ಮೂಡಲಗಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬೆಳಗಾವಿ ಜಿಲ್ಲೆಯ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಬದ್ಧವಾಗಿದ್ದು, ‘10,000 ಎಫ್‌ಪಿಒಗಳ ರಚನೆ ಮತ್ತು ಉತ್ತೇಜನ’ ಯೋಜನೆಯಡಿ ಜಿಲ್ಲೆಯಲ್ಲಿ 21 ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಮತ್ತು ಜಿಲ್ಲೆಯ 17 ಎಫ್‌ಪಿಒಗಳಿಗೆ ಒಟ್ಟು 1.80 ಕೋಟಿ ರೂ. ಈಕ್ವಿಟಿ ಗ್ರಾಂಟ್ ನೀಡಲಾಗಿದೆ. ಅಲ್ಲದೆ, 4 ಅರ್ಹ ಎಫ್‌ಪಿಒಗಳಿಗೆ 34.48 ಲಕ್ಷ ರೂ. ಸಾಲದ ಸೌಲಭ್ಯವನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಕೃಷಿ …
Read More »ಉಪ-ನೊಂದಣಿ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿ ಮೂಡಲಗಿ ಪೊಲೀಸರಿಂದ ಆರೋಪಿ ಬಂಧನ
ಬೆಳಗಾವಿ: ಸರ್ಕಾರಿ ಕರ್ತವ್ಯದ ಮೇಲಿದ್ದ ಉಪ-ನೊಂದಣಿ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿ ಹಾಗೂ ಧಮ್ಕಿ ಹಾಕಿದ್ದ ಆರೋಪಿಯನ್ನು ಮೂಡಲಗಿ ಪೊಲೀಸರು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ. ಗೋಕಾಕ ಸೋಮವಾರ ಪೇಟೆಯ ನಿವಾಸಿ ಹಾಗೂ ಬಾಂಡ್ ರೈಟರ್ ಆಗಿರುವ ಆನಂದ ಸಿದ್ದಲಿಂಗಪ್ಪಾ ಗೊಟಡಕಿ ( 52) ಬಂಧಿತ ಆರೋಪಿ. ಈತನು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಜೀವ ಬೆದರಿಕೆ ಹಾಕಿದ್ದಾನೆಂದು ಮೂಡಲಗಿ ಉಪ-ನೊಂದಣಿ ಅಧಿಕಾರಿ ದುರದುಂಡೆಪ್ಪಾ ಕೆಂಪಣ್ಣಾ ಕುಳ್ಳೂರ ಅವರು ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು …
Read More »ಮನೆ ಬೆಂಕಿ ಅಹುತಿಯಾದ ಕುಟುಂಬಕ್ಕೆ ಕನ್ನಡ ರಕ್ಷಣಾ ವೇದಿಕೆ ಮತ್ತು ಕನ್ನಡ ಸೇನೆ ಸಂಘಟನೆಯಿಂದ ಆಹಾರ ಕಿಟ್,ಬಟ್ಟೆ ವಿತರಣೆ
ಮೂಡಲಗಿ: ತಾಲೂಕಿನ ಬಡಿಗವಾಡ ಗ್ರಾಮದ ರೈತ ರಂಗಪ್ಪ ಮಾಳಪ್ಪ ಚೂಡಪ್ಪಗೋಳ ಹಾಗೂ ಪತ್ನಿ,ನಾಲ್ಕು ಜನ ಮಕ್ಕಳು ಸೇರಿ ಮನೆಯಲ್ಲಿ ವಾಸಿಸುತ್ತಿದ್ದರು. ಇತ್ತಿಚ್ಚೇಗೆ ಶನಿವಾರರಂದು ಬೆಳಗ್ಗೆ 10.30 ರ ಸುಮಾರಿಗೆ ಮನೆಯಲ್ಲಿ ಗ್ಯಾಸ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅನಾಹುತ ಸಂಭವಿಸಿ ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿತ್ತು ಮನೆಯಲ್ಲಿ ಚಿನ್ನಾಭರಣ,ಲಕ್ಷಾಂತರ ನಗದು ಹಣ,ಎರಡು ಎಮ್ಮೆ,ಒಂದು ಆಕಳು,ಗೃಹಬಳಕೆಯ ವಸ್ತುಗಳು,ದವಸ ಧಾನ್ಯಗಳು,ಬಟ್ಟೆ ಬರೆಗಳು,ಸೇರಿದಂತೆ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿರುವದರಿಂದಾ,ಕನ್ನಡ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಮತ್ತು …
Read More »ಪ್ರವಾಹ ಪೀಡನೆಯಿಂದ ಮುಕ್ತಿ ಕೊಡಿ
ಮೂಡಲಗಿ: ಘಟಪ್ರಭಾ ನದಿಗೆ ಮಸಗುಪ್ಪಿ ಬಳಿಯಲ್ಲಿ ನಿರ್ಮಿಸಿರುವ ಸೇತುವೆಗೆ 200ಮೀ. ರವರೆಗೆ ಉದ್ದವಾದ ಒಡ್ಡವಿದ್ದು (ಅಪ್ರೋಚಿಂಗ ರೋಡ್) ಇದರಿಂದ ಪ್ರವಾಹ ಬಂದಾಗ ಸಂಚಾರ ನಿಲ್ಲುವುದು ಮತ್ತು ನದಿ ನೀರಿನ ವಿಸ್ತಾರ ಅಧಿಕವಾಗಿ ಸಾವಿರಾರು ಎಕರೆಯಷ್ಟು ಬೆಳೆ ಹಾನಿಯಾಗುತ್ತದೆ. ನೂರಾರು ಮನೆಗಳು ಜಲಾವೃತಗೊಳ್ಳುತ್ತವೆ. ಸೇತುವೆಯನ್ನು ವಿಸ್ತರಿಸಿ ಕಮಾನುಗಳನ್ನು ನಿರ್ಮಿಸಿದರೆ ಪ್ರವಾಹದಿಂದಾಗುವ ಹಾನಿ ಮುಕ್ತಗೊಳಿಸಲು ಸಾಧ್ಯ. ಇವೆಲ್ಲವನ್ನು ಪ್ರಸಕ್ತ ಆಯವ್ಯಯದಲ್ಲಿ ಪರಿಗಣಿಸಬೇಕಾಗಿದೆ. ಘಟಪ್ರಭಾ ನದಿಗೆ ಪ್ರವಾಹ ಬಂದಾಗೊಮ್ಮೆ ಸುಣಧೋಳಿ ಮತ್ತು ಅವರಾದಿ ಬ್ರಿಡ್ಜ್ …
Read More »ಖಾಲಿ ಹುದ್ದೆಗಳ ನೇಮಕಾತಿ ಕಡ್ಡಾಯವಾಗಿ ಜಾರಿಗೊಳಿಸಬೇಕು: ಸುರೇಶ ಐಹೊಳೆ ಒತ್ತಾಯ
ಹಾರೂಗೇರಿ: ಸಚಿವ ಸಂಪುಟ ನಿರ್ಣಯದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೊರಡಿಸಿರುವ ಸರ್ಕಾರದ ಆದೇಶದ ಪ್ರಕಾರ ಶೇ.15ರಷ್ಟು ಒಳ ಮೀಸಲಾತಿ ರೋಸ್ಟರ್ ಮಾರ್ಗಸೂಚಿಗಳಂತೆ 56,342 ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಮಾದಿಗ ಮಹಾಸಭಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ ಐಹೊಳೆ ಹೇಳಿದರು. ಪಟ್ಟಣದ ಸುರೇಶ ಐಹೊಳೆ ಗೃಹ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನ …
Read More »ಯುವ ವಿದ್ಯಾವಂತರ ಆಕ್ರೋಶಕ್ಕೆ ಗುರಿಯಾದರೆ ‘ಗ್ಯಾರಂಟಿ’ಗಳ ಸರ್ಕಾರ ಪತನವಾಗುವುದು ಗ್ಯಾರಂಟಿ: ಸಂಸದ ಈರಣ್ಣ ಕಡಾಡಿ ಎಚ್ಚರಿಕೆ
ಮೂಡಲಗಿ: ರಾಜ್ಯ ಸರ್ಕಾರದಿಂದ ಯಾವುದೇ ಹೊಸ ನೇಮಕಾತಿ ನಡೆಯದ ಕಾರಣ ಯುವಜನತೆಯ ವಯೋಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ದಂಗೆ ಎದ್ದಿದ್ದಾರೆ. ರಾಜ್ಯದಲ್ಲಿ ಸುಮಾರು 2.85 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಕೂಡ ಸರ್ಕಾರ ನೇಮಕಾತಿ ಮಾಡುವಲ್ಲಿ ನಿರಾಸಕ್ತಿ ವಹಿಸಿದೆ. ಕೇವಲ ಮುಖ್ಯಮಂತ್ರಿ ಕುರ್ಚಿ ಕಾಳಗ ನಡೆದಿದೆ ಹೊರತು ಬೇರೆ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ರಾಜ್ಯದ ಯುವಜನತೆ ಆಕ್ರೋಶಗೊಂಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕಿಡಿಕಾರಿದರು. ಬುಧವಾರ …
Read More »ಒಂದು ಕೇಸ್, 200 ವಕೀಲರು ; ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಮೂಡಲಗಿ ನ್ಯಾಯಾಲಯ
ಬೆಳಗಾವಿ : ಕೋರ್ಟ್ ನಲ್ಲಿ ನಡೆದ ಒಂದು ಪ್ರಕರಣಕ್ಕೆ ಸುಮಾರು 200 ಕ್ಕೂ ಅಧಿಕ ವಕೀಲರು ಬೆಂಬಲಿಸಿ ಕೋರ್ಟ್ ಕಲಾಪದಲ್ಲಿ ಹಾಜರಾದ ಘಟನೆ ಮೂಡಲಗಿ ನ್ಯಾಯಾಲಯದಲ್ಲಿ ನಡೆದಿದೆ. ಮೂಡಲಗಿ ಪಟ್ಟಣದ ಹಿರಿಯ ವಕೀಲರಾದ ಸುಧೀರ ಗೋಡಿಗೌಡರ ಅವರ ಕುಟುಂಬದ ವೈಯಕ್ತಿಕ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಡೆದ ಕೋರ್ಟ್ ಕಲಾಪದಲ್ಲಿ ಸುಧೀರ್ ಅವರನ್ನು ಬಬಲಿಸಿ ಗೋಕಾಕ್ ಹಾಗೂ ಮೂಡಲಗಿ ನ್ಯಾಯಾಲಯದ ಸುಮಾರು 200 ಕ್ಕೂ ಅಧಿಕ ವಕೀಲರು ಬೆಂಬಲ ವ್ಯಕ್ತಪಡಿಸಿರುವ ಘಟನೆ ನಡೆದಿದೆ. …
Read More »ಸರ್ಕಾರದ್ದು ತುಷ್ಟೀಕರಣ ರಾಜಕಾರಣ; ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ: ಸಂಸದ ಈರಣ್ಣ ಕಡಾಡಿ ಆಕ್ರೋಶ
ಮೂಡಲಗಿ: ರಾಜ್ಯ ಕಾಂಗ್ರೆಸ್ ಸರ್ಕಾರವು ರೈತರು ಮತ್ತು ಹಿಂದುಳಿದ ವರ್ಗಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಕೇವಲ ಅಲ್ಪಸಂಖ್ಯಾತರ ಓಲೈಕೆಗಾಗಿ ಸಾಲದ ಬಡ್ಡಿ ಮನ್ನಾ ಮಾಡುವ ಮೂಲಕ ತುಷ್ಠೀಕರಣ ರಾಜಕಾರಣ ಮಾಡುತ್ತಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. 2013-14 ರಿಂದ 2018-19ರ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ನೀಡಲಾದ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಒಟ್ಟು 981 ಕೋಟಿ …
Read More »ಸೈನಿಕರ ಅನುಕೂಲಕ್ಕೆ ಘಟಪ್ರಭಾದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ, ಕರಾವಳಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
ಮೂಡಲಗಿ: ಗೋಕಾಕ, ಮೂಡಲಗಿ, ಯರಗಟ್ಟಿ, ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕುಗಳಿಗೆ ಸೇರಿದ ನೂರಾರು ಸೈನಿಕರು ಭಾರತದ ವಿವಿಧ ರಾಜ್ಯಗಳಲ್ಲಿ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸೈನಿಕರು ರಜೆ ಸಂದರ್ಭಗಳಲ್ಲಿ ತಮ್ಮ ಸ್ವಗ್ರಾಮಗಳಿಗೆ ಆಗಮಿಸಲು ಹಾಗೂ ಸೇವಾ ಸ್ಥಳಗಳಿಗೆ ಮರಳಲು ರೈಲು ಪ್ರಯಾಣವೇ ಪ್ರಮುಖ ಅವಲಂಬನೆಯಾಗಿದೆ. ಆದರೆ, ಈ ಭಾಗದ ಸೈನಿಕರಿಗೆ ಅನುಕೂಲವಾಗುವಂತೆ ಘಟಪ್ರಭಾ ರೈಲು ನಿಲ್ದಾಣದಲ್ಲಿ ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ಇಲ್ಲದಿರುವುದು ದೀರ್ಘಕಾಲದ ಸಮಸ್ಯೆಯಾಗಿ ಉಳಿದಿದೆ. ಈ ಹಿನ್ನೆಲೆಯಲ್ಲಿ, ರಾಜ್ಯಸಭಾ …
Read More »ಬೆಳಗಾವಿ ಡಿಸಿ ವಿರುದ್ಧ ಸಂಸತ್ ಸಭಾಪತಿಗಳಿಗೆ ಧೈರ್ಯಶೀಲ್ ಮಾನೆ ದೂರು…
ಬೆಳಗಾವಿ ಡಿಸಿ ವಿರುದ್ಧ ಸಂಸತ್ ಸಭಾಪತಿಗಳಿಗೆ ಧೈರ್ಯಶೀಲ್ ಮಾನೆ ದೂರು… ಇದು ಕಳ್ಳರ ತಿರುಬೊಬ್ಬೆ ಎಂದ ಕನ್ನಡ ಹೋರಾಟಗಾರ ಅಶೋಕ್ ಚಂದರಗಿ ಕರ್ನಾಟಕಕ್ಕೆ ಪ್ರವೇಶ ನೀಡದೇ ಸಂಸತ್ ಹಕ್ಕು ಭಂಗದ ಆರೋಪ ಬೆಳಗಾವಿ ಡಿಸಿ ವಿರುದ್ಧ ಸಂಸತ್ ಸಭಾಪತಿಗಳಿಗೆ ಧೈರ್ಯಶೀಲ್ ಮಾನೆ ದೂರು ಕ್ರಮಕೈಗೊಳ್ಳಬೇಕೆಂದು ಸಭಾಪತಿಗಳಿಗೆ ಮನವಿ ‘ಬೆಳಗಾವಿಯಲ್ಲಿ ನ.1ರಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿದ್ದ ಕರಾಳ ದಿನಾಚರಣೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ನನಗೆ ಬೆಳಗಾವಿ ಪ್ರವೇಶ ನಿಷೇಧಿಸಿದ ಬೆಳಗಾವಿ ಜಿಲ್ಲಾಧಿಕಾರಿ …
Read More »
Laxmi News 24×7