ಬೆಂಗಳೂರು: ಜಿಲ್ಲೆಯ ಆನೇಕಲ್ ತಾಲೂಕಿನ ಶೆಟ್ಟಿಹಳ್ಳಿಯ ವೇರ್‌ಹೌಸ್ ಬಳಿ ಯುವಕನ ಬರ್ಬರ ಕೊಲೆಯಾಗಿರುವ ಘಟನೆ ನಡೆದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ 25 ವರ್ಷದ V.Y. ವಿನುತ್ ಎಂಬಾತನನ್ನು ಹತ್ಯೆ ಮಾಡಲಾಗಿದೆ. ಕೆಲಸಕ್ಕೆ ತೆರಳುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳಿಂದ ಕೃತ್ಯ ಎಸಗಲಾಗಿದ್ದು ಹಳೇ ದ್ವೇಷದ ಹಿನ್ನೆಲೆಯಲ್ಲಿ ವಿನುತ್ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅತ್ತಿಬೆಲೆ ಠಾಣೆ ಪೊಲೀಸರ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ವಿನುತ್ ಬೆಸ್ತಮಾನಹಳ್ಳಿ ನಿವಾಸಿ ಎಂದು …
Read More »IPL ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡಿರುವ ಶಂಕೆಯಡಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ
ಬೆಂಗಳೂರು: IPL ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡಿರುವ ಶಂಕೆಯಡಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. 20 ವರ್ಷದ ಮಂಜುನಾಥ್ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಕಳೆದ ಒಂದು ವಾರದ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಮಂಜುನಾಥ್ ಇಂದು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ವಿದ್ಯಾಭ್ಯಾಸಕ್ಕೆಂದು ಅಜ್ಜಿ ಮನೆಗೆ ಬಂದಿದ್ದ ಮಂಜುನಾಥ್ ಕಳೆದ ವಾರ ಇದ್ದಕ್ಕಿದ್ದಂತೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಆಗ, ಕಾರಣ ತಿಳಿದಯದೇ ಇದ್ದ ಕುಟುಂಬಸ್ಥರಿಗೆ …
Read More »ಬ್ಯಾಂಕಿಂಗ್ ಸೇವೆಗಳಿಗೆ ಸಂಬಂಧಿಸಿದ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ರಾಜ್ಯ ಭಾಷೆಗಳಲ್ಲಿ ನಡೆಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರಂತರವಾಗಿ ಒತ್ತಾಯಿಸುತ್ತಾ ಬಂದಿದೆ.
ಬೆಂಗಳೂರು: ಬ್ಯಾಂಕಿಂಗ್ ಸೇವೆಗಳಿಗೆ ಸಂಬಂಧಿಸಿದ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ರಾಜ್ಯ ಭಾಷೆಗಳಲ್ಲಿ ನಡೆಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರಂತರವಾಗಿ ಒತ್ತಾಯಿಸುತ್ತಾ ಬಂದಿದೆ. ಈ ಸಂಬಂಧ ಹಲವು ಭಾರಿ ಕೇಂದ್ರ ವಿತ್ತ ಸಚಿವರನ್ನು ಖುದ್ದು ಭೇಟಿ ಮಾಡಿ ಮನವಿ, ಮೊರೆಗಳನ್ನು ಸಲ್ಲಿಸಿದ್ದಾರೆ. ಆದರೂ ಸಹ ಹಳೆಯ ಮಾರ್ಗಸೂಚಿಗಳನ್ವಯ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಐಬಿಪಿಎಸ್ ಕ್ರಮ ಖಂಡನಾರ್ಹವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡ …
Read More »ಅಕ್ರಮವಾಗಿ ಮಣ್ಣುಮುಕ್ಕ ಹಾವು ಸಾಗಿಸುತ್ತಿದ್ದ ಐವರನ್ನು ಬಂಧಿಸಿ ಅರಣ್ಯಾಧಿಕಾರಿಗಳು ಅವರಿಂದ ಮೂರು ಅಡಿ ಉದ್ದದ ಎರಡು ತಲೆಯ
ಮೈಸೂರು: ಅಕ್ರಮವಾಗಿ ಮಣ್ಣುಮುಕ್ಕ ಹಾವು ಸಾಗಿಸುತ್ತಿದ್ದ ಐವರನ್ನು ಬಂಧಿಸಿ ಅರಣ್ಯಾಧಿಕಾರಿಗಳು ಅವರಿಂದ ಮೂರು ಅಡಿ ಉದ್ದದ ಎರಡು ತಲೆಯ ಹಾವನ್ನು ರಕ್ಷಿಸಿದ್ದಾರೆ. ದೊಡ್ಡಯ್ಯ (45), ಹೇಮಂತ್(19), ಯೋಗೇಶ್(24), ರವಿ(35), ಭರಮೇಗೌಡ(23) ಬಂಧಿತರು. ಆರ್‌ಎಫ್‌ಒ ವಿವೇಕ್ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿ ಬೆಂಗಳೂರಿನಿಂದ ಮೈಸೂರಿಗೆ ಅಕ್ರಮವಾಗಿ ಮಣ್ಣುಮುಕ್ಕ ಹಾವನ್ನು ಮಾರಾಟ ಮಾಡಲು ಕಾರಿನಲ್ಲಿ ಬರುತ್ತಿದ್ದವರನ್ನು ಮೈಸೂರಿನ ಸಿದ್ದಲಿಂಗಪುರ ಬಳಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಹಾಗೂ ಹಾವನ್ನು ರಕ್ಷಣೆ ಮಾಡಿದ್ದಾರೆ.
Read More »ಅಕ್ಷಯ ಪಾತ್ರ ಫೌಂಡೇಷನ್ ಜತೆ ಅಮೆರಿಕನ್ ಟವರ್ ಫೌಂಡೇಷನ್ ಪಾಲುದಾರಿಕೆ
ಬೆಂಗಳೂರು, ಅ.29- ಕೋವಿಡ್-19 ಪರಿಹಾರ ಕ್ರಮಗಳಿಗಾಗಿ ದಿನಸಿ ಕಿಟ್‍ಗಳನ್ನು ವಿತರಿಸಲು ಪ್ರಮುಖ ಸಂಘಟನೆಯಾದ ಅಕ್ಷಯ ಪಾತ್ರ ಫೌಂಡೇಷನ್ ಜತೆಗೆ ಅಮೆರಿಕನ್ ಟವರ್ ಕಾಪೆರ್ರೇಷನ್ (ಎಟಿಸಿ)ಜಾಗತಿಕ ದತ್ತಿ ಉಪಕ್ರಮವಾದ ಅಮೆರಿಕನ್ ಟವರ್ ಫೌಂಡೇಷನ್ ಜತೆಗೆ ಸಹಭಾಗಿತ್ವ ಸಾಧಿಸಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಬಳಲಿದವರಿಗೆ 31 ಸ್ಥಳಗಳಲ್ಲಿ 19 ಲಕ್ಷ ಊಟವನ್ನು ಒದಗಿಸಲಾಗುತ್ತದೆ.ದಿನಗೂಲಿ ಕೆಲಸಗಾರರು, ಗುತ್ತಿಗೆ ಕೆಲಸಗಾರರು ಮತ್ತು ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋದವರಿಗೆ ಮತ್ತು ಲಾಕ್‍ಡೌನ್‍ನಿಂದ ಕೆಲಸ …
Read More »ಕುರಿ ಕಾಪಾಡಲು ಹೋದ ಇಬ್ಬರೂ ನೀರು ಪಾಲು- ಕುರಿ ಮಾತ್ರ ಸುರಕ್ಷಿತ
ಕೋಲಾರ: ಕುರಿ ಕಾಪಾಡಲು ಹೋಗಿ ನೀರಿನಲ್ಲಿ ಮುಳುಗಿ ಇಬ್ಬರು ಕುರಿಗಾಹಿಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕೋಲಾರದಲ್ಲಿ ನಡೆದಿದೆ. ಮುಳಬಾಗಲು ತಾಲ್ಲೂಕಿನ ಕೀಲು ಹೋಳಲಿ ಗ್ರಾಮದ ಕೆರೆಯಲ್ಲಿ ಇಂದು ಸಂಜೆ ಈ ಘಟನೆ ನಡೆದಿದ್ದು, ಮೊದಲಿಗೆ ಕುರಿ ಮೇಯಿಸುತ್ತಿದ್ದ 46 ವರ್ಷದ ತಿಮ್ಮಪ್ಪ ತನ್ನ ಕುರಿಯನ್ನ ರಕ್ಷಣೆ ಮಾಡಲು ಕೆರೆಗೆ ಇಳಿದಿದ್ದಾನೆ. ಕುರಿ ಬಚಾವ್ ಆಗಿ ಬಂದಿದೆ. ಕುರಿಯನ್ನು ಕಾಪಾಡಲು ಹೋಗಿದ್ದ ತಿಮ್ಮಪ್ಪ ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಾನೆ. ಈ ವಿಚಾರ ತಿಳಿದು …
Read More »ರಾಜ್ಯದಲ್ಲಿ ಮುಂದಿನ ಐದು ದಿನ ಮತ್ತೆ ಮಳೆಯ ಅಬ್ಬರ
ಬೆಂಗಳೂರು: ಒಂದು ವಾರ ಬಿಡುವು ನೀಡಿದ್ದ ವರುಣ ದೇವ ಮುಂದಿನ ಐದು ದಿನ ಮತ್ತೆ ಅಬ್ಬರಿಸಲಿದ್ದಾನೆ. ಈಶಾನ್ಯ ಮಾರುತಗಳು ದಕ್ಷಿಣ ಭಾರತವನ್ನ ಬುಧವಾರ ಪ್ರವೇಶಿಸಿದ್ದು, ತಮಿಳುನಾಡಿನ ಚೆನ್ನೈ ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ. ಇತ್ತ ಕರ್ನಾಟಕದ ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ನವೆಂಬರ್ 2 ರವರೆಗೆ ಮಳೆಯಾಗುವ ಸಾಧ್ಯತೆಗಳಿವೆ. ಅಕ್ಟೋಬರ್ 31, ನವೆಂಬರ್ 1 ಮತ್ತು 2 ರಂದು ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಕರಾವಳಿ ಭಾಗ, ಬೆಳಗಾವಿ, …
Read More »ಅಕ್ಟೋಬರ್ 31ಕ್ಕೆ ‘ಬ್ಲೂ ಮೂನ್’ – ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ
ಬೆಂಗಳೂರು: ಅಕ್ಟೋಬರ್ 31ಕ್ಕೆ ನಭೋಮಂಡದಲ್ಲಿ ಬ್ಲೂ ಮೂನ್ ವಿದ್ಯಮಾನ ಜರುಗಲಿದೆ. ಬ್ಲೂ ಮೂನ್ ಅಂದ್ರೆ ಚಂದಿರ ನೀಲಿ ಬಣ್ಣಕ್ಕೆ ಬದಲಾಗಲ್ಲ. ಚಂದ್ರನ ಮೂಲ ಬಣ್ಣವಾಗಿರುವ ನೀಲಿ ಬಣ್ಣದಲ್ಲೇ ಚಂದ್ರನಿರಲಿದ್ದಾನೆ. ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆಗಳು ಬರುವ ಪ್ರಾಕೃತಿಕ ವಿದ್ಯಮಾನವನ್ನೇ ಬ್ಲೂಮೂನ್ ಅಂತಾ ಕರೆಯುತ್ತಾರೆ. ಪ್ರತಿ 2 ಅಥವಾ 3 ವರ್ಷಕ್ಕೊಮ್ಮೆ ಒಂದೇ ತಿಂಗಳಲ್ಲಿ 2 ಬಾರಿ ಹುಣ್ಣಿಮೆ ಸಂಭವಿಸುತ್ತದೆ. ಈ ರೀತಿ ಒಂದೇ ತಿಂಗಳಲ್ಲಿ ಎರಡು ಬಾರಿ ಹುಣ್ಣಿಮೆ ಸಂಭವಿಸುವ …
Read More »ಪತಿಗೆ ಮದ್ಯ ಕುಡಿಸಿ, ತಲೆಗೆ ಹೊಡೆದು ಕತ್ತು ಕೊಯ್ದು ಕೊಲೆ – ಕೊಲೆಗೈದು ಕಾರಿನ ಡಿಕ್ಕಿಯಲ್ಲಿಟ್ಟು ಬೆಂಕಿ ಹಚ್ಚಿದ ಪತ್ನಿ
ಹಾಸನ: ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಮಾತಿದೆ. ಆದರೆ ಇಲ್ಲಿ ಹೆಂಡತಿಯೇ ಗಂಡನನ್ನ ಕೊಲೆ ಮಾಡಿ ಕಾರಿನ ಡಿಕ್ಕಿಯಲ್ಲಿಟ್ಟು ಗುರುತೇ ಸಿಗದಂತೆ ಸುಟ್ಟು ಹಾಕಿದ ತಪ್ಪಿಗೆ ಇಬ್ಬರು ಮಕ್ಕಳನ್ನು ಅನಾಥರನ್ನಾಗಿ ಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ. ಅಕ್ಟೋಬರ್ 28 ರಂದು ಬೆಳ್ಳಂಬೆಳಗ್ಗೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಮಟ್ಟನವಿಲೆ ಗ್ರಾಮದ ಸಮೀಪ ಕಾರೊಂದು ಸುಟ್ಟ ಸ್ಥಿತಿಯಲ್ಲಿದ್ದು, ಅದರ ಡಿಕ್ಕಿಯಲ್ಲಿ ಸಂಪೂರ್ಣ ಸುಟ್ಟು ಕರಕಲಾದ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. …
Read More »ರಸ್ತೆ ಪಕ್ಕದಲ್ಲಿ ಹುಲ್ಲಿಗೆ ಹಚ್ಚಿದ್ದ ಬೆಂಕಿಯಿಂದ ಸುಟ್ಟು ಕರಕಲಾಯಿತು ಬೈಕ್
ಗದಗ: ರಸ್ತೆ ಪಕ್ಕದ ಒಣ ಹುಲ್ಲಿಗೆ ಬೆಂಕಿ ಹಚ್ಚಿದ್ದರಿಂದ ದಟ್ಟವಾದ ಹೊಗೆಯಲ್ಲಿ ದಾರಿ ಕಾಣದೆ ಬೈಕ್ ಸವಾರ ಸೇರಿ ಕುಟುಂಬದ ಮೂವರು ಬೆಂಕಿನಲ್ಲಿ ಬಿದ್ದ ಘಟನೆ ಜಿಲ್ಲೆಯ ರೋಣ ಪಟ್ಟಣದ ಬಳಿ ನಡೆದಿದೆ. ರೋಣ ಹಾಗೂ ಜಕ್ಕಲಿ ನಡುವೆ ಘಟನೆ ಸಂಭವಿಸಿದೆ. ಬೆಂಕಿ ದುರಂತದಲ್ಲಿ ಬೈಕ್ ಸವಾರ, ಹಿಂಬದಿ ಕುಳಿತ ತಾಯಿ ಮಗುವಿಗೆ ಗಂಭೀರ ಗಾಯಗಳಾಗಿವೆ. ಬೈಕ್ ಸವಾರ 29 ವರ್ಷದ ನಾಗರಾಜ್ ರ್ಯಾವಣಕಿ, 2 ವರ್ಷದ ಮಗು ಲಲಿತಾ …
Read More »
Laxmi News 24×7