ಗೋಕಾಕ : ಅಧಿಕಾರಿಗಳಿಗೆ ದೂರು ನೀಡಿ ಅಣ್ಣನೇ ತಂಗಿಯ ಬಾಲ್ಯ ವಿವಾಹವನ್ನು ತಡೆದಿರುವ ಘಟನೆ ಗೋಕಾಕ ತಾಲ್ಲೂಕಿನ ಕೊಣ್ಣೂರು ಗ್ರಾಮದಲ್ಲಿ ನಡೆದಿದೆ. ಅತ್ತೆ, ಮಾವ ವಿದ್ಯಾಭ್ಯಾಸ ಕಲಿಸೋದಾಗಿ ಹೇಳಿ ನನ್ನ ತಂಗಿ ರಾಧಿಕಾಳನ್ನು ಇಟ್ಟುಕೊಂಡಿದ್ದರು. ಒತ್ತಾಯ ಪೂರ್ವಕವಾಗಿ ತಂಗಿಗೆ ಮದುವೆ ಮಾಡ್ತಿದ್ದರು ಎಂದು ರಾಧಿಕಾ ಅಣ್ಣ ರಾಜು ಮಗೆನ್ನವರ್ ಆರೋಪಿಸಿದ್ದಾನೆ. ರಮೇಶ್ ಕೆಂಪಣ್ಣ ಮೊದಗಿ ಹಾಗೂ ರಾಧಿಕಾ ಮಲ್ಲೇಶ ಮಗೆನ್ನವರ್ ಅವರು, ರಮೇಶ್(24) ಹಾಗೂ ರಾಧಿಕಾಗೆ(16)ಗೆ ಮದುವೆಗೆ ಏರ್ಪಾಡು ಮಾಡಿದ್ದರು. ಈ …
Read More »ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೇಗಾದರೂ ಮಾಡಿ, ಜನರನ್ನು ಮೋಸಗೊಳಿಸಿ ಗೆಲ್ಲಬೇಕೆಂಬ ಕುತಂತ್ರ ನಡೆಸಿರುವ ಕೆಲವು ಕುತಂತ್ರಿ ಅಭ್ಯರ್ಥಿಗಳು ಮಾಟ-ಮಂತ್ರ ನಡೆಸಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ.
ಗೋಕಾಕ ತಾಲೂಕಿನ ತಪಸಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಮ್ಮನಕೋಲ ಗ್ರಾಮದಲ್ಲಿ ವಾಮಾಚಾರ ನಡೆಸಿದ್ದಾರೆ. ಗ್ರಾಮದ ವಾರ್ಡ್ ವಿರೋಧಿ ಬಣದ ಅಭ್ಯರ್ಥಿಗಳ ಮನೆ ಎದುರು ಲಿಂಬೆ ಹಣ್ಣು, ತೆಂಗಿನಕಾಯಿ, ಗುಲಾಲು, ದಾರ ಹೀಗೆ ಅನೇಕ ವಸ್ತುಗಳನ್ನು ಇಟ್ಟು ವಾಮಾಚಾರ ನಡೆಸಿದ್ದಾರೆ. ಇದೊಂದು ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿದ್ದು, ಜನರು ವಾಮಾಚಾರ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸುಮಾರು 15-20 ವರ್ಷಗಳಿಂದ ರಾಜಕಾರಣ ನಡೆಸಿರುವವರು ಇಂಥ ವಾಮಾಚಾರ ಮಾಡಿಸಿದ್ದು, ಇಂಥ ರಾಜಕಾರಣದಿಂದ ಗ್ರಾಮದ …
Read More »ನಾವಣೆ: ಬಿಜೆಪಿಯನ್ನು ಗೆಲ್ಲಿಸಲು ಸಚಿವ ರಮೇಶ್ ಜಾರಕಿಹೊಳಿ ಪಣ ಲೋಕಸಭೆಯ ನಂತರ ಸಚಿವರ ಮುಂದಿನ ಗುರಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ
ಬೆಳಗಾವಿ: ಲೋಕಸಭಾ ಉಪ ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿರುವ ಜಲಸಂಪನ್ಮೂಲ ಮತ್ತು ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು, ಜಿಲ್ಲೆಯ ಮರಾಠಾ ಸಮುದಾಯದ ಪ್ರಮುಖ ಮುಖಂಡರ ಸಭೆ ನಡೆಸಿದರು. ಗೋಕಾಕ್ ನಗರದಲ್ಲಿರುವ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ವಾಡಿಕೆಗಿಂತಾ ಹೆಚ್ಚಿನ ಮತದಾನ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಲೋಕಸಭೆಗೆ ಆಯ್ಕೆಮಾಡಬೇಕು. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಮತ್ತಷ್ಟು ಸುಭದ್ರ ಪಡಿಸಬೇಕು ಎಂದು ಸಚಿವರು ಕರೆ ನೀಡಿದರು. ಬೆಳಗಾವಿ ಜಿಲ್ಲೆಯಾದ್ಯಂತ ಬಿಜೆಪಿಯು …
Read More »ಗೋಕಾಕ: ನಗರದ ಹೊರವಲಯದಲ್ಲಿರುವ ಆಗ್ನಿಶಾಮಕ ಠಾಣೆಯಲ್ಲಿ ಸಕಾಲ ಸೇವಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಠಾಣಾಧಿಕಾರಿ ಸದಾನಂದ ಮೆಳವಂಕಿ ಅವರು ಚಾಲನೆ ನೀಡುತ್ತಿರುವುದು.
ಗೋಕಾಕ: ಆಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಸಕಾಲ ವ್ಯಾಪ್ತಿಯಲ್ಲಿ 5 ಸೇವೆಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಇಲ್ಲಿಯ ಆಗ್ನಿ ಶಾಮಕ ಠಾಣಾಧಿಕಾರಿ ಸದಾನಂದ ಮೆಳವಂಕಿ ಹೇಳಿದರು. ಶುಕ್ರವಾರದಂದು ನಗರದ ಹೊರವಲಯದಲ್ಲಿರುವ ಆಗ್ನಿಶಾಮಕ ಠಾಣೆಯಲ್ಲಿ ಸಕಾಲ ಸೇವಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಹುಮಹಡಿ ಕಟ್ಟಡಗಳಿಗೆ ನಿರ್ಮಾಣ ಪೂರ್ವದಲ್ಲಿ ಇಲಾಖೆಯಿಂದ ನೀಡಲಾಗುವ ನಿರಾಕ್ಷೇಪಣಾ ಪತ್ರ, ನಿರ್ಮಾಣದ ನಂತರ ಕ್ಲಿಯರೆನ್ಸ್ …
Read More »ಅಥಣಿ ತಾಲೂಕಿನಲ್ಲಿ ಹೆಚ್ಚಿದ ಕಳ್ಳತನ ಪ್ರಕರಣಗಳು: ಪೊಲೀಸ್ ಇಲಾಖೆ ವಿರುದ್ಧ ಜನರ ಅಸಮಾಧಾನ
ಅಥಣಿ: ತಾಲೂಕಿನಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿವೆ. ಗುರುವಾರ ತಡರಾತ್ರಿ ನಂದಗಾವ್ ಗ್ರಾಮದಲ್ಲಿ ಕಳ್ಳರು ಕೈಚಳಕ ತೋರಿದ್ದು, ಎರಡು ದೇವಾಲಯ, ಆರು ಮನೆಗಳನ್ನು ದೋಚಿ ಪರಾರಿಯಾಗಿದ್ದಾರೆ. ಎರಡು ದೇವಾಲಯ ಹಾಗೂ ಆರೂ ಮನೆಗಳಿಗೆ ಕನ್ನ ಹಾಕಿರುವ ಖದೀಮರು ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಜೈನ ಬಸದಿ, ಯಲ್ಲಮ್ಮ ದೇವಸ್ಥಾನದ ಬೀಗ ಮುರಿದು ಅಟ್ಟಹಾಸ ಮೆರೆದಿದ್ದಾರೆ. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅಥಣಿ ತಾಲೂಕಿನಲ್ಲಿ ಹೆಚ್ಚಿದ ಕಳ್ಳತನ ಪ್ರಕರಣಗಳು ಅಲ್ಲದೆ …
Read More »ಕೊರೊನಾ ಹಿನ್ನೆಲೆ ಬಂದ್ ಮಾಡಲಾಗಿದ್ದ ಆಫ್‍ಲೈನ್ ಟಿಕೆಟ್‍ನ್ನು ಭಾರತೀಯ ಪುರಾತತ್ವ ಇಲಾಖೆ ಪುನರಾರಂಭಿಸಿದೆ.
ಬಳ್ಳಾರಿ: ಕೊರೊನಾ ಹಿನ್ನೆಲೆ ಬಂದ್ ಮಾಡಲಾಗಿದ್ದ ಆಫ್‍ಲೈನ್ ಟಿಕೆಟ್‍ನ್ನು ಭಾರತೀಯ ಪುರಾತತ್ವ ಇಲಾಖೆ ಪುನರಾರಂಭಿಸಿದೆ. ಈ ಮೂಲಕ ಪ್ರವಾಸಿಗರು ಆಫ್‍ಲೈನ್ ಹಾಗೂ ಆನ್‍ಲೈನ್ ಎರಡೂ ವಿಧಾನಗಳಿಂದ ಟಿಕೆಟ್ ಪಡೆಯಬಹುದಾಗಿದೆ. ಕರೊನಾ ಹಿನ್ನಲೆ ತನ್ನ ವ್ಯಾಪ್ತಿಯ ಸ್ಮಾರಕಗಳ ವೀಕ್ಷಣೆಗೆ ಆಫ್‍ಲೈನ್ ಟಿಕೆಟ್ ಬಂದ್ ಮಾಡಿ, ಆನ್‍ಲೈನ್ ನಲ್ಲಿ ಮಾತ್ರ ಟಿಕೆಟ್ ಪಡೆಯಲು ಭಾರತೀಯ ಪುರಾತತ್ವ ಇಲಾಖೆ ಅವಕಾಶ ಕಲ್ಪಿಸಿತ್ತು. ಆದರೆ ಡಿ.19 ರಿಂದ ಆಫ್‍ಲೈನ್‍ನಲ್ಲೂ ಟಿಕೆಟ್ ಖರೀದಿಸಲು ಅವಕಾಶ ಕಲ್ಪಿಸಿದೆ. ಇದರಿಂದ …
Read More »ಸಿದ್ದರಾಮಯ್ಯನವರು ಗೋಸುಂಬೆ ರೀತಿ ಆಡಬಾರದು.: ಸಿ.ಟಿ.ರವಿ
ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ಈಗ ಏಕೆ ತಾಜ್ ವೆಸ್ಟ್ ಎಂಡ್ ಕಥೆ ತೆಗೆಯುತ್ತಿದ್ದಾರೆ, ತಾಜ್ ವೆಸ್ಟ್ ಎಂಡ್ ಅಡ್ರೆಸ್ ಗೊತ್ತಾದ ಮೇಲೆ ತಾನೇ ಲೋಕಸಭೆ ಚುನಾವಣೆ ಒಟ್ಟಿಗೆ ಮಾಡಿದ್ದು, ಅಧಿಕಾರ ಹಂಚಿಕೊಂಡು ತನ್ನವರನ್ನ ಮಂತ್ರಿ ಮಾಡುವಾಗ ವೆಸ್ಟ್ ಎಂಡ್ ಅಡ್ರೆಸ್ ಗೊತ್ತಿರಲಿಲ್ವಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ. ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಹಳೇ …
Read More »ಲಕ್ಷ್ಮಿ ಹೆಬ್ಬಾಳಕರ್ ಅವರ ಸಹೋದರಿಯ ಪುತ್ರಿ ಸುಶ್ಮಿತಾ ಅವರ ವಿವಾಹ ಬೆಳಗಾವಿಯಲ್ಲಿ ನಡೆಯಿತು.
ಬೆಳಗಾವಿ – ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಸಹೋದರಿಯ ಪುತ್ರಿ ಸುಶ್ಮಿತಾ ಅವರ ವಿವಾಹವು ಹುಬ್ಬಳ್ಳಿಯ ದಿ.ವಿಶ್ವಪ್ರಕಾಶ ಉಳ್ಳಾಗಡ್ಡಿಮಠ ಅವರ ಪುತ್ರ ರಜತ್ ಜೊತೆ ಬೆಳಗಾವಿಯಲ್ಲಿ ನಡೆಯಿತು. ಇಲ್ಲಿಯ ಸಂಕಮ್ ಹೊಟೆಲ್ ಸಭಾಂಗಣದಲ್ಲಿ ವಿವಾಹ ಪೂರ್ವ ಕಾರ್ಯಕ್ರಮ ಹಾಗೂ ವಿವಾಹ ಕಾರ್ಯಕ್ರಮಗಳು ಒಟ್ಟೂ 3 ದಿನಗಳ ಕಾಲ ನಡೆಯಿತು. ಕೊರೋನಾ ಹಿನ್ನೆಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಆಮಂತ್ರಣ ನೀಡಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಚಿತ್ರನಟ ವಿಜಯರಾಘವೇಂದ್ರ ಸೇರಿದಂತೆ …
Read More »ಏಳು ದಿನಗಳೊಳಗೆ ಜನನ ಮರಣ ಪ್ರಮಾಣ ಪತ್ರ ಲಭ್ಯ: ಜಿಲ್ಲಾಧಿಕಾರಿ
ಮಂಡ್ಯ (ಕರ್ನಾಟಕ ವಾರ್ತೆ):- ಜನನ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣಪತ್ರವನ್ನು ಸಕಾಲ ಸೇವೆಯಲ್ಲಿ ಸೇರ್ಪಡೆಗೊಳಿಸಲಾಗಿದ್ದು, ಸಾರ್ವಜನಿಕರು ಇ-ಜನ್ಮ ವೆಬ್‍ಸೈಟ್‍ಗೆ ಲಾಗ್‍ಇನ್ ಆಗಿ 07 ದಿನಗಳೊಳಗೆ ಮಕ್ಕಳ ಜನನ ಪ್ರಮಾಣ ಪತ್ರ ಅಥವಾ ತಮ್ಮ ಸಂಬಂಧಿಕರ ಮರಣ ಪ್ರಮಾಣಪತ್ರವನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಎಂ.ವಿ ವೆಂಕಟೇಶ್ ರವರು ತಿಳಿಸಿದರು. ಮಂಡ್ಯ ಜಿಲ್ಲೆಯ ಸಕಾಲ ಸಪ್ತಾಹ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಮತ್ತು ಸಾಂಖ್ಯಿಕ ಇಲಾಖೆÀಯ ವತಿಯಿಂದ …
Read More »ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಪಣ ತೊಡೋಣ’’:
ಇಂದು ಸಿ.ಎಫ್.ಟಿ.ಎಫ್.ಕೆ ಸಂಸ್ಥೆ ವತಿಯಿಂದ ಆಯೋಜಿಸಿದ್ದ, ಡ್ರಗ್ಸ್, ಮದ್ಯಪಾನ ಮುಕ್ತ ಕರ್ನಾಟಕ ಜನಜಾಗೃತಿ ಕಾರ್ಯಕ್ರಮದಲ್ಲಿ, ಗೂಗಲ್ ಮೀಟ್ ಮೂಲಕ ಭಾಗವಹಿಸಿ, ಮಾತನಾಡಲಾಯಿತು. ಇತ್ತೀಚಿನ ದಿನಮಾನಗಳಲ್ಲಿ ಮಕ್ಕಳು ಡ್ರಗ್ಸ್ , ಮದ್ಯಪಾನ ಹೀಗೆ ಹಲವು ದುಶ್ಚಟಗಳಿಗೆ ಬಲಿಯಾಗುತ್ತಿರುವ ನಡುವೆ ಸಮಾಜದಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿರುವ ಸಿ.ಎಫ್.ಟಿ.ಎಫ್.ಕೆ ಸಂಸ್ಥೆಯ ಕಾರ್ಯ ಶ್ಲಾಘನೀಯ. ನಮ್ಮ ಇಲಾಖೆಯ ರೀತಿ ಸಿ.ಎಫ್.ಟಿ.ಎಫ್.ಕೆ ಸಂಸ್ಥೆ ಕೂಡ ಸಮಾಜದಲ್ಲಿ ಧೂಮಪಾನ, ಡ್ರಗ್ಸ್, ಮದ್ಯಪಾನದಂತಹ ಕೆಟ್ಟ ಚಟಗಳಿಂದ ಜನರನ್ನು ದೂರವಿರಿಸಲು ಶ್ರಮವಹಿಸುತ್ತಿದೆ. …
Read More »
Laxmi News 24×7