತಾ ಜಿಜಾವು ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ ವಧು–ವರ ಮೆಳವಿಗೆ ಭರ್ಜರಿ ಪ್ರತಿಕ್ರಿಯೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಜೀವನಶೈಲಿಯಲ್ಲಿಯೂ ಮೂಲಭೂತ ಬದಲಾವಣೆಗಳು ಕಂಡುಬರುತ್ತಿವೆ. ಶಿಕ್ಷಣದ ಜೊತೆಗೆ ಯುವಕ–ಯುವತಿಯರ ಭವಿಷ್ಯದ ಜೀವನದ ಕುರಿತ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಇದರ ಪರಿಣಾಮವಾಗಿ ಸಮಯಕ್ಕೆ ಸರಿಯಾಗಿ ವಿವಾಹಗಳನ್ನು ಜೋಡಿಸುವುದು ಒಂದು ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ಇಂತಹ ಸಂದರ್ಭಗಳಲ್ಲಿ ವಧು–ವರ ಮೆಳವಿಗಳು …

Read More »

ಕರ್ತವ್ಯ ಮುಗಿಸಿಕೊಂಡು ತನ್ನೂರಿಗೆ ತೆರಳುತ್ತಿರುವಾಗ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡ ಪೊಲೀಸ್ ಶಿವಾನಂದ ಮಾದರ

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಸಹೋದ್ಯೋಗಿ ಶಿವಾನಂದ ಮಾದರ ಅವರು ಮೊನ್ನೆ ದಿನ ರಾತ್ರಿ ಗಸ್ತು ಕರ್ತವ್ಯ ಮುಗಿಸಿಕೊಂಡು ತನ್ನೂರಿಗೆ ತೆರಳುತ್ತಿರುವಾಗ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿರುತ್ತಾರೆ. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿ ತಲೆ ಮತ್ತು ಎದೆಗೆ ಬಲವಾದ ಹೊಡೆತ ಬಿದ್ದದ್ದು ತಿಳಿದು ಬಂದಿರುತ್ತದೆ. ಹೆಚ್ಚಿನ ಚಿಕಿತ್ಸೆಗಾಗಿ ಗೋಕುಲ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸಿದ್ದು ಜಂಗಲಗಿಯವರು ಶಿವಾನಂದರನ್ನು ಕೆ.ಎಲ್.ಇ ಸುಚಿರಾಯು ಆಸ್ಪತ್ರೆಗೆ ದಾಖಲು ಮಾಡಿದ್ದು ಸದ್ಯ …

Read More »

ಹಾಲಿ ಶಿಕ್ಷಕರೂ TET ಬರೆಯಬೇಕೆಂಬ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ: ಮಧು ಬಂಗಾರಪ್ಪ

ಶಿವಮೊಗ್ಗ: “ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರಲು ನಿವೃತ್ತಿ ಅಂಚಿನಲ್ಲಿರುವವರನ್ನು ಹೊರತುಪಡಿಸಿ, ಉಳಿದೆಲ್ಲ ಶಿಕ್ಷಕರು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆಯಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಸಂಬಂಧ ನಮ್ಮ ಸರ್ಕಾರದಿಂದ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಾಗಿದೆ” ಎಂದು ಶಿಕ್ಷಣ ಸಚಿವ ಎಸ್​.ಮಧು ಬಂಗಾರಪ್ಪ ತಿಳಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕೋರ್ಟ್ ಆದೇಶ ಮಾಡಿರುವುದು ಸರಿ ಇದೆ. ಈಗ ಇರುವ ಶಿಕ್ಷಕರು 20ರಿಂದ 30 ವರ್ಷಗಳ ಹಿಂದೆ ನೇಮಕಗೊಂಡವರು. ಅವರು ಇಂದಿನ …

Read More »

ಸಂತ ಜನಾಬಾಯಿ ಮಂದಿರ ಹಾಗೂ ಶ್ರೀ ಗೋಪಾಲಕೃಷ್ಣ ಮಂದಿರಕ್ಕೆ ಕುಟುಂಬ ಸಮೇತ ಭೇಟಿ

ಪಂಢರಪುರದ ಗೋಪಾಲಪುರದಲ್ಲಿರುವ ಸಂತ ಜನಾಬಾಯಿ ಮಂದಿರ ಹಾಗೂ ಶ್ರೀ ಗೋಪಾಲಕೃಷ್ಣ ಮಂದಿರಕ್ಕೆ ಕುಟುಂಬ ಸಮೇತ ಭೇಟಿ ನೀಡಿ,ವಿಶೇಷ ಪೂಜೆ ಸಲ್ಲಿಸಿ,ದರ್ಶನ ಪಡೆದು,ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು.ಬಳಿಕ ಅವರು ನೀಡಿದ ಸತ್ಕಾರ ಸ್ವೀಕರಿಸಲಾಯಿತು. ದೇವಾಲಯದ ಸಂಕೀರ್ಣವು ಸಂತ ಜನಾಬಾಯಿಯವರು ಬಳಸಿದ ವಸ್ತುಗಳನ್ನು ಹೊಂದಿರುವ ಕೋಣೆಯನ್ನು ಒಳಗೊಂಡಿದೆ.ಈ ಸ್ಥಳದಲ್ಲಿಯೇ ವಿಠಲನು ಜನಾಬಾಯಿಯವರ ಮನೆಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದನೆಂದು ನಂಬಲಾಗಿದೆ.ಸಂತ ಜನಾಬಾಯಿ 7 ವರ್ಷದವಳಿದ್ದಾಗ,ಆಕೆಯ ಪೋಷಕರು ಪಂಢರಪುರದ ಶ್ರೀ ವಿಠಲ ದೇವಸ್ಥಾನಕ್ಕೆ ಭೇಟಿ ನೀಡಿದರು.ಜನಾಬಾಯಿ …

Read More »

ಡಿಕೆಶಿ ಪಕ್ಷದ ಅಧ್ಯಕ್ಷರು. ರಾಜಣ್ಣ ಪಕ್ಷದ ಶಾಸಕರು. ಅವರಿಬ್ಬರು ಭೇಟಿ ಆಗಿರುವುದರಲ್ಲಿ ತಪ್ಪೇನಿದೆ ಎಂದ ಶಾಸಕ ಲಕ್ಷ್ಮಣ್​​

ಚಿಕ್ಕೋಡಿ: “ಡಿಸಿಎಂ ಡಿ.ಕೆ.ಶಿವಕುಮಾರ್​​​ ಮತ್ತು ಮಾಜಿ ಸಚಿವ ಕೆ.ಎನ್​​.ರಾಜಣ್ಣ ಭೇಟಿ ಆಗಿರುವುದಲ್ಲಿ ತಪ್ಪೇನು? ಅವರು ಪಕ್ಷದ ಅಧ್ಯಕ್ಷರು, ಇವರು ಪಕ್ಷದ ಶಾಸಕರು” ಎಂದು ಶಾಸಕ ಲಕ್ಷ್ಮಣ್​​ ಸವದಿ ಪ್ರತಿಕ್ರಿಯಿಸಿದ್ದಾರೆ. ಅಥಣಿ ಪಟ್ಟಣದ ಸಮುದಾಯದ ಆಸ್ಪತ್ರೆಯಲ್ಲಿ ಇಂದು ರಾಷ್ಟ್ರೀಯ ಪಲ್ಸ್​ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ಹಾಗೂ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ಆರಂಭಗೊಂಡ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಒಂದೇ ಪಕ್ಷದಲ್ಲಿ ಇರುವುದರಿಂದ ಭೇಟಿ ಮಾಡಿ …

Read More »

ಬಾಳೆ ತೋಟದಲ್ಲಿ ಕಾಣಿಸಿಕೊಂಡಿದ್ದ ಹುಲಿ ಸೆರೆ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಸಮೀಪದ ಮುಕ್ತಿ ಕಾಲೊನಿಯ ಬಾಳೆ ತೋಟದಲ್ಲಿ ಕಾಣಿಸಿಕೊಂಡಿದ್ದ ಹುಲಿಯನ್ನು ಬಂಡೀಪುರ ಅರಣ್ಯ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಕ್ತಿ ಕಾಲೊನಿ ಗ್ರಾಮದ ಲೋಕೇಶ್ ಎಂಬವರ ಬಾಳೆತೋಟದಲ್ಲಿ ಇಂದು ಬೆಳಗ್ಗೆ ಹುಲಿ ಕಾಣಿಸಿಕೊಂಡು ಘರ್ಜಿಸುತ್ತಾ ಬೀಡುಬಿಟ್ಟಿತ್ತು. ಗ್ರಾಮಸ್ಥರು ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದರು. ವಿಷಯ ತಿಳಿಯುತ್ತಿದ್ದಂತೆಯೇ ಬಂಡೀಪುರ ಹುಲಿ ರಕ್ಷಿತಾರಣ್ಯದ ಮದ್ದೂರು ವಲಯ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ, ಸಂಜೆಯ ಹೊತ್ತಿಗೆ ಸೆರೆ ಹಿಡಿದಿದ್ದಾರೆ. …

Read More »

ಜೈನ ಧರ್ಮದ ಬೃಹತ್​​ ಸಿದ್ಧಚಕ್ರ ಮಹೋತ್ಸವಕ್ಕೆ ತೆರೆ

ಹಾವೇರಿ: ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ನಡೆಯುತ್ತಿದ್ದ ಜೈನ ಧರ್ಮದ ಬೃಹತ್​​ ಸಿದ್ಧಚಕ್ರ ಮಹೋತ್ಸವಕ್ಕೆ ಭಾನುವಾರ (ಇಂದು) ತೆರೆ ಬಿದ್ದಿದೆ. ಸಿದ್ಧಚಕ್ರ ಮಹೋತ್ಸವದ ಸಮಾರೋಪ ಅಂಗವಾಗಿ ಧರ್ಮಯಾತ್ರೆ ನಡೆಸಲಾಯಿತು. ನಗರದ ರಜನಿ ಕಲ್ಯಾಣ ಮಂಟಪದಿಂದ ಆರಂಭವಾದ ಧರ್ಮಯಾತ್ರೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಹೊಸಮನಿ ಸಿದ್ದಪ್ಪ ವೃತ್ತ, ಜೈನಬಸದಿ, ಮೇಲಿನಪೇಟೆ ಮಹಾತ್ಮಾಗಾಂಧಿ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು ಬೃಹತ್​ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವದ ಧರ್ಮಯಾತ್ರೆಯಲ್ಲಿ ಆನೆ, ಕುದುರೆ, ರಥ, ಸಾರೋಟಗಳ …

Read More »

ಚಿಕ್ಕೋಡಿ ಜಿಲ್ಲೆ ರಚನೆಗೆ ಬಹಳ ದಿನ ಹಿಡಿಯಲ್ಲ: ಸಚಿವ ಹೆಚ್​.ಕೆ.ಪಾಟೀಲ್​

ಚಿಕ್ಕೋಡಿ: “ಚಿಕ್ಕೋಡಿ ಜಿಲ್ಲಾ ರಚನೆಗೆ ಈಗಾಗಲೇ ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿಗಳೊಂದಿಗೆ ಸಭೆ ಮಾಡಿದ್ದಾರೆ. ಮುಂದಿನ ಹೆಜ್ಜೆಗಳನ್ನಿಡಲು ಬೇಗ ಪ್ರಕ್ರಿಯೆ ಆರಂಭವಾಗಬಹುದು” ಎಂದು ಕಾನೂನು ಮತ್ತು ಸಂಸದೀಯ ಸಚಿವ ಹೆಚ್​.ಕೆ.ಪಾಟೀಲ್​ ಹೇಳಿದರು. ಚಿಕ್ಕೋಡಿ ನ್ಯಾಯಾಲಯದ ನೂತನ ಕಟ್ಟಡ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಈ ಕುರಿತಾಗಿ ಸಿಎಂ ಸಿದ್ದರಾಮಯ್ಯನವರು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಸಭೆ ಮಾಡಿದ್ದಾರೆ. ಸಚಿವರೂ ಕೂಡ ಚಿಕ್ಕೋಡಿ, ಬೆಳಗಾವಿ, ಗೋಕಾಕ್ ಜನರೊಂದಿಗೆ ಸಭೆ ನಡೆಸಿದ್ದಾರೆ” ಎಂದರು. …

Read More »

ಗೊಂದಲಕ್ಕೆ ಹೈಕಮಾಂಡ್ ಹೊಣೆಯಲ್ಲ, ಸ್ಥಳೀಯ ನಾಯಕರೇ ಬಗೆಹರಿಸಬೇಕು: ಖರ್ಗೆ

ಕಲಬುರಗಿ: ರಾಜ್ಯದಲ್ಲಿನ ನಾಯಕತ್ವ ಗೊಂದಲವನ್ನು ಸ್ಥಳೀಯ ಮಟ್ಟದಲ್ಲೇ ಬಗೆಹರಿಸಿಕೊಳ್ಳಬೇಕು. ಪ್ರತಿಯೊಂದಕ್ಕೂ ಹೈಕಮಾಂಡ್ ಹೆಸರನ್ನು ಎಳೆದು ತರುವುದು ಸರಿಯಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಮುಖ್ಯಮಂತ್ರಿ ಹುದ್ದೆ ಕುರಿತ ಗೊಂದಲಗಳನ್ನು ಬಗೆಹರಿಸುವಂತೆ ಕಾಂಗ್ರೆಸ್ ಮುಖಂಡ ಸುದರ್ಶನ್ ಅವರು ಎಐಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆ ಪತ್ರ ಇನ್ನೂ ನಮ್ಮ ಕೈ ಸೇರಿಲ್ಲ. ದೆಹಲಿಗೆ ಹೋದ ಬಳಿಕ ಪತ್ರದ ವಿಷಯ ತಿಳಿಯಲಿದೆ. ಯಾವ ಉದ್ದೇಶಕ್ಕೆ ಪತ್ರ ಬರೆದಿದ್ದಾರೆ, …

Read More »

ಹಾನಗಲ್​ನಲ್ಲಿ ನಡೆದಿದ್ದ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ 7 ಮಂದಿ ಆರೋಪಿಗಳನ್ನು ಗಡಿಪಾರು ಮಾಡಲಾಗಿದೆ.

ಹಾವೇರಿ: ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣದ 7 ಮಂದಿ ಆರೋಪಿಗಳನ್ನು ಹಾವೇರಿ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಆರೋಪಿಗಳನ್ನು ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಸವಣೂರು ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ ಆದೇಶ ಹೊರಡಿಸಿದ್ದಾರೆ. ಪ್ರಕರಣದಲ್ಲಿ, ಅಪ್ತಾಬ್ ಚಂದನಕಟ್ಟಿ, ಮದರ್ ಸಾಬ್ ಮಂಡಕ್ಕಿ, ಮಹ್ಮಮದ್ ಸಾದಿಕ್ ಅಗಸಿಮನಿ, ರಿಯಾಜ್ ಸಾವಿಕೇರಿ, ಸಮಿವುಲ್ಲಾ ಲಾಲನವರ, ಶೋಯಿಬ್ ಮುಲ್ಲಾ ಹಾಗೂ ತೌಸಿಪ್ ಅಹ್ಮದ್ ಚೌಟಿ ಎಂಬವರು ಗಡಿಪಾರಾದವರು ಎಂದು ಗುರುತಿಸಲಾಗಿದೆ. ಗ್ಯಾಂಗ್ ರೇಪ್ ಆರೋಪಿಗಳನ್ನು ಗಡಿಪಾರು …

Read More »