Breaking News

ಗೋಕಾಕ: ಅಧಿಕಾರಿಗಳಿಗೆ ದೂರು ನೀಡಿ ತಂಗಿ ಬಾಲ್ಯ ವಿವಾಹ ತಡೆದ ಅಣ್ಣ

Spread the love

ಗೋಕಾಕ : ಅಧಿಕಾರಿಗಳಿಗೆ ದೂರು ನೀಡಿ ಅಣ್ಣನೇ ತಂಗಿಯ ಬಾಲ್ಯ ವಿವಾಹವನ್ನು ತಡೆದಿರುವ ಘಟನೆ ಗೋಕಾಕ ತಾಲ್ಲೂಕಿನ ಕೊಣ್ಣೂರು ಗ್ರಾಮದಲ್ಲಿ ನಡೆದಿದೆ.

ಅತ್ತೆ, ಮಾವ  ವಿದ್ಯಾಭ್ಯಾಸ ಕಲಿಸೋದಾಗಿ ಹೇಳಿ  ನನ್ನ ತಂಗಿ ರಾಧಿಕಾಳನ್ನು ಇಟ್ಟುಕೊಂಡಿದ್ದರು. ಒತ್ತಾಯ ಪೂರ್ವಕವಾಗಿ ತಂಗಿಗೆ  ಮದುವೆ ಮಾಡ್ತಿದ್ದರು ಎಂದು ರಾಧಿಕಾ ಅಣ್ಣ ರಾಜು ಮಗೆನ್ನವರ್ ಆರೋಪಿಸಿದ್ದಾನೆ.

ರಮೇಶ್ ಕೆಂಪಣ್ಣ ಮೊದಗಿ  ಹಾಗೂ ರಾಧಿಕಾ ಮಲ್ಲೇಶ ಮಗೆನ್ನವರ್ ಅವರು, ರಮೇಶ್(24) ಹಾಗೂ ರಾಧಿಕಾಗೆ(16)ಗೆ ಮದುವೆಗೆ ಏರ್ಪಾಡು ಮಾಡಿದ್ದರು. ಈ ವೇಳೆ  ರಾಜು ಮಗೆನ್ನವರ್ ಎಂಬ ಬಾಲಕಿಯ ಅಣ್ಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದಾನೆ.

ದೂರಿನನ್ವಯ  ಅಧಿಕಾರಿಗಳು ರಾಧಿಕಾ ಇದ್ದ ಮನೆಗೆ ಬಂದಿದ್ದಾರೆ. ಅಧಿಕಾರಿಗಳು ಬರುವ ವಿಷಯ ತಿಳಿದ  ಪೋಷಕರು ಹುಡುಗ ಹುಡುಗಿಯನ್ನು ಬಚ್ಚಿಟ್ಟಿದ್ದಾರೆ. ಗೋಕಾಕ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ