Breaking News

ರಾಜಕೀಯ

ಟ್ರಕ್ ಗೆ ಢಿಕ್ಕಿಯಾದ ಸಾಯಿಬಾಬಾ ಭಕ್ತರಿದ್ದ ಬಸ್: 10 ಮಂದಿ ಮೃತ್ಯು, ಹಲವರಿಗೆ ಗಾಯ

ಮುಂಬೈ: ಸಾಯಿಬಾಬಾ ಭಕ್ತರು ಪ್ರಯಾಣಿಸುತ್ತಿದ್ದ ಬಸ್ಸೊಂದು ನಾಸಿಕ್-ಶಿರಡಿ ಹೆದ್ದಾರಿಯ ಪಥರೆ ಬಳಿ ಟ್ರಕ್‌ ಗೆ ಢಿಕ್ಕಿ ಹೊಡೆದ ಪರಿಣಾಮ ಸುಮಾರು 10 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಭೀಕರ ಅಪಘಾತದಲ್ಲಿ ಜೀವಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.     ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸುವಂತೆ ಸಿಎಂ ಶಿಂಧೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ …

Read More »

ಇದೇ 29ಕ್ಕೆ ವಿಷ್ಣುವರ್ಧನ್‌ ಸ್ಮಾರಕ ಉದ್ಘಾಟನೆ

ಬೆಂಗಳೂರು: ಚಲನಚಿತ್ರ ನಟ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಇದೇ 29 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ. ಮೈಸೂರಿನ ಎಚ್‌.ಡಿ.ಕೋಟೆ ರಸ್ತೆಯಲ್ಲಿರುವ ಅಲ್ಲಾಳು ಗ್ರಾಮದಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. 2020 ರ ಸೆಪ್ಟೆಂಬರ್‌ನಲ್ಲಿ ವಿಷ್ಣುವರ್ಧನ್‌ ಅವರ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ಚಾಮುಂಡಿಪುರಂನ ವಾಸಿಯಾಗಿದ್ದ ವಿಷ್ಣುವರ್ಧನ್‌ ಅವರು ತಮ್ಮ ಶಾಲಾ ಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ್ದರು. ಮೈಸೂರಿನ ಜತೆ ಉತ್ತಮ ಒಡನಾಟ ಹೊಂದಿದ್ದ ಅವರು ತಮ್ಮ ಹೆಚ್ಚಿನ ಚಲನಚಿತ್ರಗಳ …

Read More »

ಹಿಂದೂ ಮಹಿಳೆಯರ ರಕ್ಷಣೆಗಾಗಿ ಮನೆಯಲ್ಲಿ ತಲ್ವಾರ್ ಇಟ್ಟುಕೊಳ್ಳಿ: ಮುತಾಲಿಕ್

ಕಲಬುರಗಿ: ‘ಹಿಂದೂ ಮಹಿಳೆಯರ ರಕ್ಷಣೆಗಾಗಿ ನಿಮ್ಮ ಮನೆಗಳಲ್ಲಿ ಎಲ್ಲರಿಗೂ ಕಾಣಿಸುವ ಸ್ಥಳದಲ್ಲಿ ತಲ್ವಾರ್ ಇಟ್ಟುಕೊಳ್ಳಿ’ ಎಂದು ಶ್ರೀರಾಮ ಸೇನೆ ಸಂಘಟನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ ಮುತಾಲಿಕ್ ಸಲಹೆ ನೀಡಿದರು. ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಗುರುವಾರ ಶ್ರೀರಾಮಸೇನೆ ಸಂಘಟನೆ ವತಿಯಿಂದ ನಡೆದ ಸಂತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಒಂದು ತಲ್ವಾರ್ ಇಟ್ಟುಕೊಂಡರೆ ಪೊಲೀಸರು ಎಫ್‌ಐಆರ್ ಹಾಕಲ್ಲ. ತಲ್ವಾರ್‌ ಅನ್ನು ಸಹೋದರಿಯರ ರಕ್ಷಣೆಗೆ ಇಡಬೇಕೆ ಹೊರತು …

Read More »

ಇದೇ ವರ್ಷ ಮಂಡ್ಯ ಸಾಹಿತ್ಯ ಸಮ್ಮೇಳನ: ಮುಂದಿನ ತಿಂಗಳು ಸಭೆ

ಬೆಂಗಳೂರು: ಮಂಡ್ಯದಲ್ಲಿ ಇದೇ ವರ್ಷ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಿರ್ಧರಿಸಿದೆ. ಇದರಿಂದಾಗಿ ಒಂದೇ ವರ್ಷ ಎರಡು ಸಮ್ಮೇಳನ ನಡೆಸಿದಂತಾಗಲಿದೆ. ಹಾವೇರಿಯಲ್ಲಿ ನಡೆದ ಪರಿಷತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ಮುಂದಿನ ಸಮ್ಮೇಳನದ ಆತಿಥ್ಯವನ್ನು ಮಂಡ್ಯಕ್ಕೆ ನೀಡಲಾಗಿದೆ. ಕಸಾಪ 1915ರಿಂದ ನಿಯಮಿತವಾಗಿ ಸಾಹಿತ್ಯ ಸಮ್ಮೇಳನವನ್ನು ನಡೆಸಿಕೊಂಡು ಬರುತ್ತಿದೆ. ವರ್ಷಕ್ಕೊಮ್ಮೆ ನಡೆಯಬೇಕಿದ್ದ ಈ ಸಮ್ಮೇಳನ, ಕಾರಣಾಂತರಗಳಿಂದ ಈ ಹಿಂದೆಯೂ ವರ್ಷಕ್ಕೆ ಎರಡು ಬಾರಿ ನಡೆದಿದೆ. 2020ರ …

Read More »

ಸಂಗೊಳ್ಳಿ ರಾಯಣ್ಣನ ಕೀರ್ತಿ ಅಜರಾಮರ: ಸಂಸದೆ ಮಂಗಲಾ ಅಂಗಡಿ

ಬೈಲಹೊಂಗಲ: ನಾಡಿನ ಬಗ್ಗೆ ಅಭಿಮಾನ ಇಟ್ಟುಕೊಂಡು ದೇಶಪ್ರೇಮವನ್ನು ಮೆರೆದ ಶೂರ ಸಂಗೊಳ್ಳಿ ರಾಯಣ್ಣನ ಕೀರ್ತಿ ಅಜರಾಮರ ಎಂದು ಸಂಸದೆ ಮಂಗಲಾ ಅಂಗಡಿ ಹೇಳಿದರು. ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಉತ್ಸವ 2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಗೊಳ್ಳಿ ರಾಯಣ್ಣನ ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕು.ಇಂದಿನ ಯುವಕರು ದುಶ್ಚಟಗಳನ್ನು ತೊರೆದು ಸಂಗೊಳ್ಳಿ ರಾಯಣ್ಣನ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.   ಶಾಸಕ ಮಹಾಂತೇಶ ಕೌಜಲಗಿ,ಎಂಎಲ್ ಸಿ ಎಂ.ನಾಗರಾಜ ಯಾದವ,ಶಾಸಕ ಮಹಾಂತೇಶ ದೊಡ್ಡಗೌಡರ, ಕಾಡಾ ಅಧ್ಯಕ್ಷ …

Read More »

ಕೆಪಿಟಿಸಿಎಲ್‌ ಅಕ್ರಮ ಪರೀಕ್ಷೆ: ಬಂಧಿತರ‌ ಸಂಖ್ಯೆ ಅರ್ಧ ಶತಕ

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಲಿಖಿತ ಪರೀಕ್ಷೆಯಲ್ಲಿ ಇಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಚಿಪ್ ತೆಗೆದುಕೊಂಡು ಪರೀಕ್ಷೆ ಬರೆದಿದ್ದ ಮತ್ತೊಬ್ಬ ಅಭ್ಯರ್ಥಿಯನ್ನು ಗುರುವಾರ ಬಂಧಿಸುವ ಮೂಲಕ ಬಂಧಿತರ ಸಂಖ್ಯೆ ಅರ್ಧ ಶತಕವಾಗಿದೆ.   ಕಲ್ಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ದರ್ಗಾಶಿರೂರ ಗ್ರಾಮದ ಶಿವರಾಜ್‌ ಲಕ್ಷ್ಮೀಪುತ್ರ ಪೊಲೀಸ್ ಪಾಟೀಲ್ (28) ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈವರೆಗೆ ಒಟ್ಟು 50 ಜನರನ್ನು ಬಂಧಿಸಿದಂತಾಗಿದೆ. 7 ಆಗಸ್ಟ್ 2022ರಂದು ನಡೆದಿದ್ದ ಪರೀಕ್ಷೆ ಬರೆದಿದ್ದರು. ಪರೀಕ್ಷೆ ವೇಳೆ …

Read More »

ಪಂಚಮಸಾಲಿ, ಒಕ್ಕಲಿಗ ಮೀಸಲಾತಿ ಓಟಕ್ಕೆ ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆ

ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು 2-ಎ ಪ್ರವರ್ಗಕ್ಕೆ ಸೇರಿಸಿ ಮೀಸಲಾತಿ ನೀಡುವ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಗುರುವಾರ ಹೈಕೋರ್ಟ್‌ ಆದೇಶಿಸಿದೆ. ಪಂಚಮಸಾಲಿ ಸಮುದಾಯವನ್ನು 2-ಎ ಪ್ರವರ್ಗಕ್ಕೆ ಸೇರಿಸಬಾರದು ಎಂದು ಕೋರಿ ಬೆಂಗಳೂರು ನಿವಾಸಿ ಡಿ.ಜಿ. ರಾಘವೇಂದ್ರ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಲೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ಗುರುವಾರ ವಿಚಾರಣೆಗೆ ಪಟ್ಟಿಯಾಗಿತ್ತು. ಆದರೆ ದಿನದ ಕಲಾಪದ ಸಮಯ ಮುಗಿದದ್ದರಿಂದ ಅರ್ಜಿ ವಿಚಾರಣೆಗೆ ಬರಲಿಲ್ಲ. ಮುಖ್ಯ ನ್ಯಾಯಮೂರ್ತಿಯವರು …

Read More »

ಇದು ಬರೀ ಮಾದಕ ಲೋಕವಲ್ಲ, ಲಿವಿಂಗ್‌ ಟುಗೆದರ್‌, ಸೆಕ್ಸ್‌ ಬೆರೆತ ವೈದ್ಯ ವಿದ್ಯಾರ್ಥಿಗಳ ಕರಾಳ ಲೋಕ

ಮಂಗಳೂರು: ಮಂಗಳೂರಿನ ಮೆಡಿಕಲ್‌ ಕಾಲೇಜುಗಳಲ್ಲಿ ಬೆಳಕಿಗೆ ಬಂದಿರುವ ಗಾಂಜಾ ಡ್ರಗ್ಸ್‌ ದಂಧೆಯಲ್ಲಿ (Drugs Mafia) ಕೇವಲ ಮಾದಕ ಲೋಕ ಮಾತ್ರವಲ್ಲ, ಲಿವಿಂಗ್‌ ಟುಗೆದರ್‌, ಸೆಕ್ಸ್‌ ಮತ್ತು ಗರ್ಲ್‌ಫ್ರೆಂಡ್‌ಗಳನ್ನು ನಶೆಗೆ ಎಳೆಯುವ ಕರಾಳ ಲೋಕವೂ ಬೆಳಕಿಗೆ ಬಂದಿದೆ.   ಮಂಗಳೂರು ಪೊಲೀಸರು ಗಾಂಜಾ ಬಲೆಯಲ್ಲಿ ಬಿದ್ದಿದ್ದ, ಪೆಡ್ಲರ್‌ಗಳಾಗಿ ಕೆಲಸ ಮಾಡುತ್ತಿದ್ದ ನಾಲ್ವರು ವೈದ್ಯಕೀಯ ವಿದ್ಯಾರ್ಥಿನಿಯರು, ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ವೈದ್ಯರು ಸೇರಿದಂತೆ ೧೦ ಜನರನ್ನು ಬಂಧಿಸಿದ್ದಾರೆ. ಇವರು ಕೆಎಂಸಿ ಅತ್ತಾವರ, ಕೆ.ಎಂ.ಸಿ …

Read More »

ದೇಶದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ 6 ಯೂಟ್ಯೂಬ್‌ ಚಾನೆಲ್‌ಗ‌ಳಿಗೆ ನಿಷೇಧ

ನವದೆಹಲಿ: ದೇಶದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ಆರು ಯೂಟ್ಯೂಬ್‌ ಚಾನೆಲ್‌ಗ‌ಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಸ್‌ ಇನ್ಫೋರ್ಮೇಷನ್‌ ಬ್ಯೂರೋ (ಪಿಐಬಿ) ಈ ಬಗ್ಗೆ ಪ್ರಕಟಣೆ ನೀಡಿದ್ದು, “20 ಲಕ್ಷ ಚಂದಾದಾರರನ್ನು ಹೊಂದಿರುವ 6 ಯೂಟ್ಯೂಬ್‌ ಚಾನೆಲ್‌ಗ‌ಳು 51 ಕೋಟಿ ವೀಕ್ಷಕರನ್ನು ಹೊಂದಿವೆ. ಅವುಗಳು ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣಗಳ ಬಗ್ಗೆ, ಚುನಾವಣಾ ವ್ಯವಸ್ಥೆಯ ಬಗ್ಗೆ, ಕೇಂದ್ರ ಸರ್ಕಾರ ಕಾರ್ಯನಿರ್ವಹಣೆಯ ಬಗ್ಗೆ ಸುಳ್ಳು ಮಾಹಿತಿ …

Read More »

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ

ಬೆಂಗಳೂರು: ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ (ಜ. 26) ಪೆರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೊನೆ ಕ್ಷಣದಲ್ಲಿ ಅವಕಾಶ ನೀಡಲಾಗಿದೆ. ಕರ್ನಾಟಕ ಮಂಡಿಸಿದ್ದ ‘ನಾರಿ ಶಕ್ತಿ’ ವಿಷಯದ ಸ್ತಬ್ಧಚಿತ್ರವನ್ನು ಅಂತಿಮ ಹಂತದಲ್ಲಿ ಕೇಂದ್ರ ಸರ್ಕಾರ ಕೈಬಿಟ್ಟಿತ್ತು. ಇದು ಭಾರೀ ಟೀಕೆಗೆ ಕಾರಣವಾಗಿತ್ತು. ದೇಶದ ಇತರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಅವಕಾಶ ಕಲ್ಪಿಸಬೇಕೆಂಬ ಉದ್ದೇಶದಿಂದ ಈ ಬಾರಿ ಕರ್ನಾಟಕದ ಸ್ತಬ್ಧಚಿತ್ರವನ್ನು ಪರಿಗಣಿಸಿಲ್ಲ ಎಂದು ಹೇಳಲಾಗಿತ್ತು. ರಕ್ಷಣಾ ಸಚಿವಾಲಯ ಸೆ.1ರಂದು ದೇಶದ ಎಲ್ಲ ರಾಜ್ಯ ಮತ್ತು …

Read More »