Breaking News

ರಾಜಕೀಯ

ಮುಧೋಳ ನಗರಸಭೆ: ಸುನಂದಾ ಅಧ್ಯಕ್ಷೆ, ಮಹಿಬೂಬ್ ಉಪಾಧ್ಯಕ್ಷ

ಮುಧೋಳ: ಮುಧೋಳ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಗರಸಭೆ ಸಭಾಭವನದಲ್ಲಿ ಜಮಖಂಡಿ ಉಪವಿಭಾಗಧಿಕಾರಿಗಳು ಶ್ವೇತಾ ಬೀಡಿಕರ ನೇತೃತ್ವದಲ್ಲಿ ಚುನಾವಣೆ ನಡೆಯಿತು. ಕಾಂಗ್ರೆಸ್ ಪಕ್ಷದ ವಾರ್ಡ್ ನಂ 30 ಸದಸ್ಯೆ ಸುನಂದಾ ಹನಮಂತ ತೇಲಿ 17 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ವಾರ್ಡ್ ನಂ 3 ರ ಪಕ್ಷೇತರ ಸದಸ್ಯ ಮಹಿಬೂಬ್ ಮುಕ್ತುಮಸಾಬ್ ಬಾಗವಾನ್ 17 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ನಾಮಪತ್ರ ಪರಿಶೀಲನೆ ಹಾಗೂ ಹಿಂಪಡೆಯಲು ಅವಕಾಶ ನೀಡಿ …

Read More »

ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣ ಮಾಡಿದ ಸಿಎಂ ಸಿದ್ಧರಾಮಯ್ಯ

ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣ ಮಾಡಿದ ಮುಖ್ಯಮಂತ್ರಿ ರಾಯಣ್ಣನಂತಹ ದೇಶ ಪ್ರೇಮಿಗಳು ಮತ್ತೇ ಹುಟ್ಟಬೇಕಿದೆ- ಸಿಎಂ ಸಿದ್ಧರಾಮಯ್ಯ ಯಾವ ತಪ್ಪು ಮಾಡಿಲ್ಲ. ಅಧಿಕಾರದಿಂದ ಕೆಳಗಿಳಿಸುವ ವಿರೋಧಿಗಳ ಹುನ್ನಾರ ನಡೆಯಲ್ಲ ಬಾಲಚಂದ್ರ ಜಾರಕಿಹೊಳಿ ನಮ್ಮವರು. ಆದರೆ ಅವರ ಮಿತ್ರರು ನಮ್ಮವರಲ್ಲ ಬಾಲಚಂದ್ರರತ್ತ ಮುಖ ನೋಡಿ ಮುಗುಳ್ನಗೆ ಬೀರಿದ ಸಿದ್ಧರಾಮಯ್ಯ ಗೋಕಾಕ: ಸಂಗೊಳ್ಳಿ ರಾಯಣ್ಣ ಹುಟ್ಟಿದ ಸ್ಥಳದಲ್ಲಿ ಮ್ಯೂಜಿಯಮ್ ಮತ್ತು ಸೈನಿಕ ಶಾಲೆ ತೆರೆಯಲಾಗಿದೆ. ನಂದಗಡದಲ್ಲಿರುವ ಸಮಾಧಿಯನ್ನು ಸಹ ಅಭಿವೃದ್ದಿ ಮಾಡಲಾಗಿದೆ. ಸಂಗೊಳ್ಳಿ …

Read More »

ಕಲ್ಲೋಳಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಮಾಯವ್ವ ಬಸವಂತ ದಾಸನವರ ಮತ್ತು ಉಪಾಧ್ಯಕ್ಷರಾಗಿ ಮೇಘಾ ಬಸವರಾಜ ಖಾನಾಪೂರ ಅವಿರೋಧವಾಗಿ ಆಯ್ಕೆ

ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಮಾಯವ್ವ ಬಸವಂತ ದಾಸನವರ ಮತ್ತು ಉಪಾಧ್ಯಕ್ಷರಾಗಿ ಮೇಘಾ ಬಸವರಾಜ ಖಾನಾಪೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರದಂದು ಜರುಗಿದ ಪಟ್ಟಣ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಎರಡು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ. ಹಿಂದುಳಿದ “ಅ”ವರ್ಗ ಮಹಿಳೆಗೆ ಅಧ್ಯಕ್ಷ ಸ್ಥಾನವು ಮೀಸಲಿದ್ದರೇ, ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಮರ್ಥ ನೇತೃತ್ವದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು …

Read More »

ನನೆಗುದಿಗೆ ಬಿದ್ದಿರುವ ಕೌಜಲಗಿ ತಾಲ್ಲೂಕು ರಚನೆ ಬೇಡಿಕೆ; ಕಣ್ತೆರೆದು ನೋಡುವರೇ CM?

ಕೌಜಲಗಿ: ಭೌಗೋಳಿಕವಾಗಿ ಮೂರು ತಾಲ್ಲೂಕು ಆಗುವಷ್ಟು ಗೋಕಾಕ ದೊಡ್ಡದಾಗಿದೆ. ಇದನ್ನು ವಿಭಜಿಸಿ, ಪ್ರತ್ಯೇಕವಾಗಿ ಕೌಜಲಗಿ ತಾಲ್ಲೂಕು ರಚಿಸಬೇಕೆಂಬ ಬೇಡಿಕೆ ಐದು ದಶಕಗಳಿಂದ ಇದೆ. ಇಲ್ಲಿಗೆ ಸೋಮವಾರ ಭೇಟಿ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಸ್ಪಂದಿಸುವರೇ ಎಂಬ ಕುತೂಹಲ ಮೂಡಿದೆ. ಕೌಜಲಗಿ ಪ್ರತ್ಯೇಕ ತಾಲ್ಲೂಕಿಗಾಗಿ 1973ರಿಂದ ಹೋರಾಟ ನಡೆದಿದೆ. ಹುಂಡೇಕಾರ, ಗದ್ದಿಗೌಡರ, ವಾಸುದೇವ ಸಮಿತಿಗಳು 41 ಗ್ರಾಮ ಒಳಗೊಂಡು ಕೌಜಲಗಿಯನ್ನು ತಾಲ್ಲೂಕು ಕೇಂದ್ರ ರಚಿಸಬೇಕು ಎಂದು ಶಿಫಾರಸು ಮಾಡಿವೆ. ಇದಕ್ಕಾಗಿ ಜನರು ನಿರಂತರವಾಗಿ …

Read More »

ಹೆಸರುಕಾಳು ದರ ₹4,000ಕ್ಕೆ ಕುಸಿತ, ಚಿಂತೆಗೀಡಾದ ಜಿಲ್ಲೆಯ ಅನ್ನದಾತ

ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ 40 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದೆ. ಶೇ 80ರಷ್ಟು ರೈತರು ಈಗಾಗಲೇ ರಾಶಿ ಮಾಡಿದ್ದಾರೆ. ಲಕ್ಷಾಂತರ ಕ್ವಿಂಟಲ್‌ ಹೆಸರುಕಾಳು ಸಿದ್ಧಗೊಂಡಿದೆ. ಆದರೆ, ದರ ಕುಸಿತ ರೈತರನ್ನು ಚಿಂತೆಗೀಡು ಮಾಡಿದೆ. ಜಿಲ್ಲಾಡಳಿತ ಯಾವಾಗ ಖರೀದಿ ಕೇಂದ್ರ ತೆರೆಯುವುದೋ ಎಂದು ರೈತರು ಕಾದು ಕುಳಿತಿದ್ದಾರೆ.   ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ತುಂಬ ಹದವಾಗಿ ಬಿದ್ದಿದೆ. ಪರಿಣಾಮ ಪ್ರತಿ ವರ್ಷಕ್ಕಿಂತ ಈಗ ಹೆಸರು ಬೆಳೆ ಅತ್ಯಂತ …

Read More »

ಗೃಹಲಕ್ಷ್ಮಿ ದುಡ್ಡಲ್ಲಿ ಹೋಳಿಗೆ ಊಟ ಹಾಕಿಸಿದ ಅಜ್ಜಿಗೆ ಸಿಎಂ ಸ್ಪೆಷಲ್‌ ರಿಕ್ವೆಸ್ಟ್‌;

ಇತ್ತೀಚೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದರ ನಡುವೆಯೇ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯೊಬ್ಬರು ಮಾಡಿರುವ ಕಾರ್ಯವು ಎಲ್ಲರ ಗಮನ ಸೆಳೆದಿತ್ತು. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಸುಟ್ಟಟ್ಟಿ ಎನ್ನುವ ಗ್ರಾಮದ ಅಕ್ಕಾತಾಯಿ ಲಂಗೂಟಿ ಎನ್ನುವ ವೃದ್ಧೆ ತನಗೆ ಬಂದಿದ್ದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಗ್ರಾಮದ ಮಹಿಳೆಯರಿಗೆ ಹೋಳಿಗೆ ಊಟ ಹಾಕಿಸಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಫುಲ್‌ ಖುಷ್‌ ಆಗಿದ್ದು, ನಮ್ಮ …

Read More »

ಲೋಕಾ ದಾಳಿಗೊಳಗಾದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗೆ ಭಡ್ತಿ?

ಲೋಕಾ ದಾಳಿಗೊಳಗಾದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗೆ ಭಡ್ತಿ? ಬೆಂಗಳೂರು: ಲೋಕಾಯುಕ್ತ ದಾಳಿ ಹಿನ್ನೆಲೆಯಲ್ಲಿ ಅಮಾನತುಗೊಳ್ಳಬೇಕಾದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗೆ ಹೆಚ್ಚುವರಿ ಭಡ್ತಿ ನೀಡಲು ಸರಕಾರ ಸಿದ್ಧತೆ ನಡೆಸಿದೆ. ವಾಣಿಜ್ಯ ತೆರಿಗೆ ಇಲಾಖೆ ಬೆಂಗಳೂರು ಜಂಟಿ ಆಯುಕ್ತರ ಮೇಲೆ ಕಳೆದ ತಿಂಗಳಷ್ಟೇ ಲೋಕಾಯುಕ್ತ ದಾಳಿ ನಡೆಸಿದ್ದರು. ಅವರ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ಕೂಡ ದಾಖಲಾಗಿತ್ತು. ಅಕ್ರಮ ಆಸ್ತಿ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಸರಕಾರಕ್ಕೆ ಲೋಕಾಯುಕ್ತ ವರದಿ ನೀಡಿದೆ. ಅದರಂತೆ …

Read More »

ನಗರದಲ್ಲಿ ಇಂದು ಮಾಂಸ ಮಾರಾಟ ನಿಷೇಧ

ಬೆಂಗಳೂರು: ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೋಮವಾರ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ. ಸೋಮವಾರ ಯಾವುದೇ ರೀತಿಯ ಮಾಂಸ ಹಾಗೂ ಹಸಿ ಮೀನು ಮಾರಾಟ ಮಾಡಬಾರದು. ಯಾವುದೇ ಮಾಂಸ ಮಾರಾಟದ ಅಂಗಡಿಗಳು, ಕೋಳಿ ಅಂಗಡಿಗಳು, ಮೀನುಮಾರಾಟ ಮಾಡಬಾರದು. ಆದೇಶ ಮೀರಿ ಮಾರಾಟ ಮಾಡಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಪಶುಪಾಲನೆ …

Read More »

ಅಣ್ಣನನ್ನೇ ಹತ್ಯೆಗೈದ ತಮ್ಮ, ತಿಂಗಳ ಹಿಂದೆ ನಡೆದ ಘಟನೆ ಪೊಲೀಸರ ತನಿಖೆಯಿಂದ ಬಯಲು

ಚಿತ್ತಾಪುರ: ತನ್ನ ಹೆಂಡತಿಯೊಡನೆ ಸಲುಗೆಯಿಂದ ಇದ್ದ ತಮ್ಮನನ್ನು ಬೈದಿದ್ದಕ್ಕೆ ಸಿಟ್ಟಿಗೆದ್ದ ತಮ್ಮ ಅಣ್ಣನನ್ನೇ ಕೊಲೆ ಮಾಡಿದ ಘಟನೆ ತಾಲೂಕಿನ ಇಟಗಾ ಗ್ರಾಮದಲ್ಲಿ ನಡೆದಿದೆ. ಕಾಮಣ್ಣ ದೊಡ್ಡ ಹಣಮಂತ (35) ಮೃತ ದುರ್ದೈವಿಯಾಗಿದ್ದು ತಮ್ಮ ಸುರೇಶ ದೊಡ್ಡ ಹಣಮಂತ ಆರೋಪಿಯಾಗಿದ್ದಾನೆ.   ಕಾಮಣ್ಣನ ಅನುಮಾನಾಸ್ಪದ ಸಾವಿನ ಕುರಿತು ಪೋಷಕರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ವೇಳೆ ತಮ್ಮನ ಕೃತ್ಯ ಬಯಲಿಗೆ ಬಂದಿದೆ. ಸದ್ಯ ಆರೋಪಿ ಸುರೇಶ ದೊಡ್ಡ …

Read More »

ಜೈಲಲ್ಲಿರುವ ದರ್ಶನ್‌ ಮತ್ತೊಂದು ಫೋಟೋ ಲೀಕ್; ನಿನ್ನೆ ಕೈಲಿ ಸಿಗ್ರೇಟ್​ ಇಂದು ಮೊಬೈಲ್

ಬೆಂಗಳೂರು:​ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ಮೂಲವ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಸಹಿಸಿದ್ದಾನೆ ಎಂದು ಸ್ಯಾಂಡಲ್​ವುಡ್ ನಟ ದರ್ಶನ್ ಆತನನ್ನು ಕೊಲೆ ಮಾಡಿದ್ದಾರೆ ಎನ್ನುವ ಆರೋಪದಲ್ಲಿ ಡಿ ಗ್ಯಾಂಗ್​ ಜೈಲಿನಲ್ಲಿದೆ. ಈ ಪ್ರಕರಣ ತನಿಕೆ ಹಂತದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವಾಗ ಈಗ ಕೆಲವು ಫೋಟೋ ಹಾಗೂ ವಿಡಿಯೋಗಳು ಮತ್ತೊಂದು ಹಂತದಲ್ಲಿ ಸುದ್ದಿ ಮಾಡುತ್ತಿವೆ. ನಿನ್ನೆ ಒಂದು ಫೋಟೋ ವಿಡಿಯೋ ಆದ್ರೆ ಇಂದೂ ಒಂದು ಫೋಟೋ ವೈರಲ್​​ ಆಗಿದೆ. ಕೊಲೆ ಪ್ರಕರಣದಲ್ಲಿ …

Read More »