Breaking News

ಜೈನ ಧರ್ಮದ ಬೃಹತ್​​ ಸಿದ್ಧಚಕ್ರ ಮಹೋತ್ಸವಕ್ಕೆ ತೆರೆ

Spread the love

ಹಾವೇರಿ: ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ನಡೆಯುತ್ತಿದ್ದ ಜೈನ ಧರ್ಮದ ಬೃಹತ್​​ ಸಿದ್ಧಚಕ್ರ ಮಹೋತ್ಸವಕ್ಕೆ ಭಾನುವಾರ (ಇಂದು) ತೆರೆ ಬಿದ್ದಿದೆ.

ಸಿದ್ಧಚಕ್ರ ಮಹೋತ್ಸವದ ಸಮಾರೋಪ ಅಂಗವಾಗಿ ಧರ್ಮಯಾತ್ರೆ ನಡೆಸಲಾಯಿತು. ನಗರದ ರಜನಿ ಕಲ್ಯಾಣ ಮಂಟಪದಿಂದ ಆರಂಭವಾದ ಧರ್ಮಯಾತ್ರೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಹೊಸಮನಿ ಸಿದ್ದಪ್ಪ ವೃತ್ತ, ಜೈನಬಸದಿ, ಮೇಲಿನಪೇಟೆ ಮಹಾತ್ಮಾಗಾಂಧಿ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು ಬೃಹತ್​ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವದ ಧರ್ಮಯಾತ್ರೆಯಲ್ಲಿ ಆನೆ, ಕುದುರೆ, ರಥ, ಸಾರೋಟಗಳ ಮೆರವಣಿಗೆ ಗಮನ ಸೆಳೆಯಿತು.ವಿವಿಧ ಜಾನಪದ ಕಲಾತಂಡಗಳ ಕಲಾ ಪ್ರದರ್ಶನ ಆಕರ್ಷಣೀಯವಾಗಿತ್ತು. ಧರ್ಮಯಾತ್ರೆಯಲ್ಲಿ ಜೈನಮುನಿ 108 ವಿಧಿತ ಸಾಗರ ಮಹಾರಾಜರು ಪಾಲ್ಗೊಂಡಿದ್ದರು. ಧರ್ಮಯಾತ್ರೆಯುದ್ದಕ್ಕೂ ಜೈನ ಸಮಾಜದ ಬಾಂಧವರು ಕುಣಿದು ಸಂಭ್ರಮಿಸಿದರು. ರಜನಿ ಕಲ್ಯಾಣ ಮಂಟಪದಲ್ಲಿ ಧರ್ಮಯಾತ್ರೆ ಮೆರವಣಿಗೆ ಮುಕ್ತಾಯಗೊಂಡಿತು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ